November 12, 2026
Mumbai News Kannada
ಮುಂಬಯಿ

ಶ್ರೀ ಸಾಯಿಬಾಬಾ ಪೂಜಾ ಸಮಿತಿ ಕಾಲಘೋಡ ಇದರ 56ನೇ ವಾರ್ಷಿಕ ಮಹಾಪೂಜೆ.





















ಭಕ್ತಿಯೊಂದಿಗೆ ಸೇವೆಯೇ ಸಮಿತಿಯ ಮೂಲ ಉದ್ದೇಶ- ಮಾಧವ ಎಸ್.ಶೆಟ್ಟಿ.

ಚಿತ್ರ,ವರದಿ: ಉಮೇಶ್ ಕೆ.ಅಂಚನ್.



















ಮುಂಬಯಿ ,ನ.10 : ಸಮಿತಿಯು ಕಳೆದ 5 ದಶಕಗಳಿಂದ ಸಾಯಿಬಾಬಾರವರ ಆಶೀರ್ವಾದದಿಂದ ಹಲವಾರು ಸಮಾಜಪರ ಸೇವೆಯನ್ನು ಕೈಗೊಂಡಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ಪ್ರತಿಭಾ ಪುರಸ್ಕಾರ, ವೈದ್ಯಕೀಯ ನೆರವು, ಅನಾಥಾಶ್ರಮ ವೃದ್ಧಾಶ್ರಮಕ್ಕೆ ಸಹಕಾರ ಹಾಗೂ ಬೊರಿವಿಲಿ ಕಚೇರಿಯಲ್ಲಿ ಅಬಲೆಯರಿಗೆ ಉಚಿತ ಹೊಲಿಗೆ ತರಬೇತಿಯನ್ನು ನೀಡುತ್ತಿದೆ. ದಾನಿಗಳಿಂದ ಪಡೆದ ಧನಸಹಾಯವನ್ನು ಈ ಎಲ್ಲಾ ಸೇವೆಗಳಿಗೆ ವರ್ಷದಲ್ಲಿ ಹಲವಾರು ಲಕ್ಷ ಹಣವನ್ನು ವ್ಯಯಿಸುತ್ತಿದೆ. ಕಾಲಘೋಡಾ ಸಿಟಿ ಸಿವಿಲ್ ನ್ಯಾಯಾಲಯದ ಬಳಿ ಇದ್ದ ಸಾಯಿಬಾಬಾರವರ ಚಿಕ್ಕ ಮಂದಿರವನ್ನು ಮಹಾನಗರಪಾಲಿಕೆ ಕೆಡವಿದ್ದರೂ ಸಮಿತಿಯು ಪ್ರತೀ ವರ್ಷ ದೀಪಾವಳಿ ಹಬ್ಬದಂದು ಸಾಯಿ ಮಹಾಪೂಜೆಯನ್ನು ವಿಜ್ರಂಭಣೆಯಿಂದ ಆಚರಿಸುತ್ತಿದೆ. ಭಕ್ತಿಯೊಂದಿಗೆ ಸಮಾಜ ಸೇವೆಯನ್ನು ಮಾಡುವುದು ಸಂಸ್ಥೆಯ ಮೂಲ ಉದ್ದೇಶ ಎಂದು ಸಾಯಿಬಾಬಾ ಪೂಜಾ ಸಮಿತಿ ಕಾಲಘೋಡ ಇದರ ಅಧ್ಯಕ್ಷ ಮಾಧವ ಎಸ್.ಶೆಟ್ಟಿ ಹೇಳಿದರು.
ಅವರು ನ.8ರಂದು ಕಾಲಘೋಡಾ ಸಿಟಿ ಸಿವಿಲ್ ನ್ಯಾಯಾಲಯದ ಬಳಿ ಸಮಿತಿಯ ವತಿಯಿಂದ ನಡೆದ 56ನೇ ಸಾಯಿ ಮಹಾಪೂಜೆಯ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡಿ ಮಾತನಾಡಿದರು.


ಸಮಿತಿಯ ಉಪಾಧ್ಯಕ್ಷ ಅಡ್ವೆ ಜಯ ಎಸ್.ಶೆಟ್ಟಿ ಎಲ್ಲರನ್ನೂ ಸ್ವಾಗತಿಸಿ ಸಮಿತಿಯ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿ ಧಾರ್ಮಿಕ ಕಾರ್ಯಕ್ರಮ ಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಜೊತೆ ಕಾರ್ಯದರ್ಶಿ ರಮೇಶ್ ಶೆಟ್ಟಿ ಮಿಜಾರು ವಂದಿಸಿದರು.
ಆರಂಭದಲ್ಲಿ ಭುವಾಜಿ ರಮೇಶ್ ಪೂಜಾರಿಯವರಿಂದ ಸಾಯಿ ಕಲಶ ಪ್ರತಿಷ್ಠೆ ನಡೆದು ಶ್ರೀ ಸತ್ಯನಾರಾಯಣ ಮಹಾಪೂಜೆಯು ಘಾಟ್ಕೋಪರ್ ಗೀತಾಂಬಿಕಾ ಮಂದಿರದ ಅರ್ಚಕ ಸದಾಶಿವ ಭಟ್ ರವರ ಪೌರೋಹಿತ್ಯದಲ್ಲಿ ನಡೆಯಿತು. ಹರ್ಷಿತ್ ಶೆಟ್ಟಿ ದಂಪತಿಗಳು ಪೂಜಾವೃತ ಕೈಗೊಂಡಿದ್ದರು. ತದನಂತರ ಭಜಕರ ಭಜನಾ ಮಂಡಳಿಯವರಿಂದ ಭಜನೆ , ಮಹಾಪೂಜೆ, ಮಹಾ ಆರತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.ಅಪಾರ ಸಂಖ್ಯೆಯಲ್ಲಿ ಸಾಯಿಭಕ್ತರು ಮಹಾಪೂಜೆಯಲ್ಲಿ ಭಾಗವಹಿಸಿದ್ದರು. ದಾನಿಗಳನ್ನು, ಪರಿಸರದ ಸಂಘಸಂಸ್ಥೆಗಳ ಪದಾಧಿಕಾರಿಗಳನ್ನು,ಉದ್ಯಮಿಗಳನ್ನು ಸಮಿತಿಯ ಪದಾಧಿಕಾರಿಗಳು ಮಹಾಪ್ರಸಾದ ನೀಡಿ ಗೌರವಿಸಿದರು.
ಸಮಿತಿಯ ಗೌರವ ಕೋಶಾಧಿಕಾರಿ ರವೀಂದ್ರ ಡಿ.ಶೇಣವ. ಜೊತೆ ಕೋಶಾಧಿಕಾರಿ ಭಾಸ್ಕರ್ ಶೆಟ್ಟಿ ಅತ್ತೂರು , ಟ್ರಸ್ಟಿಗಳಾದ ಸುಧಾಕರ್ ಎಮ್. ಶೆಟ್ಟಿ, ರವೀಂದ್ರ ಎಮ್.ಶೆಟ್ಟಿ ಕಾರ್ಯಕಾರಿ ಸಮಿತಿಯ ಸದಸ್ಯರಾದ ಸತೀಶ್ ಭಂಡಾರಿ, ಪ್ರಸಾದ್ ಶೆಟ್ಟಿ, ಪ್ರದೀಪ್ ಸುವರ್ಣ, ಶ್ಯಾಮ್ ಎಸ್.ಕೋಟ್ಯಾನ್,ಪಾರಿತೋಷ್ ಎನ್.ರೈ,ಕಾರ್ತಿಕ್ ಭಂಡಾರಿ,ಪರೀಕ್ಷಿತ್ ಎನ್. ರೈ, ನಿತಿನ್ ಬಿ.ಶೆಟ್ಟಿ, ಕಮಲಾ ಎಸ್.ಶೆಟ್ಟಿ, ರಾಧಿಕಾ ಆರ್.ಶೇಣವ, ಯಶೋಧಾ ಶೆಟ್ಟಿ ಹಾಗೂ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು.







































































































.

.























.

.

.



Related posts

ತಿಂಗಳಾಯ ಮೂಲಸ್ಥಾನ ಸಭಾ, ಮುಂಬಯಿ ಶಾಖೆಯ ಮಹಿಳಾ ವಿಭಾಗದಿಂದ ಅದ್ದೂರಿಯ ‘ಮಹಿಳಾ ದಿನಾಚರಣೆ’ ಸಾಧಕಿಯರಿಗೆ ಸನ್ಮಾನ

Mumbai News Desk

ಶ್ರೀ ಮಹಿಷಮರ್ದಿನಿ ದೇವಸ್ಥಾನ ಟ್ರಸ್ಟ್ ಬೊರಿವಿಲಿ 35ನೇ ವಾರ್ಷಿಕ ಶರವನ್ನರಾತ್ರಿ ಮಹೋತ್ಸವ ಚಂಡಿಕಾ ಹೋಮ,ಙ ಧಾರ್ಮಿಕ ಕಾರ್ಯಕ್ರಮಗಳು.

Mumbai News Desk

ದಿವಾಕರ್ ಕರ್ಕೇರರ ಅಭಿನಂದನಾ ಸಮಾರಂಭ.

Mumbai News Desk

ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಯು ಫೋರ್ಟ್‌ನ ಮನೋಹರ್ ದಾಸ್ ಸ್ಟ್ರೀಟ್‌ನಲ್ಲಿರುವ ಬಿ.ಎಂ.ಸಿ ಶಾಲೆಗೆ ಸ್ಥಳಾಂತರ

Mumbai News Desk

ಸಾಂತಾಕ್ರೂಜ್ ಪೇಜಾವರ ಮಠದಲ್ಲಿ ಶ್ರೀ ಮಧ್ವ ನವಮೀ ಆಚರಣೆ 

Mumbai News Desk

ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ (ರಿ).ಇದರ ವಾರ್ಷಿಕ ವಿಹಾರ ಕೂಟ

Mumbai News Desk