October 21, 2026
Mumbai News Kannada
ಪ್ರಕಟಣೆ

ಎ. 14 ರಂದು ಗೋರೆಗಾಂವ್ ಕರ್ನಾಟಕ ಸಂಘದ ತುಳು ಪರ್ಬ ದತ್ತಿ ನಿಧಿ ಕಾರ್ಯಕ್ರಮ  



ಮುಂಬಯಿ, : ಗೋರೆಗಾಂವ್ ಕರ್ನಾಟಕ ಸಂಘ  ಹಾಗೂ  ಯುವ ವಿಭಾಗದ ಜಂಟಿ ಆಶ್ರಯದಲ್ಲಿ  ತುಳು ಪರ್ಬ ಮತ್ತು ದತ್ತಿನಿಧಿ ಕಾರ್ಯಕ್ರಮವು ಎ. 14ರಂದು ಅಪರಾಹ್ನ 5ರಿಂದ ಗೋರೆಗಾಂವ್ ಪಶ್ಚಿಮದ ಆರೇ ರೋಡ್‌ನಲ್ಲಿರುವ ಕೇಶವ ಗೋರೆ ಸ್ಮಾರಕ ಟ್ರಸ್ಟಿನ ಎರಡನೇ ಮಹಡಿಯ ಸಭಾಗೃಹದಲ್ಲಿ ಸಂಘದ ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ದಿ| ಜಯಕರ ಡಿ. ಪೂಜಾರಿ ವೇದಿಕೆಯಲ್ಲಿ ನಿಟ್ಟೆ ಸುಧಾಕರ ಶೆಟ್ಟಿ ಹಾಗೂ ಎಸ್. ಜೆ. ಶೆಟ್ಟಿ ಇವರ ದತ್ತಿನಿಧಿ ಕಾರ್ಯಕ್ರಮವು ನಡೆಯಲಿದೆ. ಮುಖ್ಯ ಅತಿಥಿಯಾಗಿ ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಮಹಿಳಾ ವಿಭಾಗದ  ಕಾರ್ಯಾಧ್ಯಕ್ಷೆ ಹಾಗೂ ಕುಲಾಲ ಸಂಘ ಮುಂಬಯಿಯ ಚರ್ಚ್ ಗೇಟ್ – ದಹಿಸರ್ ಸ್ಥಳೀಯ ಸಮಿತಿ ಯ ಉಪಕಾರ್ಯಧ್ಯಕ್ಷೆ ರತ್ನಾ ಡಿ. ಕುಲಾಲ್ ಆಗಮಿಸಲಿರುವರು.

ಸಂಘದ ಸದಸ್ಯರಿಂದ, ಯುವ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಸಂಘದ ಅಧ್ಯಕ್ಷರಾದ ನಿತ್ಯಾನಂದ ಡಿ. ಕೋಟ್ಯಾನ್, ಉಪಾಧ್ಯಕ್ಷರಾದ ವಿಶ್ವನಾಥ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸರಿತಾ ಸುರೇಶ್ ನಾಯಕ್, ಗೌರವ ಕೋಶಾಧಿಕಾರಿ ಎಂ. ಆನಂದಶೆಟ್ಟಿ ಯುವ ವಿಭಾಗದ ಕಾರ್ಯಾಧ್ಯಕ್ಷೆ  ಶಿವಾನಿ ಎಚ್. ಆಚಾರ್ಯ ಹಾಗೂ ಸದಸ್ಯರು, ಸಂಘದ ಪಾರುಪತ್ಯಗಾರರು, ಕಾರ್ಯಕಾರಿ ಸಮಿತಿ ಹಾಗೂ ಉಪಸಮಿತಿಗಳ ಎಲ್ಲಾ ಸದಸ್ಯರು ಪ್ರಕಟನೆಯಲ್ಲಿ ವಿನಂತಿಸಿದ್ದಾರೆ. 



Related posts

ತೋಕೂರು ಮದ್ದೇರಿ ದೈವಸ್ಥಾನ. ಮೇ 7 ರಿಂದ 9 ವರೆಗೆ ಪ್ರತಿಷ್ಠಿತೆ, ನೇಮೋತ್ಸವ.

Mumbai News Desk

ಆಗಸ್ಟ್ 2: ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಮುಂಬಯಿ ಹಾಗೂ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಜಂಟಿ ಆಶ್ರಯದಲ್ಲಿ 12ನೇ ಸರಣಿ ತಾಳಮದ್ದಳೆ ಪ್ರಸ್ತುತಿ, ಕಲಾವಿದರಿಗೆ ಸನ್ಮಾನ

Mumbai News Desk

ಮದರ್ ಇಂಡಿಯಾ ಫ್ರೀ ನೈಟ್ ಹೈಸ್ಕೂಲ್ ನ 19ನೇ ಈಸ್ಟ್ ಬಾಂಬೆ ಸ್ಕೌಟ್ ಗ್ರೂಪ್ ವತಿಯಿಂದ ಸೆ. 14, 15ರಂದು ಗುರುವಂದನೆ ಮತ್ತು ತವರೂರು ಕಾಣಿಕೆ ಕಾರ್ಯಕ್ರಮ

Mumbai News Desk

ಡಿ. 21: ಮುಂಬಯಿ ಕನ್ನಡ ಸಂಘದ ದತ್ತಿ ಉಪನ್ಯಾಸ ಕಾರ್ಯಕ್ರಮ

Mumbai News Desk

ವಸಯಿ ಕರ್ನಾಟಕ ಸಂಘ 38ನೇ ವಾರ್ಷಿಕೋತ್ಸವ ಸಂಭ್ರಮ, ನೃತ್ಯ ವೈಭವ, ಸನ್ಮಾನ

Mumbai News Desk

ಬೊರಿವಲಿ ದೇವುಲ್ಪಾಡಾದ ಶ್ರೀಬ್ರಹ್ಮ ಬೈದರ್ಕಳ ಗರೋಡಿ ಜ. 25: ವಾರ್ಷಿಕ ಮಹಾಪೂಜೆ, ಬ್ರಹ್ಮ ಬೈದರ್ಕಳ ನೇಮೋತ್ಸವ

Mumbai News Desk