
ಅಸೋಸಿಯೇಷನ್ನ ಪ್ರಗತಿಯಲ್ಲಿ ಮಹಿಳಾ ವಿಭಾಗ ಮಹತ್ವದ ಕೊಡುಗೆ ಇದೆ : ಸಿ ಎ ಸುರೇಂದ್ರ ಕೆ. ಶೆಟ್ಟಿ.
ಚಿತ್ರ ವರದಿ : ದಿನೇಶ್ ಕುಲಾಲ್
ಮುಂಬಯಿ, ಅ. 23: ಬಾಂಬೆ ಬಂಟ್ಸ್ ಅಸೋ ಸಿಯೇಶನ್ ಮಹಿಳಾ ವಿಭಾಗದ ವತಿಯಿಂದ ಸೀರೆಗಳು ಹಾಗೂ ಫ್ಯಾಷನ್ ಜುವೆಲರಿ, ಡ್ರೆಸ್ ಮೆಟೀರಿಯಲ್‌ಗಳ ಪ್ರದರ್ಶನ ಮತ್ತು ಮಾರಾ ಟವು ಅ. 21ರಂದು ಬೆಳಗ್ಗೆ ರಿಂದ ರಾತ್ರಿ ವರೆಗೆ ನವಿಮುಂಬಯಿಯ ಜ್ಯೂಯಿ ನಗರದ ಬಂಟ್ಸ್ ಸೆಂಟರ್‌ನಲ್ಲಿ ನಡೆಯಿತು.




ಬಾಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಸಿಎ ಸುರೇಂದ್ರ ಕೆ. ಶೆಟ್ಟಿ ಅವರು ಪ್ರದರ್ಶನವನ್ನು ಉದ್ಘಾಟಿಸಿ, ಬಾಂಬೆ ಬಂಟ್ಸ್ ಅಸೋಸಿಯೇಶನ್ ಮಹಿಳಾ ವಿಭಾಗವು ಸದಾ ಕ್ರಿಯಾಶೀಲವಾ ಗಿದ್ದು, ವಿವಿಧ ಕಾರ್ಯಕ್ರಮಗಳನ್ನು ಆಯೋಜಿ ಸುತ್ತಾ ಬಂದಿದೆ. ಹಬ್ಬಗಳ ಈ ಸಂದರ್ಭದಲ್ಲಿ ಇಂತಹ ಪ್ರದರ್ಶನ ಹಾಗೂ ಮಾರಾಟಗಳು ಎಲ್ಲರಿಗೂ ಉಪಯೋಗಕರವಾಗಿದೆ. ನಮ್ಮ ಸಮಾಜದ ಮಹಿಳೆಯರು ಯಾವುದೇ ಸಂಘ ಟನೆಯಲ್ಲಿದ್ದರೂ ಒಟ್ಟಾಗಿ ಇಂತಹ ಕಾರ್ಯಕ್ರಮ ಗಳಿಗೆ ಪ್ರೋತ್ಸಾಹಿಸುತ್ತಾರೆ. ಇಂದಿನ ಕಾರ್ಯ ಕ್ರಮವು ಯಶಸ್ವಿಯಾಗಲು ಸಹಕರಿಸಿದ ಎಲ್ಲ ಮಹಿಳೆಯರಿಗೆ, ಮಾಜಿ ಅಧ್ಯಕ್ಷೆಯರಿಗೆ ಹಾಗೂ ಮಾಜಿ ಕಾರ್ಯಾಧ್ಯಕ್ಷೆಯರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಮುಖ್ಯ ಅತಿಥಿಯಾಗಿ ಭವಾನಿ ಫೌಂಡೇಶನ್ ನ ಟ್ರಸ್ಟಿ ಸರಿತಾ ಕುಸುಮೋದರ ಶೆಟ್ಟಿ ಗೌರವ ಅತಿಥಿಗಳಾಗಿ ಗೀತಾ ಶಂಕರ್ ಶೆಟ್ಟಿ ಪ್ರಭಾ ಸುರೇಂದ್ರ ಶೆಟ್ಟಿ ಶುಭ ಹಾರೈಸಿದರು.
ಮಹಿಳಾ ವಿಭಾಗದಕಾರ್ಯಾಧ್ಯಕ್ಷೆತೇಜಸಾಕ್ಷಿ ಎಸ್. ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿ ಪುಷ್ಪಗುಚ್ಛ ನೀಡಿ ಗೌರವಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ತುಳು – ಕನ್ನಡಿಗರು, ಬಂಟ ಬಾಂಧವರು ಪಾಲ್ಗೊಂಡು ಸಹಕಾರ ನೀಡಿದರು. ಬಾಂಬೆ ಬಂಟ್ ಅಸೋಸಿಯೇಶನ್ ಉಪಾಧ್ಯಕ್ಷ ನ್ಯಾಯವಾದಿ ಡಿ.ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಐಕಳ ಕಿಶೋರ್ ಶೆಟ್ಟಿ ಗೌರವ ಕೋಶಾಧಿಕಾರಿ ಸಿಎ ವಿಶ್ವನಾಥ್ ಶೆಟ್ಟಿ, ಜತೆ ಕಾರ್ಯದರ್ಶಿ ಅಡ್ವಕೇಟ್ ಗುಣಕರ ಶೆಟ್ಟಿ, ಜತೆ ಕೋಶಾಧಿಕಾರಿ ಸಿಎ ದಿವಾಕರ್ ಶೆಟ್ಟಿ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಶಾಂತಾ ನಾರಾಯಣ ಶೆಟ್ಟಿ ಗೌರವ ಕಾರ್ಯ ದರ್ಶಿ ಉಷಾ ಆರ್. ಶೆಟ್ಟಿ, ಗೌರವ ಕೋಶಾ ಧಿಕಾರಿ ಶಹಾನಿ ವಿ. ಶೆಟ್ಟಿ, ಜತೆ ಕಾರ್ಯದರ್ಶಿ ಲಲಿತಾ ಡಿ. ಶೆಟ್ಟಿ, ಜತೆ ಕೋಶಾಧಿಕಾರಿ ಮಾಯಾ ಆಳ್ವ ಯುವ ವಿಭಾಗದ ಕಾರ್ಯಾಧ್ಯಕ್ಷೆ ದೃಶ್ಯಾ ಶೆಟ್ಟಿ ಉಪಸ್ಥಿತರಿದ್ದರು.

ಪ್ರದರ್ಶನ-ಮಾರಾಟ
ಅತ್ಯಾಧುನಿಕ ಎಕ್ಸಿಕ್ಯೂಸಿವ್ ಡಿಸೈನ್ ಆ್ಯಂಡ್ ಫ್ಯಾನ್ಸಿ ಸಾರೀಸ್, ಕಾಂಜೀವರಂ ಸೌತ್ ಕಾಟನ್, ಪಠಾನಿ ಸಿಲ್ಕ್ ಮತ್ತು ಬಂದಿನಿ ಕಾಟನ್ ಸಿಲ್ಕ್, ಹ್ಯಾಂಡ್ಲಮ್ ಸಾರೀಸ್, ಕುರ್ತಿಸ್, ಬೆಡ್ ಶೀಟ್ ಮತ್ತು ಟರ್ಕಿ ಟವೆಲ್‌ಗಳು, ಆರ್ಟಿಫಿಶಿಯಲ್ ಫ್ಯಾಶನ್ ಜುವೆಲರಿ, ಡ್ರೆಸ್ ಡೈಮಂಡ್ ವಾಚ್ ಮತ್ತಿತರ ಮಹಿಳಾ ಸೌಂದರ್ಯ ಸಾಮಗ್ರಿಗಳ ಪ್ರದರ್ಶನ ಹಾಗೂ ಮಾರಾಟವು ನಡೆಯಿತು.