July 23, 2026
Mumbai News Kannada
ಪ್ರಕಟಣೆ

ಕಾರ್ನಾಡು ಶ್ರೀ ಧರ್ಮಸ್ಥಾನ : ಮಾರ್ಚ್ 08, 09, ಮತ್ತು 10ರಂದು “ವರ್ಷಾವಧಿ ನೇಮೋತ್ಸವ”







ಮುಲ್ಕಿ ಸಮೀಪದ ಕಾರ್ನಾಡು ಶ್ರೀ ಧರ್ಮ ದೈವಸ್ಥಾನದ ವರ್ಷಾವಧಿ ನೇಮೋತ್ಸವವು ಮಾರ್ಚ್ 8, 9 ಮತ್ತು 10ರಂದು ವಿಜೃಂಭಣೆಯಿಂದ ಜರಗಲಿದೆ.

​ಕಾರ್ಯಕ್ರಮದ ವಿವರಗಳು:

​ತಾ. 08-03-2026ನೇ ರವಿವಾರ ಬೆಳಿಗ್ಗೆ ಗಂಟೆ 7-30ಕ್ಕೆ ತೋರಣ ಮುಹೂರ್ತ, ಬೆಳಿಗ್ಗೆ ಗಂಟೆ 11-00ಕ್ಕೆ ಮಾಗಂದಡಿ ಭಂಡಾರ ಮನೆಯಿಂದ ಶ್ರೀ ಧರ್ಮದೈವಗಳ ಭಂಡಾರ ಹೊರಡುವುದು. ಮಧ್ಯಾಹ್ನ ಗಂಟೆ 12-15ಕ್ಕೆ ಧ್ವಜಾರೋಹಣ, ಮಧ್ಯಾಹ್ನ ಗಂಟೆ 1-00ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ 5-30ರಿಂದ ಶ್ರೀ ಉಳ್ಳಾಯ ದೈವದ ನೇಮೋತ್ಸವ ಹಾಗೂ ರಾತ್ರಿ ಗಂಟೆ 9-30ರಿಂದ ಶ್ರೀ ಧೂಮಾವತಿ ದೈವದ ನೇಮೋತ್ಸವ ಜರುಗಲಿರುವುದು.
​ತಾ. 09-03-2026ನೇ ಸೋಮವಾರ ಮಧ್ಯಾಹ್ನ ಗಂಟೆ 1-00ಕ್ಕೆ ಅನ್ನಸಂತರ್ಪಣೆ ಮತ್ತು ರಾತ್ರಿ ಗಂಟೆ 9-00ರಿಂದ ಶ್ರೀ ಜಾರಂದಾಯ ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.
​ತಾ. 10-03-2026ನೇ ಮಂಗಳವಾರ ಬೆಳಿಗ್ಗೆ ಗಂಟೆ 10-00ರಿಂದ ಶ್ರೀ ಅಣ್ಣಪ್ಪ ಪಂಜುರ್ಲಿ ದೈವದ ನೇಮೋತ್ಸವ, ಮಧ್ಯಾಹ್ನ ಗಂಟೆ 1-00ರಿಂದ ಅನ್ನಸಂತರ್ಪಣೆ ಹಾಗೂ ಸಂಜೆ ಗಂಟೆ 5-30ಕ್ಕೆ ಧ್ವಜಾವರೋಹಣ ಮತ್ತು ಭಂಡಾರ ನಿರ್ಗಮನದೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.

​ಅಧ್ಯಕ್ಷ ಎಂ. ಹೆಚ್. ಅರವಿಂದ್ ಪೂಂಜಾ, ಉಪಾಧ್ಯಕ್ಷರುಗಳಾದ ಅರುಣ್ ಎಂ ಶೆಟ್ಟಿ, ಶಶಿಂದ್ರ ಸಾಲಿಯನ್, ಕಾರ್ಯದರ್ಶಿ ದಿವಾಕರ ಕೋಟ್ಯಾನ್, ಸಹ ಕಾರ್ಯದರ್ಶಿಗಳಾದ ಸದಾಶಿವ ಕೋಟ್ಯಾನ್, ಮನಿಶ್ ಜೆ ಸುವರ್ಣ, ಲತೀಶ್ ಕಾರ್ನಾಡ್, ಕೋಶಾಧಿಕಾರಿ ಪ್ರವೀಣ್ ವಿ ಕೋಟ್ಯಾನ್ ಸಹ ಕೋಶಾಧಿಕಾರಿಗಳಾದ ಆನಂದ ಶೆಟ್ಟಿಗಾರ್, ಸುಧಾಕರ್ ಶೆಟ್ಟಿ, ಅರ್ಚಕ ಸದಾನಂದ ಪೂಜಾರಿ, ಕಾರ್ನಾಡು ಗುತ್ತು, ಗುಂಡಾಲು ಗುತ್ತು, ಚಿತ್ರಪು ಗರಡಿ ಮನೆ, ಕಾರ್ನಾಡು ಕೊರಂಟಬೆಟ್ಟು ಮನೆ, ಗೋಪಾಲ ನಾಯ್ಗಾರ್, ಮಾಗದಂಗಡಿ ಮನೆ, ಶ್ರೀ ಧರ್ಮಸ್ಥಾನ ಜೀರ್ಣೋದ್ಧಾರ ಸಮಿತಿ, ಕಾರ್ನಾಡು, ಶ್ರೀ ದರ್ಮಸ್ಥಾನ ಜೀರ್ಣೋದ್ಧಾರ ಸಮಿತಿ ಮುಂಬಯಿ, ಶ್ರೀ ಧರ್ಮಸ್ಥಾನ ಯುವಕ ವೃಂದ,ಮಹಿಳಾ ಮಂಡಳಿ ಕಾರ್ನಾಡು ಹಾಗೂ ರ ಕಾರ್ನಾಡು, ಕೊಕ್ಕರ್ ಕಲ್, ಚಿತ್ರಾಪು ಗುಂಡಾಲು ಗ್ರಾಮಸ್ಥರು ​ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಾವುಗಳು,ಪಾಲ್ಗೊಂಡು ಸಹಕರಿಸಿ,ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಿದ್ದಾರೆ.



Related posts

ನ.21 ರಂದು ಬಿಲ್ಲವರ ಅಸೋಸಿಯೇಷನ್, ಮುಂಬಯಿ – ಕಲ್ವಾ ಸ್ಥಳೀಯ ಕಛೇರಿಯ ರಜತ ಮಹೋತ್ಸವದ ಸಂಭ್ರಮ

Mumbai News Desk

ಫೆ.15 ರಂದು ಶಹಾಡ್‌ನ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ 24 ಗಂಟೆಗಳ ಅಖಂಡ ಭಜನೆ

Mumbai News Desk

ಡಿ.18 ರಂದು ಬಂಟರ ಸಂಘ ಕುರ್ಲಾ ದಲ್ಲಿ ಸಮಾಜರತ್ನ ಲೀಲಾಧರ ಶೆಟ್ಟಿ, ಕಾಪು ಅವರ ಶ್ರದ್ಧಾಂಜಲಿ ಸಭೆ

Mumbai News Desk

ನಾಳೆ (ಆ. 25)ಚಿತ್ರಾಪು ಕೆ.ಎಮ್.ಕೋಟ್ಯಾನ್ ಅಭಿನಂದನಾ ಸಮಾರಂಭ.

Mumbai News Desk

ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಬಿರ್ಲಾಗೇಟ್ ಶಹಾಡ್ : ಎ. 12ರಿಂದ ಎ. 21ರ ತನಕ 63ನೇ ವಾರ್ಷಿಕೋತ್ಸವ, 10ನೇ ಪ್ರತಿಷ್ಠ ವರ್ಧಂತಿ ಉತ್ಸವ.

Mumbai News Desk

ಎ. 12 ರಿಂದ 21- ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ, ಬಿರ್ಲಾಗೇಟ್, ಶಹಾಡ್, 63 ನೇ, ಮಹಾಪೂಜೆ

Mumbai News Desk