July 23, 2026
Mumbai News Kannada
ಸುದ್ದಿ

ಮುಂಬೈ : ಪ್ರವೀಣ್ ಭಟ್ ಅವರಿಗೆ ಪಿತೃ ವಿಯೋಗ







​ಮೂಡಬಿದ್ರೆ ಕುಂಜಾಡಿಯ ನಿವಾಸಿಯಾದ ಹಿರಿಯ ಸಮಾಜ ಸೇವಕ, ಪ್ರಗತಿಪರ ಕೃಷಿಕ ಹಾಗೂ ದಾನಿಗಳಾದ ಮಹಾಬಲ (95) ಅವರು ಮಾರ್ಚ್ 5ರಂದು ದೈವಾಧೀನರಾಗಿದ್ದಾರೆ. ಮೃತರು ಮುಂಬೈನ ಖ್ಯಾತ ಜ್ಯೋತಿಷಿ, ಪುರೋಹಿತ ಹಾಗೂ ಸಯನ್ ಕನ್ನಡ ಸಂಘದ ಅಧ್ಯಕ್ಷರಾದ ಪ್ರವೀಣ್ ಭಟ್ ಅವರ ತಂದೆಯಾಗಿದ್ದಾರೆ.
​ಹೊಕ್ಕಾಡಿಗೋಳಿ ಕಂಬಳ ಸಮಿತಿಯ ಸಕ್ರಿಯ ಸದಸ್ಯರಾಗಿ ಸಾಂಪ್ರದಾಯಿಕ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದ್ದ ಅವರು, ಕೃಷಿ ಕ್ಷೇತ್ರದಲ್ಲಿಯೂ ಅಪಾರ ಸಾಧನೆ ಮಾಡಿದ ಸಾಧಕರಾಗಿದ್ದರು. ಮೃತರು ಪತ್ನಿ, ಪ್ರವೀಣ್ ಭಟ್ ಸೇರಿದಂತೆ ಆರು ಮಂದಿ ಪುತ್ರರು, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
​ಇವರ ನಿಧನಕ್ಕೆ ಕನ್ನಡ ಸಂಘ ಸಯನ್ ನ ಪದಾಧಿಕಾರಿಗಳು, ಸಲಹೆಗಾರರು, ಸದಸ್ಯರು, ಮುಂಬೈ ಬಿಲ್ಲವರು, ಶ್ರೀ ನಾರಾಯಣ ಗುರು ಭಜನಾ ಮಂಡಳಿಯ ಸದಸ್ಯರು ಹಾಗೂ ಜಯ ಸಿ. ಸುವರ್ಣ ಅಭಿಮಾನಿ ಬಳಗದವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಮಾಜದ ಹಿತಚಿಂತಕರಾಗಿದ್ದ ಅವರ ಅಗಲಿಕೆಯು ಈ ಭಾಗದ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.



Related posts

ಮೈಲ್ ಸ್ಟೋನ್ ಮಿಸೆಸ್ ಎಷ್ಯಾ ಇಂಟರ್ನೆಷನಲ್ ಪೆಜೇಂಟ್ 2024, ಪ್ರಭಾ ಎನ್ ಸುವರ್ಣ ಅವರಿಗೆ ದ್ವಿತೀಯ ಸ್ಥಾನ.

Mumbai News Desk

ಕೊಲ್ಲಾಪುರ: ಯುವತಿಯರ ಲೈಂಗಿಕ ಶೋಷಣೆ ಹಾಗೂ ಬ್ಲ್ಯಾಕ್‌ಮೇಲ್ ಆರೋಪದಡಿ ಫಾರ್ಮಸಿ ವಿದ್ಯಾರ್ಥಿ ಬಂಧನ

Mumbai News Desk

GST 2.0 : ಸರಳೀಕರಣಗೊಂಡ ಹೊಸ ತೆರಿಗೆ ವ್ಯವಸ್ಥೆ – 5% ಮತ್ತು 18% ಶ್ಲಾಬ್,

Mumbai News Desk

ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಶಾಂತಿ, ಸೌಹಾರ್ದತೆಗೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಬದ್ದ : ಪತ್ರಿಕಾಗೋಷ್ಥಿಯಲ್ಲಿ ತೋನ್ಸೆ ಜಯಕೃಷ್ಣ ಎ. ಶೆಟ್ಟಿ.

Mumbai News Desk

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲೂೃಜೆ) ವಾರ್ಷಿಕ ಪ್ರಶಸ್ತಿಗಳ ಪ್ರಕಟ

Mumbai News Desk

ಪಶ್ಚಿಮ ಬಂಗಾಳ ವಿಧಾನಸಭಾ ವಿಸರ್ಜನೆ: ಮಮತಾ ಬ್ಯಾನರ್ಜಿ ರಾಜೀನಾಮೆ ನಿರಾಕರಣೆ ಹಾಗೂ ರಾಜ್ಯಪಾಲರ ಕಠಿಣ ಕ್ರಮ

Mumbai News Desk