
ಹೊಸಬರಿಗೆ ಸಮಾಜದಲ್ಲಿ ಸೇವಾ ಕಾರ್ಯ ಮಾಡಲು ಅನುಕೂಲ ಮಾಡಿಕೊಡಬೇಕು: ಸಂಸದ ಗೋಪಾಲ್ ಶೆಟ್ಟಿ.
ಚಿತ್ರ ವರದಿ : ದಿನೇಶ್ ಕುಲಾಲ್
ಮುಂಬಯಿ,ಅ.-ಬಂಟರ ಸಂಘ ಮುಂಬೈ ಜೋಗೇಶ್ವರಿ- ದಹಿಸರ್‌ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗವು ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ನವರಾತ್ರಿ ಉತ್ಸವವು ಈ ವರ್ಷ ಅ.21ರ ಶನಿವಾರದಂದು ಕಾಂದಿವಲಿ ಪೂರ್ವದ ವೆಸ್ಟರ್ನ್ ಎಕ್ಸ್‌ಪ್ರೆಸ್ ಹೈವೇ ಬಳಿ ಇರುವ ಅವಿನ್ಯೂ ಹೋಟೇಲ್ ನ ಆವರಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅಂಗವಾಗಿ ಮಾತಾ ಕೀ ಚೌಕಿ . ದಾಂಡಿಯಾ ರಾಸ್. ಮಹಿಳಾ ವಿಭಾಗಕ್ಕೆ ಸಹಕರಿಸಿದ ದಾನಿಗಳನ್ನು .ಸೇವಕರ್ತರನ್ನು ಗೌರವಿಸುವ ಮೂಲಕ ಭಕ್ತಿ ಸಂಭ್ರಮದೊಂದಿಗೆ ನಡೆಯಿತು.
ಕಾರ್ಯಕ್ರಮದಪ್ರಾರಂಭದಲ್ಲಿ ಬಂಟರ ಸಂಘ ಮುಂಬಯಿಯ ಜೋಗೇಶ್ವರಿ-ದಹಿಸರ್‌ಪ್ರಾದೇಶಿಕ ಸಮಿತಿಯ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರಾದ ನಿಟ್ಟೆ ಎಂ.ಜಿ. ಶೆಟ್ಟಿಯವರ ಹಾಗೂ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೈಲಜಾ ಅಮರನಾಥ ಶೆಟ್ಟಿ ಮತ್ತು ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಸಂಸದರಾದ ಗೋಪಾಲ್ ಶೆಟ್ಟಿ ಅವರು ದೀಪ ಬೆಳಗಿಸಿ ಚಾಲನೆ ನೀಡಿದರು.

ಆ ಬಳಿಕ ಮಾತನಾಡಿದ ಗೋಪಾಲ್ ಶೆಟ್ಟಿ ಅವರು ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗ ಮಹಿಳೆಯರನ್ನು ದಸರಾ ಸಂದರ್ಭದಲ್ಲಿ ಒಗ್ಗೂಡಿಸಿ ಧಾರ್ಮಿಕ ವಿಚಾರಗಳನ್ನು ಬದುಕಿನಲ್ಲಿ ರೂಡಿಸಿಕೊಳ್ಳಲು ಸಹಕಾರಿಯಾಗಿದೇ . ಯುವ ಪೀಳಿಗೆಯನ್ನು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ನಾವು ಮಾರ್ಗದರ್ಶನ ನೀಡಬೇಕು . ಹೊಸ ರೀತಿಯ ಆಲೋಚನೆಯ ಮೂಲಕ ಸಂಘದ ಕೆಲಸ ಕಾರ್ಯಗಳು ನಡೆಯುವಂತಾಗಲಿ ಹಾಗೂ ಹೊಸಬರಿಗೆ ಅವಕಾಶವನ್ನು ನೀಡಿ .ಸಮಾಜದಲ್ಲಿ ಸೇವಾ ಕಾರ್ಯ ಮಾಡಲು ಅವರಿಗೆ ಅನುಕೂಲ ಮಾಡಿಕೊಡಬೇಕು. ನವರಾತ್ರಿಯ ಈ ಸಂದರ್ಭದಲ್ಲಿ ದೇವಿಯನ್ನು ಸುದಿಸುತ್ತಾ ಧರ್ಮ ಜಾಗೃತಿಯ ಕೆಲಸ ನಡೆಯುತ್ತಿದೆ ಇದು ಇನ್ನಷ್ಟು ಹೆಚ್ಚು ನಡೆಯುತ್ತಿರಲಿ ಎಂದು ನುಡಿದರು.



ಅನಂತರ ಮುಂಬಯಿ ಮಹಾನಗರದಲ್ಲಿ ಮಾತಾ ಕೀ ಚೌಕಿ – ಶ್ರೀ ದುರ್ಗಾ ದೇವಿ ಸ್ತುತಿಯನ್ನು ನಡೆಸಿಕೊಡುವ ಅಗ್ರಗಣ್ಯರಲ್ಲಿ ಒಬ್ಬರಾದ ಕುಂದನ್ ಜೀ ಮಂಗಲ್‌ರವರ ನೇತೃತ್ವದಲ್ಲಿ ಮಾತಾ ಕೀ ಚೌಕಿ (ಶ್ರೀ ದುರ್ಗಾ ಸ್ತುತಿ )
ಬಂಟರ ಸಂಘದಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ ಮತ್ತು ಪದಾಧಿಕಾರಿಗಳು ಹಾಗೂ ಪ್ರಾದೇಶಿಕ ಸಮಿತಿಯಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೈಲಜಾ ಅಮರನಾಥ ಶೆಟ್ಟಿಯವರ ಮತ್ತು ಪದಾಧಿಕಾರಿಗಳು ಸದಸ್ಯರು ಭಕ್ತಿ ಶುದ್ಧೆಯಿಂದ
ಮಾತಾ ಕೀ ಚೌಕಿ ಪಾಲ್ಗೊಂಡು ದೇವಿಯನ್ನು ಶ್ರುತಿಸಿದರು.
ಆ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಬಂಟರ ಸಂಘದ ಅಧ್ಯಕ್ಷರಾದ ಚಂದ್ರಹಾಸ ಕೆ ಶೆಟ್ಟಿಯವರ ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯ ಕ್ಷರಿಗೆ .ದಾನಿಗಳಿಗೆ. ವಿಶೇಷ ಸಹಕಾರ ನೀಡಿದ ಬಂಧುಗಳಿಗೆ ಗೌರವಿಸಿದರು.
ವೇದಿಕೆಯಲ್ಲಿ ಉಪಕಾರ್ಯಧ್ಯಕ್ಷ ರತ್ನಾಕರ ಶೆಟ್ಟಿ ಮುಂಡೂರು,ಗೌ.ಪ್ರ. ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿ, , ಜೊತೆ ಕೋಶಾಧಿಕಾರಿಗಳು ಹಾಗೂ ಪ್ರಾದೇಶಿಕ ಸಮಿತಿಯ ಮುಖ್ಯ ಸಲಹೆಗಾರರೂ ಆದ ಮುಂಡಪ್ಪ ಎಸ್ ಪಯ್ಯಡೆಯವರು, , ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ ಹಾಗೂ
ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರಾದ ನಿಟ್ಟೆ ಎಂ.ಜಿ. ಶೆಟ್ಟಿ.ಸಲಹೆಗಾರರಾದ, ಮನೋಹರ್‌ನ್ ಶೆಟ್ಟಿ, ವಿಜಯ ಆರ್‌ಭಂಡಾರಿ. ಹಾಗೂ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೈಲಜಾ ಅಮರನಾಥ ಶೆಟ್ಟಿ.
ಮಹಿಳಾ ವಿಭಾಗದ ಮುಖ್ಯ ಸಲಹೆಗಾರ್ತಿ ವಿನೋದ ಎ ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಸುನೀತಾ ಎನ್ ಹೆಗ್ಡೆ, ಕಾರ್ಯದರ್ಶಿ ರೇಖಾ ವೈ ಶೆಟ್ಟಿ,ಕೋಶಾಧಿಕಾರಿ ಯೋಗಿನಿ ಯಸ್ ಶೆಟ್ಟಿ, ಜೊತೆ ಕಾರ್ಯದರ್ಶಿ ಸರಿತಾ ಯಂ ಶೆಟ್ಟಿ, ಜೊತೆ ಕೋಶಾಧಿಕಾರಿ ಶುಭಾಂಗಿ ಯಸ್ ಶೆಟ್ಟಿ ಉಪಸ್ಥರಿದ್ದರು.
, ಈ ಸಂದರ್ಭದಲ್ಲಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದಲ್ಲಿ ಕಳೆದ ಮೂರು ವರ್ಷಗಳಲ್ಲಿ ಸೇವೆ ಮಾಡಿದವರನ್ನು ಗುರುತಿಸಿ ಗೌರವಿಸಲಾಯಿತು.




ಸಮಿತಿಯ ಕಾರ್ಯಾಧ್ಯಕ್ಷರಾದ ನಿಟ್ಟೆ ಎಮ್. ಜಿ. ಶೆಟ್ಟಿ ಸ್ವಾಗತಿಸಿದರು. , ಮಹಿಳಾ ವಿಭಾಗದ ಕಾರ್ಯ ಧ್ಯಕ್ಷೆ ಶೈಲಜಾ ಅಮರನಾಥ್ ಶೆಟ್ಟಿ ಪ್ರಾಸ್ತಾವಿಕಮಾತುಗಳನ್ನಾಡಿ ದರು ಕಾರ್ಯಕ್ರಮವನ್ನು ರಘುನಾಥ್ ಎನ್ ಶೆಟ್ಟಿ ನಿರೂಪಿಸಿದರು ,
ಈ ಧಾರ್ಮಿಕ ಯಶಸ್ವಿ ಯಾಗುವಲ್ಲಿ ಪ್ರಾದೇಶಿಕ ಸಮಿತಿಯ ಸಂಚಾಲಕರಾದ ರವೀಂದ್ರ ಎಸ್ ಶೆಟ್ಟಿಯವರು, ಸಲಹೆಗಾರರಾದ, ಮನೋಹರ್‌ನ್ ಶೆಟ್ಟಿ, ವಿಜಯ ಆರ್‌ಭಂಡಾರಿ, ಪ್ರಭಾಕರ್ ಬಿ ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಪ್ರೇಮನಾಥ್ ಶೆಟ್ಟಿ ಕೊಂಡಾಡಿ, ಕಾರ್ಯದರ್ಶಿ ಅಶೋಕ್ ವಿ ಶೆಟ್ಟಿ, ಕೋಶಾಧಿಕಾರಿ ಗಂಗಾಧರ ಏ ಶೆಟ್ಟಿ, ಜೊತೆ ಕಾರ್ಯದರ್ಶಿ ರಘುನಾಥ ಯನ್ ಶೆಟ್ಟಿ, ಜೊತೆ ಕೋಶಾಧಿಕಾರಿ ಅವಿನಾಶ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಧೀರಜ್ ಡಿ ರೈ, ಮಹಿಳಾ ವಿಭಾಗದ ಮುಖ್ಯ ಸಲಹೆಗಾರ್ತಿ ವಿನೋದ ಏ ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಸುನೀತಾ ಯನ್ ಹೆಗ್ಡೆ, ಕಾರ್ಯದರ್ಶಿ ರೇಖಾ ವೈ ಶೆಟ್ಟಿ,ಕೋಶಾಧಿಕಾರಿ ಯೋಗಿನಿ ಯಸ್ ಶೆಟ್ಟಿ, ಜೊತೆ ಕಾರ್ಯದರ್ಶಿ ಸರಿತಾ ಯಂ ಶೆಟ್ಟಿ, ಜೊತೆ ಕೋಶಾಧಿಕಾರಿ ಶುಭಾಂಗಿ ಯಸ್ ಶೆಟ್ಟಿ, ಮತ್ತು ಎಲ್ಲಾ ಉಪಸಮಿತಿಗಳ ಕಾರ್ಯಧ್ಯಕ್ಷರುಗಳು, ಮಹಿಳಾ ವಿಭಾಗದ ಪದಾಧಿಕಾರಿಗಳು,ಕಾರ್ಯಕಾರಿ ಸಮಿತಿಯ ಹಾಗೂ ಉಪಸಮಿತಿಗಳ ಕಾರ್ಯಾಧ್ಯಕ್ಷರುಗಳು ಹಾಗೂ ಮಹಿಳಾ ವಿಭಾಗದ ಮಾಜಿ ಕಾರ್ಯ ಧ್ಯಕ್ಷರುಗಳು ಸಹಕರಿಸಿದರು
ಕಾರ್ಯಕ್ರಮದ ಕೊನೆಯಲ್ಲಿ ನವರಾತ್ರಿ ಆಚರಣೆಯ ಪ್ರಮುಖ ಅಂಗವಾದ ದಾಂಡಿಯಾ ರಾಸ್ -ಗರ್ಭಾ ನೃತ್ಯ ಏರ್ಪಡಿಸಲಾಗಿದ್ದು ಬಳಿಕ ಪ್ರಸಾದ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
———-
ನವೆಂಬರ್ 4ರಂದು ಬೋರಿವಿಲಿ ಯ ಶಿಕ್ಷಣ ಸಂಸ್ಥೆಯ ಪ್ರಥಮ ಹಂತದ ಉದ್ಘಾಟನೆ ಗೆ ಪ್ರಾದೇಶಿಕ ಸಮಿತಿಯ .
ಬೆಂಬಲ ಅಗತ್ಯ:
:ಮುಂಡಪ್ಪ ಎಸ್ ಪೈಯಾಡೆ
ಮಹಾರಾಷ್ಟ್ರದಲ್ಲಿರುವ 875 ಕಾಲೇಜುಗಳಲ್ಲಿ ಎಸ್ಎಂ ಶೆಟ್ಟಿ ಶಿಕ್ಷಣ ಸಂಸ್ಥೆಗೆ. 3 ನೇ ಯ ಅತ್ಯುತ್ತಮ ಕಾಲೇಜ್ ಎನ್ನುವ ಕೀರ್ತಿ ಎಸ್ ಎಮ್ ಶೆಟ್ಟಿಗೆ ಲಭಿಸಿದೆ. ಇದು ಬಂಟ ಸಮಾಜಕ್ಕೆ ಕೀರ್ತಿ ತಂದಿದೆ .ನಮ್ಮವರ ಸಂಘಟನಾ ಚತುರತೆ . ಆಡಳಿತದ ನಿಪುನತ ಈ ರಾಜ್ಯದ ಜನತೆಗೆ ಗೊತ್ತಾಗಿದೆ. ಮಂಟರ ಸಂಘ ಮಹತ್ತರವಾದ ಶಿಕ್ಷಣದ ಯೋಜನೆಯನ್ನು ಈ ಪ್ರಾದೇಶಿಕ ಸಮಿತಿಯ ಪರಿಸರದಲ್ಲಿ ಪ್ರಾರಂಭಿಸಲು ಎಲ್ಲಾ ವನ್ನು ಸಿದ್ಧತೆ ಮಾಡಿದೆ. ಅರವತ್ತು ಕೋಟಿ ರೂಪಾಯಿಯ ಈ ಶಿಕ್ಷಣ ದೇಗುಲ ನಿರ್ಮಾಣದ ಯೋಜನೆಗೆ ಈ ಪರಿಸರದ ಬಂಟ ಬಂಧುಗಳು ಮುಕ್ತ ಮನಸ್ಸಿನಿಂದ ದೇನಿಗೆಯನ್ನು ನೀಡಬೇಕು. ನಾವು ನೀಡಿದ ದಾನಕ್ಕೆ ಪ್ರತಿರೂಪವಾಗಿ ದೇವರು ಬೇರೊಂದು ರೂಪದಲ್ಲಿ ನಮ್ಮನ್ನು ಆಶೀರ್ವದಿಸುತ್ತಾರೆ ವಿದ್ಯೆ ನೀಡುವ ಮಹತ್ವರಾ ಯೋಜನೆಗೆ ನೀವೆಲ್ಲರೂ ಕೈಜೋಡಿಸಬೇಕು. ನವೆಂಬರ್ 4ರಂದು ಶಿಕ್ಷಣ ಸಂಸ್ಥೆಯ ಪ್ರಥಮ ಹಂತದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಈ ಪ್ರಾದೇಶಿಕ ಸಮಿತಿಯ ಸದಸ್ಯರಲ್ಲರೂ ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಈ ಕಾರ್ಯಕ್ರಮದಲ್ಲಿ ನಮ್ಮ ಪ್ರಾದೇಶಿಕ ಸಮಿತಿಯ ಒಗ್ಗಟ್ಟನ್ನು ತೋರಿಸಬೇಕಾಗಿದೆ. ಎಂದು ನುಡಿದರು.
——————-+—-
ಪ್ರಾದೇಶಿಕ ಸಮಿತಿಯ ಮೂಲಕ ಸರ್ವ ಬಂಧುಗಳಿಗೆ ಮಹಿಳಾ ವಿಭಾಗದ ಸಹಕಾರ ನೀಡಿದೆ:
ಶೈಲಜಾ ಅಮರನಾಥ್ ಶೆಟ್ಟಿ
ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯ ಧ್ಯಕ್ಷೆ ಶೈಲಜಾ ಅಮರನಾಥ್ ಶೆಟ್ಟಿ ಮಾತನಾಡುತ್ತಾ ಮೂರು ವರ್ಷ ವಿವಿಧ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಯಶಸ್ವಿಯಾಗಿ ಮಾಡುವಲ್ಲಿ ಮಹಿಳಾ ವಿಭಾಗ ಎಲ್ಲಾ ಸದಸ್ಯರು ಸಹಕರಿಸಿದ್ದಾರೆ. ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳು ದಾನಿಗಳು ಸಹಕಾರದಿಂದಾಗಿ ಬೇರೆ ಬೇರೆ ವಿಧದಲ್ಲಿ ಮಹಿಳಾ ವಿಭಾಗದ ಸೇವಾ ಚಟುವಟಿಕೆಗಳಿಗೆ ಸಹಕಾರ ಮಾಡಿದ್ದೇವೆ ಅದು ನಮಗೆ ಸಂತೋಷವನ್ನು ನೀಡಿದೆ. ಬಂಟರ ಸಂಘದ ಯೋಜನೆಗಳು ಸಮಾಜದ ಬಂಧುಗಳಿಗೆ ತಲುಪುವಲ್ಲಿ ಮಹಿಳಾ ವಿಭಾಗದ ಸಂಪೂರ್ಣ ಸಹಕಾರವನ್ನು ನೀಡಿದ್ದೇವೆ ಎಂದು ನುಡಿದರು.
+++++++++++++++++
ಮಕ್ಕಳು ಆತ್ಮವಿಶ್ವಾಸ ಬೆಳೆಸಿಕೊಳ್ಳಿ :ನಿಟ್ಟೆ ಎಂಜಿ ಶೆಟ್ಟಿ
ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷ ನಿಟ್ಟೆ ಎಂ .ಜಿ ಶೆಟ್ಟಿ ಅವರು ಸ್ವಾಗತಿಸುತ್ತಾ ಈ ಪ್ರಾದೇಶಿಕ ಸಮಿತಿಯ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಬೇಕಿದ್ದರೆ ನಮ್ಮ ಪದಾಧಿಕಾರಿಗಳು, ಸದಸ್ಯರ ಅಪಾರವಾದ ಶ್ರಮವಿದೆ ,ಇಂದು ಅಲ್ಪಾವಧಿಯ ಸಮಯದಲ್ಲಿ ಈ ಒಂದು ಅರ್ಥಪೂರ್ಣ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಸಮಾಜ ಬಾಂಧವರು ಸೇರಿಕೊಂಡಿದ್ದಾರೆ, ಇದು ನಮ್ಮ ಪ್ರಾದೇಶಿಕ ಸಮಿತಿಗೆ ಸಂಘಟನಾ ಶಕ್ತಿಯಾಗಿದೆ , ಬಂಟರ ಸಂಘ ಸಮಾಜದ ಮಕ್ಕಳಿಗೆ ವಿವಿಧ ರೀತಿಯಲ್ಲಿ ಆರ್ಥಿಕ ನೆರವನ್ನು ನೀಡುತ್ತಾ ಬಂದಿದೆ ಆದರೆ ನಮ್ಮ ಪ್ರಾದೇಶಿಕ ಸಮಿತಿ ಈ ಪರಿಸರದ ವಿದ್ಯಾರ್ಥಿಗಳಿಗೆ ನೆರವು ನೀಡಬೇಕೆನ್ನುವ ಉದ್ದೇಶದಿಂದ ಪ್ರತಿ ವರ್ಷ ಶಾಲಾ ಪರಿಕರವನ್ನು ನೀಡುತ್ತಿದೆ ಯಾಕೆಂದರೆ ಮಕ್ಕಳೆಲ್ಲರೂ ಉನ್ನತ ಶ್ರೇಣಿಯಲ್ಲಿ ವಿದ್ಯಾಭ್ಯಾಸವನ್ನು ಪಡೆಯಬೇಕು ಎಂಬ ಪ್ರಾದೇಶಿಕ ಸಮಿತಿಯ ಯೋಚನೆಯಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಹಾಗಾದರೆ ಮಾತ್ರ ಬದುಕಿನಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ನುಡಿದರು
——–
ಬೋರಿವಲ್ಲಿ 160 ಕೋಟಿ ರೂಪಾಯಿಯ ವೆಚ್ಚದ ಶಿಕ್ಷಣ ಸಂಸ್ಥೆ ನವಂಬರ್ 4 ರಂದು ಪ್ರಥಮ ಹಂತದ ಉದ್ಘಾಟನೆ :ಚಂದ್ರಹಾಶ್ ಕೆ ಶೆಟ್ಟಿ
-ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಚಂದ್ರ ಹಾಶ್ ಶೆಟ್ಟಿ ಅವರು ಬಂಟರ ಸಂಘ ಸಮಾಜವನ್ನು ಮತ್ತು ಸಮಾಜ ಜನರನ್ನು ಬೆಳೆಯುವಲ್ಲಿ ಸಹಕಾರ ನೀಡಿದ . ಮರಾಠಿ ಮಣ್ಣಿನ ಋಣವನ್ನು ಕೂಡ ಸಂದಾಯ ಮಾಡುವಲ್ಲಿ ಬಂಟ ಸಮಾಜ ಸೇವೆಯನ್ನು ಮಾಡಿದೆ. ಎರಡು ಅತ್ಯುನ್ನತ ಶಿಕ್ಷಣ ಸಂಸ್ಥೆಯನ್ನು ಹೊಂದಿದೆ ಅದು ಈ ರಾಜ್ಯಕ್ಕೆ ಮಾದರಿಯಾಗುವ ಶಿಕ್ಷಣವನ್ನು ನೀಡುವ ಸೇವೆ ಮಾಡುತ್ತಿದೆ ಅದು ಬಂಟರಿಗೆ ಗೌರವದ ವಿಚಾರವಾಗಿದೆ .ಮುಂದೆ ಬೋರಿವಲ್ಲಿ ಸುಮಾರು 160 ಕೋಟಿ ರೂಪಾಯಿಯ ವೆಚ್ಚದ ಶಿಕ್ಷಣ ಸಂಸ್ಥೆ ನವಂಬರ್ 4 ರಂದು ಪ್ರಥಮ ಹಂತದ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಈ ಶಿಕ್ಷಣ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಮಟ್ಟದ ಶಿಕ್ಷಣ ನೀಡುವ ವ್ಯವಸ್ಥೆ ಯ ನ್ನು ಹೊಂದಿದೆ. ಇದರ ಪ್ರಥಮ ಹಂತದ ಉದ್ಘಾಟನಾ ಸಂದರ್ಭದಲ್ಲಿ ಈ ಪ್ರಾದೇಶಿಕ ಸಮಿತಿಗೆ ಮಹತ್ವವಾದ ಜವಾಬ್ದಾರಿ ಇದೆ . ಮಹಾರಾಷ್ಟ್ರದ ಮುಖ್ಯಮಂತ್ರಿ ಉಪಮುಖ್ಯಮಂತ್ರಿಗಳು ಈ ಕಾರ್ಯಕ್ರಮಕ್ಕೆ ಬರುವ ಇದಕ್ಕೆ ಎಲ್ಲಾ ರೀತಿಯ ಒಪ್ಪಿಗೆಯನ್ನು ನೀಡಿದ್ದಾರೆ. ಆದ್ದರಿಂದ ಈ ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಪ್ರಾದೇಶಿಕ ಸಮಿತಿ ಶ್ರಮಿಸಬೇಕು. ನವರಾತ್ರಿಯ ಶುಭ ಸಂದರ್ಭದಲ್ಲಿ ದೇವಿಯನ್ನು ಸ್ಮರಿಸಿ . ಧಾರ್ಮಿಕ ಕಾರ್ಯಗಳನ್ನು ಮಾಡಿದ್ದೀರಿ ಇದು ನಮ್ಮೆಲ್ಲರಿಗೂ ಒಳಿತಾಗಲಿ ಎಂದು ನುಡಿದರು