
ಚಿತ್ರ ವರದಿ : ಸತೀಶ್ ಶೆಟ್ಟಿ.
ಮುಂಬೈ ಮಹಾರಾಷ್ಟ್ರದ ಮಿನಿ ತುಳುನಾಡು ಎಂದೇ ಖ್ಯಾತವಾಗಿರುವ ಡೊಂಬಿವಲಿಯ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯ 59ನೇ ನವರಾತ್ರಿ ಉತ್ಸವವು ವಿವಿಧ ಪೂಜೆ, ಸೇವಾದಿಗಳಿಂದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅಕ್ಟೋಬರ್ 24ರ ದಸರದಂದು ನಡೆದ ವೈಭವಯುತ ಮೆರವಣಿಗೆಯೊಂದಿಗೆ ಸಂಪನ್ನಗೊಂಡಿತು.






ಪ್ರತಿದಿನ ಮಧ್ಯಾಹ್ನ ಹಾಗೂ ರಾತ್ರಿ ಶ್ರೀದೇವಿಯ ಪೂಜಾ ವಿಧಿ-ವಿಧಾನಗಳು ಜರುಗಿ ಮಂಗಳಾರತಿಯ ನಂತರ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಅಕ್ಟೋಬರ್ 29 ರ ಶುಕ್ರವಾರದಂದು ಸಾಯಂಕಾಲ ಮಹಿಳಾ ವಿಭಾಗದ ವತಿಯಿಂದ ಹಳದಿ – ಕುಂಕುಮ ಕಾರ್ಯಕ್ರಮವು ಜರುಗಿತು. ಸುಮಾರು ಒಂದೂವರೆ ಸಾವಿರಕ್ಕೊ ಅಧಿಕ ಮುತೈದೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.








ಅಕ್ಟೋಬರ್ 19 ರ ಗುರುವಾರ ಹಾಗೂ 22 ರ ರವಿವಾರ ಸಾಯಂಕಾಲ ರಂಗ ಪೂಜೆ ನಡೆಯಿತು, ನೂರಾರು ಭಕ್ತರು ರಂಗಪೂಜೆಯಲ್ಲಿ ಪಾಲ್ಗೊಂಡು, ತೀರ್ಥ ಪ್ರಸಾದ ಸ್ವೀಕರಿಸಿದರು.
ದಿನಾ ಬೆಳಿಗ್ಗೆ ತುಲಾಭಾರ ಸೇವೆ ನಡೆದು ಭಕ್ತರ ಹರಕೆಗಳು ಸಂದಾಯವಾದವು.
ಪ್ರತಿ ದಿನ ಮಹಾನಗರ ಹಾಗೂ ಉಪ ನಗರಗಳ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸೇವೆಯು ನಡೆಯಿತು.






ಅಕ್ಟೋಬರ್ 16 ರ ಸೋಮವಾರ ಪುತ್ತೂರು ಚಂದ್ರಹಾಸ ರೈ ಹಾಗೂ ಬಳಗ, 17 ರ ಮಂಗಳವಾರ ಶ್ರೀ ಸುರೇಶ್ ಶೆಟ್ಟಿ, ಪನ್ವೆಲ್,18 ರ ಬುಧವಾರ ಮೂಡುಬೆಳ್ಳೆ ಶ್ರೀ ವಿಜಯ್ ಕುಮಾರ್ ಶೆಟ್ಟಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಈ ನವರಾತ್ರಿಯ ಸಂದರ್ಭದಲ್ಲಿ ಡೊಂಬಿವಲಿಯ ವಿವಿಧ ಸಂಸ್ಥೆಗಳು ಮೆರವಣಿಗೆ ಮೂಲಕ ಬಂದು ಶ್ರೀ ದೇವಿಗೆ ಹೊರೆ ಕಾಣಿಕೆ ಅರ್ಪಿಸಿದವು.






ಅಕ್ಟೋಬರ್ 23 ರ ಸೋಮವಾರ ಮಂಡಳಿಯ ಬಾಲ ಕಲಾವಿದರಿಂದ ನೃತ್ಯ ವೈಭವ, ನಂತರ ಶ್ರೀ ಮಹಾ ಗಣಪತಿ ಯಕ್ಷಗಾನ ಮಂಡಳಿ ಪುಣೆ ಹಾಗೂ ಊರಿನ ಅತಿಥಿ ಕಲಾವಿದರಿಂದ ” ಶ್ರೀ ದೇವಿ ಮಹಾತ್ಮೆ” ಯಕ್ಷಗಾನ ಕಾರ್ಯಕ್ರಮ ನಡೆಯಿತು.
ಯಕ್ಷಗಾನ ಕಾರ್ಯಕ್ರಮದ ಮಧ್ಯಂತರದಲ್ಲಿ ನಡೆದ ಕಿರು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸುಪ್ರಸಿದ್ಧ ಯಕ್ಷಗಾನ ಕಲಾವಿದರು ಹಾಗೂ ಲೇಖಕರು ಆದ ಶ್ರೀ ಕೊಲ್ಯಾರು ರಾಜು ಶೆಟ್ಟಿ ಅವರನ್ನು ಇನ್ನ ಕುರ್ಕಿಲ ಬೆಟ್ಟು ಬಾಳಿಕೆ ದಿವಂಗತ ದಾಸು ಬಾಬು ಶೆಟ್ಟಿ ಅವರ ಸಂಸ್ಮರಣಾರ್ಥ ಸನ್ಮಾನಿಸಲಾಯಿತು.
ಯಕ್ಷಗಾನದ ಪ್ರಯೋಜಕರಾದ ರತ್ನ ಶೆಟ್ಟಿ ಹಾಗೂ ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ನೆರವನ್ನು ನೀಡುತ್ತಿರುವ ನಿತ್ಯಾನಂದ ಜತ್ತನ್ ಅವರನ್ನು ಸನ್ಮಾನಿಸಲಾಯಿತು.
ಮಂಡಳಿಯ ಧರ್ಮದರ್ಶಿ ಅಶೋಕ್ ದಾಸು ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡುತ್ತ, ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ಮಂಡಳಿಯು ಸ್ಥಾಪನೆ ಗೊಂಡ ದಿನಗಳನ್ನು ಸ್ಮರಿಸುತ್ತ ಮುಂದಿನ ಸಲ 60 ನೇ ವರ್ಷವನ್ನು ಆಚರಿಸುತ್ತಿದ್ದೇವೆ. ಅದನ್ನು ಇನ್ನೂ ವಿಜೃಂಭಣೆಯಿಂದ ಆಚರಿಸುವಲ್ಲಿ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.
ವೇದಿಕೆಯಲ್ಲಿ ಉದ್ಯಮಿಗಳು ದಾನಿಗಳು ಆದ ಪ್ರಭಾಕರ್ ಶೆಟ್ಟಿ, ವಿಜಿತ್ ಶೆಟ್ಟಿ, ಜಗದೀಶ್ ಶೆಟ್ಟಿ, ವೇಣುಗೋಪಾಲ್ ರೈ, ಗೀತಾ ಶೆಟ್ಟಿ, ರತ್ನ ಶೆಟ್ಟಿ, ಮಂಡಳಿಯ ಅಧ್ಯಕ್ಷ ರಾದ ಗೋಪಲ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ವಿಲಾಸಿನಿ ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ರಾದ ರಾಕೇಶ್ ಶೆಟ್ಟಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯದರ್ಶಿ ಕಿಶೋರ್ ಡಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ನಿರೂಪಿಸಿದರೆ, ರಘುಪತಿ ಭಟ್ ಸಹಕರಿಸಿದರು.
ಆಕ್ಟೊಬರ್ 24 ಮಂಗಳವಾರ ಸಾಯಂಕಾಲ ಶ್ರೀದೇವಿಯ ವಿಸರ್ಜನಾ ಮೆರವಣಿಗೆಯು ವಿವಿಧ ವೇಷ ಭೂಷಣ ಗಳೊಂದಿಗೆ ವೈಭವ ವಾಗಿ ನಡೆಯಿತು,








ವಿವಿಧ ವೇಶಭೂಷಣಗಳೊಂದಿಗೆ ನಾಸಿಕ್ ಡೋಲ್, ತಟ್ಟಿರಾಯ, ಸಿಡಿಮದ್ದು, ಬ್ಯಾಂಡುವಾಲಗ, ಕೇರಳ ಚೆಂಡೆ ಕುಣಿತ, ಮಂಡಳಿಯ ಮಹಿಳೆಯರಿಂದೆ ಭಜನೆ, ಮಂಡಳಿಯ ಮಕ್ಕಳಿಂದ ಕುಣಿತ ಭಜನೆ, ಹುಲಿವೇಷ, ಯಕ್ಷಗಾನದ ಪ್ರತ್ಯಕ್ಷತೆ, ಹಾಗೂ ಇನ್ನಿತರ ವೇಷಭೂಷಣಗಳು ಮೆರವಣಿಗೆಗೆ ಮೆರಗನ್ನು ನೀಡಿದವು. ಪರಿಸರದ ತುಳು ಕನ್ನಡಿಗರು ಸಾಂಪ್ರದಾಯಿಕ ಉಡುಗೆ ತೊಟ್ಟು ಮೆರವಣಿಗೆಯ ಮೆರೆಗನ್ನು ಹೆಚ್ಚಿಸಿದರು.
ಮಂಡಳಿಯ ಧರ್ಮದರ್ಶಿಗಳಾದ ಅಶೋಕ್ ದಾಸು ಶೆಟ್ಟಿ ಯವರ ಮುಂದಾಳತ್ವದಲ್ಲಿ, ಅಧ್ಯಕ್ಷರಾದ ಗೋಪಾಲ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆಯಾದ ವಿಲಾಸಿನಿ ಶೆಟ್ಟಿ ಹಾಗೂ ಎಲ್ಲಾ ಪದಾಧಿಕಾರಿಗಳ, ಸದಸ್ಯರ ಸಹಕಾರದಿಂದ 59 ನೇ ನವರಾತ್ರಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಿರುವ ಈ ಮಂಡಳಿಯು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರನ್ನು ಆಕರ್ಷಿಸುತ್ತ, ಪರಿಸರದ ಪ್ರಮುಖ ಶ್ರದ್ಧಾ ಕೇಂದ್ರವಾಗಿದ್ದು, ಡೊಂಬಿವಲಿ ದಸರವು ವಿಶ್ವ ವಿಖ್ಯಾತ ವಾಗಲಿ ಎಂಬ ಆಶಯ ನಮ್ಮದು.