
ಡೊಂಬಿವಲಿ ಪೂರ್ವದ ಪತಾರ್ಲಿ ರಸ್ತೆಯಲ್ಲಿ ಇರುವ ವಿಠ್ಠಲ್ ದರ್ಶನ್ ಬಿಲ್ಡಿಂಗ್ ನ ತಳ ಮಹಡಿಯಲ್ಲಿ ಶ್ರೀಧರ್ ಬಂಗೇರ ಮತ್ತು ವನಜ ಬಂಗೇರ ರವರು ಕಳೆದ 38 ವರ್ಷಗಳಿಂದ ಆರಾಧಿಸಿ ಕೊಂಡು ಬರುತ್ತಿರುವ ದುರ್ಗಾ ಪರಮೇಶ್ವರಿ ದೇವಿಯ ನವರಾತ್ರಿ ಪೂಜೆಯು ಅಕ್ಟೋಬರ್ 23 ರಂದು ಶ್ರದ್ದೆ ಭಕ್ತಿಯಿಂದ ನಡೆಯಿತು.




ಬೆಳಗೆ ಗಣ ಹೋಮ, ಸಂಜೆ ದೇವಿ ಆವೇಶ, ರಾತ್ರಿ ಮಹಾಪೂಜೆ, ನಂತರ ತೀರ್ಥ ಪ್ರಸಾದ ವಿತರಣೆ ಅನ್ನ ಸಂತರ್ಪಣೆ, ನಡೆಯಿತು. ಮರುದಿನ ದಸರಾ ಪೂಜೆ ನಡೆದು ಕಳಸ ವಿಸರ್ಜನೆ ನಡೆಯಿತು.


ಈ ಸಂದರ್ಭದಲ್ಲಿ ಉದ್ಯಮಿಗಳು ಸಮಾಜ ಸೇವಕರುಗಳು ಅದ ರವಿ ಸನಿಲ್, ಕುಶ ರವಿ ಸನಿಲ್, ಸುಭಾಷ್ ಶೆಟ್ಟಿ, ವಿಶ್ವನಾಥ್ ಶೆಟ್ಟಿ, ಮತ್ತಿತರರು ಹಾಗೂ ಪರಿಸರದ ನೂರಾರು ಭಕ್ತರು ಈ ನವರಾತ್ರಿ ಪೂಜೆಯಲ್ಲಿ ಉಪಸ್ಥಿತರಿದ್ದು, ತೀರ್ಥ ಪ್ರಸಾದ ಸ್ವೀಕರಿಸಿ, ಅನ್ನ ಸಂತರ್ಪಣೆ ಯಲ್ಲಿ ಪಾಲ್ಗೊಂಡರು.