ಶಾರದಾ ಪ್ರಿ ಯುನಿವರ್ಸಿಟಿ ಕಾಲೇಜ್ ನಲ್ಲಿ ಕರ್ನಾಟಕ ರಾಜ್ಯೋತ್ಸವ.

ಉಡುಪಿ, ಕುಂಜಿಬೆಟ್ಟು ಶಾರದಾ ಪ್ರಿ ಯುನಿವರ್ಸಿಟಿ ಕಾಲೇಜ್ ನಲ್ಲಿ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯನ್ನು ನ.1 ರಂದು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಉಪನ್ಯಾಸಕ ವೃಂದ ದವರ ನಾಡ ಗೀತೆಯಿಂದ ಕಾರ್ಯಕ್ರಮವು ಆರಂಭವಾಯಿತು.
ಪ್ರಥಮ ಪಿ. ಯು. ಸಿ ಯ ಕು. ನಿರೀಕ್ಷ ಕನ್ನಡ ರಾಜ್ಯೋತ್ಸವದ ಬಗ್ಗೆ ಭಾಷಣ ಮಾಡಿದರು.




ದ್ವಿತೀಯ ಪಿಯುಸಿ ಯ ಪ್ರಫುಲ್ ರವರು “ಕನ್ನಡ ನಾಡಿನ ಜೀವನದಿ ಕಾವೇರಿ”ಯ ಪದ್ಯವನ್ನು ಬಹಳ ಸೊಗಸಾಗಿ ಹಾಡಿದರು. ಕಾಲೇಜ್ ನ ಪ್ರಾಂಶುಪಾಲೆ ಶ್ರೀಮತಿ ಕೆ.ಎಸ್.ಯಶ ಅವರು “ಕನ್ನಡ ರಾಜ್ಯೋತ್ಸವ ದ ಮಹತ್ವ “ದ ಬಗ್ಗೆ ಮಾಹಿತಿ ಯನ್ನು ನೀಡಿದರು.ಉಪನ್ಯಾಸಕ ವೃಂದದವರಿಂದ “ಹಚ್ಚೇವು ಕನ್ನಡದ ದೀಪ” ಸುಶ್ರಾವ್ಯ ವಾಗಿ ಮೂಡಿ ಬಂದಿತು.
ಕಾರ್ಯಕ್ರಮದ ನಿರೂಪಣೆ ಯನ್ನು ಕನ್ನಡ ಉಪನ್ಯಾಸ ಕರಾದ ಶ್ರೀ ದಾಮೋದರ್ ರವರು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದರು.
ಸರ್ವರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು.