
ಸಂಘಟನೆಗೆ ಮತ್ತೊಂದು ಹೆಸರು ಐಕಳ ಹರೀಶ್ ಶೆಟ್ಟಿ.: ಸಂಸದ ನಳಿನ್ ಕುಮಾರ್ ಕಟೀಲ್
ಉಡುಪಿ. ನ 3.ಜಾಗತಿಕ ಬಂಟರ ಸಂಘಗಳ ಒಕ್ಕೂಟಅ 28 ಮತ್ತು 29 ರಂದು ಉಡುಪಿಯಲ್ಲಿ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರ ನೇತೃತ್ವದಲ್ಲಿ ಜರಗಿದ ವಿಶ್ವ ಬಂಟರ ಸಮ್ಮೇಳನದ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಈಶ ವಿಠಲದಾಸ್ ಸ್ವಾಮೀಜಿ ಕೇಮಾರು,ಸಂಸದರಾದ ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರು, ಶೋಭ ಕರಂದ್ಲಾಜೆ, ಗೋಪಾಲ್ ಶೆಟ್ಟಿ ಎಂ. ಪಿ., ಮೇಯರ್ ಸುಧೀರ್ ಕುಮಾರ್ ಶೆಟ್ಟಿ,ಶಾಸಕರಾದ ರಾಜೇಶ್ ನೈಕ್, ಹರೀಶ್ ಪೂಂಜ, ಗುರುರಾಜ್ ಗಂಟಿಹೊಳೆ, ಡಾ. ಭರತ್ ವೈ. ಶೆಟ್ಟಿ, ಜಗದೀಶ್ ಶೇಣವ, ಸುರೇಶ್ ಶೆಟ್ಟಿ ಗುರ್ಮೆ, ಯಶ್ ಪಾಲ್ ಸುವರ್ಣ, ಉದಯ್ ಕುಮಾರ್ ಮುನಿಯಾಲ್ ರವರನ್ನು, ಮಟ್ಟಾರು ರತ್ನಾಕರ್ ಹೆಗ್ಡೆ ಹಾಗೂ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಅಜಿತ್ ಕುಮಾರ್ ರೈ ಮಾಲಾಡಿಯವರನ್ನು ಗೌರವ ಪೂರ್ವಕವಾಗಿ ಐಕಳ ಹರೀಶ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.

ಬಿಜೆಪಿ ರಾಜ್ಯಾಧ್ಯಕ್ಷರು ಸಂಸದರಾದ ನಳಿನ್ ಕುಮಾರ್ ಸಮ್ಮೇಳನದಲ್ಲಿ ಪಾಲ್ಗೊಂಡು ಮಾಧ್ಯಮದವರೊಂದಿಗೆ ಮಾತನಾಡುತ್ತಾ ವ್ಯಾಪಾರ ವಹಿವಾಟು ಗಳೆಂದು ವಿಶ್ವದ ಮೂಲೆ ಮೂಲೆಗಳಲ್ಲಿ ಚದುರಿ ಹೋಗಿರುವ ಬಂಟ ಬಂದುಗಳನ್ನು ಒಂದೆಡೆ ಸೇರಿಸಿ ಇಂತಾ ಅಭೂತಪೂರ್ವ ಕಾರ್ಯಕ್ರಮವನ್ನು ಮಾಡುವುದು ಸುಲಭದ ಕಾರ್ಯವೇನೂ ಅಲ್ಲ. ಅಸಾಧ್ಯವನ್ನು ಸಾಧಿಸಿದೆ. ಬಂಟರ ಕಲೆ ಸಂಸ್ಕ್ರತಿ, , ಆಚಾರ ವಿಚಾರ, ಗತ್ತು ಗಾಂಭೀರ್ಯ, ಗುತ್ತು ಬರ್ಕೆ, ಬಂಟ ಕುಲದ ಅಸ್ಮಿತೆಗಳೆಲ್ಲವನ್ನೂ ವೈಭವಪೂರ್ಣವಾಗಿ ಪ್ರಸ್ತುತ ಪಡಿಸಿ ಸಾಂಸ್ಕ್ರತಿಕ ವೈಭವಕ್ಕೆ ಸಾಕ್ಷಿಯಾಗಿದೆ. ಸಮರ್ಥ ನಾಯಕನ ಸಮಯೋಚಿತ ಆಲೋಚನೆ, ಸಂಘಟನಾ ಚಾತುರ್ಯ, ಸ್ನೇಹಮಯಿ ಅಂತಃಕರಣ, ವಿಶಾಲ ಮನೋಭಾವನೆಯ ಕಾರ್ಯಗಳನ್ನು ಮಾಡಿದ್ದಾರೆ .ಸಂಘಟನೆಗೆ ಮತ್ತೊಂದು ಹೆಸರು ಐಕಳ ಹರೀಶ್ ಶೆಟ್ಟಿ ಎಂದರು.

ಈ ಸಂದರ್ಭದಲ್ಲಿ ಒಕ್ಕೂಟದ ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ, ಮಹಾ ನಿರ್ದೇಶಕರುಗಳಾದ ಆನಂದ ಶೆಟ್ಟಿ ತೋನ್ಸೆ , ಪ್ರವೀಣ್ ಬೋಜ ಶೆಟ್ಟಿ, ಪ್ರಕಾಶ್ ಶೆಟ್ಟಿ .ಶಶಿಧರ ಶೆಟ್ಟಿ ಬರೋಡ, ರಾಜೇಶ್ ಶೆಟ್ಟಿ ರಕ್ಷಿ ಬಿಲ್ಡರ್. ಅರವಿಂದ ಶೆಟ್ಟಿ ಮೀರಾ ರೋಡ್. ನಿರ್ದೇಶಕ ಅಶೋಕ್ ಶೆಟ್ಟಿ ಮೆರಿಟ್ ನಿರ್ದೇಶಕರಾದ ರಾಜೇಂದ್ರ ಶೆಟ್ಟಿ ಪಂಜುರ್ಲಿ, ಸಂತೋಷ್ ಶೆಟ್ಟಿ ಪುಣೆ,ಪೋಷಕ ಸದಸ್ಯರಾದ ಪುರುಷೋತ್ತಮ್ ಶೆಟ್ಟಿ ಉಡುಪಿ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಗೌರವ ಕಾರ್ಯದರ್ಶಿ ಜಯಕರ್ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳ್ತೂರು ಮೋಹನದಾಸ್ ಶೆಟ್ಟಿ,ಜೊತೆ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ರಂಗೋಲಿ, ಕ್ರೀಡಾ ಸಂಚಾಲಕ ಗಿರೀಶ್ ಶೆಟ್ಟಿ ತೆಳ್ಳಾರ್ , ಸಾಂಸ್ಕೃತಿಕ ವೈಭವದ ಸಹ ಸಂಚಾಲಕ ಕರ್ನೂರು ಮೋಹನ್ ರೈ,, ಸುಪ್ರಸಾದ್ ಶೆಟ್ಟಿ ಬೈಕಾಡಿ, ಮನೋಹರ್ ಶೆಟ್ಟಿ ತೋನ್ಸೆ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.