
ಕನ್ನಡ ಪತ್ರಿಕೋದ್ಯಮದಿಂದ ಮುಂಬಯಿಯಲ್ಲಿ ಕನ್ನಡ ಉಸಿರಾಡುತ್ತಿದೆ – ಡಾ. ಜಿ ಎನ್ ಉಪಾಧ್ಯ
ಮುಂಬಯಿ : “ಅಮೂಲ್ಯ” ದ ಬೆಳ್ಳಿ ಹಬ್ಬ ಸಮಾರಂಭದಲ್ಲಿ ನಾವೆಲ್ಲರೂ ಬಾಗವಹಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ಅಮೂಲ್ಯ ಪತ್ರಿಕೆಗೆ ಮುಂಬಯಿಯ ಎಲ್ಲಾ ೨೦ ಲಕ್ಷ ಕನ್ನಡಿಗರ ಪರವಾಗಿ ಹಾರ್ದಿಕ ಅಭಿನಂದನೆಗಳು ಹಾಗೂ ಶುಭಾಶಯಗಳು. ಸಾಹಿತ್ಯ ಲೋಕದಲ್ಲಿ ಎಲ್ಲಾ ಬಲ್ಲವರಿದ್ದಾರೆ ಎನ್ನಲಾಗುದಿಲ್ಲ. ಪತ್ರಿಕೆ ಜನರನ್ನು ಲೇಖಕರನ್ನಾಗಿ ಮಾಡುತ್ತದೆ. ಇಲ್ಲಿನ ದಿನಪತ್ರಿಕೆಗಳ ಹಾಗೂ ಮುಖವಾಣಿಗಳ ಮೂಲಕ ಅನೇಕ ಲೇಖಕರು ಅರಳಿದ್ದಾರೆ. ಇದು ಅಭಿಮಾನದ ಸಂಗತಿ. ಇಲ್ಲಿನ ಕನ್ನಡ ಪತ್ರಿಕೆ ಹಾಗೂ ಮುಖವಾಣಿಯಿಂದಾಗಿ ಮುಂಬಯಿಯಲ್ಲಿ ತಕ್ಕಮಟ್ಟಿಗೆ ಕನ್ನಡ ಉಳಿದಿದೆ, ಎಂದು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಮುಖರಾದ ಡಾ. ಜಿ ಎನ್ ಉಪಾಧ್ಯ ಹೇಳಿದರು.
ಕುಲಾಲ ಸಂಘ ಮುಂಬಯಿಯ ಮುಖವಾಣಿ ಅಮೂಲ್ಯ ತ್ರೈಮಾಸಿಕದ ಬೆಳ್ಳಿ ಹಬ್ಬ ಸಮಾರಂಭವು ನ.5 ರಂದು ಗೊರೆಗಾಂವ್ ಪೂರ್ವ ನಂದಾದೀಪ ಹೈಸ್ಕೂಲ್ ಸಭಾಗ್ರಹ, ಜಯಪ್ರಕಾಶ್ ನಗರ್, ಗೋರೆಗಾಂವ್ ಪೂರ್ವ ಇಲ್ಲಿ ದಿ. ಪಿ. ಕೆ. ಸಾಲ್ಯಾನ್ ಸ್ಮಾರಕ ವೇದಿಕೆಯಲ್ಲಿ ಕುಲಾಲ ಸಂಘದ ಅಧ್ಯಕ್ಷರಾದ ರಘು ಎ ಮೂಲ್ಯ ಇವರ ಅಧ್ಯಕ್ಷತೆಯಲ್ಲಿ ಗೌರವ ಅಧ್ಯಕ್ಷರಾದ ಪಿ ದೇವದಾಸ್ ಎಲ್ ಕುಲಾಲ್ ಇವರ ಗೌರವ ಉಪಸ್ಥಿತಿಯಲ್ಲಿ ಜರಗಿದ್ದು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಇತಿಹಾಸದ ಪುಟವನ್ನು ತಿರುಗಿನೋಡಿದರೆ ಕುಂಬಾರರು, ಕುಲಾಲರು ನಿಜವಾಗಿಯೂ ಸೌಂದರ್ಯದ ಅನ್ವೇಷಕರು. ಭಾರತೀಯ ಸಂಸ್ಕೃತಿಯನ್ನು ರೂಪಿಸಿದಂತಹ ಒಂದು ಸಮುದಾಯ. ಮುಂಬಯಿಯಲ್ಲಿದ್ದಷ್ಟು ಮುಖವಾಣಿಗಳು ದೇಶದ ಯಾವ ಬಾಗದಲ್ಲಿ ಇಲ್ಲ. ಸರಕಾರದ ನೆರವನ್ನು ಈ ಪತ್ರಿಕೆಯು ಪಡಕೊಳ್ಳಬೇಕು ಎಂದರು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕುಲಾಲ ಸಂಘದ ಅಧ್ಯಕ್ಷರಾದ ರಘು ಎ ಮೂಲ್ಯ ಅವರು ಸಂಘದ ಮುಖವಾಣಿಯ ಬೆಳ್ಳಿಹಬ್ಬಕ್ಕೆ ಸಹಕರಿಸಿದ ಎಲ್ಲರಿಗೂ ಹಾಗೂ ಆಗಮಿಸಿದ ಎಲ್ಲಾ ಅತಿಥಿಗಳಿಗು ಅಭಿನಂದನೆ ಸಲ್ಲಿಸುತ್ತಾ ಇಂದಿನದ್ದು ಇತಿಹಾಸದ ಪುಟ ಸೇರಲಿರುವ ಆಮೂಲ್ಯದ ಅತ್ಯಮೂಲ್ಯ ಕಾರ್ಯಕ್ರಮ. ಇದು ನನ್ನ ಸೌಭಾಗ್ಯ. ಎಲ್ಲರ ಮನಸ್ಸನ್ನು ಗೆದ್ದಿರುವ ಪತ್ರಿಕೆ ನಮ್ಮದು. ಅಂತರ್ಜಾಲ ಹಾಗೂ ಆಧುನಿಕ ನೆಟ್ ವರ್ಕ್ ಸುದ್ದಿಯ ಮಧ್ಯೆಯೂ ನಮ್ಮ ಪತ್ರಿಕೆ ಉಳಿದು ಬೆಳೆದಿದೆ. ಈ ಪತ್ರಿಕೆಯನ್ನು ಇನ್ನಷ್ಟು ಬೆಳೆಸುವಲ್ಲಿ ನಿಮ್ಮೆಲ್ಲರ ಸಹಕಾರ ಸದಾ ಇರಲಿ ಎಂದರು.
ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಂಟರ ಸಂಘ ಮುಂಬಯಿಯ ಉಪಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು ಅವರು ಮಾತನಾಡುತ್ತಾ ಪತ್ರಿಕೆ ನಡೆಸುವುದು ಸುಲಭವಲ್ಲ. ಇದು ಬದಲಾವಣೆಯ ಯುಗವಾಗಿದ್ದು ಪತ್ರಿಕೆಯಲ್ಲಿ ಕನ್ನಡದೊಂದಿಗೆ ಇಂಗ್ಲೀಷ್ ಕೂಡಾ ಬೇಕಾದದ್ದು ಸಹಜ. ಎಲ್ಲಾ ಸಮಾಜ ಬಾಂಧವರನ್ನು ಪ್ರೀತಿಯಿಂದ ಕಾಣುವ ಸಮಾಜ ಕುಲಾಲ ಸಮಾಜ. ಮುಂಬಯಿಯಲ್ಲಿದಷ್ಟು ಜಾತೀಯ ಸಂಘಟನೆಗಳ ಒಗ್ಗಟ್ಟು ಬೇರೆ ಎಲ್ಲಿಯೂ ಕಾಣ ಸಿಗುದಿಲ್ಲ. ಸಮಾಜ ಸೇವೆಯಿಂದ ಯಾವುದೇ ಹಾನಿಯಿಲ್ಲ. ಯುವ ಜನಾಂಗವು ಸಂಘದಲ್ಲಿ ಸಕ್ರಿಯವಾಗಬೇಕು ಎಂದು ಶುಭ ಹಾರೈಸಿದರು.

ಕರ್ನಾಟಕಮಲ್ಲ ದ ಸಂಪಾದಕರಾದ ಚಂದ್ರಶೇಖರ ಪಾಲತ್ತಾಡಿ ಮಾತನಾಡುತ್ತಾ ಕರ್ನಾಟಕದ ಹೊರನಾಡಿನಲ್ಲಿ ಸಮಾಜದ ಪತ್ರಿಕೆಯೊಂದು ೨೫ ನೇ ವರ್ಷವನ್ನು ಆಚರಿಸುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಪಿ. ಕೆ. ಸಾಲ್ಯಾನರಂತಹ ಸಮಾಜಿಕ ಚಿಂತಕ ಅಮೂಲ್ಯವನ್ನು ಹುಟ್ಟು ಹಾಕಲಿಕ್ಕೆ ಎಷ್ಟು ಕಾರಣರೋ ಅದನ್ನು ಬೆಳೆಸುವಂತಹ ನೀವು ನಾವೆಲ್ಲರೂ ಅಷ್ಟೇ ಕಾರಣರು. ಪಿ. ಕೆ. ಸಾಲ್ಯಾನರು ಕೇವಲ ಅಮೂಲ್ಯವನ್ನು ಮಾತ್ರವಲ್ಲ ಮುಂಬಯಿಯ ಅನೇಕ ಜಾತೀಯ ಪತ್ರಿಕೆ ಗಳ ಬೆಳವಣಿಗೆಗೆ ಕಾರಣರು. ಈ ಸಮಾಜದವರಲ್ಲಿನ ತಾಳ್ಮೆ ಮಾನವರನ್ನಾಗಿಸಿದೆ. ಆದುದರಿಂದ ಈ ಸಮಾಜವು ಸಣ್ಣ ಸಮಾಜವಲ್ಲ ಇತರರಲ್ಲಿ ಸಂಸ್ಕೃತಿಯನ್ನು ಬೆಳೆಸುವಂತೆ ಮಾಡುವ ಹಾಗೂ ಮಾನವನನ್ನು ಮಾನವನನ್ನಾಗಿಸುವ ಮಾನವ ಸಮಾಜ ಎನ್ನಬಹುದು. ಪತ್ರಿಕೆಗಳಿಗೆ ಬಹಳ ಜವಾಬ್ಧಾರಿ ಇದೆ. ಯಾವುದೇ ಸಮಾಜದ ಅಭಿವೃದ್ದಿಗೆ ಸಮಾಜದ ಮುಖವಾಣಿಯ ಪಾತ್ರ ಮಹತ್ವದ್ದು ಎಂದರು.
ಇನ್ನೋರ್ವ ಮುಖ್ಯ ಅತಿಥಿ ಭಾರತ್ ಬ್ಯಾಂಕ್ ನ ಕಾರ್ಯಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರು ಮಾತನಾಡುತ್ತಾ ಮುಂಬಯಿ ಎಲ್ಲಾ ಸಂಘಟನೆಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಯಾಕೆಂದರೆ ಆಗಾಗ ನಾವು ಒಟ್ಟು ಸೇರಬೇಕಾಗುತ್ತದೆ. ಸಂಘಕ್ಕೆ ಎಲ್ಲರೂ ಕಿಂಚಿತ್ತು ಸಮಯ ನೀಡಿದಲ್ಲಿ ಸಂಘ ನಡೆಸುವುದು ಸುಲಭ ಸಾಧ್ಯ ಎಂದರು.
ಗೌರವ ಅತಿಥಿ ಕರ್ನಾಟಕ ಸಂಘ ಮುಂಬೈಯ ಅಧ್ಯಕ್ಷರಾದ ಭರತ್ ಕುಮಾರ್ ಪೊಲಿಪು ಮಾತನಾಡುತ್ತಾ ಇದು ಕುಲಾಲ ಸಂಘ ಮಾತ್ರವಲ್ಲ ಒಟ್ಟು ಕನ್ನಡಿಗರ ಕಾರ್ಯಕ್ರಮದಂತಿದೆ ಎನ್ನಲು ಸಂತೋಷವಾಗುತ್ತಿದೆ. ನಮಗೆ ಸಂಸ್ಕೃತಿ ಮುಖ್ಯ. ಮುಂಬಯಿಯ ಎಲ್ಲಾ ಜಾತೀಯ ಸಂಘಟನೆಗಳ ಮುಖವಾಣಿಗಳು ಇಲ್ಲಿ ತಮ್ಮ ಜಾತೀಯ ಹಾಗೂ ನಾಡಿನ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತಿದೆ.
ಗೌರವ ಅತಿಥಿಗಳಾಗಿ ಆಗಮಿಸಿದ ಒಕ್ಕಲಿಗ ಸಂಘ ಮಹಾರಾಷ್ಟ್ರದ ಗೌರವ ಕಾರ್ಯದರ್ಶಿ ಸಿಎ ಮಂಜುನಾಥ ಗೌಡ ಮಾತನಾಡಿ ಜೀವನದಲ್ಲಿ ಸಾಧನೆ ಮಾಡಿದವರು ಇಂದು ವೇದಿಕೆಯಲ್ಲಿದ್ದು ನಾನು ಇನ್ನು ಮಾಡಬೇಕಾದದ್ದು ಬಹಳವಿದೆ. ತುಳು ಬಾಷೆಗೆ ಲಿಪಿ ಇಲ್ಲದೇ ಇದ್ದಲ್ಲಿ ಅದು ಇರುವಂತೆ ಎಲ್ಲಾ ತುಳು ಸಂಘಟನೆಗಳು ಪ್ರಯತ್ನಿಸಬೇಕು ಎಂದರು.
ಗೌರವ ಅತಿಥಿ ಖ್ಯಾತ ನ್ಯೂರೋ ಸರ್ಜನ್ ಡಾ. ಪುಷ್ಪರಾಜ್ ಕೃಷ್ಣ ಮೂಲ್ಯ ಅವರು ಮಾತನಾಡಿ ಆಧುನಿಕ ಜೀವನ ಶೈಲಿಯಿಂದಾಗಿ ಅನಾರೋಗ್ಯ ವನ್ನು ಎದುರಿಸಬೇಕಾಗಿದ್ದು, ನನ್ನನ್ನು ಸಂಪರ್ಕಿಸಿದಲ್ಲಿ ನಾನು ಈ ಬಗ್ಗೆ ನನ್ನಿಂದಾಗುವ ಸಲಹೆಯನ್ನು ನೀಡಬಲ್ಲೆ ಎನ್ನುತ್ತಾ ಅಮೂಲ್ಯ ಪತ್ರಿಕೆಗೆ ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ಅಮೂಲ್ಯದ ಮಾಜಿ ಸಂಪಾದಕರಾದ ಕೃಷ್ಣ ಕೆ. ಬಂಜನ್, ಕುಟ್ಟಿ ಕೆ ಮೂಲ್ಯ, ದಿ. ನಾರಾಯಣ ನೆತ್ರಕೆರೆ ಇವರ ಧರ್ಮಪತ್ನಿ ರಾಜೇಶ್ವರಿ ನೇತ್ರಕೆರೆ ಇವರನ್ನು ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರು ಸನ್ಮಾನಿಸಿದರು. ನಗರದ ವಿವಿಧ ಜಾತೀಯ ಸಂಘಟನೆಗಳ ಪತ್ರಿಕೆಗಳ ಸಂಪಾದಕರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಅಮೂಲ್ಯ ಸಂಪಾದಕರಾದ ಶಂಕರ್ ವೈ ಮೂಲ್ಯ ಎಲ್ಲರನ್ನು ಸ್ವಾಗತಿಸಿದರು.
ಸಂಘದ ಗೌರವ ಅಧ್ಯಕ್ಷರಾದ ಪಿ ದೇವದಾಸ ಎಲ್ ಕುಲಾಲ್ ಪ್ರಾಸ್ತಾವಿಕ ಭಾಷಣ ಮಾಡಿದರು.
ಕುಲಾಲ ಸಂಘದ ಚಟುವಟಿಕೆಗಳ ಬಗ್ಗೆ ಪತ್ರಕತ್ರ ದಿನೇಶ್ ಬಿ. ಕುಲಾಲ ಮಾಹಿತಿಯಿತ್ತರು.
ವೇದಿಕೆಯಲ್ಲಿ ಭಾರತ್ ಬ್ಯಾಂಕಿನ ಉಪಾಧ್ಯಕ್ಷ ಸೋಮನಾಥ ಬಿ. ಅಮೀನ್,
ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯದರ್ಶಿ ಪಿ ಶೇಖರ ಮೂಲ್ಯ, ಗೌರವ ಪ್ರಧಾನ ಕಾರ್ಯದರ್ಶಿ, ಕರುಣಾಕರ ಬ. ಸಾಲ್ಯಾನ್ ಗೌರವ ಕೋಶಾಧಿಕಾರಿ ಜಯ ಎಸ್ ಅಂಚನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ, ಮಮತಾ ಎಸ್. ಗುಜರನ್ಕುಲಾಲ ಸಂಘ ಮುಂಬೈಯ ಮೀರಾ ರೋಡ್ ವಿರಾರ್ ಸ್ಥಳೀಯ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಸದಾನಂದ ಕುಮಾರ್ ಸಾಲಿಯಾನ್, , ಸಂಘದ ಸ್ಥಳೀಯ ಸಮಿತಿಗಳ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರುಗಳಾದ ಮಮತಾ ಎಸ್. ಕುಲಾಲ್ (ನವಿಮುಂಬಯಿ), ಕುಶಲ ಜೆ ಬಂಗೇರ (ಠಾಣೆ ಕಸಾರ ಬಿವಂಡಿ), ಚಂದ್ರಾವತಿ ಎಸ್ ಸಾಲ್ಯಾನ್ (ಮೀರಾ ರೋಡ್ ವಿರಾರ್), ಮಲ್ಲಿಕಾ ಎಸ್ ಮೂಲ್ಯ (ಸಿ ಎಸ್ ಟಿ ಮುಲೂಂಡ್ ಮಾನ್ಕುರ್ಡ್), ಆಶಲತಾ ಎಸ್ ಮೂಲ್ಯ ನಾರಾಯನ್ ಸಿ ಪೆರ್ನೆ, ರಘುನಾಥ್ ಕರ್ಕೇರ, ಅಶೋಕ್ ಕುಲಾಲ್, ಇವರು ಉಪಸ್ಥಿತರಿರುವರು.
ವಿಚಾರ ಗೋಷ್ಥಿಯಲ್ಲಿ “ಮುಂಬಯಿ ಸಂಘ ಸಂಸ್ಥೆಗಳ ಕನ್ನಡ ಪತ್ರಿಕೆಗಳು ಅಂದು ಇಂದು” ಈ ಬಗ್ಗೆ ಕರ್ನಾಟಕ ಮಲ್ಲದ ಉಪಸಂಪಾದಕರಾದ ಶ್ರೀನಿವಾಸ ಜೋಕಟ್ಟೆಯವರು ವಿಚಾರ ಮಂಡಿಸಿದರು.
ಹಿರಿಯ ಸಾಹಿತಿ ಸೀಮಂತೂರು ಚಂದ್ರಹಾಸ ಸುವರ್ಣ ಇವರ ಅಧ್ಯಕ್ಷತೆಯಲ್ಲಿ ನಡೆದೆ ಕವಿಗೋಷ್ಠಿಯಲ್ಲಿ ಡಾ. ಜಿಪಿ ಕುಸುಮ, ಸಾ ದಯಾ, ಸುಜಾತ ಶೆಟ್ಟಿ, ಶಾರದಾ ಅಂಚನ್, ಉದಯ ಮೂಲ್ಯ, ಗಣೇಶ್ ಕುಮಾರ್ ಇವರಿಂದ ಕವನ ವಾಚನ ನಡೆಯಿತು.
ಕರ್ನಾಟಕ ಸ್ವರಕಂಠೀರವ, ಸ್ವರತಪಸ್ವಿ ಜೂ| ರಾಜ್ ಕುಮಾರ್ ಖ್ಯಾತಿಯ ಜಗದೀಶ್ ಶಿವಪುರ ಇವರಿಂದ ಸಂಗೀತ ಕಾರ್ಯಕ್ರಮ, ಅಮಿತಾ ಕಲಾ ಮಂದಿರ ಮೀರಾರೋಡ್ ನ ಅಮಿತಾ ಜತ್ತನ್ ಬಳಗದವರಿಂದ ಮತ್ತು ಪೊವಾಯಿಯ ನಟನಾ ನೃತ್ಯ ಅಕಾಡೆಮಿಯ ಗೀತಾ ಸಾಲಿಯಾನ್ ಬಳಗ ಹಾಗೂ ಸಂಘದ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದವರಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಎಚ್. ಕೆ. ನಯನಾಡು ಕಾರ್ಯಕ್ರಮವನ್ನು ನಿರ್ವಹಿಸಿದರು.
ಸನ್ಮಾನಿತರ ನುಡಿ
ನಮ್ಮ ಸಮಾಜ ಯಾವುದಕ್ಕೂ ಹಿಂದಿಲ್ಲ. ಮೊದಲು ನಮ್ಮ ಹಿರಿಯರು ಶೈಕ್ಷಣಿಕ ವಾಗಿ ಹಿಂದೆ ಇದ್ದರೂ ಅವರು ಜ್ನಾನದಲ್ಲಿ ಶ್ರೀಮಂತರು. ಕುಂಬಾರರಿಗೆ ಸಮಾಜದಲ್ಲಿ ಉನ್ನತ ಮಟ್ಟದ ಗೌರವ ನೀಡಲಾಗುತ್ತಿದೆ. ನಮ್ಮ ಮಾತೃಬಾಷೆಯೊಂದಿಗೆ ರಾಜ್ಯದ ಬಾಷೆಯನ್ನೂ ಕಲಿಯಬೇಕು.
– ಅಮೂಲ್ಯದ ಮಾಜಿ ಸಂಪಾದಕರಾದ ಕುಟ್ಟಿ ಕೆ ಮೂಲ್ಯ
-–———–———–—————––
ಇಂದಿನ ಕಾರ್ಯಕ್ರಮದಲ್ಲಿ ಅಮೂಲ್ಯದ ಸ್ಥಾಪಕ ಸಂಪಾದಕನಾದ ನನಗೆ ಎಲ್ಲರಿಗಿಂತಲೂ ಹೆಚ್ಚು ಸಂತೋಷವಾಗುತ್ತಿದೆ. ಪಿ. ಕೆ. ಸಾಲ್ಯಾನರ ಆರತಿ ಪ್ರೆಸ್ ನಲ್ಲಿ ಇತರ ಸಮುದಾಯಗಳ ಪತ್ರಿಕೆಯನ್ನು ನೋಡುವಾರ ನನಗೂ ನಮ್ಮ ಸಮಾಜದ ಪತ್ರಿಕೆ ಯಾಕೆ ಪ್ರಾರಂಭಿಸಬಾರದು ಎಂಬ ಆಶೆ ಮೂಡಿ ಬಂತು. ಪಿ. ಕೆ. ಸಾಲ್ಯಾನರ ಸಹಕಾರದಿಂದ ಹಾಗೂ ಇತರ ಕೆಲವರ ಪ್ರೋತ್ಸಾಹದಿಂದ ಸುಮಾರು ೨೫ ವರ್ಷಗಳ ಹಿಂದೆ ಪತ್ರಿಕೆ ಪ್ರಾರಂಭವಾಗಿದ್ದು ಇಂದು ಅದರ ಬೆಳ್ಳಿಹಬ್ಬವನ್ನು ಆಚರಿಸುತ್ತಿದ್ದೇವೆ ಎನ್ನಲು ಅಭಿಮಾನವಾಗುತ್ತಿದೆ. ನನಗೆ ಇಬ್ಬರು ಮಕ್ಕಳಿದ್ದು ಈ ಪತ್ರಿಕೆ ನನ್ನ ಮೂರನೆ ಮಗುವಿನಂತೆ.
– ಅಮೂಲ್ಯದ ಮಾಜಿ ಸಂಪಾದಕರಾದ ಕೃಷ್ಣ ಬಿ. ಬಂಜನ್