
ಸಂಘ ಹಾಗೂ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಯೇ ನಮ್ಮ ಗುರಿ – ಸುಕುಮಾರ ಎನ್ ಶೆಟ್ಟಿ,.
ಡೊಂಬಿವಲಿ 4-ಹೊರನಾಡ ಕನ್ನಡಿಗರ ಹೆಮ್ಮೆಯ ಸಂಸ್ಥೆ ಎಂಬ ಹೆಗ್ಗಳಿಕೆ ಗೆ ಪಾತ್ರವಾದ, ಐದೂವರೆ ದಶಕಗಳ ಉಜ್ವಲ ಪರಂಪರೆಯನ್ನು ಹೊಂದಿರುವ ಡೊಂಬಿವಲಿ ಕರ್ನಾಟಕ ಸಂಘ ಹಾಗೂ ಮಂಜುನಾಥ್ ವಿಧ್ಯಾಲಯ ಹಾಗೂ ಮಹಾವಿಧ್ಯಾಲಯಗಳ ಅಭಿವದ್ದಿಯ ಜೋತೆಗೆ ಶಿಕ್ಷಣ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೈಯುವ ಸಂಕಲ್ಪ ನಮ್ಮದಾಗಿದ್ದು, ಸಂಕಲ್ಪ ಸಿದ್ಧಿಗಾಗಿ ತಮ್ಮೇಲ್ಲರ ಸಹಾಯ ಸಹಕಾರ ಅವಶ್ಯ ಎಂದು ಸಂಘದ 2023-2026 ಅವಧಿಗಾಗಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿ ಅಧಿಕಾರ ವಹಿಸಿಕೊಂಡ ಸುಕುಮಾರ ಎನ್ ಶೆಟ್ಟಿ ಹೇಳಿದ್ದಾರೆ. ಅವರು ನವೆಂಬರ್ 3ರಂದು ಸಂಜೆ ಸಂಘದ ಮುಖ್ಯಾಲಯದಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ ಅವರಿಂದ ಅಧ್ಯಕ್ಷ ಪದದ ಜವಾಬ್ದಾರಿಯನ್ಸು ಸ್ವಿಕರಿಸಿ ಮಾತನಾಡುತ್ತಿದ್ದರು.
ಪ್ರಸಕ್ತ ವರ್ಷ ಡೊಂಬಿವಲಿ ಕರ್ನಾಟಕ ಸಂಘ ಸಂಚಾಲಿತ ಮಂಜುನಾಥ್ ವಾಣಿಜ್ಯ ಮಹಾವಿಧ್ಯಾಲಯದ ರಜತಮಹೋತ್ಸವದ ವರ್ಷವಾಗಿದ್ದು ಈ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತಿದ್ದು ಜೋತೆಗೆ ಮಹಾವಿಧ್ಯಾಲಯದ ಮೂಲ್ಯಾಂಕನಕ್ಕಾಗಿ ಬೆಂಗಳೂರಿನ ತಜ್ಞರ ತಂಡವು ಮಹಾವಿಧ್ಯಾಲಯಕ್ಕೆ ಭೇಟಿ ನೀಡಲಿದ್ದು ಆ ನಿಟ್ಟಿನಲ್ಲಿ ಸಿದ್ಧತೆಯನ್ನು ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದ ಸುಕುಮಾರ ಎನ್ನ ಶೆಟ್ಟಿ ಅವರು ಮಂಜುನಾಥ್ ಮಹಾವಿಧ್ಯಾಲಯದಲ್ಲಿ ವಾಣಿಜ್ಯದ ಜೋತೆಗೆ ವಿಜ್ಞಾನ ವಿಭಾಗವನ್ನು ಪ್ರಾರಂಭಿಸ ಬೇಕೆಂಬ ಬೇಡಿಕೆ ಬರುತ್ತಿದ್ದು ಈ ನಿಟ್ಟಿನಲ್ಲಿ ಮಹಾವಿಧ್ಯಾಲಯದ ಕಟ್ಟಡವನ್ನು ಎರಡು ಹೆಚ್ಚಿನ ಮಹಡಿಗಳಿಗೆ ವಿಸ್ತರಿಸುವ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಸಮಸ್ತ ಕನ್ನಡಮನಸ್ಸು ಗಳು, ಕೊಡುಗೈ ದಾನಿಗಳು ನೆರವಿನ ಹಸ್ತ ನೀಡಬೇಕೆಂದು ಕರೆ ನೀಡಿದ ಸುಕುಮಾರ ಎನ್ ಶೆಟ್ಟಿ ಅವರು 2023-2026 ರ ಅವಧಿಗಾಗಿ ಚುನಾವಣೆಯನ್ನು ನಡೆಸದೆ ನೂತನ ಕಾರ್ಯಕಾರಿ ಸಮಿತಿಗೆ 17 ಜನರನ್ನು ಅವಿರೋಧವಾಗಿ ಆಯ್ಕೆಮಾಡಿದ ಹಾಗೂ ತಮಗೆ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದ ಸರ್ವರಿಗೂ ಹೃದಯಾಂತರಾಳದ ಕೃತಜ್ಞತೆ ಸಲ್ಲಿಸಿ, ನಿಮ್ಮೆಲ್ಲರ ಸಹಾಯ ಸಹಕಾರ ಹಾಗೂ ಒಡೆಯ ಶ್ರೀ ಮಂಜುನಾಥ ಸ್ವಾಮಿ ಯ ಶ್ರೀರಕ್ಷೆ ಯಿಂದ ನಮಗೆ ಯಶಸ್ಸು ನಿಶ್ಚಿತ ಎಂದು ಹೇಳಿ ಶುಭಕೋರಿದರು.
ನೂತನ ಅಧ್ಯಕ್ಷರಿಗೆ ಪುಷ್ಪಗುಚ್ಛ ನೀಡಿ ಶುಭಭಕೋರುವ ಮೂಲಕ ಅಧಿಕಾರ ಹಸ್ತಾಂತರಿಸಿದ ಸಂಘದ ನಿಕಟಪೂರ್ವ ಅಧ್ಯಕ್ಷ ಹಾಗೂ ನೂತನ ಕಾರ್ಯಕಾರಿ ಸಮಿತಿಯಲ್ಲಿ ಕಾರ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಇಂದ್ರಾಳಿ ದಿವಾಕರ ಶೆಟ್ಟಿ ಅವರು ಮಾತನಾಡಿ – ಕಳೆದ ಎರಡುವರೆ ದಶಕಗಳಿಂದಾ ಡೊಂಬಿವಲಿ ಕರ್ನಾಟಕ ಸಂಘದೊಂದಿಗೆ ಆರು ವರ್ಷ ಕಾರ್ಯಾಧ್ಯಕ್ಷ ಹಾಗೂ ಆರು ವರ್ಷಗಳ ಕಾಲ ಅಧ್ಯಕ್ಷನಾಗಿ ಕಾರ್ಯವಹಿಸಿದ್ದು ಈಗ ಮತ್ತೆ ಮುಂದಿನ ಮೂರು ವರ್ಷಗಳಿಗಾಗಿ ಕಾರ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುವ ಅವಕಾಶ ದೊರೆತಿದ್ದು, ಸಂಘದ ಸರ್ವೋಮುಖ ಅಭಿವೃದ್ಧಿಗೆ ಶ್ರಮಿಸುವ ಆಶಯವನ್ನು ವ್ಯಕ್ತಪಡಿಸಿದ ಇಂದ್ರಾಳಿ ದಿವಾಕರ ಶೆಟ್ಟಿ ಅವರು ಸಂಘದ ನಾಲ್ಕು ಪ್ರಮುಖ ವಿಭಾಗಗಳಲ್ಲಿ ಒಂದಾದ ಮಹಿಳಾ ವಿಭಾಗದ ಹೊಸ ಕಾರ್ಯಕಾರಿ ಮಂಡಳಿಯನ್ನು ಘೋಸಿಸಿ, ಕಳೆದ ಹನ್ನೆರಡು ವರ್ಷಗಳಿಂದ ಶ್ರೀಮತಿ ವಿಮಲಾ ವಿ ಶೆಟ್ಟಿ ಹಾಗೂ ಸುಷ್ಮಾ ಡಿ ಶೆಟ್ಟಿ ಅವರ ಕಾರ್ಯಾಧ್ಯಕ್ಷೆತೆಯ ಅವಧಿಯಲ್ಲಿ ಅಪ್ರತಿಮ ಕಾರ್ಯ ನಿರ್ವಹಿಸಿದ್ದು ಶ್ರೀಮತಿ ಆಶಾ ಎಲ್ ಶೆಟ್ಟಿ ಅವರ ಸಾರಥ್ಯದಲ್ಲಿಯ ಹೊಸ ಮಹಿಳಾ ವಿಭಾಗ ಇನ್ನಷ್ಟು ಹೆಚ್ಚಿನ ವೈಶಿಷ್ಟ್ಯಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿ ಮಹಿಳಾ ವಿಭಾಗಕ್ಕೆ ಹೆಚ್ಚಿನ ಬಲವನ್ನು ತರಲಿ ಎಂದು ಆಸಿಸಿ, ಇಂದು ತಮ್ಮ ಹುಟ್ಟು ಹಬ್ಬವನ್ನು ವೈಶಿಷ್ಟ್ಯಪೂರ್ಣವಾಗಿ ಆಚರಿಸಿ, ಶುಭ ಹಾರೈಸಿದ ಸಂಘದ ಸಮಸ್ತ ಕಾರ್ಯಕಾರಿ ಮಂಡಳಿ ಹಾಗೂ ಮಹಿಳಾ ವಿಭಾಗದ ಸದಸ್ಯೆಯರಿಗೆ ಕೃತಜ್ಞತೆ ಅರ್ಪಿಸಿದರು.

ಇದೇ ಸಂದರ್ಭದಲ್ಲಿ ಅವಿರೋಧವಾಗಿ ಆಯ್ಕೆಯಾದ ಕಾರ್ಯಕಾರಣಿ ಸಮೀತಿಯ ಸದಸ್ಯರನ್ನು ಪುಷ್ಪಗುಚ್ಛ ನೀಡಿ ಅಧ್ಯಕ್ಷ ಸುಕುಮಾರ ಎನ್ ಶೆಟ್ಟಿ ಹಾಗೂ ಕಾರ್ಯಾಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ ಅವರು ಅಭಿನಂದಿಸಿದರು.
19 ಸದಸ್ಯರ ನೂತನ ಕಾರ್ಯಕಾರಿ ಸಮಿತಿಯಲ್ಲಿ ಸುಕುಮಾರ ಎನ್ ಶೆಟ್ಟಿ (ಅಧ್ಯಕ್ಷ) ಲೋಕನಾಥ ಐತಪ್ಪ ಶೆಟ್ಟಿ (ಉಪಾಧ್ಯಕ್ಷ) ದಿವಾಕರ ತೆಜಪ್ಪ ಶೆಟ್ಟಿ (ಕಾರ್ಯಾಧ್ಯಕ್ಷ)ದೇವದಾಸ್ ಲೋಕಯ್ಯಾ ಕುಲಾಲ (ಉಪ ಕಾರ್ಯಾಧ್ಯಕ್ಷ)ಪ್ರೋ ಅಜೀತ ಭೀಮರಾವ ಉಮರಾಣಿ (ಗೌರವ ಕಾರ್ಯದರ್ಶಿ)ದಿನೇಶ್ ಬಿ ಕುಡ್ವ (ಸಹಕಾರ್ಯದರ್ಶಿ) ತಾರಾನಾಥ ಸೂರು ಅಮೀನ್ (ಕೋಶಾಧಿಕಾರಿ) ಶ್ರೀಮತಿ ವಿಮಲಾ ವಿ ಶೆಟ್ಟಿ (ಸಹ ಕೋಶಾಧಿಕಾರಿ) ಹಾಗೂ ಸದಸ್ಯರಾಗಿ ಆನಂದ ದೇಜು ಶೆಟ್ಟಿ, ಸತೀಶ್ ಆಲಗೂರ, ರವಿ ಎಸ್ ಸನಿಲ್, ಜಗನ್ನಾಥ ವ್ಹಿ ಶೆಟ್ಟಿ, ನ್ಯಾಯವಾದಿ ರಾಮಣ್ಣಾ ಎಂ ಭಂಡಾರಿ, ರಮೇಶ ಎ ಶೆಟ್ಟಿ, ವಸಂತ ಎನ್ ಸುವರ್ಣ, ಪ್ರಭಾಕರ್ ಆರ್ ಶೆಟ್ಟಿ, ರಾಜೀವ್ ಎಂ ಭಂಡಾರಿ, ಶ್ರೀಮತಿ ಸುಷ್ಮಾ ಡಿ ಶೆಟ್ಟಿ, ಶ್ರೀಮತಿ ಆಶಾ ಎಲ್ ಶೆಟ್ಟಿ, ಡಾ ದಿಲೀಪ್ ಕೊಪರ್ಡೆ ಹಾಗೂ ಶ್ರೀಮತಿ ಮಧುರಿಕಾ ಬಂಗೆರಾ ಕಾರ್ಯ ನಿರ್ವಹಿಸಲಿದ್ದಾರೆ. ಮಹಿಳಾ ವಿಭಾಗ -ಶ್ರೀಮತಿ ಆಶಾ ಎಲ್ ಶೆಟ್ಟಿ (ಕಾರ್ಯಾಧ್ಯಕ್ಷೆ) ಉಪಕಾರ್ಯಾಧ್ಯಕ್ಷೆ ಶ್ರೀಮತಿ ಯೋಗಿನಿ ಎಸ್ ಶೆಟ್ಟಿ, ಕಾರ್ಯದರ್ಶಿ ಶ್ರೀಮತಿ ಮಧುರಿಕಾ ಬಂಗೆರಾ, ಸಹ ಕಾರ್ಯದರ್ಶಿ ಶ್ರೀಮತಿ ಸರೋಜಾ ರೈ, ಕೋಶಾಧಿಕಾರಿ ಶ್ರೀಮತಿ ದೇವಿಕಾ ಸಾಲ್ಯಾನ್ ಹಾಗೂ ಸಹ ಕೋಶಾಧಿಕಾರಿ ಶ್ರೀಮತಿ ಜಯಂತಿ ಶೆಟ್ಟಿ ಅವರ ಆಯ್ಕೆಯನ್ನು ಕಾರ್ಯಾಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ ಅವರು ಘೋಸಿಸಿದರು. ಕಾರ್ಯಕಾರಿ ಸಮಿತಿಯ ಸದಸ್ಯೆ ಶ್ರೀಮತಿ ಸುಷ್ಮಾ ಡಿ ಶೆಟ್ಟಿ ಸ್ವಾಗತಿಸಿ, ವಂದಿಸಿದರು. ನಿಕಟಪೂರ್ವ ಕೋಶಾಧಿಕಾರಿ ಚಿತ್ತರಂಜನ ಅಳ್ವ ಉಪಸ್ತಿತರಿದ್ದರು.
