
ಮುಂಬಯಿಯ ಹಿರಿಯ ಸಂಸ್ಥೆಗಳಲ್ಲಿ ಒಂದಾದ ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಇದರ 78 ನೇ ವಾರ್ಷಿಕ ಮಹಾಸಭೆಯು ತಾರೀಕು 28.10.2023 ನೇ ಶನಿವಾರದಂದು ದಹಿಸರ್ ಪೂರ್ವದಲ್ಲಿರುವ ಗೋಕುಲಾನಂದ್ ಹೋಟೆಲ್ ನ ಸಭಾಂಗಣದಲ್ಲಿ ಕಲ್ಯಾಣಪುರ ಸದಾನಂದ ಆಚಾರ್ಯರ ಅಧ್ಯಕ್ಷತೆಯಲ್ಲಿ ಜರಗಿತು.
ಮುಂದಿನ ಅವಧಿಗೆ ನೂತನ ಅಧ್ಯಕ್ಷರಾಗಿ ಶ್ರೀ ರವೀಶ್ ಜಿ ಆಚಾರ್ಯ, ಉಪಾಧ್ಯಕ್ಷರಾಗಿ ಶ್ರೀ ಗಣೇಶ್ ಕುಮಾರ್ , ಗೌರವ ಕಾರ್ಯದರ್ಶಿಗಳಾಗಿ , ಶ್ರೀ ಪ್ರಸಾದ್ ಆಚಾರ್ಯ ಹಾಗು ಶ್ರೀ ಶರತ್ ಕುಮಾರ್ ಜಿ ಆಚಾರ್ಯ, ಕೋಶಾಧಿಕಾರಿಗಳಾಗಿ ಶ್ರೀ ಬಾಬುರಾಜ್ ಎಂ ಆಚಾರ್ಯ, ಜೊತೆ ಕೋಶಾಧಿಕಾರಿಗಳಾಗಿ ಶ್ರೀ ರವೀಂದ್ರ ಐ ಪಿ ಆಚಾರ್ಯ,
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಶ್ರೀಯುತರುಗಳಾದ ನಿಟ್ಟೆ ದಾಮೋದರ ಆಚಾರ್ಯ, ಸದಾನಂದ ಎನ್ ಆಚಾರ್ಯ, ಸುಧೀರ್ ಜೆ ಆಚಾರ್ಯ, ಅರುಣ್ ಪಿ ಆಚಾರ್ಯ, ಪ್ರದೀಪ್ ಆರ್ ಆಚಾರ್ಯ, ರಮೇಶ್ ವಿ ಆಚಾರ್ಯ ಮಧುಕರ ಡಿ ಆಚಾರ್ಯ, ಉಪೇಂದ್ರ ಎ ಆಚಾರ್ಯ, ಪ್ರಭಾಕರ ಎಸ್ ಆಚಾರ್ಯ ಇವರುಗಳು ಚುನಾಯಿತರಾದರು.
ವಿಶೇಷ ಆಮಂತ್ರಿತರಾಗಿ ಶ್ರೀ ಕೆ ಪಿ ಚಂದ್ರಯ್ಯ ಆಚಾರ್ಯ, ಶ್ರೀ ಸುರೇಶ ಆಚಾರ್ಯ, ಶ್ರೀ ನಿತೇಶ್ ಆಚಾರ್ಯ , ಶ್ರೀ ವಿಠ್ಠಲ ಬಿ ಆಚಾರ್ಯ, ಶ್ರೀ ಸ್ವರೂಪ್ ಆಚಾರ್ಯ ಇವರುಗಳನ್ನು ಆಯ್ಕೆ ಮಾಡಲಾಯಿತು.
ಆಂತರಿಕ ಲೆಕ್ಕ ಪರಿಶೋಧಕರಾಗಿ ಶ್ರೀ ಹರೀಶ್ ಜಿ ಆಚಾರ್ಯ ಆಯ್ಕೆಯಾದರು.
2023-2024 ನೇ ಸಾಲಿಗೆ ಲೆಕ್ಕ ತಪಾಸಿಗರಾಗಿ ಮೆ.ಗಣೇಶ್ ಶೆಟ್ಟಿ ಎಂಡ್ ಕಂ ಇವರುಗಳನ್ನು ನೇಮಕ ಮಾಡಲಾಯಿತು.
ಪ್ರಸಕ್ತ ಸಾಲಿನ ವಾರ್ಷಿಕ ಮಹಾಸಭೆಯ ವರದಿ ಮತ್ತು ಕಾರ್ಯವಾಹಿ ವರದಿಯನ್ನು ಕಾರ್ಯದರ್ಶಿ ಶ್ರೀ ಪ್ರಸಾದ್ ಆಚಾರ್ಯರು ಮಂಡಿಸಿದರೆ ಕೋಶಾಧಿಕಾರಿ ಶ್ರೀ ಬಾಬುರಾಜ್ ಎಂ ಆಚಾರ್ಯರು ಲೆಕ್ಕಪತ್ರಗಳನ್ನು ಮಂಡಿಸಿದರು
ಸಂಘದ ಅಧ್ಯಕ್ಷರಾದ ಶ್ರೀ ಸದಾನಂದ ಎನ್ ಆಚಾರ್ಯ, ಉಪಾಧ್ಯಕ್ಷರಾದ ಶ್ರೀ ರವೀಶ್ ಜಿ ಆಚಾರ್ಯ, ಕೋಶಾಧಿಕಾರಿಗಳಾದ ಬಾಬುರಾಜ್ ಎಂ ಆಚಾರ್ಯ ಕಾರ್ಯದರ್ಶಿಗಳಾದ ಶ್ರೀ ಪ್ರಸಾದ್ ಆಚಾರ್ಯ ಹಾಗು ಶ್ರೀ ಶರತ್ ಕುಮಾರ್ ಜಿ ಆಚಾರ್ಯ ಉಪಸಮಿತಿಗಳ ಕಾರ್ಯಾಧ್ಯಕ್ಷರುಗಳಾದ ಶ್ರೀ ಉಪೇಂದ್ರ ಎ ಆಚಾರ್ಯ, ಶ್ರೀ ರಾಜೇಶ್ ಆಚಾರ್ಯ, ಶ್ರೀಮತಿ ಶುಭಾ ಸುನಿಲ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸದಸ್ಯರಲ್ಲಿ ಶ್ರೀಯುತರುಗಳಾದ ಎಂ ಎ ಆಚಾರ್ಯ , ಸುರೇಶ ಆಚಾರ್ಯ , ಜಿ ಟಿ ಆಚಾರ್ಯ, ನಿಟ್ಟೆ ದಾಮೋದರ ಆಚಾರ್ಯ ,ರವೀಶ್ ಜಿ ಆಚಾರ್ಯ, ಸದಾನಂದ ಎನ್ ಆಚಾರ್ಯ, ಹರೀಶ್ ಜಿ ಆಚಾರ್ಯ ಗಣೇಶ್ ಕುಮಾರ್, ಶ್ರೀಮತಿ ಶುಭ ಸುನಿಲ್ ಆಚಾರ್ಯ ಸಮಯೋಚಿತವಾಗಿ ಮಾತನಾಡಿ ಸೂಕ್ತ ಸಲಹೆ ಸೂಚನೆಗಳನ್ನಿತ್ತರು .
ಸಂಘದ ಅಧ್ಯಕ್ಶರಾದ ಕಲ್ಯಾಣಪುರ ಸದಾನಂದ ಎನ್ ಆಚಾರ್ಯರು ಮಾತನಾಡುತ್ತ ನೂತನವಾಗಿ ಆಯ್ಕೆಯಾದ ಕಾರ್ಯಕಾರಿಸಮಿತಿಗೆ ಸ್ವಾಗತಿಸಿ ಮುಂದಿನ ಕಾರ್ಯಕಾರಿ ಸಮಿತಿಯು ಇನ್ನಷ್ಟು ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸಿ , ಸಂಘದ ಕೆಲಸ ಕಾರ್ಯಗಳಲ್ಲಿ ಕೈಜೋಡಿಸಿ ಸಂಘದ ಹೆಸರನ್ನು ಉತ್ತುಂಗದೆತ್ತರಕ್ಕೆ ಏರಿಸುವ ಜವಾಬ್ದಾರಿಯನ್ನು ವಹಿಸಿಕೊಂಡು ಮಾಡುವ ಕೆಲಸಕ್ಕೆ ದೇವರು ಆಶೀರ್ವದಿಸಲಿ ಎಂದು ಶುಭಹಾರೈಸಿದರು .
ಮಹಿಳಾ ವಿಭಾಗದ ಪ್ರಾರ್ಥನೆಯೊಂದಿಗೆ ಸಭೆ ಪ್ರಾರಂಭವಾಯಿತು. ಆರಂಭದಲ್ಲಿ ಉಪಾಧ್ಯಕ್ಷ ರವೀಶ್ ಜಿ ಆಚಾರ್ಯರು ಸಭೆಯಲ್ಲಿದ್ದ ಎಲ್ಲರನ್ನು ಸ್ವಾಗತಿಸಿದರು.
ಕಾರ್ಯದರ್ಶಿ ಶ್ರೀ ಪ್ರಸಾದ್ ಆಚಾರ್ಯರು ಧನ್ಯವಾದ ಸಮರ್ಪಣೆಯೊಂದಿಗೆ ಸಭೆ ಮುಕ್ತಾಯವಾಯಿತು.