April 2, 2025
ಸುದ್ದಿ

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜ ಕಲ್ಯಾಣ ಯೋಜನೆಯಡಿ ವೈದ್ಯಕೀಯ, ಮನೆ ನಿರ್ಮಾಣಕ್ಕೆ ಸಹಾಯ ಧನದ ಹಸ್ತಾoತರ.


 

ಮಂಗಳೂರು ನ 12. ಜಾಗತಿಕ ಬಂಟರ ಸಂಘಗಳ ಒಕ್ಕೂಟದ(ರಿ.) ಮಂಗಳೂರು ಇದರ ಅಧ್ಯಕ್ಷರಾದ  ಐಕಳ ಹರೀಶ್ ಶೆಟ್ಟಿಯವರು ಸಮಾಜ ಕಲ್ಯಾಣ ಯೋಜನೆಯಡಿ ಮಂಗಳೂರಿನ ತಲಪಾಡಿ ನಿವಾಸಿ  ಜಯಲತಾ ಶೆಟ್ಟಿಯವರ ವೈದ್ಯಕೀಯ ಶಸ್ತ್ರಚಿಕಿತ್ಸೆಗಾಗಿ ಮಂಜೂರಾದ ಸಹಾಯ ಧನದ ಚೆಕ್ಕನ್ನು ಒಕ್ಕೂಟದ ಕಚೇರಿಯಲ್ಲಿ ಹಸ್ತಾoತರಿಸಿದರು.

ಮಂಗಳೂರಿನ ಆಶ್ರಯ ಕಾಲೋನಿ ನಿವಾಸಿ ರೇಷ್ಮಾ ಶೆಟ್ಟಿಯವರ ಪುತ್ರ 12 ವರ್ಷದ ರಿತ್ವಿಕ್ ಶೆಟ್ಟಿಯವರು ಅಂಗವೈಕಲ್ಯದಿಂದ ಬಳಲುತ್ತಿದ್ದು ನಡೆದಾಡಲು ಕಷ್ಟಕರವಾಗಿದ್ದು ಅವರ ವೈದ್ಯಕೀಯ ಚಿಕಿತ್ಸೆಗಾಗಿ  ಸಹಾಯ ಧನದ ಚೆಕ್ಕನ್ನು ಒಕ್ಕೂಟದ ಕಚೇರಿಯಲ್ಲಿ ಹಸ್ತಾoತರಿಸಿದರು.

ಉಡುಪಿಯ ಹೆಗ್ಗುoಜೆ ಗ್ರಾಮದ ನಿವಾಸಿ  ವಿಜಯ ನಾಯಕ್ ರವರು ಕಾಲಿನ ಅಂಗವೈಕಲ್ಯದಿಂದ ಬಳಲುತ್ತಿದ್ದು ನಡೆದಾಡಲು ಕಷ್ಟಕರವಾಗಿದ್ದು ಅವರ ವೈದ್ಯಕೀಯ ಚಿಕಿತ್ಸೆಗಾಗಿ  ಸಹಾಯ ಧನದ ಚೆಕ್ಕನ್ನು ಒಕ್ಕೂಟದ ಕಚೇರಿಯಲ್ಲಿ ಹಸ್ತಾoತರಿಸಿದರು.

ಕಾಸರಗೋಡಿನ ನಿವಾಸಿ  ರವೀಂದ್ರ ರೈ ಯವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಅವರ ವೈದ್ಯಕೀಯ ಚಿಕಿತ್ಸೆಗೆ ಮಂಜೂರಾದ ಸಹಾಯ ಧನದ ಚೆಕ್ಕನ್ನು ಅವರ ಪತ್ನಿ  ಸರಸ್ವತಿ ರೈ ಯವರಿಗೆ ಒಕ್ಕೂಟದ ಕಚೇರಿಯಲ್ಲಿ ಹಸ್ತಾoತರಿಸಿದರು.

 ಮಂಗಳೂರಿನ ಮೂಡಬಿದ್ರೆ ನಿವಾಸಿ ಶ್ರೀ ಶಿವಪ್ಪ ಶೆಟ್ಟಿಯವರು ಆರ್ಥಿಕವಾಗಿ ತುಂಬಾ ಕಷ್ಟದಲ್ಲಿದ್ದು ಅವರಿಗೆ ಮನೆ ನಿರ್ಮಾಣಕ್ಕೆ ಸಹಾಯ ಧನದ ಚೆಕ್ಕನ್ನು ಒಕ್ಕೂಟದ ಕಚೇರಿಯಲ್ಲಿ ಹಸ್ತಾoತರಿಸಿದರು.

ಈ ಸಂದರ್ಭದಲ್ಲಿ ಮಾಜಿ ಕೋಶಾಧಿಕಾರಿ ಶ್ರೀ ಕೊಲ್ಲಾಡಿ ಬಾಲಕೃಷ್ಣ ರೈ, ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಅಮರೇಶ್ ಶೆಟ್ಟಿ ತಿರುವಾಜೆ, ಆಹ್ವಾನಿತ ಸದಸ್ಯರಾದ ಶ್ರೀ ರವಿರಾಜ್ ಶೆಟ್ಟಿ ಜತ್ತಬೆಟ್ಟು, ಆಡಳಿತಾಧಿಕಾರಿ ಶ್ರೀ ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲ್, ಪಲಾನುಭವಿಗಳ ಕುಟುಂಬಸ್ಥರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related posts

ಬಂಟರ ಸಂಘ ಬಂಟವಾಳ  ಯುವ ವಿಭಾಗದ    ಹಬ್ಬ ದೀಪಾವಳಿ ಸಂಭ್ರಮದ  ಬೊಲ್ಪುದ ಐಸಿರಿ-೨ . ಬಂಟರ   ಸಂಸ್ಕೃತಿಯನ್ನು ಬಿಂಬಿಸಿದೆ:  ಐಕಳ ಹರೀಶ್ ಶೆಟ್ಟಿ

Mumbai News Desk

ವೆಸ್ಟರ್ನ್ ಇಂಡಿಯಾ ಶ್ರೀ ಶನಿ ಮಹಾತ್ಮಾ ಸೇವಾ ಸಮಿತಿಯ 79 ನೇ ವಾರ್ಷಿಕ ಮಹಾ ಮಹಾ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ:

Chandrahas

ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಮನವಿಗೆ ಸ್ಪಂದನೆ : ಉಡುಪಿ – ಕುಂದಾಪುರದಿಂದ ತಿರುಪತಿಗೆ ನೇರ ರೈಲು ಆರಂಭ

Mumbai News Desk

ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ), ಕೆ.ಎಸ್.ರಾವ್ ನಗರ ಮೂಲ್ಕಿ ಇದರ ಮಾಜಿ ಅಧ್ಯಕ್ಷರ ಧರ್ಮಪತ್ನಿ ಶ್ರೀ ಕುಸುಮ ಆರ್ ಸುವರ್ಣ ನಿಧನ

Mumbai News Desk

ಡಹಾಣೂವಿನ ಬೀದಿಗಳಲ್ಲಿ ಗಣರಾಯನ ದರ್ಬಾರು.

Mumbai News Desk

ಮೊದಲ ಮಳೆಗೆ ತತ್ತರಿಸಿದ ಮುಂಬಯಿ, ತಲ್ಲಣಗೊಂಡ ಜನತೆ,ಅಪಾರ ಹಾನಿ.

Mumbai News Desk