April 2, 2025
ಸುದ್ದಿ

ಮೊಗವೀರ ಮಹಾಜನ ಸೇವಾ ಸಂಘದ ವಾರ್ಷಿಕ ಮಹಾಸಭೆ. ಒಗ್ಗಟ್ಟಿನಿಂದ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸೋಣ, :ರಾಜು ಮೆಂಡನ್ 

ಮುಂಬೈ: ಮುಂಬೈಯ ಬಗ್ವಾಡಿ ಹೋಬಳಿಯ ಮೊಗವೀರ ಮಹಾಜನ ಸೇವಾ ಸಂಘದ 81ನೇ ವಾರ್ಷಿಕ ಮಹಾಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. 

ಸಂಘದನೂತನ ಅಧ್ಯಕ್ಷ ರಾಜು ಮೆಂಡನ್ ಮಾತನಾಡಿ, ಮುಂದಿನ ವರ್ಷ ಇನ್ನಷ್ಟು ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶವಿದೆ. ಎಂದಿನಂತೆ ಸಮಾಜದ ಬೆಂಬಲಕ್ಕೆ ನಿಲ್ಲುವ ಸುರೇಶ್ ಕಾಂಚನ್‌ರವರ ಸಹಕಾರದ ನಿರೀಕ್ಷೆ ಮುಂದೆಯೂ ಇದೆ. ಎಲ್ಲರೂ ಒಗ್ಗಟ್ಟಿನಿಂದ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸೋಣ ಎಂದು ಹೇಳಿದರು.

ಸುರೇಶ್ ತೋಳಾರ್ ಮಾತನಾಡಿ, ಊರಿನಲ್ಲಿ ಸೌಲಭ್ಯಗಳು ಸಾಕಷ್ಟಾಗಿವೆ. ಈಗ ಸುರೇಶ್ ಕಾಂಚನ್ ನೇತೃತ್ವದಲ್ಲಿ ಮುಂಬೈಯ ಮೊಗವೀರರಿಗೆ ಏನಾದರೂ ಮಾಡಬೇಕು ಎಂದು ಕೋರಿಕೊಂಡರು. 

ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ ಅರ್ಪಿಸಿದ ಗಣೇಶ ಮೆಂಡನ್, ಮುಂದಿನ ಎರಡು ವರ್ಷ ಹೊಸ ಕಾರ್ಯಕಾರಿ ಸಮಿತಿ ಮತ್ತು ಹಿಂದಿನ ಸದಸ್ಯರೆಲ್ಲರೂ ಒಟ್ಟಾಗಿ ಸಂಘಕ್ಕಾಗಿ ದುಡಿಯೋಣ ಎಂದು ಹೇಳಿದರು. 

ನಾರಾಯಣ ಮೆಂಡನ್ ಅವರು ಮಾತನಾಡಿ, ಸಂಘದ ಎಲ್ಲಾ ಕೆಲಸಗಳಿಗೂ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. 

     ಬಾಬು ಮೊಗವೀರ ಮಾತನಾಡಿ, ಡಾ.ಜಿ ಶಂಕರ್ ಅವರು ಇದ್ದ ಹಾಗೆ ನಮಗೆ ಮುಂಬೈಯಲ್ಲಿ ಸುರೇಶ್ ಕಾಂಚನ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

   ಗೋಪಾಲ‌ ಚಂದನ್ ಅವರು, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದರು. 

ವನಿತಾ ಎಸ್. ತೋಳಾರ್ ಮಾತನಾಡಿ ಮಹಿಳಾ ವಿಭಾಗದ ಕಾರ್ಯಕ್ರಮಗಳಿಗೆ ಎಲ್ಲರೂ ಬೆಂಬಲ ನೀಡಿದರು. ಹಾಗೆಯೇ  ಸಂಘಕ್ಕೆ ಸದಾ ಬೆಂಬಲವನ್ನು ನೀಡುತ್ತೇವೆ ಎಂದರು. 

ಸಂಘದಮಾಜಿ ಅಧ್ಯಕ್ಷ ನಾಣು ಚಂದನ್ ಮಾತನಾಡಿ, ವಾರ್ಷಿಕ ಸಭೆಯಲ್ಲಿ ಆಯ್ಕೆಯಾದ ಎಲ್ಲಾ ಸದಸ್ಯರು ಸಮಾಜದ ಹಿತೈಷಿಗಳಾಗಿದ್ದಾರೆ. ಸುರೇಶ್ ಕಾಂಚನ್ ಅವರು ಮೊಗವೀರ ಸಮುದಾಯದ ಉಕ್ಕಿನ ಮನುಷ್ಯ ಇದ್ದಂತೆ ಎಂದು ಹೇಳಿ, ಅಧ್ಯಕ್ಷ ರಾಜು ಮೆಂಡನ್‌ರವರಿಗೆ ಸಮಾಜದ ಸಹಕಾರವನ್ನು ಕೋರಿದರು. 

ನೂತನ ಅಧ್ಯಕ್ಷ ರಾಜು ಮೆಂಡನ್ ಮಾತನಾಡಿ, ಮುಂದಿನ ವರ್ಷ ಇನ್ನಷ್ಟು ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶವಿದೆ. ಎಂದಿನಂತೆ ಸಮಾಜದ ಬೆಂಬಲಕ್ಕೆ ನಿಲ್ಲುವ ಸುರೇಶ್ ಕಾಂಚನ್‌ರವರ ಸಹಕಾರದ ನಿರೀಕ್ಷೆ ಮುಂದೆಯೂ ಇದೆ. ಎಲ್ಲರೂ ಒಗ್ಗಟ್ಟಿನಿಂದ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸೋಣ ಎಂದು ಹೇಳಿದರು.

ಲೆಕ್ಕಪರಿಶೋಧಕ ಯಶವಂತ ಕರ್ಕೇರ ಅವರಿಂದ ಪರಿಗಣಿಸಲ್ಪಟ್ಟ 2021-2022 ಹಾಗೂ 2022-2023 ಅವಧಿಯ ಲೆಕ್ಕಪತ್ರಗಳನ್ನು ಗಣೇಶ್ ಮೆಂಡನ್ ಸಭೆಯ ಮುಂದಿಟ್ಟರು. ಭಾಸ್ಕರ ಮೆಂಡನ್ ಮಂಜೂರು ಮಾಡಿ, ಮಂಜುನಾಥ ಮೆಂಡನ್ ಅನುಮೋದಿಸಿದರು.

ಮಂಜುನಾಥ ನಾಯ್ಕ ಅವರು ಮಹಾಸಭೆಯ ವರದಿ ಮಂಡಿಸಿದರು. ಅವಿರೋಧವಾಗಿ ಆಯ್ಕೆಯಾದ ಸದಸ್ಯರ ಪಟ್ಟಿಯನ್ನು ಓದಿ ಹೇಳಲಾಯಿತು. ಹೊಸ‌ ಸಮಿತಿಗೆ ಉದಯ ಕುಮಾರ್ ಪುತ್ರನ್ ಅವರ ಸೂಚನೆಯಂತೆ ಬಾಬು ಕೆ. ಮೊಗವೀರ ಅವರು ಅನುಮೋದನೆ ನೀಡಿದರು. ಲೆಕ್ಕಪರಿಶೋಧಕ ಯಶವಂತ ಕರ್ಕೇರ ಅವರ ಆಯ್ಕೆಯನ್ನು ಸಂತೋಷ ಪುತ್ರನ್ ಸೂಚಿಸಿ, ರಾಜೇಂದ್ರ ಚಂದನ್ ಅನುಮೋದಿಸಿದರು.

——–

 ಸಂಘಟಿಕರಾಗಿ ಸಮಾಜ ಕಟ್ಟೋಣ: ಸುರೇಶ ಕಾಂಚನ್

ಸುರೇಶ ಕಾಂಚನ್‌ಸಂಘದ ಗೌರವ ಅಧ್ಯಕ್ಷ ಸುರೇಶ ಕಾಂಚನ್‌ ಅವರು ಮಾತನಾಡಿ, ಮುಂದಿನ ದಿನಗಳಲ್ಲಿ  ಎಲ್ಲಾ ಕಾರ್ಯಕ್ರಮಗಳಿಗೆ ಸದಸ್ಯರ ಬೆಂಬಲ ಕೋರುತ್ತೇವೆ. ಕುಂದಾಪುರದ ಹಾಲ್‌ ನಿರ್ಮಾಣಕ್ಕೆ  ಎಲ್ಲರೂ ಸಹಕರಿಸಿದ್ದಾರೆ. ಹಾಗೆಯೇ ಮುಂಬೈಯಲ್ಲೂ ಏನಾದರೂ ಮಾಡಬೇಕು ಅನ್ನುವ ಆಶಯವನ್ನು ಈಡೇರಿಸುವತ್ತ ಪ್ರಯತ್ನ ಮಾಡೋಣ ಎಂದು ನುಡಿದರು. 

Related posts

ಮುಂಬೈ – ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ವಿಸ್ತರಿಸುವ ಸಾಧ್ಯತೆ

Mumbai News Desk

ಗೋರೆಗಾಂವ್ ಕರ್ನಾಟಕ ಸಂಘ, ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ.

Mumbai News Desk

ಸೇವಾಲಯ ಸೇವಾ ಸಮಿತಿ ಟ್ರಸ್ಟ್ ಬೆಂಗಳೂರು ವತಿಯಿಂದ ಪಿ.ಶಿವ ಕುಮಾರ್ ಅವರಿಗೆ ಸನ್ಮಾನ.

Mumbai News Desk

ಕುಲಾಲ ಪ್ರತಿಷ್ಠಾನದ ಮಂಗಳೂರು, ವಿಜಯ ಕಲಾವಿದರ ಕಿನ್ನಿಗೋಳಿಯ ನಾಟಕ ಪ್ರದರ್ಶನ, ಮುಂಬಯಿ ಪ್ರವಾಸದ ಉದ್ಘಾಟನೆ.

Mumbai News Desk

“ಆನಂದವನ್ನು ನಮ್ಮೊಳಗೆ ಹುಡುಕಬೇಕು” : ಪೂಜ್ಯ ಒಡಿಯೂರು ಶ್ರೀಗಳವರಿಂದ ಸಂದೇಶ

Mumbai News Desk

ನಮೋ ಮೊಯರ್ ಗ್ಲೋಬಲ್ ಫೌಂಡೇಶನ್ ವತಿಯಿಂದಹೊರ ರಾಜ್ಯದಲ್ಲೂ ಅಸಾಯಕರಿಗೆ ಸಹಾಯ ಹಸ್ತ

Mumbai News Desk