
ವಿಕ್ರೋಲಿ ಕನ್ನಡ ಸಂಘವು
(ಸಂಚಾಲಕರು ವೀಕೇಸ್ ಇಂಗ್ಲಿಷ್ ಹೈಸ್ಕೂಲ್ )
ವಜ್ರ ಮಹೋತ್ಸವ ದತ್ತ ದಾಪುಗಾಲಿಡುತ್ತಿರುವ ಸುಸಂದರ್ಭದಲ್ಲಿ , ವಜ್ರ ಮಹೋತ್ಸವದ ಪೂರ್ವಭಾವಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ
ನವಂಬರ್18ರ , ಶನಿವಾರದಂದು ಮದ್ಯಾಹ್ನ 3.00 ಗಂಟೆಗೆ ಕಾಮ್ಗಾರ್ ಕಲ್ಯಾಣ ಭವನ ಸಭಾಗೃಹ ವಿಕ್ರೋಲಿ ಕೋರ್ಟ್ ನ ಹತ್ತಿರ, ಕನ್ನಮ್ ವಾರ್ ನಗರ 2, ವಿಕ್ರೋಲಿ ಪೂರ್ವ ದಲ್ಲಿ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್ ಸಾರಥ್ಯದ ಚಾ – ಪರ್ಕ ಕಲಾವಿದರ, ಕಾಪಿಕಾಡ್, ಬೋಳಾರ್, ವಾಮಂಜೂರು ಅಭಿನಯದಲ್ಲಿ ಈ ವರ್ಷದ ಹೊಸ ತುಳು ನಾಟಕ “ಪುದರ್ ದಿದಾಂಡ್!!!!” ಮುಂಬಯಿಯಲ್ಲಿ ಪ್ರಥಮ ಪ್ರಯೋಗವಾಗಿ ತುಳು ಹಾಸ್ಯಮಯ ನಾಟಕವು ಉಚಿತವಾಗಿ ಪ್ರದರ್ಶನಗೊಳ್ಳಲಿದೆ.
ಕಲಾಭಿಮಾನಿಗಳೆಲ್ಲರೂ ಈ ಸುವರ್ಣಾವಕಾಶವನ್ನು ಕಳ ಕೊಳ್ಳದೆ , ತಪ್ಪದೆ ಬಂದು ವೀಕ್ಷಿಸಿ ಪ್ರೊತಾಹಿಸಬೇಕಾಗಿ ಅಧ್ಯಕ್ಷರಾದ ಉದಯ ಎಲ್. ಶೆಟ್ಟಿ ಪೇಜಾವರ., ಗೌ. ಕಾರ್ಯದರ್ಶಿ ಉಮೇಶ್ ಎನ್.ಪೂಜಾರಿ,
ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಯುಗಾನಂದ ಎಸ್. ಶೆಟ್ಟಿ, ಜೊತೆ ಕೋಶಾಧಿಕಾರಿಗಳಾದ ಪ್ರವೀಣ್ ಕೆ ಶೆಟ್ಟಿ, ಸುರೇಂದ್ರ ಪೂಜಾರಿ. ಮತ್ತು ಕಾರ್ಯಕಾರಿ ಸಮಿತಿಯ ಸರ್ವ ಪದಾಧಿಕಾರಿಗಳು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.