
ಒಗ್ಗಟ್ಟಿನಲ್ಲಿ ಬ್ರಹ್ಮಕಲಶೋತ್ಸವ ಯಶಸ್ವಿಗೊಳಿಸುವ:
ಹುರಲಾಡಿ ರಘುವೀರ್ ಶೆಟ್ಟಿ, ನಲ್ಲೂರು
ಚಿತ್ರ ವರದಿ : ದಿನೇಶ್ ಕುಲಾಲ್
ಮುಂಬಯಿ ನ. 12. ಕ್ಷೇತ್ರಕ್ಕೆ ಐವತ್ತು ವರ್ಷ ಪೂರ್ತಿಗೊಳ್ಳುವ ಸಂದರ್ಭದಲ್ಲಿ
ದೇವಿಯ ಇಚ್ಛೆಯಂತೆ ಬ್ರಹ್ಮ ಕಲಶೋತ್ಸವ ನಡೆಸುವ
ಮತ್ತು ನೋಡುವ ಸೌಭಾಗ್ಯ ನಮಗೆಲ್ಲರಿಗೂ ಒದಗಿದೆ. ಕ್ಷೇತ್ರವನ್ನು ಪ್ರಾರಂಭಿಸಿದ ಕೈವಲ್ಯ ಶ್ರೀ ಶ್ಯಾಮಾನಂದ ಸ್ವಾಮೀಜಿಯವರು ಕ್ಷೇತ್ರಕ್ಕೆ ಬ್ರಹ್ಮಕಲಶ ನಡೆಸಬೇಕು ಎನ್ನುವ ಬಹಳಷ್ಟು ಕನಸುಗಳಿತ್ತು ಅದನ್ನು ನನ್ನಲ್ಲಿ ಸದಾ ನೆನಪಿಸಿಕೊಳ್ಳುತ್ತಿದ್ದರು. ಆದರೆ ಇಂದು ಅವರು ನಮ್ಮೊಟ್ಟಿಗೆ ಇಲ್ಲದಿದ್ದರೂ ಕೂಡ ಅವರ ಪರಿವಾರ. ಮತ್ತು ಭಕ್ತರು ಸೇರಿ ವೈಭವದಿಂದ ಬ್ರಹ್ಮ ಕಳಶ ಮಾಡುವ ಸಂಕಲ್ಪವನ್ನು ಮಾಡಿರುವುದು ಬಹಳ ಅಭಿಮಾನ ತಂದಿದೆ. ಈ ಪುಣ್ಯ ಕಾರ್ಯದಲ್ಲಿ ಸಮಸ್ತ ಭಕ್ತರು ಸೇರಿಕೊಂಡು ಒಗ್ಗಟ್ಟಿನಿಂದ ಭಕ್ತಿಯಿಂದ ಬ್ರಹ್ಮಕಲಸವನ್ನು ನಡೆಸುವ ಎಂದು ಕ್ಷೇತ್ರದ ಬ್ರಹ್ಮ ಕಲಶೋತ್ಸವದ ಸಮಿತಿಯ ಗೌರವ ಅಧ್ಯಕ್ಷ ಹುರಲಾಡಿ ರಘುವೀರ್ ಶೆಟ್ಟಿ, ನಲ್ಲೂರು ನುಡಿದರು.
ಅವರು ನ 7 ರಂದು ಗೋರೆಗಾಂವ್ ಪಶ್ಚಿಮದ ಮೋತಿಲಾಲ್ ನಗರ ಗಣೇಶ ಮೈದಾನದ ಹತ್ತಿರದ ಶ್ರೀ ಶಾಂತಾ ದುರ್ಗಾದೇವಿ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು.
ಬ್ರಹ್ಮಕಲಶ ಕಾರ್ಯಕ್ರಮಕ್ಕೆ ಮಾರ್ಗದರ್ಶಕರಾದ ವಿದ್ವಾನ್ ಕೃಷ್ಣರಾಜ್ ತಂತ್ರಿಯವರು ಆಶೀರ್ವಚನದ ಮಾತುಗಳ ನಾಡುತ್ತಾ ಈ ಪರಿಸರದ ಜನರಿಗೆ ಆಧ್ಯಾತ್ಮಿಕದ ರುಚಿಯನ್ನು ನೀಡಿದ ಶಾಂತದುರ್ಗ ದೇವಸ್ಥಾನದ ಸಂಸ್ಥಾಪಕರಾಗಿರುವ ಶ್ಯಾಮಾನಂದ ಸ್ವಾಮೀಜಿಯವರು ಪರಿಸರವನ್ನು ಶಾಂತವಾಗಿ ಪರಿವರ್ತಿಸಿದ್ದಾರೆ .ದೇವಿಗೆ ಬ್ರಹ್ಮಕಲಶವನ್ನು ಮಾಡಿ ಮತ್ತಷ್ಟು ಕ್ಷೇತ್ರಕ್ಕೆ ಶಕ್ತಿ ತುಂಬುವ ಸೇವೆಯನ್ನು ಮಾಡಲು ಭಕ್ತರು ಒಗ್ಗಟ್ಟಾಗಿದ್ದಾರೆ. ಇದು ದೇವರ ಸಂಕಲ್ಪದಂತೆ ನಡೆದಿದೆ, ಮಾನವನಿಂದ ಯಾವುದು ಸಾಧ್ಯವಿಲ್ಲ. ದೇವರು ಎಲ್ಲವನ್ನು ಎಲ್ಲಾ ಸಮಯದಲ್ಲಿ ಒಂದು ಮಾಡುತ್ತಾರೆ. ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿಯವ ಅಧ್ಯಕ್ಷ ರಘುನಾಥ್ ಶೆಟ್ಟಿ ಅವರು ಬಹಳಷ್ಟು ಧಾರ್ಮಿಕ ವಿಚಾರದಲ್ಲಿ ಅನುಭವಿರುವವರು .ಅಲ್ಲದೇ ಇದರಲ್ಲಿ ಸೇರಿಕೊಂಡ ಬಹಳಷ್ಟು ಭಕ್ತರು ಶ್ರದ್ದೆಯಲ್ಲಿದ್ದಾರೆ ಆದ್ದರಿಂದ ಈ ಕ್ಷೇತ್ರದ ಬ್ರಹ್ಮಕಲಶ ಭಕ್ತಿ ಸಂಭ್ರಮದಿಂದ ನಡೆಯುತ್ತದೆ ,ಎಲ್ಲಾ ಭಕ್ತರಿಗೆ ಶಾಂತದುರ್ಗೆ ಅನುಗ್ರಹಿಸಲಿ ಎಂದು ಆಶೀರ್ವದಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಬಂಟರ ಸಂಘದ ಜೊತೆ ಕೋಶಾಧಿಕಾರಿ, ಹೋಟೆಲ್ ಉದ್ಯಮಿ ಮುಂಡಪ್ಪ ಎಸ್ ಪಯ್ಯಡೆ ಮಾತನಾಡಿ ದಾನ ಮಾಡುವಾಗ ಮನಸಾರೆ ದಾನ ಮಾಡಬೇಕು. ಐಶ್ವರ್ಯ ಸಂಪತು ನಮ್ಮಲ್ಲಿದೆ ಎನ್ನುವ ಅಹಂಕಾರದಿಂದ ಎಂದೂ ದಾನ ಮಾಡಬಾರದು. ಭಕ್ತಿಯಿಂದ ದಾನ ಮಾಡಿದರೆ ಅದಕ್ಕೆ ದೇವರ ಅನುಗ್ರಹವಿರುತ್ತದೆ.. ದೇವಸ್ಥಾನದ ಪುಣ್ಯಕಾರಕ್ಕೆ ದಾನ ನೀಡಿದಾಗ ದೇವರು ಇನ್ನೊೊಂದು ರೀತಿಯಲ್ಲಿ ಆತನಿಗೆ ಸಂಪತ್ತು ನೀಡುತ್ತಾನೆ ಆದ್ದರಿಂದ ಇಂಥ ಪುಣ್ಯಕಾರ್ಯಗಳಿಗೆ ದಾನ ಮಾಡುವ ದಾನಿಗಳಾಗಬೇಕು. ಯಾರಿಗೂ ಅನ್ಯಾಯ ಮಾಡದೇ ಧರ್ಮದ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕು ಈ ಒಂದು ಪುಣ್ಯ ಕಾರ್ಯದಲ್ಲಿ ನಾವೆಲ್ಲರೂ ಸೇರಿಕೊಳ್ಳೋಣ ಅದು ನಮ್ಮ ಬದುಕನ್ನು ಪಾವನ ಗೊಳಿಸುತ್ತದೆ ಎಂದು ನುಡಿದರು.
ಮತ್ತೋರ್ವ ಮುಖ್ಯ ಅತಿಥಿ ಬಂಟರ ಸಂಘದ ಜೋಗೇಶ್ವರಿ- ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷ ನಿಟ್ಟೆ ಎಂ ಜಿ ಶೆಟ್ಟಿ ಮಾತನಾಡುತ್ತಾ ಈ ಕ್ಷೇತ್ರ 50 ವರ್ಷ ಪೂರ್ತಿಗೊಳಿಸುವ ಸಂದರ್ಭದಲ್ಲಿ ಬ್ರಹ್ಮಕಲಶ ಮಾಡಬೇಕೆನ್ನುವ ದೇವರ ಇಚ್ಛೆಯಂತೆ ಎಲ್ಲಾ ತುಳು ಕನ್ನಡ ಕನ್ನಡಿಗರನ್ನು ಒಗ್ಗೂಡಿಸುವ ಕೆಲಸ ಕ್ಷೇತ್ರದಲ್ಲಿ ನಡೆದಿದೆ. ಈ ಪುಣ್ಯ ಕಾರ್ಯಕ್ಕೆ ನಾವೆಲ್ಲರೂ ನಮ್ಮಿಂದ ತನು ಮನ ಧನದ ಸಹಕಾರವನ್ನು ನೀಡಿ ವೈಭವದಿಂದ ಬ್ರಹ್ಮ ಕೆಲಶವನ್ನು ಮಾಡುವುದಕ್ಕೆ ಸಹಕಾರಿಯಾಗುವ ಎಂದು ನುಡಿದರು.




ಜೋಗೇಶ್ವರಿ -ದಹಿಸರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶೈಲಜಾ ಅಮರನಾಥ್ ಶೆಟ್ಟಿ ಮಾತನಾಡುತ್ತಾ ಊರಿಗೊಂದು ಶಾಲೆ ಹೇಗೆ ಮುಖ್ಯ ಹಾಗೆ ದೇವಸ್ಥಾನವು ಕೂಡ ಮುಖ್ಯವಾಗಿರುತ್ತದೆ. ಅದು ಕೂಡ ಈ ಪರಿಸರದಲ್ಲಿ ತಮ್ಮ ತುಳುನಾಡಿನ ಜನರ ಕ್ಷೇತ್ರ ಎನ್ನುವುದು ನಮಗೆಲ್ಲರಿಗೂ ಅಭಿಮಾನವಾಗಿದೆ. ದೇವಸ್ಥಾನದ ಮೂಲಕ ಧರ್ಮ ಜಾಗೃತಿಯ ಕೆಲಸವಾಗುತ್ತದೆ. ಸಾಮಾನ್ಯ ಜನಕೂಡ ಆಧ್ಯಾತ್ಮಿಕದ ದಾರಿಯಲ್ಲಿ ನಡೆಯಲು ಸಾಧ್ಯವಾಗುತ್ತದೆ. ಅಂತ ಪವಿತ್ರ ವಾದ ಕ್ಷೇತ್ರದ ಬ್ರಹ್ಮಕಲಶಕ್ಕೆ ನಾವೆಲ್ಲರೂ ಸಹಕಾರ ನೀಡುವ ಎಂದು ನುಡಿದರು
ವೇದಿಕೆಯಲ್ಲಿ ವೇದಮೂರ್ತಿ ರಾಮದಾಸ್ ಭಟ್ .ವ್ಯವಸ್ಥಾಪಕ ಟ್ರಸ್ಟಿಗಳು ಪದ್ಮಾವತಿ ಎಸ್ ಸಾಲಿಯಾನ್, ಉದಯ್ ಎಸ್ ಸಾಲಿಯಾನ್.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ರಘುನಾಥ್ ಎನ್ ಶೆಟ್ಟಿ. ಉಪಾಧ್ಯಕ್ಷ ಭೋಜ ಎಸ್ ಶೆಟ್ಟಿ ಕೆದಗೆ . ಗೌರವ ಕಾರ್ಯದರ್ಶಿ ಚಂದ್ರಶೇಖರ್ ಜೆ ಸಾಲ್ಯಾನ್. ಕೋಶ ಧಿಕಾರಿ ಪ್ರವೀಣ್ ವಿ ಪುತ್ರನ್, ಜೊತೆ ಕಾರ್ಯದರ್ಶಿ ಸುಮಂತ್ ಎಸ್ ಕುಂದರ್, ಜೊತೆ ಕೋಶಧಿಕಾರಿ ಸಂತೋಷ್ ಕೆ ಶೆಟ್ಟಿ. ಜೊತೆ ಕೋಶಧಿಕಾರಿ ವೈಭವಿ ವಿರಲ್, ಭಜನಾ ಸಂಚಾಲಕ ರೋಹಿತಾಕ್ಷ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರಘುನಾಥ್ ಎನ್ ಶೆಟ್ಟಿ ನಿರೂಪಿಸಿ . ಧನ್ಯವಾದ ನೀಡಿದರು
ಪ್ರಾರಂಭದಲ್ಲಿಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಮಹಿಳಾ ಸದಸ್ಯರಿಂದ ಭಜನೆ ಆ ಬಳಿಕ ವಿಶೇಷ ಪೂಜೆ ನಡೆದವು
ಡಿಸೆಂಬರ್ 22 ರಿಂದ 29 ರವರೆಗೆ ನೂತನ ಬಿಂಬ ಪ್ರತಿಷ್ಠೆ, ನೇಮಹೋತ್ಸವ , ಬ್ರಹ್ಮಕಲಶ
ಸರಿಸುಮಾರು 50 ವರ್ಷಗಳ ಸುದೀರ್ಘ ಇತಿಹಾಸವಿರುವ
ಶ್ರೀ ಶಾಂತಾ ದುರ್ಗಾದೇವಿ ದೇವಸ್ಥಾನದಲ್ಲಿ ಡಿ22 ರಿಂದ 29 ವರಗೆ ಬ್ರಹ್ಮಕಲಶವು ನಡೆಯಲಿದೆ. ನ 24 ಶ್ರೀದೇವಿಯ ನೂತನ ಬಿಂಬ ಪ್ರತಿಷ್ಠೆ. ನ 29 ರಂದು ಮಧ್ಯಾಹ್ನ 1:30 ರಿಂದ ಪರಿವಾರ ದೈವಗಳಾದ ವರ್ತೆ, ಧರ್ಮದೇವ ಪಂಜುರ್ಲಿ, ಮಂತ್ರ ದೇವತೆ. ಕಲ್ಕುಡ ಹಾಗೂ ಗುಳಿಗ ದೈವಗಳಿಗೆ ನೇಮೋತ್ಸವ ನಡೆಯಲಿದೆ.