
ಬಿಲ್ಲವ ಸಮಾಜದ ಮಹಾನಾಯಕ ದಿ. ಜಯ ಸುವರ್ಣ ಅವರ ಪುಣೆ, ಪಿಂಪ್ರಿ, ಚಿಂಚ್ವಾಡ್ ಅಭಿಮಾನಿಗಳ ಅಯೋಜನೆಯಲ್ಲಿ ಲೇಖಕಿ ಅನಿತಾ ಪೂಜಾರಿ ತಾಕೊಡೆ ಅವರ ಜಯ ಸುವರ್ಣ ಜೀವಾನಾಧಾರಿತ ಸಂಶೋಧನಾ ಗ್ರಂಥ ಸುವರ್ಣಯುಗ ಕ್ರತಿಯನ್ನು ನ.19 ರಂದು ಪುಣೆಯಲ್ಲಿ ಬಿಡುಗಡಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಪುಣೆಯ ಹೋಟೆಲ್ ಗಾರ್ಡನ್ ಕೋರ್ಟ್ ನಲ್ಲಿ ರವಿವಾರ ಬೆಳ್ಳಿಗ್ಗೆ 11.30 ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾರತ್ ಬ್ಯಾಂಕ್ ನ ನೂತನ ಕಾರ್ಯದ್ಯಕ್ಷರಾಗಿ ಆಯ್ಕೆಯಾದ ಸೂರ್ಯಕಾಂತ ಜಯ ಸುವರ್ಣ, ಉಪ ಕಾರ್ಯದ್ಯಕ್ಷ ನ್ಯಾಯವಾದಿ ಸೋಮನಾಥ್ ಅಮೀನ್ ಹಾಗೂ ಎಲ್ಲಾ ನಿರ್ದೇಶಕರುಗಳನ್ನು ಸನ್ಮಾನಿಸಲಾಗುವುದು.
ಜಯ ಸುವರ್ಣ ಅವರ ಅಭಿಮಾನಿಗಳು, ಸಮಾಜ ಬಾಂಧವರು, ಭಾರತ್ ಬ್ಯಾಂಕ್ ನ ಶೇರುದಾರರು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತ್ತೆ, ಪುಣೆ, ಲೋನವಾಲ ದ ಜಯ ಸುವರ್ಣ ಅವರ ಅಭಿಮಾನಿಗಳು ವಿನಂತಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸುಂದರ್ ಪೂಜಾರಿ – 9822848181, ಸದಾಶಿವ ಸಾಲ್ಯಾನ್ – 9422321049 ಮತ್ತು ಪುರಂದರ ಪೂಜಾರಿ – 9422083583 ಸಂಪರ್ಕಿಸಬಹುದು.
ದೀಪಾವಳಿಹಬ್ಬದ ಶುಭಾಶಯಗಳು
ದೀಪಾವಳಿಹಬ್ಬದ ಶುಭಾಶಯಗಳು
ದೀಪಾವಳಿಹಬ್ಬದ ಶುಭಾಶಯಗಳು