
ಮಂಗಳೂರು : ಪುಣೆಯ ಕುಲಾಲ ಸಮುದಾಯದ ಸಮಾಜ ಸೇವಕ ಲಕ್ಷಣ್ ಸಾಲ್ಯಾನ್ ಪುಣೆಯ ವರ ಪತ್ನಿ ವಿಮಲಾ ಎಲ್ ಸಾಲ್ಯಾನ್ {70]ಅವರು ಮಂಗಳೂರಿನಲ್ಲಿ ನ. 17 ರಂದು ನಿಧನ ಹೊಂದಿದರು. ಮೂಲತ ಮಂಗಳೂರಿನ ಊರ್ವದವರಾಗಿದ್ದು ಪುಣೆಯಲ್ಲಿ ನೆಲೆಸಿದ್ದ ಇವರು ಕಳೆದ ಸುಮಾರು ಹತ್ತು ವರ್ಷಗಳಿಂದ ಮುಂಬಯಿ ಸಮೀಪದ ಅಂಬರ್ನಾಥ್ ನಲ್ಲಿ ವಾಸ್ತವದಲ್ಲಿದ್ದರು,
ಮೃತರು ಪತಿ ಲಕ್ಷ್ಮಣ್ ಬಾಬು ಸಾಲ್ಯಾನ್, ಪುತ್ರಿ ನಮೃತಾ ಜಗದೀಶ್ ಬಂಜನ್, ಅಳಿಯ ಅಂಬರ್ನಾಥ್ ನ ಜೈದೀಪ್ ಕನ್ಸ್ಟ್ರಕ್ಷನ್ ಮಾಲಕ ಜಗದೀಶ್ ರಾಮ ಬಂಜನ್ ಮತ್ತು ಮೊಮ್ಮಕ್ಕಳಾದ ದೀಶಿತಾ ಮತ್ತು ತನ್ಮಿ ಇವರನ್ನು ಅಗಲಿದ್ದಾರೆ.
ಇವರ ನಿಧಾನಕ್ಕೆ ಮುಂಬೈ ಕುಲಾಲ ಸಂಘದ ಗೌರವ ಅಧ್ಯಕ್ಷ ದೇವದಾಸ್ ಕುಲಾಲ್, ಅಧ್ಯಕ್ಷ ರಘು ಮೂಲ್ಯ, ಪದಾಧಿಕಾರಿಗಳು ಸದಸ್ಯರು. ಠಾಣೆ – ಭಿವಂಡಿ – ಬದ್ಲಾಪುರ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಲಕ್ಷ್ಮಣ್ ಸಿ. ಮೂಲ್ಯ ಹಾಗೂ ಪದಾಧಿಕಾರಿಗಳು ಸಂತಾಪ ಸೂಚಿಸಿರುವರು.