ಸಮೂಹ ಭಕ್ತಿ ಗಾಯನ ಸ್ಪರ್ಧೆ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ಕಲ್ಯಾಣ ಕಸ್ತೂರಿ ಪ್ರಶಸ್ತಿ ಪ್ರಧಾನ
ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್ (ರಿ) ಇದರ ಕರ್ನಾಟಕ ರಾಜ್ಯೋತ್ಸವ ಮತ್ತು ಸಂಸ್ಥೆಯ 21ನೇ ವಾರ್ಷಿಕೋತ್ಸವವು ನವಂಬರ್ 19ರಂದು ಅಪರಾಹ್ನ ಕಲ್ಯಾಣ್ ಪಶ್ಚಿಮ ಮಾತೋಶ್ರೀ ಸಭಗ್ರಹದಲ್ಲಿ ಅರ್ಥಪೂರ್ಣವಾಗಿ ಜರಗಿತು.
ಮೊದಲಿಗೆ ಜ್ಯೋತಿ ಪ್ರಕಾಶ್ ಕುಂಠಿಣಿ ಅವರು ಭಕ್ತಿ ಗೀತೆ ಹಾಡಿ ಸಮೂಹ ಭಕ್ತಿ ಗೀತೆ ಸ್ಪರ್ಧೆಗೆ ಚಾಲನೆ ನೀಡಿದರು.
ನಂತರ ಸಂಸ್ಥೆಯ ಸದಸ್ಯರಿಂದ, ಮುಂಬೈಯ ಸಂಘ -ಸಂಸ್ಥೆಗಳ ಸದಸ್ಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಸಾದರಗೊಂಡಿತು.
ಮನರಂಜನಾ ಕಾರ್ಯಕ್ರಮದ ಬಳಿಕ ಸಭಾ ಕಾರ್ಯಕ್ರಮವು ಜ್ಯೋತಿ ಕುಂಠಿಣಿ ಅವರ ಅಧ್ಯಕ್ಷತೆಯಲ್ಲಿ ಆರಂಭವಾಯಿತು.
ಅತಿಥಿ ಚಂದ್ರಶೇಖರ್ ರಾವ್ ಮೆಮೋರಿಯಲ್ ಟ್ರಸ್ಟ್, ಮುಂಬಯಿಯ ಅಧ್ಯಕ್ಷೆ ಶ್ರೀಮತಿ ಶ್ರೀದೇವಿ ಸಿ. ರಾವ್, ಗೌರವ ಅತಿಥಿ ಥಾಣೆ ಬಂಟ್ಸ್ ಅಸೋಸಿಯೇಶನ್ ನ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಶ್ರೀಮತಿ ಕುಶಲಾ ಎನ್. ಶೆಟ್ಟಿ, ಕನ್ನಡ ಸೇವಾ ಸಂಘ, ಪೊವಾಯಿಯ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಶ್ರೀಮತಿ ಪ್ರಶಾಂತಿ ಡಿ. ಶೆಟ್ಟಿ ದೀಪ ಬೆಳಗಿ ಒಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗೌರವ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಹೆಗ್ಡೆ ಕುಂಠಿಣಿ ವಾರ್ಷಿಕ ವರದಿ ವಾಚಿಸಿದರು.
ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಭಾರತಿ ಬಿ.ಶೆಟ್ಟಿ ಮಹಿಳಾ ವಿಭಾಗವು ವರ್ಷವಿಡೀ ನಡೆಸಿದ ಚಟುವಟಿಕೆಗಳ ವಿವರ ನೀಡಿದರು. ಈ ಸಂದರ್ಭದಲ್ಲಿ ಕನ್ನಡ ಸಾಂಸ್ಕೃತಿಕ ಕೇಂದ್ರವು ಪ್ರತಿ ವರ್ಷ ನೀಡುವ ಕಲ್ಯಾಣ ಕಸ್ತೂರಿ ಸಾಹಿತ್ಯ ಪ್ರಶಸ್ತಿಯನ್ನು ಈ ವರ್ಷ ಧಾರವಾಡದ ಖ್ಯಾತ ಹಿರಿಯ ಸಾಹಿತಿ ವಿದ್ಯಾಧರ ಮುತಾಲಿಕ್ ದೇಸಾಯಿ ಯವರಿಗೆ ನೀಡಿ ಗೌರವಿಸಲಾಯಿತು. ಹಾಗೂ ಸಂಘದ ಹಿರಿಯ ಸದಸ್ಯ ಕಲ್ಯಾಣ್ ನ ಹೋಟೆಲು ಉದ್ಯಮಿ ಶ್ರೀ ಜಯ ಕೆ. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಪ್ರಶಸ್ತಿ ಸ್ವೀಕೃತರು ಹಾಗೂ ಸನ್ಮಾನಿತರು ತಮ್ಮ ಅನಿಸಿಕೆ ತಿಳಿಸಿದರು.. ಅತಿಥಿ ,ಅಭ್ಯಾಗತರು ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ಉಪಸ್ಥಿತರಿದ್ದ ಗಣ್ಯರನ್ನು, ದಾನಿಗಳನ್ನು,ಸಹಕಾರ ನೀಡಿದವರನ್ನು ಗೌರವಿಸಲಾಯಿತು.
ಭಕ್ತಿ ಗೀತೆ ಸ್ಪರ್ಧೆಯಲ್ಲಿ ನವೋದಯ ಕನ್ನಡ ಸಂಘ ಥಾಣೆ ಮೊದಲ ಬಹುಮಾನ, ಕಲ್ಯಾಣ್ ಕರ್ನಾಟಕ ಸಂಘ ಎರಡನೇ ಬಹುಮಾನ ಹಾಗೂ ಶ್ರೀ ಮಹಾವಿಷ್ಣು ಭಜನಾ ಮಂಡಳಿ ದೊಂಬಿವಲಿ 3ನೆ ಬಹುಮಾನ ಗಳಿಸಿತು. ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿಸ ರಂಗ ನಟರು, ಕಂಠದಾನ ಕಲಾವಿದರೂ ಆದ ಅವಿನಾಶ್ ಕಾಮತ್ ಮತ್ತು ಸುರೇಂದ್ರ ಮಾರ್ನಾಡ್ ಅವರನ್ನು ಗೌರವಿಸಲಾಯಿತು. ಜ್ಯೋತಿ ಕುಂಠಿಣಿ ಅಧ್ಯಕ್ಷೀಯ ನುಡಿಗಳನ್ನಾಡಿದರು., ಗೌ. ಅಧ್ಯಕ್ಷರಾದ ಮಂಜುನಾಥ್ ಎನ್. ರೈ., ಗೌ.ಪ್ರ. ಕಾರ್ಯದರ್ಶಿ ಕುಂಠಿನಿ ಪ್ರಕಾಶ್ ಹೆಗ್ಡೆ, ಗೌ. ಕೋಶಾಧಿಕಾರಿ ಪ್ರಕಾಶ್ ಎಸ್. ನಾಯ್ಕ್, ಜೊತೆ ಕಾರ್ಯದರ್ಶಿ ಶ್ರೀಮತಿ ಕುಮುದಾ ಡಿ. ಶೆಟ್ಟಿ, ಜೊತೆ ಕೋಶಾಧಿಕಾರಿ ಚೆನ್ನವೀರಪ್ಪ ಅಡಿಗಣ್ಣವರ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಭಾರತಿ ಬಿ. ಶೆಟ್ಟಿ, ಸಾಂಸ್ಕೃತಿಕ -ಸಾಹಿತ್ಯ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಸರೋಜಾ ಎಸ್. ಅಮಾತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸರೋಜ ಅಮಾತಿ ಕಾರ್ಯಕ್ರಮ ನಿರೂಪಿಸಿದರು, ಶೋಭಾ ಅರುಣ್ ಶೆಟ್ಟಿ, ಕುಮುದ ಶೆಟ್ಟಿ , ಸುಜಾತಾ ಶೆಟ್ಟಿ ಸಹಕರಿಸಿದರು. ಕಾರ್ಯದರ್ಶಿ ಪ್ರಕಾಶ್ ಕುಂಠಿನಿ ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು. ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್ ನ 21ನೇ ವಾರ್ಷಿಕೋತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವದ ಆಚರಣೆಯ ಅಂಗವಾಗಿ ನಡೆದ, ಸಮೂಹ ಭಕ್ತಿ ಗೀತಾ ಸ್ಪರ್ಧೆ, ನ್ರತ್ಯ, ಸಂಗೀತ ಹಾಗೂ ಇತರ ಮನರಂಜನಾ ಕಾರ್ಯಕ್ರಮ ಸೇರಿದ್ದ ಕನ್ನಡಿಗರನ್ನು ರಂಜಿಸಿತು. ಅಧ್ಯಕ್ಷರಾದ ಜ್ಯೋತಿ ಪ್ರಕಾಶ್ ಕುಂಠಿಣಿ ಅವರ ಮುಂದಾಳತ್ವದಲ್ಲಿ ,ಪದಾಧಿಕಾರಿಗಳ, ಕಾರ್ಯಕಾರಿ ಸಮಿತಿಯ ಸದಸ್ಯರ, ಮಹಿಳಾ ವಿಭಾಗದವಾರ, ಮಾಜಿ ಪದಾಧಿಕಾರಿಗಳ, ದಾನಿಗಳ ಸಹಕಾರದಿಂದ ಕನ್ನಡ ಭಾಷೆ, ಸಂಸ್ಕೃತಿಯ ಬೆಳವಣಿಗೆಗೆ ಮಹತ್ತರ ಕೊಡುಗೆ ಸಲ್ಲಿಸುತ್ತಿದೆ.