April 2, 2025
ಮಹಾರಾಷ್ಟ್ರ

ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್, 21 ನೇ ವಾರ್ಷಿಕೋತ್ಸವ, ಕರ್ನಾಟಕ ರಾಜ್ಯೋತ್ಸವ ಅಚರಣೆ

ಭಾಷೆಯ ಅಧಾರದಲ್ಲಿ ಗುಂಪುಗಾರಿಕೆಗೆ ಆಸ್ಪದ ನೀಡದೆ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸೋಣ – ಜ್ಯೋತಿ ಪ್ರಕಾಶ್ ಹೆಗ್ಡೆ

ಕಲ್ಯಾಣ್ ನ.20: ಕರ್ನಾಟಕ ರಾಜ್ಯದಲ್ಲಿ ಭಿನ್ನ, ವಿಭಿನ್ನವಾದ ಸಂಸ್ಕೃತಿ, ಭಾಷೆ, ಕಲೆಗಳಿದ್ದರೂ ಜಾತಿ, ಧರ್ಮ, ಭಾಷೆಯ ಅಧಾರದಲ್ಲಿ ಗುಂಪುಗಾರಿಕೆಗೆ ಆಸ್ಪದ ನೀಡದೆ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸೋಣ ಆರು ವರ್ಷದಿಂದ ಕನ್ನಡ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷೆಯಾಗಿ ಮುಂದಿನ ಯೋಜನೆಗೆ ಒಂದಿಷ್ಟು ಧನ ಸಂಗ್ರಹಿಸುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂಬ ಅಭಿಮಾನವಿದೆ ಈ ಕಾರ್ಯಕ್ಕೆ ನನಗೆ ಸಹಕಾರ ನೀಡಿದ ಕಾರ್ಯಕಾರಿ ಸಮಿತಿ, ದಾನಿಗಳಿಗೆ ಹಾಗೂ ನನಗೆ ಸದಾ ಪ್ರೋತ್ಸಾಹ ನೀಡಿದ ನನ್ನ ಪತಿ ಪ್ರಕಾಶ್ ಕುಂಠಿನಿಗೆ ನಾನಾಉ ಸದಾ ಚಿರ ಋಣಿ ನಾನು ಅಧ್ಯಕ್ಷೆಯಾಗಿ ನನ್ನ ಕರ್ತವ್ಯವನ್ನು ಮಾಡಿದ್ದೇನೆ ಎಂಬ ತೃಪ್ತಿ ನನಗಿದೆ ಎಂದು ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್, ಇದರ ಅಧ್ಯಕ್ಷೆ ಜ್ಯೋತಿ ಪ್ರಕಾಶ್ ಕುಂಠಿನಿ ನುಡಿದರು.


ಅವರು ನ.19 ಸಂಜೆ ಮ್ಯಾಕ್ಸಿ ಗ್ರೌಂಡ್ ಸಮೀಪದ ಮಾತೋಶ್ರೀ ಸಭಾಗ್ರಹದಲ್ಲಿ ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್ ಇದರ 21 ನೇ ವಾರ್ಷಿಕೋತ್ಸವ ಮತ್ತು ಕರ್ನಾಟಕ ರಾಜ್ಯೋತ್ಸವ ಅಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿ ಶ್ರೀದೇವಿ ರಾವ್ ಮಾತನಾಡುತ್ತಾ ಕನ್ನಡದ ಅಭಿಮಾನಿಗಳಾದ ನಾವೆಲ್ಲರೂ ಸೇರಿ ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್ ನನ್ನು ಪೋಷಿಸಿ ಬೆಳೆಸೋಣಾ ಕನ್ನಡ ಭಾಷೆಯ ಮೇಲಿನ ಅಭಿಮಾನದಿಂದಾಗಿ ಅಂಗ್ಲ ಮಾಧ್ಯಮ ಶಾಲೆಯನ್ನು ಬಿಟ್ಟು ಕನ್ನಡ ಮಾಧ್ಯಮ ಶಾಲೆಗೆ ಸೇರಿದವಳು ಸಾಂಸ್ಕೃತಿಕ ಕೇಂದ್ರಕ್ಕೆ ಕನ್ನಡ ಶಾಲೆ ಹಾಗೂ ಕನ್ನಡ ಭಾಷೆಯ ಮೇಲಿರುವ ಅಭಮಾನ ಕಂಡು ಅತೀವ ಸಂತೋಷವಾಗಿದೆ ಎಂದರು.
ಗೌರವ ಅತಿಥಿ ಥಾಣೆ ಬಂಟ್ಸ್ ಅಸೋಸಿಯೇಷನ್ ನ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಕುಶಲ ನವೀನ್ ಶೆಟ್ಟಿ ಮಾತನಾಡುತ್ತಾ ನಾನು ಮಹಾನಗರದಲ್ಲಿ ಹುಟ್ಟಿ ಬೆಳೆದವಳು ಅಂಗ್ಲ ಮಾಧ್ಯಮದಲ್ಲಿ ಕಲಿತದ್ದರಿಂದ ಕನ್ನಡ ಭಾಷೆಯ ಜ್ಞಾನವಿಲ್ಲ. ಕನ್ನಡ ಸಾಂಸ್ಕೃತಿಕ ಕೇಂದ್ರದ ಕಾರ್ಯ ವೈಖರಿಯನ್ನು ಕೇಳಿ ತಿಳಿದ್ದಿದ್ದೇನೆ ಹಾಗೂ ಇಂದು ಸಮೂಹ ಗೀತೆಯನ್ನು ಕೇಳಿ ಅತೀವ ಸಂತೋಷವಾಗಿದೆ. ಕನ್ನಡ ಭಾಷೆ, ಕನ್ನಡ ಶಾಲೆ ಹಾಗೂ ವಿದ್ಯಾರ್ಥಿಗಳಿಗೆ ನೀಡು ತ್ತಿರುವ ಪ್ರೋತ್ಸಾಹ ನೋಡಿ ಬಹಳ ಸಂತೋಷವಾಗಿದೆ. ಸಂಸ್ಥೆ ಶೈಕ್ಷಣಿಕ ಸಹಾಯ ನೀಡಿದಾಗ ವಿದ್ಯಾರ್ಥಿ ಕಲಿತು ಉತ್ತಮ ಉದ್ಯೋಗ ಪಡೆದೆದಾಗ ಒಂದು ಕುಟುಂಬ ಉದ್ಧಾರವಾಗುತ್ತದೆ ಇಂತಹ ಕಾರ್ಯ ನಿರಂತರ ನಡೆಯುತ್ತಿರಲಿ ನಿಮ್ಮ ಕಾರ್ಯ ಚಟುವಟಿಕೆಗಳು ಇತರ ಕನ್ನಡ ಸಂಘ , ಸಂಸ್ಥೆಗಳಿಗೆ ಮಾದರಿ ನನ್ನ ಸಹಕಾರ ಈ ಸಂಸ್ಥೆಗೆ ಸದಾ ಇದೆ ಎಂದರು.


ಗೌರವ ಅತಿಥಿ ಕನ್ನಡ ಸೇವಾ ಸಂಘ ಪೊವಾಯಿ ಇದರ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಪ್ರಶಾಂತಿ ಶೆಟ್ಟಿ ಮಾತನಾಡುತ್ತಾ ಮಹಾನಗರದಲ್ಲಿ ಚಿಣ್ಣರ ಬಿಂಬ ಇರುವ ವರೆಗೆ ಮಹಾನಗರದಲ್ಲಿ ಕನ್ನಡ ಭಾಷೆ ಅಳಿಯಲು ಸಾಧ್ಯವಿಲ್ಲ ಸಾಂಸ್ಕೃತಿಕ ಕೇಂದ್ರದ ಕಾರ್ಯ ಚಟುವಟಿಕೆಗಳನ್ನು ಕಂಡು ಸಂತೋಷವಾಗಿದೆ ನಮ್ಮ ಪವಾಯಿ ಕನ್ನಡ ಸೇವಾ ಸಂಘವು ಪರಿಸರದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ ನೀಡಿ ವಿದ್ಯಾರ್ಥಿ ಗಳನ್ನು ಹುರಿದುಂಬಿಸುವ ಕಾರ್ಯವನ್ನು ಮಾಡುತ್ತದೆ. ಇಂದು ಈ ವೇದಿಕೆಯಲ್ಲಿ ಉತ್ತಮ ಕಾರ್ಯಕ್ರಮ ನಡೆದಿದೆ ಎಂದರು.


ಇದೇ ಸಂಧರ್ಬದಲ್ಲಿ ಖ್ಯಾತ ಹಿರಿಯ ಸಾಹಿತಿ, ವಿದ್ಯಾಧರ ಮುತಾಲಿಕ್ ದೇಸಾಯಿ ಇವರನ್ನು ಕಲ್ಯಾಣ ಕಸ್ತೂರಿ ಸಾಹಿತ್ಯ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದರೆ ಹೋಟೆಲ್ ಉದ್ಯಮಿ, ಸಂಸ್ಥೆಯ ಹಿರಿಯ ಸದಸ್ಯರಾದ ಜಯ ಕೆ. ಶೆಟ್ಟಿಯವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಹಾಗೂ ಇದೇ ಸಂದರ್ಭದಲ್ಲಿ ನಗರದ ವಿವಿಧ ಸಂಘ- ಸಂಸ್ಥೆಗಳಿಂದ ಸಮೂಹ ಕನ್ನಡ ಭಕ್ತಿ ಗೀತೆ ಗಾಯನ ಸ್ಪರ್ಧೆ ನಡೆಯಿತು ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ನವೋದಯ ಕನ್ನಡ ಸಂಘ ಥಾಣೆ ದ್ವೀತಿಯ ಬಹುಮಾನ ಕರ್ನಾಟಕ ಸಂಘ ಕಲ್ಯಾಣ್,ತೃತೀಯ ಬಹುಮಾನ ಮುಂಬ್ರಾ ಮಿತ್ರ ಭಜನಾ ಮಂಡಳಿ ಸಂಚಾಲಿತ ಮಹಾ ವಿಷ್ಣು ಮಂದಿರ ಡೊಂಬಿವಲಿ ಪಡೆಯಿತು.
ತೀರ್ಪುಗಾರರಾಗಿ ಸುರೇಂದ್ರ ಕುಮಾರ್ ಮಾರ್ನಾಡ್, ಅವಿನಾಶ್ ಕಾಮತ್ ಸಹಕರಿಸಿದರು.
ಸಂಘ, ಸಂಸ್ಥೆಯ ಪದಾಧಿಕಾರಿಗಳನ್ನು, ದಾನಿಗಳನ್ನು ಪುಷ್ಪ ಗೌರವ ನೀಡಿ ಸತ್ಕರಿಸಲಾಯಿತು.


ಜಯಶ್ರೀ ಶೆಟ್ಟಿಯವರ ಪ್ರಾರ್ಥನೆಯೊಂದಿಗೆ ಹಾಗೂ ಸದಸ್ಯೆಯರ ನಾಡ ಗೀತೆಯೊಂದಿಗೆ ವೇದಿಕೆಯ ಮೇಲಿದ್ದ ಗಣ್ಯರು ದೀಪ ಪ್ರಜ್ವಲಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ವೇದಿಕೆಯ ಮೇಲೆ ಜ್ಯೋತಿ ಪ್ರಕಾಶ್ ಕುಂಠಿನಿ, ಶ್ರೀದೇವಿ ಸಿ. ರಾವ್, ಕುಶಲ ನವೀನ್ ಶೆಟ್ಟಿ, ಪ್ರಾಶಾಂತಿ ಡಿ. ಶೆಟ್ಟಿ, ಭಾರತಿ ಶೆಟ್ಟಿ, ಪ್ರಕಾಶ್ ಕುಂಠಿನಿ, ಕುಮುದ ಶೆಟ್ಟಿ, ಚನ್ನವೀರಪ್ಪ ಅಡಿಗಣ್ಣವರ್ ಮೊದಲಾದವರು ಉಪಸ್ಥಿತರಿದ್ದರು.
ಸರೋಜ ಅಮಾತಿ,ಶೋಭಾ ಎ. ಶೆಟ್ಟಿ, ಸುಜಾತ ಶೆಟ್ಟಿ, ಕುಮುದಾ ಶೆಟ್ಟಿ, ಪ್ರಕಾಶ್ ಕುಂಠಿನಿ ಅತಿಥಿ ಗಣ್ಯರನ್ನು ಪರಿಚಯಿಸಿದರು, ಸಂಸ್ಥೆಯ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಪ್ರಕಾಶ್ ಕುಂಠಿನಿ ನೀಡಿದರೆ ಮಹಿಳಾ ವಿಭಾಗದ ವಾರ್ಷಿಕ ವರದಿಯನ್ನು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಭಾರತಿ ಶೆಟ್ಟಿ ನೀಡಿದರು
ಸರೋಜ ಅಮಾತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸನ್ಮಾನಿತರ ಮಾತು :-

ಯಾವುದೇ ಕಾರ್ಯಕ್ರಮ ಮಾಡಲು ಬಹಳಷ್ಟು ಶ್ರಮವಹಿಸ ಬೇಕಾಗುತ್ತದೆ. ಒಂದು ತಂಡ ಕಾರ್ಯಕ್ರಮದ ಜವಬ್ದಾರಿ ವಹಿಸುತ್ತದೆ ದಾನಿಗಳ ಮೂಲಕ ದನ ಸಂಗ್ರಹಿಸಿ ಕಾರ್ಯಕ್ರಮ ಮಾಡುವ ತಂಡದ ನಾಯಕನನ್ನು ಅತನ ಚತುರತೆಯನ್ನು ಇಂದು ಕೇಂದ್ರದಲ್ಲಿ ನಾನು ಕಂಡೆ ಪ್ರಕಾಶ್ ಕುಂಠಿನಿ ಈ ಸಂಸ್ಥೆಯನ್ನು ಬಹಳ ಎತ್ತರಕ್ಕೆ ಬೆಳೆಸಿದ್ದಾರೆ ಎಂದರೆ ತಪ್ಪಾಗಲಾರದು. ಕರ್ನಾಟಕ ನನ್ನ ಜನ್ಮ ಭೂಮಿ ಮಹಾರಾಷ್ಟ್ರ ನನ್ನ ಕರ್ಮ ಭೂಮಿ ನನಗೆ ಅನ್ನ ಕೊಟ್ಟ ಈ ಭೂಮಿಯಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯವರು ಮಾಡುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಕನ್ನಡವನ್ನು ಭದ್ರ ಪಡಿಸುವ ಕಾರ್ಯ ಹೊರನಾಡ ಕನ್ನಡಿಗರಿಂದ ಅಗುತ್ತಿದೆ ಎಂದು ನಾವು ಅಭಿಮಾನದಿಂದ ಹೇಳ ಬಲ್ಲೆವು ನಾವು ಮಾಡುತ್ತಿರುವ ಕಾರ್ಯವನ್ನು ಮಕ್ಕಳಿಗೆ ತಿಳಿಸಿ ಮತ್ತು ಅವರನ್ನು ಈ ಕಾರ್ಯದಲ್ಲಿ ಸೇರಿಸಿಕೊಂಡಾಗ ಕನ್ನಡ ಉಳಿದು ಬೆಳೆಯ ಬಹುದು ನಾವೆಲ್ಲರೂ ನಮ್ಮ ಭಿನ್ನಾಭಿಪ್ರಾಯ ಬದಿಗಿಟ್ಟು ಕನ್ನಡದ ತೇರನ್ನು ಏಳೆಯೋಣಾ _– ವಿದ್ಯಾಧರ ಮುತಾಲಿಕ್ ದೇಸಾಯಿ
(ಕಲ್ಯಾಣ ಕಸ್ತೂರಿ ಪ್ರಶಸ್ತಿ ವಿಜೇತ)


ಕನ್ನಡ ಭಾಷೆ, ಸಂಸ್ಕೃತಿಯನ್ನು ಬೆಳೆಸುವು ಈ ಸಂಸ್ಥೆಯ ನಾನೋರ್ವ ಸಾಮನ್ಯ ಸದಸ್ಯ, ಕಲ್ಯಾಣ್ ಪರಿಸರದಲ್ಲಿ ಪ್ರಕಾಶ್ ಕುಂಠಿನಿ ದಂಪತಿ ಶ್ರೇಷ್ಠ ಸಮಾಜ ಸೇವಕರಲ್ಲಿ ಒರ್ವರು ಇವರು ಕೇಂದ್ರದೊಂದಿಗೆ ಬಂಟರ ಸಂಘದಲ್ಲೂ ಸಮಾಜ ಸೇವೆ ಮಾಡುತ್ತಿದ್ದಾರೆ ಹೊರನಾಡಿನಲ್ಲಿ ಕನ್ನಡದ ತೇರನ್ನು ಎಳೆಯುವ ಈ ಸಂಸ್ಥೆಯ ಕಾಯಕ ನಿಜವಾಗಿಯೂ ಶ್ಲಾಘನೀಯ
— ಜಯ ಕೆ. ಶೆಟ್ಟಿ ( ಹಿರಿಯ ಸದಸ್ಯರು)

ತೀರ್ಪುಗಾರರ ಅನಿಸಿಕೆ :-

ಇಂದು ಹತ್ತು ತಂಡ ಸ್ಪರ್ಧೆಯಲ್ಲಿ ಭಾಗವಹಿಸಿದೆ. ಇಂದು ಸಾಂಸ್ಕೃತಿಕ ಕೇಂದ್ರಕ್ಕೆ ಗಾಯನ ಸ್ಪರ್ಧೆಯ ವಿಟಮಿನ್ ನೀಡಿದ ಈ ಎಲ್ಲಾ ತಂಡ ವೀಜೆತ ಈ ವೇದಿಕೆಯಲ್ಲಿ ಉತ್ತಮ ಕಾರ್ಯಕ್ರಮ ಜರಗಿದೆ ನಾವು ಪ್ರಾಮಾಣಿಕವಾಗಿ ಎಲ್ಲಾ ತಂಡಕ್ಕೆ ನ್ಯಾಯ ನೀಡಿದ್ದೇವೆ — ಸುರೇಂದ್ರ ಕುಮಾರ್ ಮಾರ್ನಾಡ್

ಚಿತ್ರ ವರದಿ : ರವಿ.ಬಿ.ಅಂಚನ್ ಪಡುಬಿದ್ರಿ

Related posts

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ 58.25% ಮತದಾನ : ​ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರುತ್ತಾ ಬಿಜೆಪಿ ಮೈತ್ರಿಕೂಟ?; ಎಕ್ಸಿಟ್​ ಪೋಲ್​ನಲ್ಲಿ ಮಹಾಯುತಿಗೆ ಮುನ್ನಡೆ

Mumbai News Desk

ಬೊಯಿಸರ್ ಸಾರ್ವಜನಿಕ ಗಣೇಶೋತ್ಸವ ಮಂಡಲದ 100 ನೆಯ ವರ್ಷದ ಸಂಭ್ರಮಾಚರಣೆ.

Mumbai News Desk

ಡಿ. 5ರಂದು ಮಹಾಯುತಿ ಸರಕಾರ ಪ್ರಮಾಣ ವಚನ ಸ್ವೀಕಾರ – ಬಿಜೆಪಿ ಘೋಷಣೆ

Mumbai News Desk

ಮುಂಬೈನಲ್ಲಿ ಟೋಲ್ ಇಲ್ಲ; ಮಹಾರಾಷ್ಟ್ರ ಸರ್ಕಾರದಿಂದ ಘೋಷಣೆ; ಲಕ್ಷಾಂತರ ವಾಹನ ಸವಾರರಿಗೆ ಅನುಕೂಲ

Mumbai News Desk

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಶಿವಸೇನಾ ನೇತಾರ ಮನೋಹರ್ ಜೋಷಿ ವಿಧಿವಶ

Mumbai News Desk

ಬೊಯಿಸರ್   ಶ್ರೀ ಸೋಮೇಶ್ವರ ಮಂದಿರದಲ್ಲಿ 15ನೇ ವಾರ್ಷಿಕ ಮಹಾಪೂಜೆ, ಸಂಪನ್ನ,

Mumbai News Desk