
ಚಿಣ್ಣರ ಬಿಂಬ ಮುಂಬಯಿ ಇದರ ನೈರುತ್ಯ ವಲಯದ ಮಕ್ಕಳ ಉತ್ಸವ ಹಾಗೂ ಪ್ರತಿಭಾ ಸ್ಪರ್ಧೆಯು ನವೆಂಬರ್ 26 ರಂದು ರವಿವಾರದಂದು ಬೆಳಿಗ್ಗೆ 8:30 ರಿಂದ ಸಾಂತಕ್ರೂಜ್ ಪೂರ್ವದ ಪೇಜಾವರ ಮಠದಲ್ಲಿ ನಡೆಯಲಿದೆ.
ಚಿಣ್ಣರ ಬಿಂಬವು ಚಿಣ್ಣರ ಸರ್ವತೋಮುಖ ಬೆಳವಣಿಗೆಗೆ ಮತ್ತು ವ್ಯಕ್ತಿತ್ವ ವಿಕಸನದ ಮಹತ್ಕಾರ್ಯದಲ್ಲಿ ಯಶಸ್ವಿಯಾಗಿದೆ.
ಮಕ್ಕಳ ಉತ್ಸವವನ್ನು ಕಾಂದಿವಲಿ ಅವಿನ್ಯೂ ಹೋಟೆಲ್ ನ ಮಾಲಕರಾದ ಶ್ರೀಯುತ ಬೋಳ ರಘುರಾಮ ಶೆಟ್ಟಿ ಅವರು ಉದ್ಘಾಟಿಸಲಿದ್ದಾರೆ. ಪೇಜಾವರ ಮಠದ ಪ್ರಬಂಧಕರಾದ ವಿದ್ವಾನ್ ರಾಮದಾಸ ಉಪಾಧ್ಯಾಯ ಅವರು ಆಶೀರ್ವಚನ ನೀಡಲಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿಣ್ಣರಬಿಂಬ ಸಂಸ್ಥೆಯ ರೂವಾರಿ ಶ್ರೀಯುತ ಪ್ರಕಾಶ್ ಭಂಡಾರಿ ಅವರ ಅಧ್ಯಕ್ಷತೆ ಹಾಗೂ ಮಾರ್ಗದರ್ಶನದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಮುಖ್ಯಅತಿಥಿಯಾಗಿ ಅಜಂತ ಕ್ಯಾಟರಸ್ ನ ಮಾಲಕರಾದ ಶ್ರೀ ಜಯರಾಮ್ ಶೆಟ್ಟಿ ಹಾಗೂ ಗೌರವಾನ್ವಿತ ಅತಿಥಿಯಾಗಿ ಮೆಟ್ರೋ ಪೋಲಿಸ್ ಇನ್ ಹೋಟೆಲಿನ ಆಡಳಿತ ನಿರ್ದೇಶಕರಾಗಿರುವ ಶ್ರೀ ಪ್ರವೀಣ್ ಶೆಟ್ಟಿ ಮತ್ತು ರೈ ಸುಮತಿ ಎಜುಕೇಶನಲ್ ಟ್ರಸ್ಟ್ , ಸೈಂಟ್ ಆಗ್ನೆಸ್ ಇಂಗ್ಲಿಷ್ ಹೈಸ್ಕೂಲ್, ಕೆ. ಎಸ್. ಮೆಹ್ತಾ ಸ್ಕೂಲ್ ಮತ್ತು ಜೂನಿಯರ್ ಕಾಲೇಜಿನ ಕಾರ್ಯಾಧ್ಯಕ್ಷರಾಗಿರುವ ಶ್ರೀ ಅರುಣೋದಯರೈ ಬಿಳಿಯೂರುಗುತ್ತು ಇವರು ಆಗಮಿಸಲಿದ್ದಾರೆ .

ಸಂಜೆ 4:30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಬಂಟ್ಸ್ ಸಂಘ ಮುಂಬಯಿ ಮಹಿಳಾ ವಿಭಾಗದ Ex- Chairperson ಆಗಿರುವ ಶ್ರೀಮತಿ ಲತಾ ಜಯರಾಮ್ ಶೆಟ್ಟಿ ಯವರು ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಲಿದ್ದಾರೆ. ಇಕ್ವಿಟಿ ಹೋಟೆಲ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕರಾಗಿರುವ ಶ್ರೀಯುತ ಗೋಪಾಲ್ ಪುತ್ರನ್ ಅವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಸ್ವಾಗತ ಹೋಟೆಲ್ ನ ಮಾಲಕರಾದ ಶ್ರೀ ಮಹೇಶ್ ಶೆಟ್ಟಿ , ಗೌರವಾನ್ವಿತ ಅತಿಥಿಗಳಾಗಿ ಮೀರಾ ಬೈಂದರ್ ಮಹಾನಗರ ಪಾಲಿಕೆಯ ಮಾಜಿ ನಗರಸೇವಕರಾದ ಶ್ರೀ ಅರವಿಂದ್ ಆನಂದ್ ಶೆಟ್ಟಿ, ಹಾಗೂ ವಸಯಿ-ದಾ ಹಣು ಪ್ರಾದೇಶಿಕ ಸಮಿತಿ ಬಂಟ್ಸ್ ಸಂಘ ಮುಂಬೈ ಇದರ ಉಪಾಧ್ಯಕ್ಷರಾಗಿರುವ ಶ್ರೀ ಮಂಜುನಾಥ್ ಶೆಟ್ಟಿ ಕೊಡ್ಲಾಡಿ ಅವರು ಆಗಮಿಸಲಿದ್ದಾರೆ.
ಪೇಜಾವರ, ಮೀರಾರೋಡ್, ಭಾಯಂದರ್, ಕಾಂದಿವಲಿ,ಮಲಾಡ್ ಮತ್ತು ಗೋರೆಗಾಂವ್ ಶಿಬಿರಗಳ ವಿಜೇತ ಚಿಣ್ಣರ ನಡುವೆ ವಲಯ ಮಟ್ಟದ ವಿವಿಧ ಸ್ಪರ್ಧೆಗಳು ನಡೆಯಲಿವೆ. ಭಾವಗೀತೆ , ಜಾನಪದ ಗೀತೆ , ಚರ್ಚಾ ಸ್ಪರ್ಧೆ, ಪಾಲಕರ ಸಮೂಹ ಗಾಯನ, ಕಿರು ನಾಟಕ, ಮತ್ತು ಜ್ಞಾನಪದ ನೃತ್ಯ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಲಿದೆ.
ತಾಯ್ನಾಡ ನಡೆ ನುಡಿ ,ಸಂಸ್ಕೃತಿ ಸಂಸ್ಕಾರ ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವ ಅತ್ಯುತ್ತಮ ಧ್ಯೇಯವನ್ನು ಹೊಂದಿರುವ ಚಿಣ್ಣರ ಬಿಂಬ ಸಂಸ್ಥೆಯು ಈ ಪ್ರತಿಭಾನ್ವೇಷಣೆ ಸಮಾರಂಭವನ್ನು ಆಯೋಜಿಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ತುಳು ಕನ್ನಡಿಗರು ಭಾಗವಹಿಸಿ ಚಿಣ್ಣರನ್ನು ಪ್ರೋತ್ಸಾಹಿಸುವಂತೆ ಚಿಣ್ಣರ ಬಿಂಬದ ಪ್ರಕಟಣೆಯಲ್ಲಿ ತಿಳಿಸಲಾಗಿದೆ .