24.7 C
Karnataka
April 3, 2025
ಸುದ್ದಿ

ಜಗದಂಬ ಯುವ ವಿಭಾಗದ ವತಿಯಿಂದ ಮಕ್ಕಳಿಗೆ ಶೈಕ್ಷಣಿಕ ಪರಿಕರ ವಿತರಣೆ.



ಡೊಂಬಿವಲಿ ಪಶ್ಚಿಮದ ಯಕ್ಷ ಕಲಾ ಸಂಸ್ಥೆ ಸಂಚಾಲಿತ ಶ್ರೀ ಜಗದಂಬ ಮಂದಿರದ ಯುವ ವಿಭಾಗದ ಜಗದಂಬಾ ಯುವಕರ ಕಾಳಜಿಯ ಹೃದಯಗಳು ಈ ವಾರ್ಷಿಕ ದೀಪಾವಳಿಯ ಚಾರಿಟಿ ಉಪಕ್ರಮದ ಅಂಗವಾಗಿ ಮುರ್ಬಾದ್ನ ತುಲೈ ತಾಲ್ಲೂಕಿನ ಕಲಂಬೆ ಪೋಸ್ಟ್ನಲ್ಲಿರುವ ಬೊಂಡ್ಖಲ್ವಾಡಿ ಪ್ರಾಥಮಿಕ ಶಾಲೆಗೆ ನವೆಂಬರ್ 19 ರ ಭಾನುವಾರ ಬೆಳಿಗ್ಗೆ ಭೇಟಿ ನೀಡಿ ಶಿಶುವಿಹಾರದಿಂದ 5 ನೇ ತರಗತಿಯವರೆಗಿನ ಸುಮಾರು 70ಕ್ಕೂ ಅಧಿಕ ಮಕ್ಕಳಿಗೆ ವಿವಿಧ ಅಗತ್ಯದ ವಸ್ತುಗಳನ್ನು , ಮಕ್ಕಳಿಗೆ ಶೈಕ್ಷಣಿಕ ಪರಿಕರಗಳಾದ ಪೇಪರ್, ನೋಟ್ ಬುಕ್ ಗಳು, ಪೆನ್ನು, ಪೆನ್ಸಿಲ್, ಡ್ರಾಯಿಂಗ್ ಪುಸ್ತಕ, ಕಲರಿಂಗ್ ಸಾಮಗ್ರಿಗಳು, ಶಾಲಾ ಬ್ಯಾಗ್ ಗಳು, ವೈಟ್ ಬೋರ್ಡ್ ಗಳು, ಫಲಕಗಳು, ಮತ್ತು ಇನ್ನಿತರ ವಸ್ತುಗಳನ್ನು ನೀಡಿ ಆ ದಿನದ ಊಟೋಪಚಾರದ ವ್ಯವಸ್ಥೆಯನ್ನು ಮಾಡಿ ಆ ಮಕ್ಕಳ ಜೇವನದಲ್ಲಿ ದೀಪಾವಳಿಯ ಬೆಳಕಿನ ಮಂದಹಾಸವನ್ನು ಚೆಲ್ಲಿದ್ದಾರೆ.

ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರಸಾದ್ ದೇವಾಡಿಗ, ಸದಸ್ಯರುಗಳಾದ ವಿನೀಶ್ ದೇವಾಡಿಗ, ಅಕ್ಷಯ್ ಶೆಟ್ಟಿ, ಕಿರಣ್ ಪೂಜಾರಿ, ರತನ್ ಪೂಜಾರಿ, ಸಚಿನ್ ದೇವಾಡಿಗ ಮತ್ತಿತರ ಸದಸ್ಯರು ಈ ಕಾರ್ಯದಲ್ಲಿ ಭಾಗಿಯಾದರು. ಮಂದಿರದ ಗೌರವ ಪ್ರಧಾನ ಕಾರ್ಯದರ್ಶಿ ರಾಜೇಶ್ ಕೋಟ್ಯಾನ್, ಜೊತೆ ಕಾರ್ಯದರ್ಶಿ ಸಚಿನ್ ಪೂಜಾರಿ, ಜೊತೆ ಕೋಶಾಧಿಕಾರಿ ಸಂತೋಷ್ ಶೆಟ್ಟಿ, ದಿನೇಶ್ ಪೂಜಾರಿ ಮೊದಲಾದವರು ಈ ಕಾರ್ಯಕ್ರಮಕ್ಕೆ ಬೆನ್ನೆಲುಬಾಗಿ ಸಹಕರಿಸಿದರು.

ಶ್ರೀ ಜಗದಂಬ ಮಂದಿರದ ಗೌರವ ಅಧ್ಯಕ್ಷರು, ಅಧ್ಯಕ್ಷರು ಹಾಗೂ ಕಾರ್ಯಕಾರಿ ಮಂಡಳಿಯ ಸಂಪೂರ್ಣ ಸಹಕಾರ ದಿಂದ ಈ ಹಿಂದೆಯೂ ಹಲವಾರು ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಭೇಟಿ ನೀಡಿ ಅವರೊಂದಿಗೆ ಸಮಯ ಕಳೆದು, ಅವರ ಅಗತ್ಯತೆಗಳನ್ನು ಪೂರೈಸಲು ಸದಾ ಶ್ರಮಿಸುತ್ತಿರುವ ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರಸಾದ ದೇವಾಡಿಗ ಹಾಗೂ ಬಳಗದ ಕಾರ್ಯ ಪ್ರಶಂಸನೀಯ, ಶ್ರೀ ಜಗದಂಬೆ ಮಾತೆ ಇವರಿಂದ ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ನಡೆಸುವಂತೆ ಪ್ರೇರೇಪಿಸಿ, ಅನುಗ್ರಹಿಸಲಿ, ಸಹೃದಯಿ ಬಂಧುಗಳ ಸಹಕಾರ ಇವರಿಗೆ ಸದಾ ಇರಲಿ.

Related posts

ಚಿತ್ರರಂಗದ ಮಿನುಗು ತಾರೆ ರೀಟಾ ಆರ್. ಅಂಚನ್ ವಿಧಿವಶ

Mumbai News Desk

ಪ್ರೇಕ್ಷಾ ಬಂಗೇರಾಗೆ ಎಂ. ಎಸ್. ಸಿ. ಯಲ್ಲಿ ಚಿನ್ನದ ಪದಕ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ(ರಿ.) – ವೈದ್ಯಕೀಯ ಚಿಕಿತ್ಸೆಗೆ ನೆರವು.

Mumbai News Desk

ಪುಷ್ಪ 2 ಯಶಸ್ಸಿನ ಬೆನ್ನಲ್ಲೇ ನಟ ಅಲ್ಲು ಅರ್ಜುನ್ ಬಂಧನ, ಅಭಿಮಾನಿಗಳು ಶಾಕ್

Mumbai News Desk

ಮಂಗಳೂರಿಗೊಂದು ಹೊಸ ರಂಗ ಮಂದಿರ – ಕಲಾಗ್ರಾಮದ ಉದ್ಘಾಟನಾ ಸಮಾರಂಭ

Mumbai News Desk

ಕಾಂಗ್ರೆಸ್ ಗೆ ಕೈ ಕೊಟ್ಟ ಜಗದೀಶ್ ಶೆಟ್ಟರ್ ಮರಳಿ ಬಿಜೆಪಿಗೆ

Mumbai News Desk