
ಪೇಜಾವರ ಅಧೋಕ್ಷಜ ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಇಂದು 24/11/2023ನೇ ಶುಕ್ರವಾರ ಕಾಪು ಶ್ರೀ ಹೊಸ ಮಾರಿಗುಡಿ ದೇವಳಕ್ಕೆ ಭೇಟಿ ನೀಡಿ ಮಾರಿಯಮ್ಮನ ದರುಶನ ಪಡೆದು ಜೀರ್ಣೋದ್ಧಾರ ಕಾರ್ಯಗಳನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು ಮಕ್ಕಳು ಅಮ್ಮನ ಸೇವೆಯನ್ನು ಹೇಗೆ ಮಾಡಬೇಕು ಎಂಬುದನ್ನು ನಾವು ಕಾಪುವಿನ ಅಮ್ಮನ ಮಕ್ಕಳನ್ನು ಕಂಡು ಅರಿತುಕೊಳ್ಳಬೇಕು “ಇದಂ ಪ್ರಥಮತಃ” ಎಂಬಂತೆ ಈ ಪರಿಯ ನೂತನವಾದ ಮಂದಿರವನ್ನು ನಾವೆಲ್ಲೂ ಕೂಡಾ ಕಂಡಿಲ್ಲ, ತಾಯಿಯ ಭಕ್ತರೂ ದೇಶ ವಿದೇಶಗಳಿಂದ ಈ ಪುಣ್ಯ ಕಾರ್ಯಕ್ಕೆ ಕೈ ಜೋಡಿಸುತ್ತಿರುವುದು ವಿಶೇಷವಾಗಿದೆ.
ನಿಗದಿತ ಸಮಯದಲ್ಲಿ ಎಲ್ಲಾ ಕಾರ್ಯಗಳು ಮುಗಿಯಲಿ ಮತ್ತು ಭಕ್ತರ ಕಷ್ಟಕಾರ್ಪಣ್ಯಗಳು ದೂರವಾಗಿ ಮನೋಭಿಲಾಷೆ ಫಲಿಸಲಿ ಎಂದು ಆಶಿಸುತ್ತೇವೆ.
ಅಭಿವೃದ್ಧಿ ಸಮಿತಿಯಲ್ಲಿ ಇನ್ನೂ ಅನೇಕ ಕಾರ್ಯಗಳು ನಡೆಯಲಿಕ್ಕಿವೆ ಬಹುದೊಡ್ಡ ಕನಸನ್ನು ನೀವೆಲ್ಲ ಹೊತ್ತಿದ್ದೀರಿ, ನಾಡಿನ ಮೂಲೆ ಮೂಲೆಯಿಂದ ತಾಯಿಯ ದೇವಳ ನಿರ್ಮಾಣಕ್ಕೆ ಸೇವೆಗಳು ಹರಿದು ಬರಲಿ. ಎಲ್ಲರಿಗೂ ತಾಯಿಯ ಆಶೀರ್ವಾದವಿರಲಿ ಎಂದರು.




ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಕೆ..ವಾಸುದೇವ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯಾ, ದೇವಳದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯಾ, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರು ಮತ್ತು ಕಾಪು ಕ್ಷೇತ್ರದ ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರು ಮತ್ತು ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರರಾದ ರತ್ನಾಕರ ಶೆಟ್ಟಿ ನಡಿಕೆರೆ, ಗೌರವಾಧ್ಯಕ್ಷರಾದ ಅನಿಲ್ ಬಳ್ಳಾಲ್ ಕಾಪು ಬೀಡು, ಉಪಾಧ್ಯಕ್ಷರಾದ ಮಾಧವ ಆರ್ ಪಾಲನ್, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕರಾದ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಆರ್ಥಿಕ ಸಮಿತಿಯ ಮುಖ್ಯ ಸಂಚಾಲಕರುಗಳಾದ ರತ್ನಾಕರ ಹೆಗಡೆ ಕಲ್ಯಾ ಬೀಡು, ರಮೇಶ್ ಶೆಟ್ಟಿ ಕಾಪು ಕೋಲ್ಯ, ಕಟ್ಟಡ ಸಮಿತಿಯ ಪ್ರಧಾನ ಸಂಚಾಲಕರಾದ ಭಗವಾನ್ ದಾಸ್ ಶೆಟ್ಟಿಗಾರ್, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಚಂದ್ರಶೇಖರ್ ಅಮೀನ್, ಕಾಪು ಪುರಸಭಾ ವ್ಯಾಪ್ತಿಯ ವಾರ್ಡ್ ಸಮಿತಿಯ ಪ್ರಧಾನ ಸಂಚಾಲಕರಾದ ಶ್ರೀಕರ ಶೆಟ್ಟಿ ಕಲ್ಯಾ , ಗ್ರಾಮ ಸಮಿತಿಯ ಮಹಿಳಾ ಸಮಿತಿಯ ಮುಖ್ಯ ಸಂಚಾಲಕರಾದ ಗೀತಾಂಜಲಿ ಸುವರ್ಣ, ಶಿಲ್ಪಾ ಜಿ. ಸುವರ್ಣ, ಕಚೇರಿ ನಿರ್ವಹಣಾ ಸಮಿತಿಯ ಪ್ರಧಾನ ಸಂಚಾಲಕರಾದ ಮಧುಕರ್ ಎಸ್, ಪ್ರಚಾರ ಸಮಿತಿಯ ಸಂಚಾಲಕರಾದ ಜಯರಾಮ ಆಚಾರ್ಯ, ಆರ್ಥಿಕ ಸಮಿತಿಯ ಶೈಲಪುತ್ರಿ ತಂಡದ ಮುಖ್ಯ ಸಂಚಾಲಕರಾದ ವಿದ್ಯಾಧರ ಪುರಾಣಿಕ್, ಸಂಚಾಲಕರುಗಳಾದ ಲಕ್ಷ್ಮೀಶ ತಂತ್ರಿ, ರವಿ ಭಟ್ ಮಂದಾರ, ಲಕ್ಷ್ಮೀನಾರಾಯಣ ತಂತ್ರಿ, ರಾಧಾರಮಣ ಶಾಸ್ತ್ರಿ, ಕಾತ್ಯಾಯಿನೀ ತಂಡದ ಮುಖ್ಯ ಸಂಚಾಲಕರಾದ ಬೀನಾ ವಿ ಶೆಟ್ಟಿ, ಬ್ರಹ್ಮಚಾರಿಣಿ ತಂಡದ ಸಂಚಾಲಕರಾದ ಶಿವಣ್ಣ ಎಸ್ ಅಂಚನ್, ಸಿದ್ದಿದಾತ್ರಿ ತಂಡದ ಸಂಚಾಲಕರಾದ ಶ್ರೀಧರ ಕಾಂಚನ್, ಜಗದೀಶ್ ಮೆಂಡನ್, ಕಾಲ ರಾತ್ರಿ ತಂಡದ ಸಂಚಾಲಕರಾದ ಶ್ರೀನಿವಾಸ ಆಚಾರ್ಯ, ಚಂದ್ರಘಂಟಾ ತಂಡದ ಮುಖ್ಯ ಸಂಚಾಲಕರಾದ ಬಿ.ಕೆ ಶ್ರೀನಿವಾಸ್, ಗುತ್ತಿಗೆದಾರರಾದ ವಿಷ್ಣುಮೂರ್ತಿ ಭಟ್, ಪ್ರಬಂಧಕರಾದ ಗೋವರ್ಧನ್ ಸೇರಿಗಾರ್, ಸಿಬ್ಬಂದಿಗಳಾದ ಲಕ್ಷ್ಮಣ್ ಶೆಟ್ಟಿ ಮಂಡೇಡಿ ಮತ್ತು ಸಂತೋಷ್ ಶೆಟ್ಟಿ ಕಳತ್ತೂರು ಉಪಸ್ಥಿತರಿದ್ದರು.