
ಮುಂಬಯಿ :ಕುಲಾಲ ಸಂಘ ಮುಂಬಯಿಯ ಮುಖವಾಣಿ ಅಮೂಲ್ಯ ಪತ್ರಿಕೆಯ ಬೆಳ್ಳಿ ಹಬ್ಬ ಸಮಾರಂಭವು ನ.5 ರಂದು ನಂದಾದೀಪ ಹೈಸ್ಕೂಲ್ ಸಭಾಗ್ರಹ, ಜಯಪ್ರಕಾಶ್ ನಗರ್, ಗೋರೆಗಾಂವ್ ಪೂರ್ವ ಇಲ್ಲಿ ದಿ. ಪಿ. ಕೆ. ಸಾಲ್ಯಾನ್ ಸ್ಮಾರಕ ವೇದಿಕೆಯಲ್ಲಿ ಜರಗಿದ್ದು ಈ ಸಂದರ್ಭದಲ್ಲಿ ಹಿರಿಯ ಕವಿ ಸಾಹಿತಿ ಶ್ರೀಮಂತೂರು ಚಂದ್ರಹಾಸ ಸುವರ್ಣರ ಅಧ್ಯಕ್ಷತೆಯಲ್ಲಿ ಕವಿಗೋಷ್ಥಿಯು ನಡೆಯಿತು. ಆರು ಮಂದಿ ಕವಿಗಳು ಇದರಲ್ಲಿ ಬಾಗವಹಿಸಿ ತಾವು ರಚಿಸಿದ ಕವನವನ್ನು ಸಾದರಪಡಿಸಿದರು.
ಕವಿ ನಾಟಕಕಾರ ಸಾದಯ ಅವರು ’ತೆಂಬರೆದ ಲಿಪ್ಪು’ ತುಳು ಕವನ, ಕವಯತ್ರಿ ಸಂಶೋಧಕಿ ಡಾ. ಜಿ. ಪಿ. ಕುಸುಮ ಅವರು ’ಕೋಲ’ ತುಳು ಕವನವನ್ನು, ಕವಯತ್ರಿ ಶಾರದಾ ಅಂಚನ್ ’ದೊಂಪ’ ತುಳು ಕವನ, ಕವಯತ್ರಿ ಸುಜಾತಾ ಶೆಟ್ಟಿಯವರು, ಕನ್ನಡ ಕವನ ’ರೊಟ್ಟಿ, ಕವಿ ಗಣೇಶ್ ಕುಮಾರ್ ಅವರು ’ಹಸಿವು’, ಕವಿ ಉದಯ ಮೂಲ್ಯ ’ಸಮ” ಕನ್ನಡ ಕವನವನ್ನು ವಾಚಿಸಿದರು.
ಕುಲಾಲ ಸಂಘದ ಅಧ್ಯಕ್ಷರಾದ ರಘು ಮೂಲ್ಯ ಹಾಗೂ ಅಮೂಲ್ಯದ ಸಂಪಾದಕ ಶಂಕರ್ ವೈ ಮೂಲ್ಯರ ಉಪಸ್ಥಿತಿಯಲ್ಲಿ ನಡೆದ ಈ ಕವಿ ಗೋಷ್ಠಿ ಯ ಅಧ್ಯಕ್ಷತೆಯನ್ನು ವಹಿಸಿದ ಶ್ರೀಮಂತೂರು ಚಂದ್ರನವರು ”ನಂಬಿ ಸತ್ಯೊಲೊಡೊಂಜಿ’ ಕವನವನ್ನು ಸಾದರಪಡಿಸಿ ಕೊರೋನಾ ಕಾಲದ ಕರಾಳ ದಿನವನ್ನು ನೆನಪಿಸಿದರು. ಆ ನಂತರ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ, ಎಲ್ಲಾ ಕವಿಗಳು ಅರ್ಥಪೂರ್ಣವಾಗಿ ತಮ್ಮ ಕವನವನ್ನು ಮಂಡಿಸಿದ್ದರೆ . ಕುಲಾಲ ಸಮಾಜದ ಹಿರಿಯರು 94 ವರ್ಷಗಳ ಹಿಂದೆ ಈ ಕರ್ಮಭೂಮಿಗೆ ಬಂದು ಕುಲಾಲ ಸಂಘವನ್ನು ಸ್ಥಾಪಿಸಿ ಸಮಾಜ ಸೇವೆಯನ್ನು ಮಾಡುತ್ತಾ ನಂತರ ಅಮೂಲ್ಯ ಪತ್ರಿಕೆಯನ್ನು ಪ್ರಾರಂಭಿಸಿ ಕನ್ನಡ ಸಾಹಿತ್ಯ ಸೇವೆಯನ್ನು ಮಾಡುತ್ತಿದ್ದು ಇದೀಗ ಅಮೂಲ್ಯ ಯೌವನಾವಸ್ಥೆಗ್ ತಲಪಿ ಮದುಮಗನಾಗಿ ನಮ್ಮೆಲ್ಲರನ್ನು ಬಲದಲ್ಲಿ ಇರಿಸಿಕೊಂಡು, ಮುಂದೆ ಸುವರ್ಣ ಮಹೋತ್ಸವ ವಜ್ರ ಮಹೋತ್ಸವ ಆಚರಿಸುವಂತಾಗಲಿ ಎಂದು ಶುಭ ಹಾರೈಸಿದರು