April 2, 2025
ಸುದ್ದಿ

ಮುಂಬೈ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಪ್ರವೀಣ್ ಭೋಜ ಶೆಟ್ಟಿ ಆಯ್ಕೆ

ಮುಂಬೈ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಪ್ರವೀಣ್ ಭೋಜ ಶೆಟ್ಟಿ ಆಯ್ಕೆಯಾಗಿದ್ದಾರೆ 

ಚಿತ್ರ ವರದಿ : ದಿನೇಶ್ ಕುಲಾಲ್ 

ಮುಂಬೈ;

ವಿಶ್ವ ಮಾನ್ಯ ಬಂಟರ ಸಂಘ ಮುಂಬೈಯ ನೂತನ ಅಧ್ಯಕ್ಷರಾಗಿ ಆರ್ಥಿಕ ತಜ್ಞ.  ಸಮಾಜ ಸೇವಕ ಪ್ರವೀಣ್ ಬೋಜ ಶೆಟ್ಟಿ ಆಯ್ಕೆ ಆಗಿದ್ದಾರೆ.

ನ. 27 ರಂದು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ನಡೆದ   ಬಂಟರ ಸಂಘ ಮುಂಬೈಯ ವಾರ್ಷಿಕ ಮಹಾಸಭೆಯಲ್ಲಿ ಸಂಘದ  ಅಧ್ಯಕ್ಷ ಚಂದ್ರಹಾಸ ಕೆ ಶೆಟ್ಟಿ ಅವರು ಅಧಿಕಾರ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ರತ್ನಾಕರ್ ಶೆಟ್ಟಿ  ಮುಂಡ್ಕೂರು . ಗೌರವ  ಕಾರ್ಯದರ್ಶಿ ಡಾ. ಆರ್ ಕೆ ಶೆಟ್ಟಿ .ಗೌರವ  ಕೋಶಧಿಕಾರಿ ಸಿಎ ಹರೀಶ್ ಶೆಟ್ಟಿ. ಜೊತೆ ಕಾರ್ಯದರ್ಶಿ ದಿವಾಕರ್ ಶೆಟ್ಟಿ ಇಂದ್ರಲಿ. ಜೊತೆ ಕಾರ್ಯದರ್ಶಿ  ಮುಂಡಪ್ಪ ಪೈಯಾಡೆ   ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೆ ಶೆಟ್ಟಿ .ಯುವ ವಿಭಾಗದ ಕಾರ್ಯಧ್ಯಕ್ಷ ಸಾಗರ್ ಡಿ ಶೆಟ್ಟಿ .ಅವರು ಉಪಸ್ಥಿರಿದ್ದರು.

ಇದೆ ಸಂದರ್ಭದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ.ಕೋಶ ಧಿಕಾರಿ ಉಳ್ತೂರು ಮೋಹನ್ ದಾಸ್ ಶೆಟ್ಟಿ ಅಭಿನಂದಿಸಿದರು.

ಪ್ರವೀಣ್ ಭೋಜ ಶೆಟ್ಟಿ ಅವರು ಎಲ್ಲೂರು  ಮಲ್ಲಬೆಟ್ಟು  ಪರಾಡಿ  ಭೋಜ  ಶೆಟ್ಟಿ ಮತ್ತು ಶಿರ್ಲಾಲ್ ಗಾಂಧಿ ಬೆಟ್ಟು ಹೌಸ್ ಅಂಡಾರಿನ ನಳಿನ ಭೋಜ  ಶೆಟ್ಟಿ ಹೆಮ್ಮೆಯ ಮಗನಾಗಿ, ಜನವರಿ 10, 1961 ರಂದು ಜನಿಸಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ತನ್ನ ತಂದೆ ಸೇವೆ ಸಲ್ಲಿಸಿದ ಶಾಲೆಯಾದ ಎಲ್ಲೂರಿನ ಇರಂದಾಡಿ ಶಾಲೆಯಲ್ಲಿ ಮುಗಿಸಿ,  ಪ್ರೌಢಶಾಲಾ ಶಿಕ್ಷಣದಿಂದ ಹಿಡಿದು ಪದವಿ ಪೂರ್ವ ಕಾಲೇಜನ್ನು ಅದಮಾರು ಪದವಿ ಪೂರ್ವ ಕಾಲೇಜಿನಲ್ಲಿ ಪೂರೈಸಿ, , ಬಿ. ಕಾಂ. ಪದವಿಯನ್ನು ಮುಲ್ಕಿ ಯ ವಿಜಯ ಕಾಲೇಜಿನಿಂದ ಪಡೆದರು. 1981ರಲ್ಲಿ ತನ್ನ ಚಿಕ್ಕಪ್ಪ ಸೀತಾರಾಮ್ ಕೆ ಶೆಟ್ಟಿ ಯವರ ಸಹಕಾರದಿಂದ ಮುಂಬೈಗೆ ಬಂದು ಪ್ರತಿಷ್ಠಿತ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆ ಆದ ವೈ.ರ್.ಶೆಟ್ಟಿ & ಕಂ. ಯಲ್ಲಿ ಆರ್ಟಿಕಲ್ ಆಗಿ ತಮ್ಮ ತರಬೇತಿ ಆರಂಭಿಸಿದರು. ನಂತರ 1990ರಲ್ಲಿ ಪ್ರವೀಣ್ ಬಿ. ಶೆಟ್ಟಿ & ಕಂ. “ತೆರಿಗೆ ಸಲಹೆಗಾರ” ತಮ್ಮ ಸ್ವಂತ ಸಂಸ್ಥೆಯನ್ನು ಪರೇಲಿನಲ್ಲಿ ಪ್ರಾರಂಭಿಸಿ ಗ್ರಾಹಕರ ಸೇವೆಯಲ್ಲಿ ತೊಡಗಿದರು. ನಂತರ ಸುಮಾರು 21 ವರ್ಷದ ನಿರಂತರ ಕಠಿಣ ಪರಿಶ್ರಮ ಹಾಗು ಅತ್ಯಂತ ನಿಷ್ಠೆಯ ಮತ್ತು ಪ್ರಾಮಾಣಿಕ ಸೇವೆಯ ಫಲವಾಗಿ ತಮ್ಮ ಎರಡನೆಯ ಶಾಖೆಯನ್ನು 2011 ರಲ್ಲಿ ವಿಲೇಪಾರ್ಲೆ ಪೂರ್ವದಲ್ಲಿ ಪ್ರಾರಂಭಿಸಿದರು. ಇಂದಿಗೆ ಸುಮಾರು 1200 ಕಿಂತಲು ಹೆಚ್ಚಿನ ಸಂತೃಪ್ತ ಗ್ರಾಹಕರಿಗೆ ಅತ್ಯಂತ ನೆಚ್ಚಿನ ತೆರಿಗೆ ಸಲಹೆಗಾರನಾಗಿ ಶ್ರೀಯುತರು ನಿಗದಿತ ಸಮಯಯದಲ್ಲಿ ಕೈಗೊಂಡ ಕಾರ್ಯವನ್ನು ಪೂರೈಸುದರೊಂದಿಗೆ ಗ್ರಾಹಕರ ವಿಶ್ವಾಸವನ್ನು ಗಳಿಸಿಗೊಂಡು ಇಂದಿಗೂ ಕೂಡ ಅದೇ ಪ್ರಾಮಾಣಿಕತನದಿಂದ ಮತ್ತು ಅದೇ ಹುಮ್ಮ್ಸಸಿ ನೊಂದಿಗೆ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ವೃತ್ತಿ ಜೀವನದೊಂದಿಗೆ ಇತರ ವ್ಯವಹಾರಗಳಿಗೂ ಚಾಲನೆ ನೀಡಿದ ಶ್ರೀಯುತ ಶೆಟ್ಟಿಯವರು ನಿರ್ದೇಶಕರಾಗಿದ್ದ ಸಂಸ್ಥೆಗಳು, ಮೆಸೆರ್ಸ್ ನಿಸರ್ಗ ಹಾಸ್ಪಿಟಾಲಿಟಿ (ಪಿ) ಲಿಮಿಟೆಡ್, ಮಂಗಳೂರು, ಮೆಸೆರ್ಸ್ ಗೋದಾವರಿ  ಇನ್  ಹೋಟೆಲ್ಸ್ (ಪಿ ) ಲಿಮಿಟೆಡ್, ದಹಿಸರ್, ಮೆಸೆರ್ಸ್ ಶ್ರೇಯಸ್  ಫಾಸ್ಟ್  ಫುಡ್ (ಪಿ ) ಲಿಮಿಟೆಡ್. ಮಲಾಡ್ ,  ಮೆಸೆರ್ಸ್  ಸಾಯಿ  ಸಂಕಲ್ಪ್  ಟ್ರೇಡ್ಸ್ (ಪಿ ) ಲಿಮಿಟೆಡ್ ಪರೇಲ್, ಈ ಸಂಸ್ಥೆಗಳಲ್ಲಿ ಯು  ಪಾಲುದಾರರಾಗಿದ್ದಾರೆ.

ಕಳೆದ ಸುಮಾರು 42 ವರ್ಷಗಳ ಹಿಂದೆ ಮುಂಬಯಿಗೆ ಆಗಮಿಸಿದ ಪ್ರವೀಣ್ ಭೋಜ ಶೆಟ್ಟಿಯವರು ಆಗಲೇ ಪರಿಚಯವಿದ್ದ ಭುಜಂಗ ಎಂ.ಶೆಟ್ಟಿಯವರ ಮೂಲಕ 1991-1992 ರಲ್ಲಿ ಬಂಟರ ಸಂಘ ಮುಂಬಯಿಯ ಆಂತರಿಕ ಲೆಕ್ಕ ಪರಿಶೋಧಕರಾಗಿ ನೇಮಕಗೊಂಡರು. ಆಗ ಜರಗಿದ ಬಂಟರ ಸಂಘದ ಮಹಾಸಭೆಯಲ್ಲಿ ಭುಜಂಗ ಎಂ.ಶೆಟ್ಟಿಯವರು ಪ್ರವೀಣ್ ಭೋಜ ಶೆಟ್ಟಿಯವರ ಬಗ್ಗೆ ಮಾತನಾಡಿ “ಈ ಸಲ ಪ್ರವೀಣ್ ಭೋಜ ಶೆಟ್ಟಿಯವರಿಂದಾಗಿ ಸರಿಯಾದ ಸಮಯದಲ್ಲಿ ಸಂಘದ ಲೆಕ್ಕ ಪತ್ರವು ತಯಾರಾಗಿದ್ದು ಮಹಾಸಭೆಯು ಸರಿಯಾದ ಸಮಯದಲ್ಲಿ ನಡೆಯುವಂತಾಯಿತು” ಎಂಬ ಮಾತನ್ನು ಯಾವತ್ತೂ ಮರೆಯದೆ ಭುಜಂಗ ಶೆಟ್ಟಿಯವರಿಂದಾಗಿ ತಾನು ಒರ್ವ ಯಶಸ್ವೀ ಸಮಾಜ ಸೇವಕ ಗುರುತಿಸಲ್ಪಡುವಂತಾಗಿದೆ ಎಂದು ಪ್ರವೀಣ್ ಭೋಜ ಶೆಟ್ಟಿಯವರು ಅಭಿಮಾನದಿಂದ ಹೇಳುತ್ತಿದ್ದಾರೆ. 

ನಂತರ ಬಂಟರ ಸಂಘ ಮುಂಬಯಿಯ ಹೈಯರ್ ಅಜ್ಯೂಕೇಶನ್ ಸಮಿತಿಯ ಕಾರ್ಯದರ್ಶಿಯಾಗಿ ಮತ್ತು ಕೋಶಾಧಿಕಾರಿಯಾಗಿ, ಬಂಟರ ಸಂಘದ ಎಸ್.ಎಂ.ಶೆಟ್ಟಿ ಶಿಕ್ಷಣ ಸಂಸ್ಥೆಗಳ  ಕೋಶಾಧಿಕಾರಿಯಾಗಿ  ಬಂಟರ ಸಂಘ ಮುಂಬಯಿಯ ಜೊತೆ ಕೋಶಾಧಿಕಾರಿಯಾಗಿ, ಮತ್ತು ಬಂಟರ ಸಂಘದ ಕೋಶಾಧಿಕಾರಿ ಆಗಿ ಸೇವೆ ಸಲ್ಲಿಸಿರುವ ಒಟ್ಟಿಗೆ ಮಾತೃಭೂಮಿ ಕ್ರೆಡಿಟ್ ಸೊಸೈಟಿಯ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿ ಈಗ ಪ್ರಸ್ತುತ ಅದರ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಶ್ರೀಯುತರು  2008 to 2011 ಸಾಲಿನಲ್ಲಿ ಬಂಟ್ಸ್ ಸಂಘ ಮುಂಬೈಯ ಹೈಯರ್ ಎಜುಕೇಶನ್ ಪ್ರೋಜೆಕ್ಟಿಗಾಗಿ  ಹೆಚ್ಚಿನ ದಾನ ಸಂಗ್ರಹಿಸಿದಕ್ಕಾಗಿ  ಸನ್ಮಾನಿತಗೊಂಡದಲ್ಲದೆ 2013 ಸಾಲಿನಲ್ಲಿ ಬಂಟ್ಸ್ ಸಂಘ ಮುಂಬೈಯ ವಿಶ್ವ ಬಂಟರ ದಿನದಂದು ಸ್ಥಾಪನೆಗೊಂಡ ಹೆಮ್ಮೆಯ ಹೈಯರ್ ಎಜುಕೇಶನ್ ಲೋನ್ ಸ್ಕಾಲರ್ಷಿಪ್ ಸ್ಕೀಮ್ ಗಾಗಿ ಅತ್ಯಂತ ಹೆಚ್ಚಿನ ಧನ ಸಂಗ್ರಹಿಸಿದಕ್ಕಾಗಿ  ಕೂಡ  ಸನ್ಮಾನಿತಗೊಂಡದ್ದು ಮಾತ್ರವಲ್ಲದೆ ಪ್ರಸ್ತುತ ಆ ಸ್ಕೀಮ್ ನ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮತ್ತು ಮಾತೃಭೂಮಿ ಕ್ರೆಡಿಟ್ ಕೋ ಒಪ್. ಸೊಸೈಟಿಯಲ್ಲಿ 2017-2018 & 2018-2019ರ ಸಾಲಿನಲ್ಲಿ ಅತ್ಯಂತ ಹೆಚ್ಚಿನ ಮೊತ್ತದ Deposit Mobilization ಗಾಗಿ ಸನ್ಮಾನಿತರಾಗಿ ದ್ದಾರೆ. ಪ್ರಸ್ತುತ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷರಾಗಿರುವ ವರ್ಲ್ಡ್ ಬಂಟ್ಸ್ ಫೆಡರೇಶನ್ ನ ನಿರ್ದೇಶಕರಾಗಿ ಕೂಡ ನೇಮಕಗೊಂಡಿದ್ದಾರೆ.

ಅದೇ ರೀತಿ ಶ್ರೀಯುತರು 2008-2012ರ ವರೆಗೆ ಎಲ್ಲೂರು  ಶ್ರೀ ವಿಶ್ವನಾಥ ದೇವಸ್ಥಾನದ ಬ್ರಹ್ಮಕಲಶ  ಜೀರ್ಣೋಧಾರ  ಮುಂಬೈ  ಕಮಿಟಿಯ ಕಾರ್ಯದರ್ಶಿ ಆಗಿ  ಹಾಗೆಯೆ 2012 to 2015ರ ವರೆಗೆ ಟ್ರಸ್ಟೀ  ಆಗಿ  ಸೇವೆ ಸಲ್ಲಿಸುದರೊಂದಿಗೆ, ದೇವಸ್ಥಾನದ ಜೀರ್ಣೋಧಾರ ಕಾರ್ಯಕ್ಕೆ ಅತ್ಯಂತ ಹೆಚ್ಚಿನ ಮೊತ್ತದ ದಾನವನ್ನು ದಾನಿಗಳಿಂದ ಸಂಗ್ರಹಿಸಿದಕ್ಕಾಗಿ  ಶ್ರೀ  ಪದ್ಮವಿಭೂಷಣ್  ಧರ್ಮಸ್ಥಳ ವೀರೇಂದ್ರ  ಹೆಗ್ಡೆ ಅವರಿಂದ ಕೊಂಡಾಡಿ ಸನ್ಮಾನವನ್ನು ಪಡೆದುಕೊಂಡಿದ್ದಾರೆ.

ವೃತ್ತಿ ಪರ ಮತ್ತು ಸಮಾಜಸೇವೆ ಒಟ್ಟಿಗೆ ಶೆಟ್ಟಿಯವರು ನಮ್ಮ ತುಳವ ಸಂಸ್ಕೃತಿಯ ಕಂಬಳ, ಯಕ್ಷಗಾನ ನಾಟಕ ಕಲೆ ಇದರ ಬಗ್ಗೆ ತುಂಬಾ ಅಭಿಮಾನ ಮತ್ತು ಅಭಿರುಚಿ ಇಟ್ಟುಕೊಂಡವರಾಗಿದ್ದು ಅನೇಕ ಸಂಘ ಸಂಸೆಗಳಿಗೆ ಪೋಷಕರಾಗಿ ಧನ ಸಹಾಯವನ್ನು ಮಾಡಿದವರಾಗಿದ್ದಾರೆ.

“ನನ್ನ ಬದುಕಲ್ಲಿ ಯಶಸ್ಸನ್ನು ಗಳಿಸಲು ನನ್ನೊಂದಿಗೆ ನನ್ನ ಧರ್ಮಪತ್ನಿ ನೈನಿತಾ ಪ್ರವೀಣ್ ಶೆಟ್ಟಿ ಮತ್ತು ಮಗಳು ಅಭೀಕ್ಷಾ ಸಿದ್ದಾಂತ್ ಶೆಟ್ಟಿ ಇವರ ಸಹಕಾರ ಮತ್ತು ಬೆಂಬಲ ಮುಖ್ಯ ಕಾರಣ” ಎನ್ನುತ್ತಾರೆ ಪ್ರವೀಣ್ ಬೋಜ ಶೆಟ್ಟಿಯವರು.  2017ರಲ್ಲಿ ತನ್ನ ಸುಪುತ್ರಿಯ ವಿವಾಹವನ್ನು ಸಿದ್ಧಾಂತ ಮಹೇಶ್ ಶೆಟ್ಟಿ ಯೊಂದಿಗೆ ಬಹಳ ವಿಜೃಂಭಣೆಯಿಂದ ನೆರೆವೇರಿಸಿದ ಸಂತೋಷ ಇವರದಾಗಿದೆ. 

ಮುಂಬಯಿಗೆ ಆಗಮಿಸಿದ ಆರಂಭದ ಮೂರು ವರ್ಷಗಳಲ್ಲಿ ತುಂಬಾ ಕಷ್ಟ ಪಟ್ಟು ಸುಮಾರು 13 ಕಡೆ ನೆಲೆಸಿದ್ದು ಸಿ.ಎ ಮಾಡುವ ತರಬೇತಿಯ ಸಮಯದಲ್ಲಿ ಮತ್ತು ನಂತರವೂ ಶ್ರೀ.ವೈ.ಆರ್.ಶೆಟ್ಟಿಯವರ ಸಂಪೂರ್ಣ ಬೆಂಬಲದೊಂದಿಗೆ ನಾನು ಮೇಲೇರುದರೊಂದಿಗೆ ಇಂದು ಸಮಾಜದಲ್ಲಿ ಗುರುತಿಸಲ್ಪಡುವಂತಾಗಿದ್ದು ಇದರ ಸಂಪೂರ್ಣ ಶ್ರೇಯಸ್ಸು C.A.ಶ್ರೀ.ವೈ.ಆರ್.ಶೆಟ್ಟಿಯವರಿಗೆ ಸಲ್ಲಬೇಕೆಂದು ಮನಪೂರ್ವಕ ಮಾತನ್ನಾಡುವ ಇವರು  ಬಂಟರ ಸಂಘದಲ್ಲಿ ತನ್ನ ಹೆಸರಿನೊಂದಿಗೆ ತಂದೆಯ ಪೂರಾ ಹೆಸರನ್ನು ಜೋಡಿಸುತ್ತಾ ಪ್ರವೀಣ್ ಭೋಜ ಶೆಟ್ಟಿ ಎಂದು ಕರೆಯಲ್ಪಡುವುದು ಅತ್ಯಂತ ಅಭಿಮಾನ ಮತ್ತು ಖುಷಿ ಕೊಡುವ ಸಂಗತಿ ಎನ್ನುತ್ತಿರುವ ಶೆಟ್ಟಿಯವರು ತನ್ನ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಕೃತಜ್ನತೆಯನ್ನು ಸಲ್ಲಿಸುದರೊಂದಿಗೆ, ಪ್ರವೀಣ್ ಭೋಜ ಶೆಟ್ಟಿಯವರಿಂದ ಇನ್ನೂ ಅನೇಕ ಸಮಾಜಪರ ಕೆಲಸಗಳು ನಡೆಯಲಿ ಎಂದು ಮನ ಪೂರ್ವಕ ಶುಭ ಹಾರೈಕೆ.

Related posts

ವಿಶ್ವ ಬಂಟರ ಸಮ್ಮೇಳನದ ಖರ್ಚು ವೆಚ್ಚಗಳ ಸಭೆ

Mumbai News Desk

ದ್ವಮ್ದ್ವ’ ಕನ್ನಡ ಕಲಾತ್ಮಕ ಚಿತ್ರ ಬಿಡುಗಡೆ – ಪತ್ರಕರ್ತರಿಗೆ ವಿಶೇಷ ಪ್ರದರ್ಶನ

Mumbai News Desk

ಮಹಾರಾಷ್ಟ್ರ ದಲ್ಲಿ ಭೀಕರ ರೈಲು ಅಪಘಾತ – ರೈಲಿನಡಿ ಸಿಲುಕಿ 7 ಜನರ ದುರಂತ ಸಾವು

Mumbai News Desk

ಮುಂಬಯಿ ಕನ್ನಡ ಸಂಘ: ಅರ್ಚನಾ ಪೂಜಾರಿಯವರಿಗೆ ಸನ್ಮಾನ

Mumbai News Desk

ಮುಂಬೈಯ ಬಾಂದ್ರ ಟರ್ಮಿನಸ್ ನಲ್ಲಿ ನೂಕುನುಗ್ಗಲು, ಕಾಲ್ತುಳಿತ; 9 ಮಂದಿಗೆ ಗಾಯ

Mumbai News Desk

ಸಮಾಜ ಸೇವಕಿ ವಿಮಲಾ ಎಲ್ ಸಾಲ್ಯಾನ್ ನಿಧನ

Mumbai News Desk