
ಚಿತ್ರ : ಯೋಗೀಶ್ ಪುತ್ರನ್, ವರದಿ : ವಾಣಿಪ್ರಸಾದ್.
ಪೇಜಾವರ ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ಷಷ್ಠಬ್ದಿ ಮಹೋತ್ಸವವು ಡಿ.3 ರಂದು ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠದಲ್ಲಿ ಅಯೋಜಿಸಲಾಗಿದ್ದು, ಅ ನಿಮ್ಮಿತ್ತ ಧಾರ್ಮಿಕ ಕಾರ್ಯಕ್ರಮಗಳು
ಆರಂಭವಾಯಿತು.

ಬೆಳ್ಳಿಗ್ಗೆ 8 ಗಂಟೆಗೆ ವಿಷ್ಣುಯಾಗ ಆರಂಭವಾಯಿತು.ಯಾಗ ಪೂರ್ಣಾಹುತಿಯಾದ ಬಳಿಕ ಸ್ವಾಮೀಜಿ ಅವರು ಮಹಾ ಆರತಿ ಬೆಳಗಿದರು.
ಅ ನಂತರ ಸ್ವಾಮೀಜಿ ಅವರು ಸಂಸ್ಥಾನ ಪೂಜೆ ನೆರವೇರಿಸಿ, ಸೇರಿದ್ದ ಭಕ್ತರಿಗೆ ಪ್ರಸಾದ, ಮಂತ್ರಾಕ್ಷತೆ ನೀಡಿ ಹರಸಿದರು.

ಶ್ರೀ ವಿಷ್ಣುಯಾಗದಲ್ಲಿ ಪ್ರಧಾನ ಪುರೋಹಿತರಾಗಿ ವಿಶ್ವೇಶ್ವರ ಭಟ್, ಮಾಲ ಶ್ರೀನಿವಾಸ ಭಟ್ ,ಕಲಶ ಪೂಜೆ ರಾಜೇಶ್ ಭಟ್( ಅದಮಾರು ಮಠ), ಅನುಕ್ರಮಣಿಕೆ – ವಾಸುದೇವ ಭಟ್(ಫಲಿಮಾರು ಮಠ), ಮಂಡಲ ರಚನೆ – ರವಿರಾಜ್ ಬೆಂಗಳೂರು ಸಹಕರಿಸಿದರು.ರಾಮದಾಸ್ ಭಟ್, ಪ್ರಕಾಶ್ ಆಚಾರ್ಯ, ಶ್ರೀ ಹರಿ ಭಟ್, ಪವನ್ ಭಟ್, ಅರವಿಂದ ಬನ್ನಿತಾಯ, ವಿಷ್ಣು ಭಟ್, ಮುಕುಂದ್ ಭಟ್ ,ರಾಘವೇಂದ್ರ ಭಟ್, ಇವರು ಅದ್ವಾರ್ಯದಲ್ಲಿ ಭಾಗವಹಿಸಿದರು.

ಶಷ್ಟ್ಯಬ್ದಿ ಮಹೋತ್ಸವ ಸಮಿತಿಯ ಕಾರ್ಯಧ್ಯಕ್ಷ ಡಾ.ಎಂ.ಎಸ್.ಆಳ್ವ, ಕಾರ್ಯಧ್ಯಕ್ಷೆ ಶ್ರೀಮತಿ ಅರುಣಾ ಆಚಾರ್ಯ,ಉಪಾಧ್ಯಕ್ಷರುಗಳು, ಪೂರ್ಣಪ್ರಜ್ಞಾ ವಿದ್ಯಾಪೀಠ ಪ್ರತಿಷ್ಠಾನದ ಅಧ್ಯಕ್ಷ ಡಾ.ಎ. ಎಸ್.ರಾವ್, ಕಾರ್ಯಧ್ಯಕ್ಷ ಡಾ.ಸುರೇಶ್ ರಾವ್,ಮತ್ತು ಪದಾಧಿಕಾರಿಗಳು, ಕಾರ್ಯದರ್ಶಿಗಳಾದ ಕೆ.ಕ್ರಷ್ಣರಾಜ್ ತಂತ್ರಿ,ಪಿ.ಹರಿದಾಸ ಭಟ್, ಡಾ.ರಾಮದಾಸ ಉಪದ್ಯಾಯ ಉಪಸ್ಥಿತರಿದ್ದರು.
ಮಧ್ಯಾಹ್ನ ಸೇರಿದ್ದ ಎಲ್ಲರೂ ಅನ್ನ ಪ್ರಸಾದ ಸ್ವೀಕರಿಸಿದರು.
ಸಂಜೆ 4 ಗಂಟೆಗೆ ಬಿಲ್ಲವ ಭವನದಿಂದ ,ಪೇಜಾವರ ಮಠಕ್ಕೆ ಭವ್ಯ ಮೆರವಣಿಗೆ ಸಾಗಿಬಂತು.
ತಡ ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜುಗೊಂಡಿತ್ತು .


.
.
.
.