
ಸಿರಿಕಲಾಮೇಳ (ಅ) ಬೆಂಗಳೂರು ಮತ್ತು ಅತಿಥಿ ಕಲಾವಿದರಿಂದ ಮುಂಬಯಿಯ ವಿವಿಧ ರಂಗಮಂದಿರಗಳಲ್ಲಿ
ದಿನಾಂಕ 15.12.2023 ಶುಕ್ರವಾರದಿಂದ 21.12.2023 ಗುರುವಾರದವರೆಗೆ “ಮುಂಬಯಿ ಯಕ್ಷ ಸಪ್ತಾಹ 2023” ಯಕ್ಷಗಾನ ಪ್ರದರ್ಶನ ಗೊಳ್ಳಲಿದೆ.
ಯಕ್ಷಗಾನ ಸಪ್ತಾಹದಲ್ಲಿ ಪ್ರದರ್ಶನಗೊಳ್ಳಲಿರುವ ಪ್ರಸಂಗಗಳು :
15.12.2023 ಶುಕ್ರವಾರ ಸಂಜೆ 5:00 ಗಂಟೆಗೆ ಡಾ|| ಕಾಶೀನಾಥ್ ಗಾಣೇಕ ಸಭಾಭವನ, ಥಾಣೆ ಯಲ್ಲಿ “ಲವ ಕುಶ“
16.12.2023 ಶನಿವಾರ ಸಂಜೆ 5:00 ಗಂಟೆಗೆ ಬಾಲ್ಕಮ್ ಪಾಡಾ ನಂ.2, ಶ್ರೀ ಸತ್ಯನಾರಾಯಣ ಸೇವಾ ಸಮಿತಿಯ ಪರಿಸರದ ಮೈದಾನ ಥಾಣಿ ಯಲ್ಲಿ “ಲವ ಕುಶ”.
17.12.2023 ಆದಿತ್ಯವಾರ ಸಂಜೆ 3:30 ಗಂಟೆಗೆ
ಲೇವ ಭವನ ಸಭಾಂಗಣ, ಡೊಂಬಿವಲಿ ಯಲ್ಲಿ “ಕಂಸ ದಿಗ್ವಿಜಯ ಕಂಸ ವಧೆ”
18.12.2023 ಸೋಮವಾರ ಸಂಜೆ 6 ಗಂಟೆಗೆ ಬಂಟರ ಭವನ ಕುರ್ಲಾ, ಮುಂಬಯಿಯಲ್ಲಿ “ದಕ್ಷಯಜ್ಞ ಮೀನಾಕ್ಷಿ ಕಲ್ಯಾಣ“
19.12.2023 ಮಂಗಳವಾರ ಸಂಜೆ 5:30 ಗಂಟೆಗೆ ಹೆಗ್ಗಡೆ ಭವನ, ಐರೋಲಿ, ನವಿ ಮುಂಬಯಿ ಯಲ್ಲಿ “ಅರ್ಜುನ * ಅರ್ಜುನ“
20.12.2023 ಬುಧವಾರ ಸಂಜೆ 5:30 ಗಂಟೆಗೆ ಶ್ರೀ ಕಾಳಿಕಾಂಬಾ ವಿನಾಯಕ ಟೆಂಪಲ್ ಪನ್ವೆಲ್, ನವಿ ಮುಂಬಯಿಯಲ್ಲಿ “ಕೃಷ್ಣಾರ್ಜುನ“
21.12.2023 ಗುರುವಾರ ಸಂಜೆ 5:30 ಗಂಟೆಗೆ ವಾಶಿ ಕನ್ನಡ ಸಂಘ, ವಾಶಿ, ನವಿ ಮುಂಬಯಿ ಯಲ್ಲಿ “ಶ್ರೀನಿವಾಸ ಕಲ್ಯಾಣ“
ರoಗದಲ್ಲಿ ಮೆರೆಯುವ ಹೆಮ್ಮೆಯ ರಂಗ ಕಲಾವಿದರು:
ಸುರೇಶ ಶೆಟ್ಟಿ ಶಂಕರನಾರಾಯಣ, ಅನಂತಪದ್ಮನಾಭ ಘಾಟಕ್, ಪ್ರಶಾಂತ ನಂತೂರು ಗೋಪಾಲ ಆಚಾರ್ಯ ತೀರ್ಥಳ್ಳಿ, ಸುಬ್ರಾಯ ಹೆಬ್ಬಾರ್, ಅಶೋಕ್ ಭಟ್ ಸಿದ್ಧಾಪುರ, ಪ್ರಭಾಕರ ಹೆಗಡೆ ಹಣಜಿಬೈಲ್, ಶ್ರೀಧರ ಭಟ್ ಕಾಸರಕೋಡು, ನಾಗಶ್ರೀ ಗೀಜಗಾ, ನಿಹಾರಿಕ ಭಟ್, ವಿನಾಯಕ ಗುಂಡಬಾಳ
ವೇಷಭೂಷಣ: ಉದಯ ಆಡುಕೊಳ
ಸಂಚಾಲಕ: ಸುರೇಶ ಹೆಗಡೆ ಕಡತೋಕ-99865 09511 ಮಹಾಬಲೇಶ್ವರ ಐ.ಎಸ್-93418 39075,
ಮುಂಬಯಿಯ ಯಕ್ಷಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಸಹಕರಿಸಬೇಕಾಗಿ ರಮೇಶ ಶೆಟ್ಟಿ ಹೇರಂಜೆ ಮುಂಬಯಿ, ಸೀತಾರಾಮ ಶೆಟ್ಟ ಆರೂರು ಡೊಂಬಿವಲಿ, ಸುಧೀರ್ ಬಿ.ಎಂ. ಮುಂಬಯಿ ಸರ್ವರಿಗೂ ಆದರದ ಸ್ವಾಗತ ಬಯಸಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.