
ಮುಂಬಯಿ : ಶ್ರೀ ಸದ್ಗುರು ಶನೇಶ್ವರ ಸೇವಾ ಸಮಿತಿ ಸಮತಾ ನಗರ ಕಾಂದಿವಲಿ ಪೂರ್ವ ಇದರ ವತಿಯಿಂದ 49ನೇ ವಾರ್ಷಿಕ ಶ್ರೀ ಶನೀಶ್ವರ ಗ್ರಂಥಪಾರಾಯಣ ಮಹೋತ್ಸವ ಮತ್ತು ಅನ್ನ ಸಂತರ್ಪಣೆಯು ಡಿ. 9ರಂದು ರೋಡ್ ನಂಬ್ರ 2, ಬಸಾರಾ ಸ್ಟುಡಿಯೋ ಸಮೀಪ, ಸಿಂಗ ಎಸ್ಟೇರ್, ಕಾಂದಿವಲಿ ಪೂರ್ವ ಇಲ್ಲಿ ನಡೆಯಲಿದೆ.
ಸಂಜೆ 6 ರಿಂದ ಹೂವಿನ ಅಲಂಕಾರ ಪೂಜೆ, ನಂತರ ಕಳಶ ಪ್ರತಿಷ್ಠಾಪನೆ, ಭಜನೆ, ಕೀರ್ತನೆ, ತಿಲ ಅಭಿಷೇಕ, ಕುಂಕುಮಾರ್ಚನೆ, ಮಹಾಪೂಜೆ, ತಾಂಬೂಲ ಪೂಜೆ ,ಹೂವಿನ ಪೂಜೆ ಹಾಗೂ ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ. ಮರುದಿನ ಬೆಳಿಗ್ಗೆ 5 ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಯಲಿದೆ. ಭಕ್ತಾಭಿಮಾನಿಗಳು ಈ ಕಾರ್ಯಕ್ರಮಕ್ಕೆ ಉಪಸ್ಥಿತರಿದ್ದು ಶನಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಸಮಿತಿಯ ಕಾರ್ಯಕರ್ತರು ವಿನಂತಿಸಿದ್ದಾರೆ.
.
.
.
.
.
.