32 C
Mumbai
March 7, 2026
Mumbai News Kannada
ಪ್ರಕಟಣೆ

ಡಿ.10 ರಂದು ಕರ್ನಾಟಕ ಸಂಘ, ಡೊಂಬಿವಲಿಯ ನಾಡಹಬ್ಬ ಸಮಾರಂಭ





ಕರ್ನಾಟಕ ಸಂಘ, ಡೊಂಬಿವಲಿ ಇದರ ಲಲಿತ ಕಲಾ ವಿಭಾಗ ಮತ್ತು ಮಹಿಳಾ ವಿಭಾಗದ ಸಂಯೋಜನೆಯಲ್ಲಿ ನಾಡಹಬ್ಬ ಸಮಾರಂಭ ನಾಳೆ ದಿನಾಂಕ 10.12.2023 ರವಿವಾರ ಸಂಜೆ 4.30 ಕ್ಕೆ ಠಾಕುರ್‌ಹಾಲ್, ಟಂಡನ್ ರಸ್ತೆ, ಡೊಂಬಿವಲಿ (ಪೂರ್ವ) ದಲ್ಲಿ ಕರ್ನಾಟಕ ಸಂಘ, ಡೊಂಬಿವಲಿ ಇದರ ಅಧ್ಯಕ್ಷರಾದ ಸುಕುಮಾರ ಎನ್. ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಜರುಗಲಿರುವುದು. ಕಾರ್ಯಾಧ್ಯಕ್ಷರಾದ ದಿವಾಕರ ಟಿ. ಶೆಟ್ಟಿ, ಇಂದ್ರಾಳಿಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು.

ಮುಖ್ಯ ಅತಿಥಿಯಾಗಿ ಕನ್ನಡ ವಿಶ್ವವಿದ್ಯಾಲಯ, ಹಂಪಿಯ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಎ.ಸುಬ್ಬಣ್ಣ ರೈ, ಉಪಸ್ಥಿತರಿರುವರು.

ದೇಶ ಭಕ್ತಿ ಗೀತೆ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ, ಮಹಿಳಾ ವಿಭಾಗದವರಿಂದ ನೃತ್ಯ ವೈಭವ ನಡೆಯಲಿದೆ.

ಉಪಾಧ್ಯಕ್ಷರಾದ ಲೋಕನಾಥ ಎ. ಶೆಟ್ಟಿ, ಉಪ-ಕಾರ್ಯಾಧ್ಯಕ್ಷರಾದ ದೇವದಾಸ ಎಲ್. ಕುಲಾಲ್, ಗೌ.ಪ್ರ.ಕಾರ್ಯದರ್ಶಿ ಅಜಿತ್ ಬಿ. ಉಮ್ರಾಣಿ, ಗೌ. ಕೋಶಾಧಿಕಾರಿ ತಾರಾನಾಥ ಎಸ್. ಅಮೀನ್, ಜೊತೆ ಕಾರ್ಯದರ್ಶಿ ದಿನೇಶ್ ಬಿ. ಕುಡ್ಡ, ಜೊತೆ ಕೋಶಾಧಿಕಾರಿ ವಿಮಲಾ ವಿ. ಶೆಟ್ಟಿ, ಲಲಿತ ಕಲಾ ವಿಭಾಗದ ವತಿಯಿಂದ ಕಾರ್ಯಾಧ್ಯಕ್ಷೆ ಸುಷ್ಮಾ ಡಿ. ಶೆಟ್ಟಿ, ಕಾರ್ಯದರ್ಶಿ ರಮೇಶ್ ವಿ. ಶೆಟ್ಟಿ, ಮಹಿಳಾ ವಿಭಾಗದ ವತಿಯಿಂದ ಕಾರ್ಯಾಧ್ಯಕ್ಷೆ ಆಶಾ ಎಲ್. ಶೆಟ್ಟಿ, ಕಾರ್ಯದರ್ಶಿ ಮಾಧುರಿಕ ಆರ್. ಬಂಗೇರ ಹಾಗೂ ಸರ್ವ ಕಾರ್ಯಕಾರಿ ಸಮಿತಿಯ ಸದಸ್ಯರು ಸರ್ವರಿಗೂ ಆದರದ ಸ್ವಾಗತ ಕೋರಿದ್ದಾರೆ.

.

.

.



Related posts

ಬೆಂಗಳೂರಿನ ಶ್ರೀ ಮಹಾಲಕ್ಷ್ಮೀ ಸನ್ನಿಧಿ, ನಂಬಿದ ಭಕ್ತರ ಪಾಲಿನ ಕರುಣಾನಿಧಿ

Mumbai News Desk

ಶ್ರೀ ಮಹಾಕಾಳಿ ಮಂದಿರ ಜೋಗೇಶ್ವರಿ ಪೂರ್ವ : ಸೆ. 22ರಿಂದ ಅ. 2ರ ತನಕ 61ನೇ ವರ್ಷದ ನವರಾತ್ರಿ ಉತ್ಸವ

Mumbai News Desk

ಕುಲಾಲ ಸಂಘ ಮುಂಬಯಿ: ನವಿ ಮುಂಬಯಿ ಸ್ಥಳೀಯ ಸಮಿತಿಯ ಮಹಿಳಾ ವಿಭಾಗ – ಪೆ 15.: ಹಳದಿ ಕುಂಕುಮ ಕಾರ್ಯಕ್ರಮ

Mumbai News Desk

ಕರುನಾಡ ಸಿರಿ – ಏಪ್ರಿಲ್ 14ಕ್ಕೆ ವಾರ್ಷಿಕ ಕ್ರೀಡಾಕೂಟ

Mumbai News Desk

ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್‌ ಮುಂಬೈ : ಜ. 4ರಂದು, 80ನೇ ವಾರ್ಷಿಕೋತ್ಸವ ಸಂಭ್ರಮ

Mumbai News Desk

ಆದೂರು ಶ್ರೀ ಭಗವತಿ ಕ್ಷೇತ್ರದಲ್ಲಿ ಜ. 19 ರಿಂದ 24ರ ತನಕ 351 ವರ್ಷದ ಬಳಿಕ ಪೆರುಂಕಳಿಯಾಟ್ಟ ಮಹೋತ್ಸವ

Mumbai News Desk