
ಬೆಂಗಳೂರು : ಕರ್ನಾಟಕದ ಐಕಾನಿಕ್ ಫ್ಯಾಷನ್ ಕಾರ್ಯಕ್ರಮದ ಮಿಷ್ಟರ್ / ಮಿಸ್ / ಮಿಸ್ಸೆಸ್ ಕರ್ನಾಟಕ ಸ್ಟೈಲ್ ಐಕಾನ್ 2023, ಕಾರ್ಯಕ್ರಮವನ್ನು ಮುಂಬಯಿಯ ಇಮೇಜ್ ಕನ್ಸಲ್ಟೆಂಟ್ ನ ನಿಶಿತ ಸೂರ್ಯಕಾಂತ್ ಸುವರ್ಣ ಇವರು ಡಿ. 3 ರಂದು ಇಲ್ಲಿನ ರಾಡಿಸನ್ ಬ್ಲೂ ಆಟ್ರಿಯಾದಲ್ಲಿ ಸಾದರಪಡಿಸಿದ್ದು ನಿರ್ಮಾಪಕ ಹಾಗೂ ನಿರ್ದೇಶಕರಾಗಿ ಪೊಲೆಥಿಕ್ಸ್ ವಾಯ್ಸ್ ಆಫ್ ಪೀಪಲ್ ಮತ್ತು ದೀಪಕ್ ಶೆಟ್ಟಿಯವರ ಡಿ ಎಸ್ ಎಂಟರ್ಟೈನ್ಮೆಂಟ್’ ಸಹಕರಿಸಿದೆ.

ಗೇಟ್‌ವೇ ಟು ಯುವರ್ ರ್ಡ್ರೀಮ್ಸ್ ಎಂಬ ಥೀಮ್‌ನೊಂದಿಗೆ, ಈ ಕಾರ್ಯಕ್ರಮವು ಫ್ಯಾಷನ್‌ನಲ್ಲಿ ಸಂಪ್ರದಾಯ ಮತ್ತು ಆಧುನಿಕತೆಯ ಸಮ್ಮಿಲನವನ್ನು ಪ್ರದರ್ಶಿಸಿದೆ. ಇದರಲ್ಲಿ ಭಾಗವಹಿಸಿದ ಪ್ರತಿಯೊಬ್ಬರೂ ವೈವಿಧ್ಯಮಯ ಹಿನ್ನೆಲೆಯ ವ್ಯಕ್ತಿತ್ವವನ್ನು ಹೊಂದಿದ್ದು ಪ್ರತಿಯೊಂದೂ ಸಮಕಾಲೀನ ಪ್ರವೃತ್ತಿಗಳೊಂದಿಗೆ ಬೆರೆತಿರುವ ಕರ್ನಾಟಕದ ಶ್ರೀಮಂತ ಪರಂಪರೆಯನ್ನು ಪ್ರತಿಬಿಂಬಿಸಿದ್ದಾರೆ.

ದಿಶಾ ಪುತ್ರನ್ ಅವರು ಮಿಸ್ ಮತ್ತು ಮಿಸೆಸ್ ವರ್ಗಕ್ಕೆ ಅಧಿಕೃತ ವಾಕ್ ತರಬೇತುದಾರರಾಗಿದ್ದರು ಮತ್ತು ಪ್ರೀತಮ್ ಕೋಟ್ಯಾನ್ ಅವರು ಮಿಷ್ಟರ್ ವರ್ಗದ ಅಧಿಕೃತ ವಾಕ್ ತರಬೇತುದಾರರಾಗಿ ಸಹಕರಿಸಿದ್ದರು.

ಕರತಾಡನಗಳ ನಡುವೆ ವಿಜೇತರ ಹೆಸರನ್ನು ಘೋಷಿಸಲಾಯಿತು.
ವಿಜೇತರು: ಸನತ್ ಜಿ ಶೆಟ್ಟಿಗಾರ್ ಮಿಸ್ಟರ್ ಕರ್ನಾಟಕ ಸ್ಟೈಲ್ ಐಕಾನ್ 2023, ಮೊದಲ ರನ್ನರ್ ಅಪ್: ಆಯುಷ್ ಚಿಟ್ಲಂಗಿ ಮತ್ತು ಎರಡನೇ ರನ್ನರ್ ಅಪ್ ಅರುಣ್ ಕುಮಾರ್ ಪಿ
ಮಿಸ್ ಕರ್ನಾಟಕ ಸ್ಟೈಲ್ ಐಕಾನ್ 2023 ವಿಜೇತರು ಅಪೇಕ್ಷಾ ಹೆಗ್ಡೆ, ಮೊದಲ ರನ್ನರ್ ಅಪ್: ಶಿಖಾ ಸುಶೀಲ್ ಮತ್ತು 2ನೇ ರನ್ನರ್ ಅಪ್ ಸುಬ್ರಿತಾ ಎಸ್ ಮಾಬಿಯಾನ್ ಮತ್ತು ಕುಮಾರಿ ದೀಕ್ಷಾ ವಿ.ಕೆ.
ಶ್ರೀಮತಿ ಕರ್ನಾಟಕ ಸ್ಟೈಲ್ ಐಕಾನ್ 2023: ವಿಜೇತರು: ಗಾನಶ್ರೀ ಜಿ ಉರಾಳ್, ಮೊದಲ ರನ್ನರ್ ಅಪ್: ಸ್ಟೆಫಿ ಕ್ಯಾರೋಲಿನ್ ಸ್ಟಾನ್ಲಿ ಮತ್ತು 2ನೇ ರನ್ನರ್ ಅಪ್ ನಮ್ರತಾ ಹೆಬ್ಬರ್.

ತೀರ್ಪುಗಾರರ ತಂಡವು ಸರಕಾರಿ ವಲಯದಿಂದ ಹಾಗೂ ಫ್ಯಾಷನ್‌ನಿಂದ ವಲಯದಲ್ಲಿ ಬಹುಮುಖ ಪ್ರತಿಭೆಯನ್ನು ಪಡೆದ ಬ್ರಿಯಾನ್ ಸಿಕ್ವೇರಾ (ನಟ ಮತ್ತು ರೂಪದರ್ಶಿ), ಪ್ರತಿಭಾ ಹಿತೇಶ್, (ಫ್ಯಾಶನ್ ಡಿಸೈನರ್ ಮತ್ತು ಮೇಕಪ್ ಎಕ್ಸ್ಪರ್ಟ್) ಹೆಚ್ ಜಿ ಕುಮಾರ್ (ಸಾರಿಗೆ ಹೆಚ್ಚುವರಿ ಆಯುಕ್ತರು)
ಪ್ರತಿಮಾ ಪ್ರಸಾದ್ (ಸಾಮಾಜಿಕ ಕಾರ್ಯಕರ್ತೆ, ಸಾಷ್ನಾ ಸಿಲ್ಕ್ಸ್ ನ ಮಾಲೀಕರು)
ಫ್ಯಾಶನ್ ಕ್ಷೇತ್ರ ಗಣ್ಯ ವ್ಯಕ್ತಿಗಳ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮವನ್ನು ಅಯೋಜಿಸಲಾಗಿದ್ದು ಭಾಗವಹಿಸಿದ ಎಲ್ಲರೂ ನಿರೀಕ್ಷೆಗೂ ಮೀರಿ ಪ್ರತಿಭಾವಂತರಾಗಿದ್ದರು.
ಡಾ. ಭರತ್ (ಎಂಡಿ ಸರ್ಜನ್), ಅಶ್ವಿನ್ ನೊರೊನ್ಹಾ (COO ಅಧಾನಿ ವಿಮಾನ ನಿಲ್ದಾಣ ಮುಂಬೈ) ಸಿ ಎನ್ ಧಣಿ (ಬೆಳ್ಳೂರು ಅಧ್ಯಕ್ಷರು, ಬೆಳ್ಲೂರು ಪುರಸಭೆ), ಸೌಮ್ಯಾ ಸಿಂಗ್ (ನಿರ್ದೇಶಕರು, ಡ್ರೀಮ್ಜ್ ಮೇಕರ್ಸ್ ಈವೆಂಟ್ ಮತ್ತು ಎಂಟರ್ ಟೈನ್ಮೆಂಟ್),
ಇದು ಕೇವಲ ಸ್ಪರ್ಧೆಯಾಗಿರದೆ ಕರ್ನಾಟಕದ ವಿಶಿಷ್ಟ ಶೈಲಿಯ ಪರಂಪರೆ, ಸಂಸ್ಕೃತಿ, ಫ್ಯಾಷನ್ ಉತ್ಸಾಹಿಗಳು ಮತ್ತು ಟ್ರೆಂಡ್‌ಸೆಟರ್‌ಗಳನ್ನು ಒಂದುಗೂಡಿಸುವ ಪ್ರಯತ್ನವಾಗಿದೆ.
ನಿಶಿತಾ ಸೂರ್ಯಕಾಂತ್ ಸುವರ್ಣ, ಶೋಭಾ.ಎಂ.ಪೂಜಾರಿ, ಲೆಹರಿ ವೇಲು, ಸಿಎನ್ ಧನಿ ಬೆಳ್ಳೂರು, ನಾಗೇಂದ್ರ ಮತ್ತು ದೀಪಕ್ ಶೆಟ್ಟಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆಯಿತ್ತರು.