
ಭಾರತೀಯ ಜನತಾ ಪಾರ್ಟಿ ಡೊಂಬಿವಲಿ ಗ್ರಾಮೀಣ ಘಟಕದ ವತಿಯಿಂದ ಆಯುಷ್ಮಾನ್ ಭಾರತ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಯ ಅಡಿಯಲ್ಲಿ 5 ಲಕ್ಷದ ವರಗೆ ಉಚಿತ ಉಪಚಾರ ಸಿಗುವುದು.
ಸೋಮವಾರದಿಂದ ಶನಿವಾರದವರೆಗೆ (ಶುಕ್ರವಾರ ದಂದು ಮುಚ್ಚಲಾಗಿದೆ) ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00 ರ ವರಗೆ ಹಾಗೂ ಸಂಜೆ 5.00 ರಿಂದ 8.00 ರ ವರಗೆ ಗ್ರಾಮೀಣ ಕಾರ್ಯಾಲಯ ಗಣೇಶ್ ಮಂದಿರದ ಹತ್ತಿರ, ಎಮ್. ಐ. ಡಿ. ಸಿ ಇಲ್ಲಿ ನೋಂದಣಿ ಮಾಡಬಹುದು .
ದಕ್ಷಿಣ ಭಾರತೀಯರು, ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಲಾಭವನ್ನು ಪಡೆದುಕೊಳ್ಳಬೇಕು ಎಂದು ಭಾರತೀಯ ಜನತಾ ಪಾರ್ಟಿಯ ಡೊಂಬಿವಲಿ ಗ್ರಾಮೀಣ ವಿಭಾಗದ ದಕ್ಷಿಣ ಭಾರತೀಯ ಘಟಕದ ಕಾರ್ಯಾಧ್ಯಕ್ಷ ರತನ್ ಪೂಜಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.