
ಕುಲಾಲ ಯುವ ಪ್ರತಿಭೆಗಳ ’ಅಗ್ರ ಪೂಜೆ’ ತುಳು ಯಕ್ಷಗಾನ. ಮಹಿಳೆಯರು . ಮಕ್ಕಳಿಂದ ಸಾಂಸ್ಕೃತಿಕ ವೈಭವ
ವರದಿ : ಈಶ್ವರ ಎಂ. ಐಲ್., ಚಿತ್ರ : ಭಾಸ್ಕರ್ ಮೂಲ್ಯ
ಕರಾವಳಿಯ ತುಳು ಕನ್ನಡಿಗರು ದೇಶದ ಯಾ ವಿದೇಶದ ಎಲ್ಲೆಡೆ ಇದ್ದರೂ ತಮ್ಮ ಮೂಲ ಬೇರನ್ನು ಮರೆತಿಲ್ಲ. ನಾಡಿನ ಕಲೆಯನ್ನು ಜೀವಂತವಾಗಿರಿಸುವಲ್ಲಿ ಕೇವಲ ಹಿರಿಯರು ಮಾತ್ರವಲ್ಲ ತಮ್ಮ ಮಾತೃ ಬಾಷೆಯ ಬಗ್ಗೆ ಹೆಚ್ಚಿನ ಅರಿವು ಇಲ್ಲದಿದ್ದರೂ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯುತ್ತಿರುವ ಕಿರಿಯರು ಮುಂಬಯಿಯಂತಹ ಮಹಾನಗರದಲ್ಲಿ ತುಳು ಕನ್ನಡ ಸಂಭಾಷಣೆಯನ್ನು ಇಂಗ್ಲೀಷ್ ನಲ್ಲಿ ಬರೆದು ರಂಗಭೂಮಿಯಲ್ಲಿ ಪ್ರದರ್ಶಿಸುತ್ತಿರುವ ನಿದರ್ಶನಗಳು ಕೆಲವು.
ಡಿ. 3 ರಂದು ಕುಲಾಲ ಸಂಘ ಮುಂಬಯಿ, ಮೀರಾರೋಡ್ – ವಿರಾರ್ ಸ್ಥಳೀಯ ಸಮಿತಿಯ ವಾರ್ಷಿಕ ಸ್ನೇಹ ಮಿಲನವು ಮೀರಾರೋಡ್ (ಪೂ) ಬೈರವಿ ಕಾಂಪ್ಲೆಕ್ಸ್ ಶೆನಾಯ್ ಬ್ಯಾಂಕ್ವೆಟ್ ಹಾಲ್, ನಲ್ಲಿ ಸಂಘದ ಅಧ್ಯಕ್ಷರಾದ ರಘು ಎ. ಮೂಲ್ಯ ಇವರ ಅಧ್ಯಕ್ಷತೆಯಲ್ಲಿ, ಗೌರವ ಅಧ್ಯಕ್ಷರಾದ ಪಿ. ದೇವದಾಸ ಎಲ್. ಕುಲಾಲ್ ಮತ್ತು ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರಾದ ಶಂಕರ್ ವೈ ಮೂಲ್ಯ ಇವರ ಉಪಸ್ಥಿತಿಯಲ್ಲಿ ನಡೆದಿದ್ದು, ಅಂದು ಮಧ್ಯಾಹ್ನ ನಂತರ ನೂರಾರು ಕುಲಾಲ ಸಮಾಜ ಬಾಂಧವರ ಹಾಗೂ ಕಲಾಭಿಮಾನಿಗಳ ನಡುವೆ ಕುಲಾಲ ಸಮಾಜದ ಯುವ ಪ್ರತಿಭೆಗಳು ’ಅಗ್ರ ಪೂಜೆ’ ತುಳು ಯಕ್ಷಗಾನವನ್ನು ಯಶಸ್ವಿಯಾಗಿ ಪ್ರದರ್ಶಿಸಿದೆ. ಇದರಲ್ಲಿ ಬಾಗವಹಿಸಿದ ಹೆಚ್ಚಿನ ಕಲಾವಿದರು ಪ್ರಥಮವಾಗಿ ರಂಗ ಪ್ರವೀಶಿಸಿದ್ದು ತುಳು ಬಾಷೆಯ ಬಗ್ಗೆ ಹೆಚ್ಚಿನ ಜ್ನಾನ ಇಲ್ಲದೇ ಇದ್ದರೂ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯುತ್ತಿರುವ ಇವರು ತುಳು ಸಂಭಾಷಣೆಯನ್ನು ಇಂಗ್ಲೀಷ್ ನಲ್ಲಿ ಬರೆದು ಅಭ್ಯಾಸ ಮಾಡಿ ರಂಗಸ್ಥಳ ಪ್ರವೇಶಿಸಿ ತಮ್ಮ ಅಭಿನಯ ಹಾಗೂ ವಾಕ್ ಚಾತುರ್ಯದಿಂದ ಕಲಾಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ.




ಅಗ್ರ ಪೂಜೆ’ ತುಳು ಯಕ್ಷಗಾನದ ತರಬೇತಿಯನ್ನು ಯಕ್ಷಗುರು ನಾಗೇಶ್ ಕುಮಾರ್ ಪೋಳಲಿಯವರು ನೀಡಿದ್ದು, ಅವರ ನಿರ್ದೇಶನದಲ್ಲಿ ನಡೆದ ಈ ಯಕ್ಷಗಾನದಲ್ಲಿ ಕೃಷ್ಣ – ಕೀರ್ತಿಶ್ರೀ ಮೂಲ್ಯ, ಧರ್ಮರಾಯ – ನಿಶಾ ಕುಲಾಲ್, ಭೀಷ್ಮ – ಲತಾ ಸಾಲಿಯಾನ್, ಸಹದೇವ – ದಿವಿತ್ ಬಂಗೇರ, ಶಿಶುಪಾಲ – ಆಶಾ ಮೂಲ್ಯ, ದಂತವತ್ರ – ಮೇಘನಾ ಸಾಲಿಯಾನ್, ಸೋಮದತ್ತ – ರಿಶಿತ್ ಮೂಲ್ಯ, ಭಗದತ್ತ – ಪ್ರಣೀತ ಕುಲಾಲ್, ಭೀಮನ ಪಾತ್ರದಲ್ಲಿ – ರಿಷಿಲ್ ಉದ್ಯಾವರ ಅರ್ಥಪೂರ್ಣವಾಗಿ ಅಭಿನಯಿಸಿದ್ದಾರೆ. ಮಕ್ಕಳ ಸಂಭಾಷಣೆಯಲ್ಲಿ ಹಾಗೂ ಅಭಿನಯದಲ್ಲಿ ಯಾವುದೇ ಕುಂದು ಕೊರತೆ ಕಂಡು ಬಂದಿಲ್ಲ. ಅನುಭವೀ ಕಲಾವಿದರಂತೆ ಈ ಉದಯೋನ್ಮುಖ ಪ್ರತಿಭೆಗಳು ತಮ್ಮ ಜವಾಬ್ಧಾರಿಯನ್ನು ನಿರ್ವಹಿಸುವಲ್ಲಿ ಸಫಲರಾಗಿದ್ದಾರೆ. ಒಟ್ಟಿನಲ್ಲಿ ಬಾಗವಹಿಸಿದ ಎಲ್ಲಾ ಮಕ್ಕಳು ನೆರೆದ ಎಲ್ಲಾ ಕಲಾಭಿಮಾನಿಗಳ ಹಾಗೂ ಸಮಾಜ ಬಾಂಧವರ ಪ್ರಶಂಸೆಗೆ ಪಾತ್ರರಾಗಿದ್ದಾರೆ . ಕಾರ್ಯಕ್ರಮವನ್ನು ನೇರ ಪ್ರಸಾರದಲ್ಲಿ ನೋಡಿದ ಊರ, ಪರವೂರ ಮತ್ತು ವಿದೇಶದಲ್ಲಿನ ಕಲಾಭಿಮಾನಿಗಳ ಪ್ರಶಂಸೆಗೆ ಪ್ರಾತ್ರರಾಗಿದ್ದಾರೆ.



ಯಕ್ಷಗಾನದ ಭಾಗವತರಾಗಿ ನಾದಲೋಲ ಶ್ರೀ ಪೊಲ್ಯ ಲಕ್ಷ್ಮೀ ನಾರಾಯಣ ಶೆಟ್ಟಿ, ಚೆಂಡೆ – ಪ್ರವೀಣ್ ಶೆಟ್ಟಿ, ಕಟೀಲು, ಮದ್ದಳೆ – ಹರೀಶ್ ಸಾಲಿಯಾನ್, ಚಕ್ರ ತಾಳ ಪ್ರೀತೇಶ್ ಬಿ ಮೂಲ್ಯ ಸಹಕರಿಸಿದ್ದಾರೆ.




ಅಂದು ಭಜನೆ, ಪುಟಾಣಿ ಮಕ್ಕಳಿಂದ ಸೋಲೋ ನೃತ್ಯ, ಛದ್ಮ ವೇಷ, ಮಾತ್ರವಲ್ಲದೆ ಮಹಿಳಾ ಸದಸ್ಯರಿಂದ ಹಾಗೂ ಯುವ ವಿಭಾಗದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ವು ಯಶಸ್ಸಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿಸಂಘದ ಗೌರವ ಅಧ್ಯಕ್ಷರಾದ ಪಿ. ದೇವದಾಸ ಎಲ್. ಕುಲಾಲ್. ಕಾನೂನು ತಜ್ನ ಸಂಜಯ್ ರಾಜು ಕುಂದರ್ ಪದ್ಮನಾಭ ಬಂಗೇರ ಮೀರಾರೋಡ್ . ಕುಲಾಲ ಸಂಘದ ಕಟ್ಟಡ ನಿರ್ಮಾಣ ಸಮಿತಿಯ ಉಪ ಕಾರ್ಯ ಅಧ್ಯಕ್ಷ ಸುನಿಲ್ ಆರ್ ಸಾಲ್ಯಾನ್ ,




ಸಂಘದ ಗೌ. ಪ್ರಧಾನ ಕಾರ್ಯದರ್ಶಿ ಕರುಣಾಕರ ಬಿ ಸಾಲ್ಯಾನ್ .ಗೌರವ ಕೋಶಾಧಿಕಾರಿ ಜಯ ಎಸ್. ಅಂಚನ್ . ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಸುಚಿತಾ ಡಿ. ಬಂಜನ್ .ಮೀರಾರೋಡ್ – ವಿರಾರ್ ಸ್ಥಳೀಯ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಗಳದ ಸುಂದರ ಕೆ ಮೂಲ್ಯ. ಮಾಜಿ ಕಾರ್ಯಾಧ್ಯಕ್ಷ ಚಂದು ಕೆ. ಮೂಲ್ಯ .ಕಾರ್ಯದರ್ಶಿ ನ್ಯಾ. ಉಮಾನಾಥ್ ಮೂಲ್ಯ
ಉಪ ಕಾರ್ಯಾಧ್ಯಕ್ಷ ಮೋಹನ್ ಬಂಜನ್, ಕೋಶಾಧಿಕಾರಿ ಸತೀಶ್ ಬಂಗೇರ, ಜೊತೆ ಕಾರ್ಯದರ್ಶಿ ಸದಾನಂದ ಪಿ ಸಾಲಿಯನ್, ಜೊತೆ ಕಾರ್ಯದರ್ಶಿ ಉಮೇಶ್ ಬಂಗೇರ, ಜೊತೆ ಕೋಶಾಧಿಕಾರಿ ಚಂದ್ರಹಾಸ್ ಬಿ ಮೂಲ್ಯ, ವಾಸು ಮೂಲ್ಯ, ಸಂಘಟನಾ ಕಾರ್ಯದರ್ಶಿ ಗಳಾದ ಕೃಷ್ಣ ಎಸ್ ಮೂಲ್ಯ, ಯೋಗೇಶ್ ಕೆ ಬಂಗೇರ ಸದಸ್ಯರುಗಳಾದ ವಾಮನ್ ಡಿ ಮೂಲ್ಯ, ರಾಘು ಸಿ ಮೂಲ್ಯ, ರಾಜೀವ ಬಂಗೇರ, ಮತ್ತು ರೋಹಿದಾಸ್ ಕೆ ಬಂಜನ್, ಸಲಹಾ ಸಮಿತಿಯ ಸದಾನಂದ ಕುಮಾರ್ ಸಾಲ್ಯಾನ್, ಅಶೋಕ್ ಕುಂದರ್, ಭಾಸ್ಕರ್ ಎಂ ಮುಲ್ಯ, ಹರೀಶ್ ಕುಲಾಲ್ , ಉದಯ ಮೂಲ್ಯ, ರಮೇಶ್ ಮೂಲ್ಯ, ಯಶೋಧರ್ ಎಂ ಬಂಗೇರ, ಲಿಂಗಪ್ಪ ಬಂಗೇರ, ರಾಮಚಂದ್ರ ಸಾಲಿಯಾನ್, ಸುರೇಂದ್ರ ಬಂಗೇರ, ಗಣೇಶ್ ಕುಲಾಲ್, ಪದ್ಮನಾಭ ಬಂಗೇರ, ಗೋಪಾಲ್ ವಿ. ಸಾಲ್ಯಾನ್, ವಿಶ್ವನಾಥ್ ಬಂಗೇರ, ನಾರಾಯಣ ಸಿ ಬಂಜನ್, ಸೀತಾರಾಮ ಕುಲಾಲ್, ರಾಘವೇಂದ್ರ ಬಂಗೇರ ,ತಿಮ್ಮಪ್ಪ ಕುಲಾಲ್, ಸದಾಶಿವ ಮೂಲ್ಯ, ನಾರಾಹಣ ಎಸ್. ಬಂಜನ್, ರೋಷನ್ ವಿ. ಬಂಗೇರ,
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಂದ್ರಾವತಿ ಎಸ್. ಸಾಲ್ಯಾನ್ , ಉಪ ಕಾರ್ಯಾಧ್ಯಕ್ಷೆ ರೇಣುಕಾ ಎಸ್ ಸಾಲ್ಯಾನ್, ಕಾರ್ಯದರ್ಶಿ ಪ್ರಮೀಳಾ ಎಂ. ಬಂಜನ್, ,
ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿ ಸುಜಾತ ಆರ್ ಸಾಲಿಯಾನ್, ಜೊತೆ ಕೋಶಾಧಿಕಾರಿ ನಳಿನಿ ಬಂಜನ್, ಮತ್ತು ಅರ್ಚನಾ ಎಸ್ ಕುಲಾಲ್, ಸದಸ್ಯರುಗಳಾದ , ಸುರೇಖಾ ಆರ್ ಬಂಗೇರ, ಪ್ರೇಮಾ ಪಿ ಕುಲಾಲ್, ರಸಿಕ ಸಿ. ಮೂಲ್ಯ, ಸಾವಿತ್ರಿ ಎಸ್ ಬಂಗೇರ, ಲತಾ ಯು. ಬಂಗೇರ, ಲತಾ ವೈ ಬಂಗೇರ, ಪುಷ್ಪ ಎಸ್ ಮೂಲ್ಯ, ಸುರೇಖ ಪಿ. ಬಂಗೇರ. ತುಳಸಿ ಪಿ ಬಂಗೇರ, ಮೋಹಿನಿ ಜಿ. ಸಾಲ್ಯಾನ್, ಸುಗಂಧಿ ಜಿ ಬಂಗೇರ, ಸುಮತಿ ಪಿ ಕುಲಾಲ್, ರೇಖಾ ಎಸ್. ಬಂಜನ್, ಲತಾ ಎಚ್ ಮೂಲ್ಯ , ಸುಲೋಚನಾ ಪಿ ಉದ್ಯಾವರ್ ಕವಿತಾ ಸಾಲಿಯಾನ್ ಚೇತನ ಕುಂದರ್, , ಅನಿತಾ ಎಲ್ ಮೂಲ್ಯ , ಇಂದಿರಾ ಕರ್ಮರನ್, ಶುಭ ಆರ್ ಕುಲಾಲ್ , ಶುಭ ಪಿ ಬಂಗೇರ
ಯುವ ವಿಭಾಗದ ಸದಸ್ಯರಾದ ಮಯೂರ ವೈ ಸಾಲ್ಯಾನ್, ಮೇಘಾ ಎಮ್. ಬಂಜನ್, ನಿಶಿತ ಆರ್. ಬಂಗೇರ,
ದೀಕ್ಷಾ ಕುಲಾಲ್, ಪ್ರತೀಕ್ಷಾ ಕುಲಾಲ್ ಮತ್ತು ಶಿರಾಕ್ಷಿ ಬಂಜನ್. ಸಹಕರಿಸಿದರು
——–
–