23.5 C
Karnataka
April 4, 2025
Uncategorized

ಶ್ರೀ ರಾಜನ್ ದೈವ ಶ್ರೀ ಧೂಮವತಿ ದೈವಸ್ಥಾನ ಮಿತ್ತ ಗುತ್ತು ಬಳ್ಕುಂಜೆ,  ಮುಂಬಯಿ ಸಮಿತಿಯ ವಿಶೇಷ ಸಭೆ ; 



ಅಗತ್ಯವುಳ್ಳವರಿಗೆ ಸಕಾಲದಲ್ಲಿ ಮಾಡುವ ಉಪಕಾರವೇ ಶ್ರೇಷ್ಠ ಸೇವೆ:  ವಿರಾರ್ ಶಂಕರ್ ಶೆಟ್ಟಿ

ಮುಂಬಯಿ, ಡಿ.12:   ಸೇವೆ ಮಾಡುವ ಸಾಮರ್ಥ್ಯ‌ವನ್ನು ನಮಗೆ ದೇವರು ನೀಡಿದ್ದಾರೆಂದ ಮೇಲೆ ಸೇವೆ ಮಾಡುವುದು ನಮ್ಮ ಕರ್ತವ್ಯ. ಅಗತ್ಯವುಳ್ಳವರಿಗೆ ಸಕಾಲದಲ್ಲಿ ಮಾಡುವ ಉಪಕಾರವೇ ಶ್ರೇಷ್ಠ ಸೇವೆ ಎನಿಸುತ್ತದೆ.ಎಂದು ಶ್ರೀ ರಾಜನ್ ದೈವ ಶ್ರೀ ಧೂಮವತಿ ದೈವಸ್ಥಾನ ಮಿತ್ತ ಗುತ್ತು ಬಳ್ಕುಂಜೆ, ಅಭಿವೃದ್ಧಿ ಸಮಿತಿಯ ಗೌರವ ಅಧ್ಯಕ್ಷ ವಿರಾರ್ ಶಂಕರ್ ಶೆಟ್ಟಿಯವರು ತಿಳಿಸಿದರು.

ಮೀರಾ ರೋಡ್ ಪೂರ್ವ ಹೋಟೆಲ್ ಮೆಜೆಸ್ಟಿಕ್ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿದ ಶ್ರೀ ರಾಜನ್ ದೈವ ಶ್ರೀ ಧೂಮವತಿ ದೈವಸ್ಥಾನ ಮಿತ್ತ ಗುತ್ತು  ಬಳ್ಕುಂಜೆ, ಇದರ ಮುಂಬಯಿ ಸಮಿತಿಯ ವಿಶೇಷ ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಭಾರತೀಯ ಜನತಾ ಪಕ್ಷದ ಮೀರಾ ಭಾಯಂದರ್ ದಕ್ಷಿಣ ಭಾರತೀಯ ಘಟಕದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಬಳ್ಕುಂಜೆ ಗುತ್ತಿನಾರ್ ರವೀಂದ್ರ ಶೆಟ್ಟಿ ಕೊಟ್ರಪಾಡಿಯವರನ್ನು ಗೌರವಿಸಿ ಮಾತನಾಡುತ್ತಾ ಸಮಾಜದಲ್ಲಿ ಬಹುತೇಕ ಜನರು ಸ್ವಾರ್ಥ ಸಾಧನೆಗಾಗಿ ಹವಣಿಸುತ್ತಿದ್ದಾರೆ ಆದರೆ ಸೇವೆಯೇ ಧರ್ಮಗಳಲ್ಲಿ ಶ್ರೇಷ್ಠ ಎಂದು ನಂಬಿರುವ ರವೀಂದ್ರ ಶೆಟ್ಟಿಯವರು  ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಮಾಜ ಸೇವೆ ಸಲ್ಲಿಸುತ್ತಾ , ಸಮಾಜಮುಖಿ ಚಿಂತನೆ ಮಾಡುತ್ತಾ ಬಂದಿದ್ದಾರೆ ಹಾಗಾಗಿ ಅವರು ದಿನದಿಂದ ದಿನಕ್ಕೆ ಉನ್ನತ ಸ್ಥಾನಕ್ಕೆ ಏರುತ್ತಿದ್ದಾರೆ. ಇನ್ನಷ್ಟು ಸಮಾಜ ಸೇವೆಯೊಂದಿಗೆ ಅತ್ಯುನ್ನತ ಸ್ಥಾನ ಮಾನ ಸಿಗಲಿ ಎಂದು ಶುಭ ಹಾರೈಸಿದರು. 

ಸಭೆಯಲ್ಲಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಡಾ. ಕೃಷ್ಣಕುಮಾರ್ ಶೆಟ್ಟಿ, ಗುತ್ತಿನಾರ್ – ಶ್ರೀ ರವೀಂದ್ರ ಡಿ ಶೆಟ್ಟಿ, ಬಾಲಕೃಷ್ಣ ಹೆಗ್ಡೆ, ಅಶೋಕ್ ಶೆಟ್ಟಿ, ಪ್ರಶಾಂತ್ ಅಜಿಲ, ಹರೀಶ್ ಶೆಟ್ಟಿ, ಕರುಣಾಕರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹಿಂದಿನ ಸಭೆಯ ವರದಿಯನ್ನು ಕಾರ್ಯದರ್ಶಿ ಕರುಣಾಕರ ಶೆಟ್ಟಿ ಮಂಡಿಸಿದರು. ಹಾಗೂ ದಿನಾಂಕ 10-12-2023 ರಿಂದ 4-1-2024 ರ ವರಗೆ ನಡೆಯುವ ಶ್ರೀ ರಾಜನ್ ದೈವ ಶ್ರೀ ಧೂಮವತಿ ದೈವಸ್ಥಾನ ಬಳ್ಕುಂಜೆ ಇದರ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ   ಮತ್ತು ವಿಠೋಭ ರುಖುಮಾಯಿ ಮಂದಿರದ ಜೀರ್ಣೋದ್ಧಾರಕ್ಕೆ ಸಹಕರಿಸುವಂತೆ ಸಭೆಯಲ್ಲಿ ವಿನಂತಿಸಲಾಯಿತು. 

 ಸಭೆಯಲ್ಲಿ  ಪುಷ್ಪರಾಜ್ ಎಸ್ ಶೆಟ್ಟಿ , ಗಣೇಶ್ ವಿ ಶೆಟ್ಟಿ , ಸುರೇಶ್ ವಿ ಶೆಟ್ಟಿ , ಪ್ರಸಾದ್ ಕೆ ಶೆಟ್ಟಿ , ಮಹೇಂದ್ರ ಡಿ ಶೆಟ್ಟಿ , ಸಂತೋಷ್ ಎನ್ ಶೆಟ್ಟಿ , ರಾಜೇಶ್ ಬಿ ಶೆಟ್ಟಿ , ಸುರೇಶ್ ಕೆ ಶೆಟ್ಟಿ , ಕೀರ್ತನಾ ಜೆ ರೈ , ಸುಜಾತಾ ಶೆಟ್ಟಿ , ಪ್ರಾರ್ಥನಾ ಕೆ ಶೆಟ್ಟಿ , ಸುಜಯ ಶೆಟ್ಟಿ, ಇಂದಿರಾ ಶೆಟ್ಟಿ , ಶೋಭಾ ಶೆಟ್ಟಿ , ಮಲ್ಲಿಕಾ ಶೆಟ್ಟಿ ಹಾಗೂ ಶ್ರೀ ರಾಜನ್ ದೈವ ಶ್ರೀ ಧೂಮವತಿ ದೈವಸ್ಥಾನ ಮಿತ್ತ  ಗುತ್ತು ಬಳ್ಕುಂಜೆ ಸಮಿತಿಯ ಸದಸ್ಯರು ಮತ್ತು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯನ್ನು ಸಂಘಟಕ ಬಳ್ಕುಂಜೆ ಗುತ್ತು ಗುತ್ತಿನಾರ್ ರವೀಂದ್ರ ಶೆಟ್ಟಿ ಕೊಟ್ರಪಾಡಿ ಗುತ್ತು  ನಿರ್ವಹಿಸಿದರು.

Related posts

ಇಂದು :ನ್ಯೂ ಪನ್ವೇಲ್ ನ ಶ್ರೀ ಜೈ ಅಂಬೇ ಮಾತಾ ಮಂದಿರ ದ ಲ್ಲಿ ಶ್ರೀ ರಾಮ ಮಹೋತ್ಸವ ಕಾರ್ಯಕ್ರಮ.

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ   ಶ್ರೀಜಾ ಪ್ರಭಾಕರ ಶೆಟ್ಟಿ ಶೇ: 92.80

Mumbai News Desk

ರಾಜಪ್ರಭುತ್ವದ ಕನ್ನಡಿಯಲ್ಲಿ ಕಂಡ ‘ಕಾಮಾಗ್ನಿಮಿತ್ರ’

Chandrahas

ಮಲಾಡ್ ಪೂರ್ವದ   ಶ್ರೀ ಮಹತೋಭಾರ ಶನೀಶ್ವರ ದೇವಸ್ಥಾನದಲ್ಲಿ  ಶನಿ ಜಯಂತಿ ಉತ್ಸವ :

Mumbai News Desk

ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ, ಏಪ್ರಿಲ್ 19ರಿಂದ ಜೂನ್ 1ರ ತನಕ ಏಳು ಹಂತಗಳಲ್ಲಿ ಚುನಾವಣೆ.

Mumbai News Desk

ಬಂಟರ ಸಂಘದಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ವತಿಯಿಂದ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ,

Mumbai News Desk