
ಕ್ರಷಿಕರ ಸಂಸ್ಕೃತಿ ಕಂಬಳ ಉಳಿಸೋಣ – ಬಿ.ರಾಜಾರಾಮ ಶೆಟ್ಟಿ
ಚಿತ್ರ, ವರದಿ : ಜಯ ಸಿ ಪೂಜಾರಿ ,ಉಡುಪಿ
ನಡೂರ್ ಕಂಬಳವನ್ನು ಸತೀಶ್ ಹೆಗ್ಡೆ ಸಹೋದರರು ಉತ್ತಮವಾಗಿ ಅಯೋಜಿಸಿದ್ದು, ಕಂಬಳ ಕರಾವಳಿ ಕರ್ನಾಟಕದ ಜಾನಪದ ಕ್ರೀಡೆ, ಜತೆಗೆ ಮನರಂಜನೆಯನ್ನು ನೀಡುತದೆ. ಈ ಕ್ರೀಡೆ ಕಳೆದ ಅನೇಕ ವರ್ಷಗಳಿಂದ ಸಾಂಘಿಕ ಬಲದೊಂದಿಗೆ ಬೆಳೆಯುತ್ತಿದೆ. ಕೃಷಿಕರ ಸಂಸ್ಕ್ರತಿಯ ಕಂಬಳ ಉಳಿಸಲು ನಾವೆಲ್ಲರೂ ಒಗ್ಗಟ್ಟಾಗಬೇಕು . ಎಂದು ಬ್ರಹ್ಮಾವರ ಆಶ್ರಯ ಹೋಟೆಲಿನ ಮಾಲಕ ಬಿ ರಾಜಾರಾಮ ಶೆಟ್ಟಿ ನುಡಿದರು .
ಅವರು ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ಕ್ರೀಡೆ ಒಂದಾದ ಬ್ರಹ್ಮಾವರ ತಾಲೂಕಿನ ಗ್ರಾಮೀಣ ಭಾಗದ ಬಡಗು ತಿಟ್ಟಿನ ಶ್ರೀ ಸತೀಶ್ ಹೆಗ್ಡೆ ಸಹೋದರರು ಹಾಗೂ ಸಹೋದರಿಯರು ನಡೂರ್ ಕಂಬಳ ಗದ್ದೆ ಮನೆ ಇವರ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ವರ್ಷ 10 12 2023 ರಂದು ಆದಿತ್ಯವಾರ ದಂದು ಕೃಷಿ ಮನೆತನದವರು 26 ಜೋಡಿ ತಮ್ಮ ಕೋಣಗಳ ಕುತ್ತಿಗೆಗೆ ನೊಗ ಕಟ್ಟಿ ಅವುಗಳನ್ನು ಶೃಂಗರಿಸಿ ಸಂಪ್ರದಾಯದಂತೆ ಹಸನಾಗಿ ಹದಮಾಡಿದ ಮಣ್ಣಿನ ಕೆಸರು ಗದ್ದೆಯಾದ ನಡೂದು ಕಂಬಳ ಗದ್ದೆ ಮನೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು .
ಬಳಿಕ 26 ಜೋಡಿ ಕೋಣಗಳಿಗೆ ಮತ್ತು ಮಕ್ಕಳ ನಡುವೆ ಕೆಸರು ಗದ್ದೆ ಓಟ ಸ್ಪರ್ಧೆ ಜರಗಿ ಅಂತಿಮ ಹಂತಕ್ಕೆ ಕೋಣಗಳ ಸಾಲಿನಲ್ಲಿ ಹಲಗೆಯಲ್ಲಿ
ಪ್ರಥಮ ಸ್ಥಾನ ಸಾಸ್ತಾನ ತೊಉಂಡೇಶ್ವರ ಗಣೇಶ್ ಪೂಜಾರಿ ಕೋಣ , ದ್ವಿತೀಯ ಹಾಲಾಡಿ ವರುಣ ಶ್ರೀ ವಾದಿ ರಾಜ ಕೋಣ .
ಹಗ್ಗ ಹಿರಿಯ _ ಲೋಕೇಶ್ ನಾಯ್ಕ್ ಕೋಣ ಕೊಡ್ಲಿ ಪ್ರಥಮ
ಬೈಂದೂರು ದಿಶಾ ಶ್ರೇಯಸ್ ದೇವಾಡಿಗ ಕೋಣ ದ್ವಿತೀಯ .
ಹಗ್ಗ ಕಿರಿಯ _ ಕೋಟ ಮಾರೂರು ದಿವಂಗತ ಶೀನ ಪೂಜಾರಿ ಕೋಣ ಪ್ರಥಮ
ಆರ್ಡಿ ರೋಹಿತ್ ಶೆಟ್ಟಿ ಕೋಣ ದ್ವಿತೀಯ .
ಹಗ್ಗ ಅತೀ ಕಿರಿಯ _ ಸ್ವಾಮೀ ದಾಮ ಹೊಳೆಕಟ್ಟು ಕುಂಬಾಶಿ ಕೋಣ ಪ್ರಥಮ. ಶಿರೂರು ಮುದ್ದುಮನೆ ಗೋಪಾಲ ನಾಯ್ಕ್ ಕೋಣ ದ್ವಿತೀಯ.
ಹಗ್ಗ ಜಗ್ಗಾಟ _ ಕಿರಿಯ
ವಾಣಿ ಫ್ರೆಂಡ್ಸ್ ಪ್ರಥಮ
ನೀಡೂರು ಫ್ರೆಂಡ್ಸ್ ದ್ವಿತೀಯ .
ಹಗ್ಗ ಜಗ್ಗಾಟ ಹಿರಿಯ
ಮಂದಾರ್ತಿ ಶ್ರೀರಾಮ ಫ್ರಂಡ್ಸ್ ಪ್ರಥಮ
ನೀಲಾವರ ಪ್ರಂಡ್ಸ್ ದ್ವಿತೀಯ .
ಕೆಸರು ಗದ್ದೆ ಓಟ
ಕಿರಿಯರಲ್ಲಿ ರೋಹನ್ ಪ್ರಥಮ
ಗಣೇಶ ದ್ವಿತೀಯ .
ಹಿರಿಯರಲ್ಲಿ ರವಿರಾಜ ಕುಲಾಲ್ ಪ್ರಥಮ
ಬಾರ್ಕೂರು ಸುಜಿತ್ ಪೂಜಾರಿ ದ್ವಿತೀಯ .
ಎಲ್ಲಾ ವಿಜೇತರಿಗೆ ಸಮಾರೋಪ ಸಮಾರಂಭದ ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯ ಅತಿಥಿಗಳು ಬಹುಮಾನ ವಿತರಿಸಿದರು .


ಕಂಬಳ ಕೋಣಗಳ ನಿರ್ಣಾಯಕರಾಗಿ ಅಲೆಯ ನಾಗರಾಜ, ಶೆಟ್ಟಿ ,ನಿತ್ಯಾನಂದ ಶೆಟ್ಟಿ ಮಂದಾರ್ತಿ , ರಾಜೇಶ್ ಚಂದನ್ ನಡೂರು ,ನೋಡಿ ಕೊಂಡರೆ ನಡೂರು ಪಂಚಾಯ್ತಿಯ ಅಧ್ಯಕ್ಷರು ಜಲಂಧರ್ ಶೆಟ್ಟಿಯವರು ಮತ್ತು ಕಂಬಳ ಗದ್ದೆ ಮನೆಯವರೆಲ್ಲ ಕೂಡಿ ಕಂಬಳೋತ್ಸವಕ್ಕೆ ಚಾಲನೆ ನೀಡಿದರು . ಬೆಳಿಗ್ಗೆ ಅರ್ಚಕರಾದ ಶ್ರೀನಿವಾಸ್ ಭಟ್ರು ಮತ್ತು ಗಣೇಶ್ ಭಟ್ರು ಪೂಜಾ ವಿಧಾನವನ್ನು ಮಾಡಿದರು . ಜಲಂಧರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸುವಲ್ಲಿ ಸಹಕರಿಸಿದರೆ ಕಂಬಳ ಗದ್ದೆ ಮನೆಯ ಮಂದಾರ ಎನ್ ಹೆಗ್ಡೆಯವರು ಆರಂಭದಲ್ಲಿ ಬಂದವರೆನ್ನೆಲ್ಲ ಸ್ವಾಗತಿಸಿ ಅವರೆನ್ನೆಲ್ಲ ಪರಿಚಯಿಸಿ ಅಂತಿಮದಲ್ಲಿ ವಂದಿಸಿ ಧನ್ಯವಾದ ವಿತ್ತರು .