
ವರದಿ : ಹೇಮರಾಜ್ ಕರ್ಕೇರ ಕಾಪು
ಮುಂಬಯಿ, ಡಿ.15 : ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾದ ಉಪೇಂದ್ರ ಪುಜಾರಿಯವರು ಈ ಬಾರಿ ಶಬರಿಮಲೆಗೆ 24ನೇ ವರ್ಷದ ಪಾದ ಯಾತ್ರೆ ಯನ್ನು ಕೈಗೊಂಡಿರುವರು. ನವಂಬರ್ ಮಧ್ಯ ಭಾಗದಲ್ಲಿ ದಹಿಸರ್ ನಲ್ಲಿರುವ ಶ್ರೀ ವಿಠಲ ರುಕ್ಮಿಣಿ ದೇವಸ್ಥಾನ ದಲ್ಲಿ ಮಾಲಾಧಾರಾಣೆ ಮಾಡಿ ಸನಿಹದಲ್ಲಿರುವ ಅಯ್ಯಪ್ಪ ಚಾರಿಟೇಬಲ್ ನಲ್ಲಿ ಇರುಮುಡಿ ಕಟ್ಟಿ ಪಾದಯಾತ್ರೆಯನ್ನು ಆರಂಭಿಸಿರುವರು. ಉಪೇಂದ್ರ ಸ್ವಾಮಿಯ ಪಾದ ಯಾತ್ರೆಯು ನವಿ ಮುಂಬಯಿಯಿಂದಾಗಿ ಕರಾಡ್,ಪಂಡರಪುರ ,ಶನಿ ಸಿಂಗ್ನಾಪುರ್ ನಿಂದಾಗಿ ಬಿಜಾಪುರದಿಂದಾಗಿ, ಮಂತ್ರಾಲಯ , ತಿರುಪತಿಯ ದರ್ಶನ ಪಡೆದು ಚೆನ್ನೈ ಯ ಪಳನಿ ಸುಬ್ರಮಣ್ಯ ದೇವರುಗಳ ಅನುಗ್ರಹ ಪಡೆದು ಧರ್ಮಶಾಸ್ತ ನ ಸನ್ನಿಧಿ ಕಾಣಲು ಮುಂದಡಿ ಇಡುತ್ತಾ ಸಾಗುತ್ತಾರೆ. ಸುಮಾರು ಎರಡು ಸಾವಿರಕ್ಕೂ ಹೆಚ್ಚು ಕಿಲೋಮೀಟರ್ ಸಾಗಿ ಬರಲು ಎರಡು ತಿಂಗಳು ತಗಲುತ್ತದೆ.ದುರ್ಗಮ ಹಾದಿಯಿಂದ ಸಾಗಿ ಬರುವದು ಅಯ್ಯಪ ಸ್ವಾಮಿಯ ದಯೆ ಎನ್ನುತ್ತಾರೆ ಉಪೇಂದ್ರ ಸ್ವಾಮಿಯವರು.
ಈ ಬಾರಿ ವಿದ್ಯಾ ವಿಹಾರ್ ನ ಶ್ರೀ ಸಾಸ್ತಾ ಸೇವಾ ಸಮಿತಿಯ ಮೀರಾ ರೋಡ್ ನ ಪಾಂಡು ತಿಮ್ಮಪ್ಪ ಶೆಟ್ಟಿಸ್ವಾಮಿ ಉಪೇಂದ್ರ ಸ್ವಾಮಿಯವರ ಜತೆ ಪಾದಯಾತ್ರೆ ಮಾಡುತ್ತಿದ್ದಾರೆ.
1989 ರಲ್ಲಿ ಮೊದಲ ಬಾರಿಗೆ ಮಾಲಾಧಾರಣೆ ಮಾಡಿದ ಉಪೆಂದ್ರರು 1993 ರಲ್ಲಿ ಪಾದ ಯಾತ್ರೆಯನ್ನು ಕೈಗೊಳ್ಳು ತ್ತಾರೆ.ಒಮ್ಮೆ ಮಾಲಾಧಾರಿ ಯಾಗಿ ಯಾತ್ರೆ ಕೈ ಗೊಂಡಿರುವಾಗ ತನ್ನ ಮಾತೊಶ್ರೀ ಯವರು ನಿಧನರಾದಗ ಯಾತ್ರೆಯನ್ನು ಮೊಟಕು ಗೊಳಿಸಿದ್ದರು.
ಮೂಲತಃ ಬಂಟ್ವಾಳದ ಸರಪಾಡಿ ಗ್ರಾಮದವರಾದ ಉಪೇಂದ್ರ ಪುಜಾರಿ ಅವರದು ಪತ್ನಿ ಪುಷ್ಪ ಮತ್ತು ಸುಪುತ್ರ ತೇಜಸ್ ಅವರೊಂದಿಗಿನ ಪುಟ್ಟ ಸಂಸಾರ. ತನ್ನ 24ನೇ ಪಾದಯಾತ್ರೆಗಳಿಗೂ ಮುಂಬಯಿಯ ಉದ್ಯಮಿ ಶ್ರೀ ನಾಗೇಶ್ವರ ದೇವಸ್ಥಾನದ ಗೌರವ ಅಧ್ಯಕ್ಷ ಸುರೇಶ್ ಭಂಢಾರಿ ಅವರ ಆತ್ಮೀಯ ಸಹಕಾರ ಮತ್ತು ನಲ್ಲೂರು ರಘುವೀರ್ ಶೆಟ್ಟಿ ಅವರ ಆಶೀರ್ವಾದ ವನ್ನು ಉಪೇಂದ್ರ ಸ್ವಾಮಿಯು ಸದಾ ನೆನಪಲ್ಲಿಡುತ್ತಾರೆ.
ಮುಂದಿನ ವರ್ಷದಲ್ಲಿ 25ನೇ ವರ್ಷದ ಪಾದಯಾತ್ರೆಯನ್ನು ಆರಂಭಿಸಲಿರುವ ಉಪೇಂದ್ರ ಸ್ವಾಮಿಗೆ ಶ್ರೀ ಧರ್ಮಶಾಸ್ತ ನ ಅನುಗ್ರಹ ವಿರಲಿ. ಉಪೇಂದ್ರ ಸ್ವಾಮಿ ಯವರು ಇಂದಿನ ಯುವ ಜನಾಂಗಕ್ಕೆ ಸ್ಪೂರ್ತಿಯಾಗಲಿ ಎಂಬ ಹಾರೈಕೆ.


