
ವೇಣೂರು ಸಮೀಪದ ಅಂಡೆಂಜ ಗ್ರಾಮದ ಮಂಜಿ ಬೆಟ್ಟು ಕೇಶವ ಬುನ್ನಾನ್ ಇವರ ನೇತ್ರತ್ವದಲ್ಲಿ, ಹಾಗೂ ಮುಂಬೈ ವಸಾಯಿ ಪರಿಸರದ ಕೊಡುಗೈ ದಾನಿಗಳು ಹಾಗೂ ಹೊಟೇಲ್ ಉದ್ಯಮಿಗಳಾದ ದೇವೇಂದ್ರ ಬುನ್ನಾನ್, ಹಾಗೂ ರಾಮ ಮಡಿವಾಳ ಇವರ ಮುಂದಾಳ್ತನದಲ್ಲಿ ಬುನ್ನಾನ್ ಕುಟುಂಬದ ದೈವದ ಕೋಲ(ನೇಮವು) ಬಹಳ ವಿಜೃಂಭಣೆಯಿಂದ, ಭಕ್ತಿಯಿಂದ ತಾರೀಕು 13/12/2023 ಬುಧವಾರ ರಾತ್ರಿ 8.30 ರಿಂದ ಜರುಗಿತು.

ಬಿರವು,ಬಾಬು ಬಳಗದರಿಂದ ಕೋಲ ಹಾಗೂ ದಿನೇಶ್ ಮೂಡಬಿದ್ರೆ ಬಳಗದವ ರಿಂದ ವಾಧ್ಯ ನಾದಸ್ವರ, ತುಳುನಾಡು ಹಾಗೂ ಮುಂಬೈಯ ಭೂತಾರಾಧನೆಯ ದಾರ್ಮಿಕ ಸಂಘಟಿಗ ಉಮೇಶ್ ಕಾಂತಾವರ ಇವರ ಮಧ್ಯಸ್ಥಿಕೆಯಲ್ಲಿ ನೆರವೇರಿತು. ಪ್ರಥಮವಾಗಿ, ಗ್ರಾಮದ ಪುರೋಹಿತರಿಂದ ಪೂಜಾ ವಿಧಾನಗಳು ನಡೆದ , ಆನಂತರ 5.30 ಕ್ಕೆ ಸಂಜೆ ಸರಿಯಾಗಿ ಬಂಡಾರ ಇಳಿಸಿವೇಕೆ ನಡೆಯಿತು. ಬಂದ ಭಕ್ತಾದಿಗಳು, ಹಾಗೂ ಗ್ರಾಮದ ನೆರೆಕರೆ ಹಾಗೂ ಕುಟುಂಬದ ಬಂಧು ಬಾಂಧವರಿಗೆ ಅನ್ನದಾನದ ಸೇವೆ ಹಾಗೂ ಚಾ,ಲಘು ಉಪಹಾರದ ವ್ಯವಸ್ಥೆ ಮಾಡಲಾಯಿತು .








ಸುಮಾರು 8 ದೈವಗಳ ನೇಮ ಸೇವೆ ರಾತ್ರಿ 8.30 ರಿಂದ ಮರುದಿನ ಮಧ್ಯಾಹ್ನ 2.30 ತನಕ ಬಹಳ ಅರ್ಥಪೂರ್ಣವಾಗಿ ಸುಮಾರು ಅಂದಾಜು 1000 ಜನ ಭಕ್ತಾಧಿಗಳ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು. ಈ ಧಾರ್ಮಿಕ ದೈವಾರಾಧನೆ, ಕಾರ್ಯಕ್ರಮದಲ್ಲಿ ,ಕೇವಲ ಬುನ್ನಾನ್ ಪರಿವಾರ ಅಲ್ಲದೆ ಇತರ ಜಾತಿ, ಪರಜಾತಿ ಬಂದು ಭಾಂದವರು, ಊರು ಪರವೂರಿನವರು ಶ್ರದ್ಧೆ ಭಕ್ತಿ ಬಂದು , ಬುನ್ನಾನ್ ಕುಟುಂಬದ ದೈವದ ನೇಮೋತ್ಸವದಲ್ಲಿ ಪಾಲ್ಗೊಂಡರು.