23.5 C
Karnataka
April 4, 2025
ಕರಾವಳಿ

ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಅವರ ಅಭಿನಂದನಾ ಕಾರ್ಯಕ್ರಮ – ಸಿರಿತುಪ್ಪೆ




ಬನ್ನಂಜೆ ಬಾಬು ಅಮೀನ್ ಜಾನಪದ,ಸಾಹಿತ್ಯ ಲೋಕಕ್ಕೆ ನೀಡಿರುವ ಕೊಡುಗೆ ಅಪಾರ – ಪ್ರೊ.ಚಿನ್ನಪ್ಪ ಗೌಡ.

ಚಿತ್ರ, ವರದಿ : ಜಯ ಸಿ ಪೂಜಾರಿ, ಉಡುಪಿ.

ಜಾನಪದ ಲೋಕದ ಬಾಬಣ್ಣ ಜಾನಪದ ವಿದ್ವಂಸರಲ್ಲಿ ಒಬ್ಬರು, ಅವರು ಜಾನಪದದ ಒಳ ಅರ್ಥವನ್ನು ಮತ್ತು ಹೊರ ಅರ್ಥವನ್ನು ತಿಳಿದಿರುವ ತಜ್ಞ ಅಂತ ಹೇಳಬಹುದು .ಅವರಿಗೆ ಕರ್ನಾಟಕ ರಾಜ್ಯೋತ್ಸವ ಸಿಕ್ಕಿರುವುದು ತುಳು ನಾಡಿಗೆ ಸಿಕ್ಕಿದ ದೊಡ್ಡ ಪ್ರಶಸ್ತಿ . ಬನ್ನಂಜೆ ಬಾಬು ಅಮೀನರು ಜಾನಪದ ಸಾಂಸ್ಕ್ರತಿಕ ಸಾಹಿತ್ಯ ಲೋಕದಲ್ಲಿ ಮಾಡಿರುವ ಅದ್ಧ್ಯಯನದಿಂದ ನೀಡಿದ ಕೊಡುಗೆ ಅತ್ಯಮೂಲ್ಯವಾದದ್ದು . ಅವರು ಸಂಗ್ರಹ ಮಾಡಿ ಕೊಟ್ಟಿರುವ ಅಖರ ಸಾಮಗ್ರಿಗೆ ಬೆಲೆ ಕಟ್ಟಲು ಅಸಾಧ್ಯ . ಜ್ಞಾನ ಭಂಡಾರವೆನಿಸಿದ ಅವರು ಯಾರ ಸಭೆಯಲ್ಲಿ ಆದರೂ ತಪ್ಪು ಸಿಕ್ಕಿದರೆ ಕೂಡಲೇ ಏರು ದ್ವನಿಯಲ್ಲಿ ಮಾತಾಡುವವರು . ಅವರು ಜಾನಪದ ಅಧ್ಯಯನ ವೀರ ಎಂದು ವಿಶ್ರಾಂತ ಕುಲಪತಿ ಪ್ರೋ .ಕೆ ಚೆನ್ನಪ್ಪ ಗೌಡ ನುಡಿದರು .

ಅವರು ಹಿರಿಯ ಜಾನಪದ ವಿದ್ವಾಂಸ, ಸಮಾಜ ಸೇವಕ ಬನ್ನಂಜೆ ಬಾಬು ಅಮೀನರು 80 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಹಿನ್ನಲೆಯಲ್ಲಿ ಬನ್ನಂಜೆ ಬಾಬು ಅಮೀನ್ 80 ಅಭಿನಂದನಾ ಸಮಿತಿ ವತಿಯಿಂದ ಬನ್ನಂಜೆ ಸಭಾಗ್ರಹದಲ್ಲಿ ರವಿವಾರ ಹಮ್ಮಿಕೊಂಡ ಸಿರಿ ತುಪ್ಪೆ ಕಾರ್ಯಕ್ರಮದಲ್ಲಿ ಮಾತನಾಡಿದರು .

ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮಾತನಾಡಿ ಬರಹಗಾರನಿಗೆ ಬರಹದ ಒತ್ತಡ ತುಡಿತ ವಿದ್ದಾಗ ಉತ್ತಮ ಬರಗಳು ಹೊರ ಹೊಮ್ಮಲು ಸಾಧ್ಯ . ಅಮಿನರಿಗೆ ವಿಶ್ವ ವಿದ್ಯಾಲಯದಲ್ಲಿ ಇಷ್ಟರವರೆಗೆ ಡಾಕ್ಟರೇಟ್ ಸಿಗಬೇಕಿತ್ತು . ಆದರೆ ಸಿಗಲಿಲ್ಲ . ಅವರಿಗೆ ಇವತ್ತಿನ ಸಭೆಯಲ್ಲಿ ಇದ್ದ ಅಭಿಮಾನಿಗಳೇ ಅವರಿಗೆ ದೊರೆತ ದೊಡ್ಡ ಡಾಕ್ಟರೇಟ್ ಪ್ರಶಸ್ತಿ ಎಂದರು .
ಕುದ್ರೋಳಿ ಗೋಕರ್ಣಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ತನ್ನ ಮಾತಿನಲ್ಲಿ ಕೆಲವರು ಹಣ ಕೊಟ್ಟು ಡಾಕ್ಟರೇಟ್ ಪ್ರಶಸ್ತಿ ಪಡೆಯುತ್ತಾರೆ ಆದರೆ ಬನ್ನಂಜೆಯವರಿಗೆ ಅವರ ಅಭಿಮಾನಿಗಳೇ ಡಾಕ್ಟರೇಟ್ ಪ್ರಶಸ್ತಿ ಎಂದು ಅಭಿನಂದನಾ ಗ್ರಂಥ ಸಿರಿ ಕುರಲ್ ಅನಾವರಣಗೊಳಿಸಿದರು .
ಆದರ್ಶ ,ಸತ್ಯ ನಿಷ್ಠೆ ,ಧರ್ಮಗಳ ಬಗ್ಗೆ ಭಾಷಣ ಮಾಡುವವರು ನಿಜ ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿ ಬದುಕಿದರೆ ನಾರಾಯಣ ಗುರುಗಳ ಸಂದೇಶಕ್ಕೆ ಬೆಲೆ ಕೊಟ್ಟಂತಾಗುತ್ತದೆ ಎಂದು ತುಲಾಭಾರ ಮತ್ತು ಅಭಿನಂದನೆ ಸ್ವೀಕರಿಸಿದ ಬನ್ನಂಜೆ ಬಾಬು ಅಮೀನ್ ಹೇಳಿದರು .


ಅಭಿನಂದನ ಸಮಿತಿ ಅಧ್ಯಕ್ಷ ಬಿ ಜಯಕರ ಶೆಟ್ಟಿ ಇಂದ್ರಾಳಿ, ಜಾನಪದ ವಿದ್ವಾಂಸ ಡಾ ವೈ ಎನ್ ಶೆಟ್ಟಿ, ಮುಂಬೈ ಉದ್ಯಮಿ ಮೇನಾಲ ಗುತ್ತು ಕಿಶನ್ ಜೆ ಶೆಟ್ಟಿ , ಬನ್ನಂಜೆ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಮಾದವ ಬನ್ನಂಜೆ , ಕಾರ್ಯಾಧ್ಯಕ್ಷ ರಘುನಾಥ ಮಾಬಿಯನ್ , ಮಹೇಶ್ ಎಸ್ ಸುವರ್ಣ ಬೋಳೂರು ಉಪಸ್ಥಿತರಿದ್ದರು.
ಆರಂಭದಲ್ಲಿ ನಾಡೋಜ ಡಾ ಜಿ ಶಂಕರ್, ಪ್ರವರ್ತಕರು ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಇವರು ಬನ್ನಂಜೆ ಬಾಬು ಅಮೀನರ ಸಿರಿತುಪ್ಪೆ ತುಳಸಿಗೆ ಕದಿರು ಕಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಹಿರಿಯ ಸಾಹಿತಿ ಬಿ ಎಂ ರೋಹಿಣಿ ,ಮುಂಬೈಯ ಅಕ್ಷಯ ಮಾಸಪತ್ರಿಕೆಯ ಸಂಪಾದಕರು ಹರೀಶ್ ಹೆಜಮಾಡಿ ಉಪಸ್ಥಿತರಿದ್ದು ಅಮೀನರ ಬಗ್ಗೆ ಸಂಧರ್ಭೋಚಿತವಾಗಿ ಮಾತನಾಡಿದರು .
ಬಳಿಕ ವಿಚಾರ ಗೋಷ್ಠಿಯಲ್ಲಿ ಡಾ ಗಣನಾಥ ಎಕ್ಕಾರ್, ಡಾ ದುಗ್ಗಪ್ಪ ಕಜೆಕಾರ್ ,ಡಾ ಯೋಗೀಶ್ ಕೈರೋಡಿ, ಡಾ ಭರತ್ ಕುಮಾರ್ ಪೊಲಿಪು ಮುಂಬೈ , ಡಾ ಮಹಾಲಿಂಗು ಕಲಕುಂದ್ ಇವರೆಲ್ಲ ಬನ್ನಂಜೆಯವರ ಕ್ರತಿಯ ಬಗ್ಗೆ ಮತ್ತು ಅವರು ಸಂಗ್ರಹಿಸಿದ ಜಾನಪದ ಬಗ್ಗೆ ಮಾತಾಡಿದರೆ, ಆರಾಧನೆ ಗೋಷ್ಠಿಯಲ್ಲಿ ಪರಮಾನಂದ ಸಾಲಿಯಾನ್, ಶ್ರೀಕಾಂತ್ ಶೆಟ್ಟಿ , ಕೆ ಎಲ್ ಕುಂಡಂತಾಯ ,ತಮ್ಮ ತಮ್ಮ ಒಡನಾಟವನ್ನು ಬನ್ನಂಜೆಯವರಲ್ಲಿ ಹಂಚಿಕೊಂಡ ನೆನಪುಗಳನ್ನು ಸ್ಮರಿಸಿದರು.
ಕಾರ್ಯ ಕ್ರಮದ ಮದ್ಯದಲ್ಲಿ ಸೂರ್ಯೋದಯ ಪೆರಂಪಳ್ಳಿ ಇವರು ನಿರ್ಮಿಸಿದ ಬನ್ನಂಜೆ ಬಾಬು ಅಮೀನರ ಸಾಕ್ಷ್ಯ ಚಿತ್ರ ಪ್ರದರ್ಶಿಸಲಾಯುತು.


ಇದೆ ಸಂದರ್ಭದಲ್ಲಿ ಬನ್ನಂಜೆ ಬಾಬು ಅಮೀನ್ ದಂಪತಿಗಳಿಗೆ ಆಳೆತ್ತರದ ಸ್ಮರಣಿಕೆ ನೀಡಿ, ಆರತಿ ಬೆಳಗಿ, ಅಕ್ಷತೆಹಾಕಿ ವಿಶೇಷವಾಗಿ ಸನ್ಮಾನಿಸಲಾಯಿತ .
ಬಾಬು ಅಮೀನರು ಬರೆದ ಕ್ರತಿಗಳಿಂದ ಅವರನ್ನು ಅಕ್ಷರ ತುಲಾಭಾರ ಮಾಡಲಾಯಿತು .ತಾಳೆಗರಿಯಲ್ಲಿ ಬರೆದ ಸನ್ಮಾನ ಪತ್ರವನ್ನು ಅರ್ಪಿಸಲಾಯಿತು .
ಸಂಘಟನಾ ಕಾರ್ಯದರ್ಶಿ ದಯಾನಂದ ಕರ್ಕೇರ ಉಗ್ಗೇಲ್ಬೆಟ್ಟು ಸ್ವಾಗತಿಸಿ, ಕಾರ್ಯದರ್ಶಿ ಪಾಂಡು ಕೋಟ್ಯಾನ್ ವಂದಿಸಿದರು .ಚಂದ್ರಹಾಸ ಬಳಂಜ ಅರ್ಪಿತಾ ಶೆಟ್ಟಿ ನಿರೂಪಿಸಿದರು .

Related posts

ಶಿಲಾಮಯಗೊಳ್ಳುತ್ತಿರುವ ಕಾಪು ಮಾರಿಯಮ್ಮನ ದೇಗುಲ ಕಾಮಗಾರಿ ವೀಕ್ಷಣೆ : ಆದ್ಯಾತ್ಮ ಗುರು ಶ್ರೀ ಶ್ರೀ ಶ್ರೀ ರವಿಶಂಕರ್ ಗುರೂಜಿ

Mumbai News Desk

ಕಾಪು ಮಾರಿಗುಡಿ ದೇವಸ್ಥಾನ ನಿರ್ಮಾಣಕ್ಕೆ ಉಪ್ಪಳದಿಂದ ಶಿರೂರು ಭಾಗದ ಎಲ್ಲಾ ಮೊಗವೀರ ಭಾಂದವರು ಸಹಕಾರ ನೀಡುತ್ತೇವೆ : ದ.ಕ. ಮೊಗವೀರ ಮಹಾಜನ ಸಂಘ

Mumbai News Desk

ಕುಲಾಲ  ಸಂಘ ಮುಂಬೈ ಯ  ಕುಲಾಲ ಭವನ ಮಂಗಳೂರು ಬ್ಯಾಂಕ್ವೆಟ್ ಹಾಲ್ ಗೆ ಮುಹೂರ್ತ,

Mumbai News Desk

ಮುಂಡ್ಕೂರು ಕಜೆ ಮಾರಿಗುಡಿಯ ಗರ್ಭಗುಡಿಗೆ ಶಿಲಾನ್ಯಾಸ ಹಾಗ ನಿಧಿ ಕಳಶ ಸ್ಥಾಪನಾ ಕಾರ್ಯಕ್ರಮ.

Mumbai News Desk

ಶಿಬರೂರು ನೂತನ ದ್ವಾರಕ್ಕೆ ಶಿಲಾನ್ಯಾಸ*

Mumbai News Desk

ನ.21ರಂದು ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ 4ನೇ ಜಿಲ್ಲಾ ಸಮ್ಮೇಳನ

Mumbai News Desk