
ಮಂಗಳೂರಿನ ಹೆಸರಾಂತ ಸಾಮಾಜಿಕ ಸಂಘಟನೆ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ,ಇದರ 9ನೇ ವರ್ಷದ ಮೂಲತ್ವ ವಿಶ್ವ ಪ್ರಶಸ್ತಿ ಪ್ರಧಾನ ಸಮಾರಂಭವು ಇದೇ ಡಿ.24ರಂದು ಮಂಗಳೂರಿನ ಕೊಡಿಯಲ್ ಬೈಲ್ ಶಾರದ ವಿದ್ಯಾಲಯದ ಸಭಾಗ್ರಹದಲ್ಲಿ ಜರಗಲಿದೆ.
ಈ ಬಾರಿಯ ಮೂಲತ್ವ ವಿಶ್ವ ಪ್ರಶಸ್ತಿಗೆ , ಛತ್ತಿಸಘಡ್ ರಾಜನನ್ದಗಾಂವ್ ನ ಸಾಮಾಜಿಕ ಕಾರ್ಯಕರ್ತೆ ಪದ್ಮಶ್ರೀ ಫೂಲ್ಬಾಸನ್ ಬಾಯಿ ಯಾದವ್ ಅವರನ್ನು ಆಯ್ಕೆ ಮಾಡಲಾಗಿದೆ.

ಫೂಲ್ಬಾಸನ್ ಬಾಯಿ ಯಾದವ್ ಓರ್ವ ಸಾಮಾಜ ಸೇವಕರಾಗಿದ್ದು, ಬಮಲೇಶ್ವರಿ ಜನಹಿತ್ ಕಾರಿ ಸಮಿತಿ ಎಂಬ ಸರಕಾರೇತರ ಸಂಸ್ಥೆಯ ಮೂಲಕ ಛತ್ತೀಸ್ಘಡ್ ನ ,ಸಾಮಾಜಿಕವಾಗಿ, ಹಾಗೂ ಆರ್ಥಿಕವಾಗಿ ಹಿಂದುಳಿದ ಮಹಿಳೆಯರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವರು .
ಖ್ಯಾತ ಮುಳುಗು ತಜ್ಞ,ಸಮಾಜ ಸೇವಕ ಈಶ್ವರ
ಮಲ್ಪೆ, ಗೋವಿಂದಾಸ್ ಕಾಲೇಜ್ ಸುರತ್ಕಲ್ ನ ಎನ್ ಎಸ್ ಎಸ್ ಘಟಕದ ಕಾರ್ಯದರ್ಶಿ ಹಿತ ಉಮೇಶ್, ಯುನಿವರ್ಸಿಟಿ ಕಾಲೇಜ್ ಹಂಪನಕಟ್ಟ ,ಇದರನ ಪಿ ವೋ ಕೆಡೇಟ್(ನೇವಲ್) ಪ್ರಜ್ವಲ್ ಜಿ.ಶೆಟ್ಟಿ, ಯೂನಿವರ್ಸಿಟಿ ಕಾಲೇಜ್ ,ಹಂಪನಕಟ್ಟ ,ಇದರ ಸೀನಿಯರ್ ಅಂಡರ್ ಆಫೀಸರ್(ಆರ್ಮಿ) ಗೌತಮಿ ಪೂಜಾರಿ,
ಶ್ರೀ ಗೋಕರ್ಣನಾಥೇಶ್ವರ ಕಾಲೇಜ್ ,ಮಂಗಳೂರು ,ಇದರ ರೆಡ್ ಕ್ರಾಸ್ ಘಟಕದ ಸದಸ್ಯೆ ಹಾಗೂ ಕಾಮರ್ಸ್ ಎಸೋಸಿಯೇಶನ್ ನ ಕಾರ್ಯದರ್ಶಿ ಪ್ರೀತಿಕಾ ಎ , ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಸಿಸಿ ಟೆಕ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕಿ ಪೂರ್ಣಿಮಾ ಶೆಟ್ಟಿ , ಇವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರಧಾನಿಸಲಾಗುವುದು.

ಕಾರ್ಯಕ್ರಮದ ವಿವರ : ಬೆಳ್ಳಿಗ್ಗೆ 10 ಗಂಟೆಯಿಂದ 11.30ರ ತನಕ ಪ್ರಶಸ್ತಿ ಪ್ರಧಾನ ಸಮಾರಂಭ
11 30ಯಿಂದ 12ರ ವರೆಗೆ ಪದ್ಮಶ್ರೀ ಶ್ರೀಮತಿ
ಪುಲ್ಬಾಸನ್ ಬಾಯ್ ಯಾದವ್ ಅವರೊಂದಿಗೆ ಸಂವಾದ.
12 ರಿಂದ 1 ಗಂಟೆ ತನಕ ಸಾಂಸ್ಕೃತಿಕ ಕಾರ್ಯಕ್ರಮ ,ಬಳಿಕ ಪ್ರೀತಿ ಭೋಜನ.
ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕ ಪ್ರಕಾಶ್ ಮೂಲತ್ವ, ಹಾಗೂ ಟ್ರಸ್ಟಿಗಳಾದ ಕಲ್ಪನ ಪಿ ಕೋಟ್ಯಾನ್, ಶ್ರೀಮತಿ ಶೈನಿ, ಹಾಗೂ ಲಕ್ಷ್ಮೀಶ ಪಿ.ಕೋಟ್ಯಾನ್ ಆದರದ
ಸ್ವಾಗತ ಬಯಸಿದ್ದಾರೆ.
ಹೆಚ್ಚಿನ ವಿವರಗಳಿಗೆ : 9036478093 ,www.moolathva.org .