
ಅಯ್ಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಜನವರಿ. 22ರಂದು ನಡೆಯಲಿರುವ ಶ್ರೀರಾಮ ಬಿಂಬ ಪ್ರಾಣ ಪ್ರತಿಷ್ಠೆಯ ಸಂದರ್ಭ ಉಪಸ್ಥಿತರಿರುವಂತೆ ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕದ ಪ್ರಧಾನ ಕಾರ್ಯದರ್ಶಿ , ಉಡುಪಿ ಜಿಲ್ಲೆ ಶಂಕರಪುರ ದ್ವಾರಾಕಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿಯವರನ್ನು ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಸಮಿತಿ ಅಧಿಕೃತವಾಗಿ ಆಹ್ವಾನಿಸಿದೆ.

ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪಟ್‌ರಾಯ್ ಡಿಸೆಂಬರ್ 14ರಂದು ರವಾನಿಸಿರುವ ಕೋರಿಕೆ ಪತ್ರ ತಲುಪಿದೆ ಎಂದು ಮಠದ ಮಾಹಿತಿ ತಿಳಿಸಿದ್ದಾರೆ.