ವಸಯಿ : ಸಾರ್ವಜನಿಕ ಶ್ರೀ ಶನೀಶ್ವರ ಸೇವಾ ಸಮಿತಿ, ನವ್ ಯುಗ್ ನಗರ್ ದಿವಾನ್ಮಾನ್ ವಸಯಿ ಪಶ್ಚಿಮ ಇದರ ಬೆಳ್ಳಿ ಹಬ್ಬದ ಸಲುವಾಗಿ ತಾ 14.01.24ನೇ ಆದಿತ್ಯವಾರದಂದು ಮದ್ಯಾಹ್ನ 3 ಗಂಟೆಗೆ ಅಹ್ವಾನಿತ ಒಂಬತ್ತು ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮವು ಶ್ರೀ ಹನುಮಾನ್ ಮಂದಿರ ಹಾಲ್, ದೀವನ್ಮಾನ್ ತಲವಿನ ಹತ್ತಿರ, ವಾಸಯಿ ಪಶ್ಚಿಮ ಇಲ್ಲಿ ಜರಗಲಿರುವುದು. ಈ ಪುಣ್ಯ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಮಂಡಳಿಗಳು ತಮ್ಮ ಮಂಡಳಿಯ ಅಧಿಕೃತ ಪತ್ರದಲ್ಲಿ ಭಾಗವಹಿಸುವ ಕುರಿತು ತಿಳಿಸಿ ಮೊಬೈಲ್ ನಂಬರ್ 9869736825 ಗೆ ವಾಟ್ಸಾಪ್ ಮೂಲಕ ತಾ 01.01.24 ರ ಒಳಗೆ ತಿಳಿಸಬೇಕಾಗಿ ವಿನಂಬ್ರ ವಿನಂತಿ.
ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ಮಂಡಳಿಯ ಅಧ್ಯಕ್ಷ/ಕಾರ್ಯದರ್ಶಿ ಯವರನ್ನು ಗೌರವ ಧನದೊಂದಿಗೆ ಪ್ರೀತಿ ಪೂರ್ವಕವಾಗಿ ಸನ್ಮಾನ ಮಾಡಿ ಗೌರವಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸುವ ಮೊಬೈಲ್ ನಂಬರ್ 9892246265/9869549013/9975231169.
ನಿಯಮಗಳು :
1) ತಮ್ಮ ಭಜನಾ ಮಂಡಳಿಯ ಹೆಸರನ್ನು ಮೊದಲು ನೋಂದಾಯಿಸಿದ ಒಂಬತ್ತು ಮಂಡಳಿಗೆ ಮಾತ್ರ ಭಾಗವಹಿಸುವ ಅವಕಾಶ.
2) ಪ್ರತಿ ಭಜನಾ ತಂಡದಲ್ಲಿ ಒಂಬತ್ತು ಜನರಿಗೆ ಮಾತ್ರ ಭಾಗವಹಿಸಲು ಅವಕಾಶ.
3) ಪ್ರತಿ ಭಜನಾ ತಂಡಕ್ಕೆ ಇಪ್ಪತ್ತು ನಿಮಿಷಗಳ ಕಾಲಾವಕಾಶ ನೀಡಲಾಗುವುದು.
4) ಸಮವಸ್ತ್ರವು ಭಜನಾ ಸಂಪ್ರದಾಯಕ್ಕೆ ಹೊಂದಿಕೊಂಡಿರಬೇಕು.
5) ಚರ್ಚೆಗೆ ಅಥವಾ ಪತ್ರ ವ್ಯವಹಾರಕ್ಕೆ ಅವಕಾಶವಿಲ್ಲ. ಸಮಿತಿಯ ನಿರ್ಧಾರವೇ ಅಂತಿಮ.
ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಮಿತಿಯ ಗೌರವ ಅಧ್ಯಕ್ಷ ಶ್ರೀ ಪಾಂಡು ಎಲ್ ಶೆಟ್ಟಿ , ಅಧ್ಯಕ್ಷ ಶ್ರೀ ಉಮೇಶ್ ಎಚ್ ಕರ್ಕೇರ, ಉಪಾಧ್ಯಕ್ಷ ಶ್ರೀ ಜಯ ಅಮೀನ್, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಭಾಕರ್ ಯನ್ ಬಂಗೇರ, ಜತೆ ಕಾರ್ಯದರ್ಶಿ ಶ್ರೀ ಕೆ ಪಿ ಶಾಮ ಗೌರವ ಕೋಶಧಿಕಾರಿ ಶ್ರೀ ಉಮೇಶ್ ಎಮ್ ಕರ್ಕೇರ, ಜತೆ ಕೋಶಧಿಕಾರಿ ಶ್ರೀ ಶಂಕರ್ ಬಿಲ್ಲವ ಮತ್ತು ಸರ್ವ ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.