
ಬ್ರಹ್ಮಕಲಸದ ಯಶಸ್ವಿಯಲ್ಲಿ ಗ್ರಾಮದ ಭಕ್ತರ ಸಹಕಾರ : ಉಳ್ತೂರು ಮೋಹನದಾಸ ಶೆಟ್ಟಿ,
ಉಳ್ತೂರು ಡಿ 23. ಚಿತ್ತಾರಿ ಶ್ರೀ ಮಹಾಗಣಪತಿ ಸಪರಿವಾರ ದೈವಸ್ಥಾನ ತೆಂಕಬೆಟ್ಟು ಉಳ್ತೂರು ಇಲ್ಲಿನ ನೂತನ ಶಿಲಾಮಯ ದೇಗುಲದಲ್ಲಿ ಪ್ರತಿಷ್ಠಾಪನಗೊಳ್ಳಲಿರುವ ಮಹಾಗಣಪತಿ ವಿಗ್ರಹವನ್ನು ಪುರಮೆರವಣಿಗೆಯೊಂದಿಗೆ ಬರಮಾಡಿಕೊಳ್ಳಲಾಯಿತು. ಉಳ್ತೂರು ಮಹಾಲಿಂಗೇಶ್ವರ ದೇವಸ್ಥಾನದಿಂದ ಪೂರ್ಣಕುಂಭ ಕಲಶದೊಂದಿಗೆ ಸ್ವಾಗತಿಸಲಾಯಿತು.

ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಉಳ್ತೂರು ಮೋಹನದಾಸ ಶೆಟ್ಟಿ, ಮೆರವಣಿಗೆ ಚಾಲನೆ ನೀಡಿ ಬ್ರಹ್ಮ ಕಳಸ ಯಶಸ್ವಿಯಲ್ಲಿ ಗ್ರಾಮದ ಭಕ್ತರ ಸಹಕಾರಿ ಎಂದು ನುಡಿದರು.
ಸೀತಾರಾಮ ಶೆಟ್ಟಿ, ರಾಜೀವ ಶೆಟ್ಟಿ , ಸುಧಾಕರ ಶೆಟ್ಟಿ, ಸುರೇಶ್ ಶೆಟ್ಟಿ, ಭುಜಂಗ ಶೆಟ್ಟಿ, ರವೀಂದ್ರ ಶೆಟ್ಟಿ, ವಾಸುದೇವ ಶೆಟ್ಟಿ, ಕೆದೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಶಾಂತ ಶೆಟ್ಟಿ ಉಳ್ತೂರು, ಅರ್ಚಕರಾದ ಶಿವಬೂಷಣ ಅಡಿಗ, ಶ್ರೀದರ ಅಡಿಗ, ವಿಜಯಲಕ್ಷ್ಮೀ ರಾಮದಾಸ ಅಡಿಗ, ಉದಯ ಕುಮಾರ್ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು..