
ಚಿತ್ರ ವರದಿ : ದಿನೇಶ್ ಕುಲಾಲ್
ಮುಂಬಯಿ ಡಿ 23.. ಮಲಾಡ್ ಪಶ್ಚಿಮದ ಧಾರ್ಮಿಕ ಮುಂದಾಳು ಸಮಾಜ ಸೇವಕ ದಿವಾಕರ್ ಶೆಟ್ಟಿಗಾರ್ ಗುರುಸ್ವಾಮಿ ಯವರು ಸ್ಥಾಪಿಸಿರುವ.ಶ್ರೀ ಗುರು ಸದ್ಗುರು ಅಯ್ಯಪ್ಪ ಭಕ್ತವೃಂದ ಟ್ರಸ್ಟ್ ಮಲಾಡ್ ಪಶ್ಚಿಮ ಇದರ 28 ವರ್ಷದ ಅಯ್ಯಪ್ಪ ಮಹಾಪೂಜೆದಿನಾಂಕ 7-12.2023 ರಂದು ರವಿವಾರ ಕನ್ಯಾ ಶಾಲಾ ಮೈದಾನ ಪೊಲೀಸ್ ಸ್ಟೇಷನ್ ಹತ್ತಿರ, ಮಾಲಾಡ್ ಪಶ್ಚಿಮ ಇಲ್ಲಿ ಜರಗಿತು.

ಬೆಳಿಗ್ಗೆ ಅಯ್ಯಪ್ಪ ಮೂರ್ತಿ ಅಭಿಷೇಕ ಬಳಿಕ ಶರಣ ಘೋಷ ಅನಂತರ ಆರತಿಯಾದ ಬಳಿಕ ಮಲಾಡ್ ಪೂರ್ವ ದ ವರಮಹಾಲಕ್ಷ್ಮಿ ಮಹಿಳಾ ವಿಭಾಗದ ಭಜನ ಸದಸ್ಯರು ಭಜನೆ ಪ್ರಸ್ತುತ ಪಡಿಸಿದರು.
ತದ ನಂತರ ಶ್ರೀ ನಿತ್ಯಾನಂದ ಭಜನಾ ಮಂಡಳಿ ಕಲ್ಯಾಣ್ ಇದರ ಬುವಾಜಿ ದಯಾನಂದ ಮತ್ತು ಬಳಗದವರಿಂದ ಭಜನೆ ಅನಂತರ ಊರಿನಿಂದ ಆಗಮಿಸಿದ ಭಗವತಿ ಭಜನ ಮಂಡಳಿ ಕಾಜಿಲ ತಂಡದವರಿಂದ ಕುಣಿತ ಭಜನೆ ನಡೆಯಿತು .



ಗಣೇಶ್ ಗುರುಸ್ವಾಮಿ ಉಪಸ್ಥಿತಿಯಲ್ಲಿ ದಿವಾಕರ್ ಶೆಟ್ಟಿಗಾರ್ ಗುರುಸ್ವಾಮಿ ಮಹಾಮಂಗಳಾರತಿಯನ್ನು ನಡೆಸಿದರು ಮಹಾಪೂಜೆ ಅನ್ನ ಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಗುರು ಸದ್ಗುರು ಅಯ್ಯಪ್ಪ ಭಕ್ತವೃಂದದ ಸ್ಥಾಪಕರಾದ ಪ್ರಭಾಕರ್ ಶೆಟ್ಟಿ, ರತ್ನಾಕರ್ ಶೆಟ್ಟಿ ಹಾಗೂ ಹರೀಶ್ ಬಿ ಶೆಟ್ಟಿ ಮತ್ತು ಶ್ರೀ ಗಣೇಶ್ ಗುರುಸ್ವಾಮಿ ಅವರನ್ನು ಗೌರವಿಸಲಾಯಿತು




ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಅಯ್ಯಪ್ಪ ಸ್ವಾಮಿಯ ಪ್ರಸಾದ ಸ್ವೀಕರಿಸಿದರು.
ಅರುಣ್ ಸಿ ಬಂಗೇರ ಪ್ರಶಾಂತ್ ಶೆಟ್ಟಿ, ಅವಿತ್ ಶೆಟ್ಟಿ ಚಂದ್ರಶೇಖರ್ ಶೆಟ್ಟಿ ಸುರೇಶ್ ಶೆಟ್ಟಿ ಮಲ್ನಾಡ್, ಗಂಗಾಧರ ಶೆಟ್ಟಿ ಲಿಂಕಿಂಗ್ ರೋಡ್, ಶಂಕರ್ ಶೆಟ್ಟಿ ಸೋಮವಾರ ಬಜಾರ್, ಸದಾಶಿವ ಬಂಗೇರ ವೀರಾಲ್ ಸದಾ ಭಂಡಾರಿ ಸೋಮವಾರ ಬಜಾರ್ ಸುಧೀರ್ ಭಂಡಾರಿ ಹರಿಶ್ಚಂದ್ರ ಹೆಗ್ಡೆ ಲೋಕಂಡವಾಳ ವಿಶ್ವನಾಥ್ ಕುಲಾಲ್ , ಪಾಟ್ಲಾದೇವಿ ಮಲಾಡ್ ಮನೋಜ್ ಹೋದೆ ರಾಮಲಾಲ್ ಪಾಂಡುರಂಗ ಎಸ್ ಶೆಟ್ಟಿ ಕಾಂಧಿವಲ್ಲಿ ಪ್ರಭಾಕರ್ ಪೂಜಾ ಗಣೇಶ್, ಎಲ್ ಬಿ ಬಂಗೇರ ಲಿಂಕ್ ಪ್ಯಾಲೇಸ್, ವಿಜಯ ಬಂಡಾರಿ ಸಂದೀಪ್ ಶೆಟ್ಟಿ ಜನರಲ್ ಸ್ಟೋರ್ಸ್, ರಾಮಚಂದ್ರ ಮಲಾಡ್ ಇವರು ಪೂಜಾ ಕಾರ್ಯ ಯಶಸ್ವಿಯಾಗಿ ಜರಗುವಲ್ಲಿ ಶ್ರಮಿಸಿದರು