
ಥಾಯ್ ಬಾಕ್ಸಿಂಗ್ ಏಷಿಯಾ(ಅಂತಾರಾಷ್ಟ್ರೀಯ ಥಾಯ್ ಬಾಕ್ಸಿಂಗ್ ಫೆಡರೇಷನ್ ನ ಸದಸ್ಯ)ಡಿ.27 ರಿಂದ ಡಿ.29 ರ ತನಕ ನೇಪಾಳದ ,ಕಾಟ್ಮಂಡ್ ನ ಫುತ್ಸಲ್ ಒಳಾಂಗಣ ಸ್ಟೇಡಿಯಂ ನಲ್ಲಿ ಏಷಿಯಾನ್ ಥಾಯ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಅಯೋಜಿಸಿದ್ದು, ಮುಂಬೈ, ದೊಂಬಿವಲಿಯ ಜಾನ್ವಿ ಮನೋಜ್ ಕೋಟ್ಯಾನ್ ಬೆಳ್ಳಿ ಪದಕ ಪಡೆದು ಸಾದನೆಗೈದಿದ್ದಾರೆ.
ಈ ಮೊದಲು ಜಾನ್ವಿ 2023 ರ ಸೆ.15 ರಂದು ತೆಲಂಗಾಣದಲ್ಲಿ ನಡೆದ ಥಾಯ್ ಬಾಕ್ಸಿಂಗ್ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕಗಳಿಸಿದ್ದರು.ಇವರ ಪ್ರತಿಭೆಯನ್ನು ಗುರುತಿಸಿ ಥಾಯ್ ಬಾಕ್ಸಿಂಗ್ ಇಂಡಿಯನ್ ಫೆಡರೇಷನ್ ಇವರನ್ನು ನೇಪಾಳದ ಏಷಿಯನ್ ಚಾಂಪಿಯನ್ ಶಿಪ್ ಗೆ ಆಯ್ಕೆ ಮಾಡಿತ್ತು.
ಮನೋಜ್ ಕೋಟ್ಯಾನ್ ಹೆಜಮಾಡಿ, ಪುಷ್ಪ ಮನೋಜ್ ಕೋಟ್ಯಾನ್ ಮುಕ್ಕ ದಂಪತಿಯ ಪುತ್ರಿ ಜಾನ್ವಿ ದೊಂಬಿವಲಿಯ ರೋಯಲ್ ಇಂಟರ್ನೆಶನಲ್ ಸ್ಕೂಲ್ ನ ವಿದ್ಯಾರ್ಥಿ ಆಗಿರುವರು.

ತನ್ನ 4 ನೇ ವರ್ಷದಲ್ಲೆ ಕರಾಟೆ ಕಲಿತು ಅಭ್ಯಾಸ ಮಾಡುತ್ತಿರುವ ಜಾನ್ವಿ ಕಳೆದ ಒಂದು ವರ್ಷದಿಂದ ಥಾಯ್ ಬಾಕ್ಸಿಂಗ್ ನಲ್ಲಿ ತರಭೇತಿ ಪಡೆಯುತ್ತಿದ್ದಾರೆ.
ಭವಿಷ್ಯದಲ್ಲಿ ಜಾನ್ವಿ ದೇಶವನ್ನು ಪ್ರತಿನಿಧಿಸಿ ,ಥಾಯ್ ಬಾಕ್ಸಿಂಗ್ ನಲ್ಲಿ ಮತ್ತಷ್ಟು ಪದಕ ತನ್ನದಾಗಿಸಲಿ.