
ಶ್ರೀ ಅಯ್ಯಪ್ಪ ಭಕ್ತ ವೃಂದ ,ಸಾಮಾಜಿಕ ಸಂಸ್ಥೆ ನಾಲಾಸೋಪರ ದ ವತಿಯಿಂದ ವಾರ್ಷಿಕ ಅಯ್ಯಪ್ಪ ಮಹಾಪೂಜೆಯು ಜನವರಿ 7ರ ಆದಿತ್ಯವಾರ ,ನಾಲಾಸೋಪರ ಪೂರ್ವ ಅಚೋಲೇ ರೋಡ್ ,ದ್ವಾರಕ ಹೋಟೆಲ್ ಸಮೀಪ ಮಜೀತಿಯ ನಾಕದಲ್ಲಿ ಗುರುಸ್ವಾಮಿ ಪದ್ಮನಾಭ ಪೂಜಾರಿ ಅವರ ದಿವ್ಯ ಹಸ್ತದಿಂದ ನಡೆಯಲಿದೆ.
ಅಂದು ಬೆಳ್ಳಿಗ್ಗೆ 5 ಗಂಟೆಗೆ ಶರಣು ಘೋಷ, 6 ರಿಂದ 7 ರ ತನಕ ಪುರೋಹಿತ ಧನಂಜಯ ಶಾಂತಿ ಅವರಿಂದ ಗಣಹೋಮ, 7ರಿಂದ 9ರ ವರೆಗೆ ಸಹಸ್ರ ನಾಮವಳಿ, 9 ರಿಂದ 12 – ಶ್ರೀ ಅಯ್ಯಪ್ಪ ಭಜನಾ ಮಂಡಳಿ ಮತ್ತು ಶ್ರೀ ಗುರು ನಾರಾಯಣ ಭಜನಾ ಮಂಡಳಿ ,ನಾಲಾಸೋಪರ ,ಇವರಿಂದ ಭಜನೆ, ಮಧ್ಯಾಹ್ನ 12 ಕ್ಕೆ ಪಡಿ ಪೂಜೆ, 12.30ರಿಂದ ಮಹಾ ಆರತಿ, 1 ರಿಂದ 4ರ ವರೆಗೆ ಅನ್ನ ಸಂತರ್ಪಣೆ , ಸಂಜೆ 7 ಗಂಟೆಗೆ ಕನ್ನಿ ಸ್ವಾಮಿಯವರ ಇರುಮುಡಿ ಕಾರ್ಯಕ್ರಮ ನಡೆಯಲಿದೆ.
ವಾರ್ಷಿಕ ಮಹಾಪೂಜೆಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ಅಯ್ಯಪ್ಪ ಸ್ವಾಮಿಯ ಪ್ರಸಾದ ಸ್ವೀಕರಿಸುವಂತ್ತೆ, ಸಂಸ್ಥೆಯ ಗೌರವ ಅಧ್ಯಕ್ಷ ಜಗನ್ನಾಥ ಎನ್ ರೈ, ಅಧ್ಯಕ್ಷ ಗುರುಸ್ವಾಮಿ ಸದಾಶಿವ ಎ ಕರ್ಕೇರ, ಗುರುಸ್ವಾಮಿ ಪದ್ಮನಾಭ ಪೂಜಾರಿ, ಗೌರವ ಕಾರ್ಯದರ್ಶಿ ಸದಾನಂದ ಆರ್ ಸಾಲ್ಯಾನ್, ಗೌರವ ಕೋಶಾಧಿಕಾರಿ ಹರೀಶ್ ಪೂಜಾರಿ, ಜತೆ ಕಾರ್ಯದರ್ಶಿ ಪ್ರಸನ್ನ ಜೆ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ದೇವಕಿ ಎಸ್ ಕರ್ಕೇರ, ಉಪ ಕಾರ್ಯಧ್ಯಕ್ಷೆಯರುಗಳಾದ ಪುಷ್ಪ ಎಸ್ ಕೋಟ್ಯಾನ್, ಪಾವನ ವಿ ಶೆಟ್ಟಿ, ಕಾರ್ಯದರ್ಶಿ ಹರಿನಾಕ್ಷಿ ಪೂಜಾರಿ, ಜತೆ ಕಾರ್ಯದರ್ಶಿ ಶುಭತಿಲಕ ಸುವರ್ಣ, ಸಮಿತಿಯ ಸ್ವಾಮಿಗಳು, ಆಡಳಿತ ಸಮಿತಿಯ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗದ ಸರ್ವ ಸದಸ್ಯರು ವಿನಂತಿಸಿದ್ದಾರೆ.
.
.
.
.
.
.
.
.