
ಶ್ರೀ ಅಯ್ಯಪ್ಪ ಸ್ವಾಮಿಗಾಗಿ ಜೀವನವನ್ನೇ ಮುಡಿಪಾಗಿಟ್ಟಿರುವ, ಸಮಾಜದ ಬಡ ಕುಟುಂಬಗಳಿಗೆ ಹಾಗೂ ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ನೆರವು, ಶಾಲಾ ವಿದ್ಯಾರ್ಥಿಗಳಿಗೆ, ಸಂಘ – ಸಂಸ್ಥೆಗಳಿಗೆ ನೀಡುತ್ತಾ ಕಳೆದ 38 ವರ್ಷಗಳಿಂದ ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಕಟ್ಟುನಿಟ್ಟಿನ ವೃತಾಚರಣೆಯನ್ನು ಮಾಡಿ ಧರ್ಮನಿಷ್ಠೆಯಿಂದ ಶಬರಿಮಲೆಗೆ ಯಾತ್ರೆಯನ್ನು ಕೈಗೊಳ್ಳುತ್ತಾ ಅದರಲ್ಲಿಯೂ, ಏಳು ವರುಷ ಮುಂಬಯಿಯಿಂದ ಪಾದಯಾತ್ರೆಯ ಮೂಲಕ ಕಲಿಯುಗ ವರದ ಶ್ರೀ ಅಯ್ಯಪ್ಪನ ದರ್ಶನ ಮಾಡಿರುವ, ಸುಮಾರು 18 ವರ್ಷಗಳಿಂದ ತನ್ನ ಕಾಲಿಗೆ ಚಪ್ಪಲಿಯನ್ನು ಹಾಕದೆ ಎಲ್ಲಾ ಊರುಗಳನ್ನು ಸಂಚರಿಸುತ್ತಿರುವ ಮತ್ತು ಅಯ್ಯಪ್ಪ ಸ್ವಾಮಿಯಂತೆ ಬ್ರಹ್ಮಚಾರಿಯಾಗಿರುವ, ತನ್ನ 60ನೇ ವರ್ಷದ ಪ್ರಾಯದಲ್ಲಿಯೂ 1800 ಕಿಲೋಮೀಟರ್ ಪಾದಯಾತ್ರೆಯನ್ನು ಮಾಡಿರುವ ಹಾಗೂ ಊರಿನಲ್ಲಿಯೂ ಹಾಗೂ ಮುಂಬಯಿಯಲ್ಲಿಯೂ ಗುರುಸ್ವಾಮಿ ಎಂದೇ ಪ್ರಸಿದ್ಧಿ ಪಡೆದಿರುವ ಇನ್ನಂಜೆ ಚಂದ್ರಹಾಸ ಗುರುಸ್ವಾಮಿ ಅವರ
ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ ಶಂಕರಪುರ ಇದರ 38ನೇ ವರ್ಷದ ವಾರ್ಷಿಕ ಮಹಾಪೂಜೆ ಜನವರಿ 6 ರ ಶನಿವಾರ ಜರುಗಲಿದೆ.
ಆ ಪ್ರಯುಕ್ತ ತಾ. 05-01-2024ನೇ ಶುಕ್ರವಾರ
ಸಂಜೆ ಘಂಟೆ 5.00ಕ್ಕೆ ಅಯ್ಯಪ್ಪ ಶಿಬಿರದಿಂದ ಹೊರ ಕಾಣಿಕೆ ಹೊರಡುವುದು.
ತಾ. 06-01-2024ನೇ ಶನಿವಾರ ಬೆಳಗ್ಗೆ ಘಂಟೆ 6.00ಕ್ಕೆ ಗಣಹೋಮ ಬೆಳಗ್ಗೆ ಘಂಟೆ 11.00ಕ್ತ ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮಹಾಪೂಜೆ ಮಧ್ಯಾಹ್ನ ಗಂಟೆ 12.30ಕ್ಕೆ ಅನ್ನಸಂತರ್ಪಣೆ, ಸಂಜೆ ಗಂಟೆ 6.00ಕ್ಕೆ ವಿಶೇಷ ಹೂವಿನ ಪೂಜೆ ತದನಂತರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ವಿಶೇಷ ಮೆರವಣಿಗೆ ಅಯ್ಯಪ್ಪ ಶಿಬಿರದ ವರೆಗೆ, ರಾತ್ರಿ ಗಂಟೆ 8.00ಕ್ಕೆ ಚಂದ್ರಹಾಸ ಗುರುಸ್ವಾಮಿ ನೇತೃತ್ವದಲ್ಲಿ ಶಿಬಿರದಲ್ಲಿ ಪಡಿಪೂಜೆ, ಮಹಾಪೂಜೆ,
ಪ್ರಸಾದ ವಿತರಣೆ ನಡೆಯಲಿರುವುದು.
ತಾ. 09-01-2024ನೇ ಮಂಗಳವಾರ ಬೆಳಿಗ್ಗೆ ಗಂಟೆ 8.00ರಿಂದ ಇರುಮುಡಿ ಕಟ್ಟುವುದು.
ಈ ಎಲ್ಲಾ ಕಾರ್ಯಕ್ರಮಗಳಿಗೂ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು, ತನು-ಮನ-ಧನಗಳಿಂದ ಸಹಕರಿಸಿ, ಶ್ರೀ ಅಯ್ಯಪ್ಪ ಸ್ವಾಮಿ ದೇವರ ಸಿರಿಮುಡಿ ಗಂಧ-ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಚಂದ್ರಹಾಸ ಗುರುಸ್ವಾಮಿ ಹಾಗೂ ಶಿಷ್ಯಂದಿರು, ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ ಶಂಕರಪುರ ಹಾಗೂ ಮುಂಬಯಿಯ ಸರ್ವ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
.
.
.
.
.