
ಉಡುಪಿ : ಶ್ರೀ ಕ್ಷೇತ್ರ ಶಂಕರಪುರ ಮಠದ ಮಠಾಧೀಶ, ಅಖಿಲಾ ಭಾರತೀಯ ಸಂತ ಸಮಿತಿ ಕರ್ನಾಟಕ, ಇದರ ಪ್ರಧಾನ ಕಾರ್ಯದರ್ಶಿ ಶ್ರೀ ಸಾಯಿ ಈಶ್ವರ್ ಗುರೂಜಿ ಅವರು ಉಡುಪಿ ಜಿಲ್ಲೆಯ ಕರಸೇವಕರ ಮನೆಗೆ ಭೇಟಿ ನೀಡಿ ,ಅವರನ್ನು ನಮಾಮಿ ರಾಮ ಭಜಕಮ್ ಕಾರ್ಯಕ್ರಮದ ಮೂಲಕ ಸನ್ಮಾನಿಸಲಿರುವರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಾಗಬೇಕು ಎಂಬ ಸಂಕಲ್ಪವನ್ನು ಮಾಡಿ ತಮ್ಮ ಪ್ರಾಣದ ಹಂಗು ತೊರೆದು ಸೇವೆ ಮಾಡಿದ ಕರಸೇವಕರನ್ನು ಸ್ವಾಮೀಜಿ ಅವರು ಜನವರಿ 6,8,10 ರಂದು ಅಭಿನಂದಿಸಲಿರುವರು.
ರಾಮ ಲಲ್ಲಾನ ಪ್ರಾಣ ಪ್ರತಿಷ್ಠೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಶ್ರೀ ಸಾಯಿ ಈಶ್ವರ್ ಗುರೂಜಿ ಅವರು ಜ.18 ರಿಂದ ಒಂದು ವಾರ ಅಯೋಧ್ಯೆಯಲ್ಲಿ ವಾಸ್ತವ್ಯ ಇರುವರು ಎಂದು ಪ್ರಕಟಣೆ ತಿಳಿಸಿದೆ.
.
.
.
.
.