
ಕಠಿಣ ವೃತ, ಶ್ರದ್ಧೆಯಿಂದ ದೇವರ ಪೂಜೆ ಮಾಡಿದಾಗ ದೇವರ ಅನುಗ್ರಹ ಲಭಿಸುತ್ತದೆ- ವೇಣುಗೋಪಾಲ ಶೆಟ್ಟಿ
ಚಿತ್ರ ವರದಿ ರವಿ.ಬಿ.ಅಂಚನ್ ಪಡುಬಿದ್ರಿ
ಮುಂಬಯಿ ಜ.7: ಸಂಸ್ಥೆಯ ಹುಟ್ಟು ಸ್ವಾಭಾವಿಕ ಅದರೆ ಅದನ್ನು ಶ್ರದ್ಧೆಯಿಂದ ಮುನ್ನಡೆಸುವುದು ಕಷ್ಟ, ಸಂಸ್ಥೆಯ ಹುಟ್ಟುವಿಗಾಗಿ ಶ್ರಮಿಸಿದವರನ್ನು ಯಾವತ್ತೂ ಮರೆಯಬಾರದು ಪ್ರತಿಯೊಂದು ಸಂಸ್ಥೆ ತನು, ಮನ, ಧನ ದಿಂದ ಮಾತ್ರ ಮುನ್ನಡೆಯುತ್ತದೆ ಅಯ್ಯಪ್ಪ ವೃತಧಾರಿಗಳು ಕಠಿಣ ವೃತ, ಶ್ರದ್ಧೆಯಿಂದ ದೇವರ ಪೂಜೆ, ನಿಷ್ಠೆಯಿಂದ ಸಮಿತಿಯಲ್ಲಿ ಕೆಲಸ ಮಾಡಿದಾಗ ದೇವರ ಅನುಗ್ರಹ ಖಂಡಿತವಾಗಿ ಲಭಿಸುತ್ತದೆ. ನಾವೆಲ್ಲರೂ ಒಂದಾಗಿ ನಮ್ಮ ಮಕ್ಕಳಿಗೆ ನಮ್ಮ ಧರ್ಮ,ನಮ್ಮ ಪೂಜೆ, ಪುರಸ್ಕಾರಗಳ ಬಗ್ಗೆ ತಿಳಿಸಿ ಸನಾತನ ಧರ್ಮವನ್ನು ಮುನ್ನಡೆಸುವ ಕಾರ್ಯವನ್ನು ಮಾಡೋಣಾ ನಮ್ಮ ಧರ್ಮವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದಾಗಿದೆ ಅಗ ದೇವರ ದಯೆ ನಮಗೆ ಲಭಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಥಾಣೆ ಬಂಟ್ಸ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ನುಡಿದರು.




ಅವರು ಜನವರಿ 7 ರ ಭಾನುವಾರ ಬೆಳಿಗ್ಗೆ ಪೋರ್ಟ್ ನ ಉಡುಪಿ ಹೋಟೆಲ್ ನ ಎದುರಿಗಿರುವ ಶ್ರೀ ಅಯ್ಯಪ್ಪ ಸೇವಾ ಸಮಿತಿ ಪೋರ್ಟ್ ಮುಂಬಯಿ ಇದರ 41 ನೇ ವಾರ್ಷಿಕ ಮಹಾಪೂಜೆ, ಇರುಮುಡಿ ಸೇವೆಯ ಸಂದರ್ಭದಲ್ಲಿ ಜರಗಿದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡುತ್ತಿದ್ದರು.

ಅತಿಥಿ ಬಂಟರವಾಣಿ ಪತ್ರಿಕೆಯ ಕಾರ್ಯಾಧ್ಯಕ್ಷರಾದ ರವೀಂದ್ರ ಭಂಡಾರಿ ಮಾತನಾಡುತ್ತಾ ಶಿಕ್ಷಣ ಪ್ರೇಮಿ, ಧಾರ್ಮಿಕ ಮುಂದಾಳು ದಿ|. ಎ.ಬಿ. ಶೆಟ್ಟಿಯವರ ಮುಂದಾಳುತ್ವದಲ್ಲಿ ಪ್ರಾರಂಭಗೊಂಡ ಈ ಸಂಸ್ಥೆ ಶ್ರೀ ಅಯ್ಯಪ್ಪ ಸ್ವಾಮಿಯ ಅನುಗ್ರಹದಿಂದ ಉತ್ತಮ ಕಾರ್ಯ ಕಲಾಪದಿಂದ ಹೆಸರುವಾಸಿಯಾಗಿದೆ. ಶಬರಿಮಲೆಗೆ ಹೋಗಿ ಅಯ್ಯಪ್ಪ ಸ್ವಾಮಿಯ ದರ್ಶನವನ್ನು ಪಡೆಯಲು 48 ದಿನದ ಕಠಿಣ ವೃತವನ್ನು ಅಚರಿಸ ಬೇಕಾಗುತ್ತದೆ. ಭರತ್ ಶೆಟ್ಟಿಯವರಂತಹ ಕೊಡುಗೈ ದಾನಿಗಳು ಈ ಸಂಸ್ಥೆಯೊಂದಿಗೆ ನಿಕಟ ಸಂರ್ಕದಲ್ಲಿರುವುದನ್ನು ಕಂಡು ಸಂತೋಷವಾಗಿದೆ. ಶ್ರೀ ಅಯ್ಯಪ್ಪ ಸ್ವಾಮಿಯ ಅಶೀರ್ವಾದದಿಂದ ಸಂಸ್ಥೆ ಧಾರ್ಮಿಕ ಕಾರ್ಯದೊಂದಿಗೆ ಸಮಾಜಿಕ ಕಾರ್ಯವನ್ನು ಮಾಡುತ್ತಿರುವುದನ್ನು ಕಂಡು ಆನಂದವಾಗುತ್ತಿದೆ. ಶ್ರೀ ಅಯ್ಯಪ್ಪ ಸ್ವಾಮಿಯ ಆಶೀರ್ವಾದದಿಂದ ನಿಮ್ಮ ದಾರ್ಮಿಕ ಹಾಗೂ ಸಮಾಜ ಸೇವೆ ಇತರರಿಗೆ ಮಾದರಿಯಾಗಲಿ ಎಂದರು.
ಸಮಾಜ ಸೇವಕ, ಕಲಾ ಸಂಘಟಕರಾದ ಅತಿಥಿ ಕರ್ನೂರು ಮೋಹನ ರೈ ಮಾತನಾಡುತ್ತಾ ಹಿಂದೊಮ್ಮೆ ಪೋರ್ಟ್ ನಲ್ಲಿ ತುಳುವರು ತುಂಬಿ ತುಳುಕುತ್ತಿದ್ದ ಕಾಲವಿತ್ತು ಅಂದು ಭಜನೆಯ ಮೂಲಕ ನಮ್ಮವರನ್ನು ಒಗ್ಗೂಡಿಸಿ ವಿವಿಧ ಸಂಘ- ಸಂಸ್ಥೆಗಳನ್ನು ಮಾಡಿ ತದನಂತರ ಜಾತೀಯ ಸಂಘಟನೆಗಳು ಇದೇ ಪೋರ್ಟ್ ಪರಿಸರದಿಂದ ಪ್ರಾರಂಭವಾಯಿತು. ಇಂದು ಶ್ರೀ ಅಯ್ಯಪ್ಪ ಸೇವಾ ಸಮಿತಿಯಿಂದಾಗಿ ಆ ಪುರಾತನ ದಿನಗಳನ್ನು ಮೆಲುಕು ಹಾಕುವಂತಾಗಿದೆ. ಅಯ್ಯಪ್ಪ ವೃತಧಾರಿಗಳು ಬಹಳ ಕಷ್ಟ, ಶ್ರದ್ಧೆಯಿಂದ ಅಯ್ಯಪ್ಪ ದೇವರ ಸನ್ನಿಧಾನದ ಯಾತ್ರೆಯನ್ನು ಮಾಡಿ ದೇವರ ಆಶೀರ್ವಾದವನ್ನು ಪಡೆಯುತ್ತಾರೆ ಅಯ್ಯಪ್ಪ ವೃತಧಾರಿಗಳ ಭಕ್ತಿ ಇತರರಿಗೆ ಮಾದರಿ, ಉಡುಪಿ ಹೋಟೆಲ್ ನ ಮಾಲಕ ಎ.ಬಿ.ಶೆಟ್ಟಿಯವರು ಸಾಮಾಜ ಸೇವೆಯ ಅಗ್ರಗಣ್ಯರು ಯಕ್ಷಗಾನ, ನಾಟಕ ರಂಗಕ್ಕೆ ಬಹಳ ಪ್ರೋತ್ಸಾಹ ನೀಡಿ ಕಲಾವಿದರನ್ನು ಹುರಿದುಂಬಿಸುತ್ತಿದ್ದರು ಎಂದರು.

ಇದೇ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ವೀರೇಂದ್ರ ಸ್ವಾಮಿ ದಂಪತಿ, ಗಣೇಶ ಸ್ವಾಮಿ ದಂಪತಿ, ರವೀಂದ್ರ ಶ್ರೀಯಾನ್ ದಂಪತಿಯನ್ನು ಹಾಗೂ 25 ನೇ ಬಾರಿ ಶಬರಿಮಲೆ ಯಾತ್ರೆ ಗೈಯುತ್ತಿರುವ ದಿನೇಶ್ ಗುರು ಸ್ವಾಮಿ, ಇವರನ್ನು ವೇದಿಕೆಯ ಮೇಲೆ ಸನ್ಮಾನಿಸಲಾಯಿತು ಹಾಗೂ ಸಿಎ. ಶುಭಂ ಕೋಟ್ಯಾನ್ ಇವರನ್ನು ವಿಶೇಷವಾಗಿ ಸತ್ಕರಿಸಲಾಯಿತು.
ಹಾಗೂ ರಂಜನ್ ಸ್ವಾಮಿ, ಸುಭಾಷ್ ಶೆಟ್ಟಿ, ಕಡಂದಲೆ ರಮೇಶ್ ಶೆಟ್ಟಿ, ಉದಯ ಶೆಟ್ಟಿ, ನವೀನ್ ಶೆಟ್ಟಿ, ಯುಗಾನಂದ ಶೆಟ್ಟಿ, ರತ್ನಾಕರ ಶೆಟ್ಟಿ ಮತ್ತಿತರರನ್ನು ವಿಶೇಷವಾಗಿ ಸತ್ಕರಿಸಲಾಯಿತು
ಇದಕ್ಕೂ ಮೊದಲು ಅಯ್ಯಪ್ಪ ವೃತದಾರಿಗಳ ಇರುಮುಡಿ ಸೇವೆ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ನವಿ ಮುಂಬಯಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ವಿಜಯ ಕರ್ಕೇರ ವಾರ್ಷಿಕ ವರದಿ ವಾಚಿಸಿದರು, ಸನ್ಮಾನ ಪತ್ರವನ್ನು ಸುಕೇಶ್ ಶೆಟ್ಟಿ,ಸುರೇಶ್ ಶೆಟ್ಟಿ, ವಿಜಯ ಕರ್ಕೇರ ವಾಚಿಸಿದರು ಸುಕೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕೊನೆಗೆ ಅಯ್ಯಪ್ಪ ಮಹಾಪೂಜೆ ನಡೆದು ಪ್ರಸಾದ ವಿತರಿಸಿ ಅನ್ನ ಸಂತರ್ಪಣೆ ನಡೆಯಿತು.

ಅದ್ಯಕ್ಷರ ಮಾತು
ಎ.ಬಿ. ಶೆಟ್ಟಿಯವರ ಮುಂದಾಳುತ್ವದಲ್ಲಿ ಸ್ಥಾಪನೆಯಾದ ಈ ಸಂಸ್ಥೆ ಭರತ್ ಶೆಟ್ಟಿ, ರಾಜೇಶ್ ಹೆಗ್ಡೆ ಯವರ ಸಂಪೂರ್ಣ ಸಹಕಾರದಿಂದ ಚಂದ್ರಶೇಖರ್ ಗುರುಸ್ವಾಮಿ, ರಾಜ್ ಕುಮಾರ್ ಗುರುಸ್ವಾಮಿ, ಪ್ರಕಾಶ್ ಗುರು ಸ್ವಾಮಿಯವರ ನಿಷ್ಠೆ ಹಾಗೂ ಶ್ರದ್ಧೆಯ ಪೂಜೆ, ಎ.ಬಿ.ಶೆಟ್ಟಿಯವರೊಂದಿಗೆ ಕರುಣಾಕರ ಗುರು ಸ್ವಾಮಿ, ಭಾಸ್ಕರ ಭುವಾಜಿ, ಚಂದ್ರಶೇಖರ ಗುರುಸ್ವಾಮಿ, ಲೀಲಾಧರ ಗುರು ಸ್ವಾಮಿ,ವಸಂತ ಗುರುಸ್ವಾಮಿ ಮತ್ತಿತರರು ಒಂದಾಗಿ ಸಮಿತಿಯನ್ನು ಬಲ ಪಡಿಸಿದ್ದಾರೆ. ಈ ಕ್ಷೇತ್ರದಲ್ಲಿ ಭಕ್ತಿಯಿಂದ ಪ್ರಾರ್ಥಿಸಿದರೆ ಅವರ ಮನಸ್ಸಿನ ಇಚ್ಛೆಯನ್ನು ದೇವರು ಪೂರ್ಣಗೊಳಿಸಿದ್ದಾರೆ. ಮೂರು ತಿಂಗಳ ಹಿಂದೆ ಅಯ್ಯಪ್ಪ ದೇವರಿಗೆ ಮತ್ತು ಪರಿವಾರ ದೇವರಿಗೆ ಸುಮಾರು14 ಲಕ್ಷ ವೆಚ್ಚದಲ್ಲಿ ರಜತ ಪೀಠ ಸಮರ್ಪಣೆಯನ್ನು ಭಕ್ತರು ಒಂದಾಗಿ ಮಾಡಿ ಪುಣ್ಯಕಟ್ಟಿ ಕೊಂಡಿದ್ದಾರೆ. ಇನ್ನೂ ಆನೇಕ ಕೆಲಸ ಕಾರ್ಯಗಳು ಶ್ರೀ ಅಯ್ಯಪ್ಪ ಸೇವಾ ಸಮಿತಿಯ ವತಿಯಿಂದ ಅಯ್ಯಪ್ಪ ಮಂದಿರದಲ್ಲಿ ಅಗಲಿಕ್ಕಿದೆ ಈ ಕಾರ್ಯಕ್ಕೆ ತಮ್ಮೆಲ್ಲರ ಸಹಕಾರದ ಅಗತ್ಯವಿದೆ.– ಕಲಾಯಿ ಕೃಷ್ಣ ಶೆಟ್ಟಿ