
ಚಿಣ್ಣರ ಬಿಂಬ ಚಿಣ್ಣರಲ್ಲಿ ಆತ್ಮವಿಶ್ವಾಸ ಮೂಡಿಸುವ ಅದ್ಭುತ ಕಾರ್ಯ ನಡೆಸುತ್ತಿದೆ : ಸಂಸದ ಗೋಪಾಲ ಶೆಟ್ಟಿ.
ಚಿತ್ರ ವರದಿ: ದಿನೇಶ್ ಕುಲಾಲ್.
ಮುಂಬಯಿ, ಡಿ.7- ಚಿಣ್ಣರ ಬಿಂಬದ ಇಪ್ಪತ್ತೊಂದನೆಯ ವರ್ಷದ ಮಕ್ಕಳ ಉತ್ಸವವು ಜ.7 ರಂದು ಭಾನುವಾರ ಮಧ್ಯಾಹ್ನ ಕುರ್ಲಾ ಪೂರ್ವದ ಬಂಟರ ಭವನದ ರಾಧಾಬಾಯಿ.ಟಿ.ಭಂಡಾರಿ ಸಭಾಂಗಣದಲ್ಲಿ ಚಿಣ್ಣರ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಕಾರ್ಯಕ್ರಮವನ್ನು. ಮುಂಬಯಿ ಸಂಸದರಾದ ಗೋಪಾಲ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ
ಕನ್ನಡ ಮಾಧ್ಯಮದಲ್ಲಿ ಕಲಿಯದ ಮಕ್ಕಳಿಗೆ ಕನ್ನಡ ಕಲಿಸಿ ಇಂತಹ ಕಾರ್ಯಕ್ರಮವನ್ನು ಪ್ರಕಾಶ್ ಭಂಡಾರಿ ಅವರ ನೇತೃತ್ವದಲ್ಲಿ ಅವರ ಪತ್ನಿ ಮಕ್ಕಳು ಮತ್ತು ತಂಡದ ಎಲ್ಲ ಸದಸ್ಯರ ಸಹಾಯದಿಂದ ನಡೆಸುತ್ತಿದ್ದು ಪ್ರತಿ ವರ್ಷ ಸುಮಾರು ೭೦೦೦ ಮಕ್ಕಳಿಗೆ ತರಬೇತಿಯನ್ನು ನೀಡುತ್ತಿರುವುದು ಸುಲಭ ಸಾಧ್ಯವಲ್ಲ. ನಾನು ತಿಂಗಳಿಗೆ ಸುಮಾರು 250 ಕಾರ್ಯಕ್ರಮ ಅಂದರೆ ವರ್ಷಕ್ಕೆ 3000 ಕಾರ್ಯಕ್ರಮದಲ್ಲಿ ಭಾಗವಹಿಸುತಿದ್ದೇನೆ. ಅದರಲ್ಲಿ ಐವತ್ತು ಕಾರ್ಯಕ್ರಮಗಳಲ್ಲಿ ಮುಖ್ಯವೆಂದು ಭಾವಿಸುತ್ತೇನೆ ಅದರಲ್ಲಿ ಪ್ರಥಮ ಆದ್ಯತೆ, ಈ ಕಾರ್ಯಕ್ರಮ ವಾಗಿದೆ. ಕಳೆದ 21 ವರ್ಷಗಳಿಂದ ಪ್ರಕಾಶ ಭಂಡಾರಿಯವರಿಗೆ ಸಹರಿಸಿದ ಎಲ್ಲರಿಗೂ ಅಭಿನಂದನೆಗಳು. ಈ ಸಂಸ್ಥೆಯ 25ನೇ ವರ್ಷಾಚರಣೆಯು ದೊಡ್ಡ ಇತಿಹಾಸವನ್ನೇ ನಿರ್ಮಿಸಲಿದೆ. ಕೇವಲ ಸಂಸದನಾಗಿ ಮಾತ್ರವಲ್ಲ ನನ್ನ ಪಕ್ಷದ ಪರವಾಗಿ ನಾನು ನಿಮ್ಮೆಲ್ಲರಿಗೂ ಅಭಿನಂದಿಸಿದ್ದೇನೆ. ನಮ್ಮ ನಾಡಿನ ಸಂಸ್ಕೃತಿಯನ್ನು ನಾವಿಲ್ಲಿ ಜೀವಂತವಾಗಿ ಉಳಿಸಿ ಬೆಳೆಸುತ್ತಿದ್ದೇವೆ. ಜಾಗರೀಕರಣದೊಂದಿಗೆ ನಮ್ಮ ಮಕ್ಕಳು ಕೂಡ ಅದಕ್ಕೆ ಹೊಂದಿಕೊಳ್ಳುವಂತಾಗಬೇಕು. ಇಂದಿನ ಮಕ್ಕಳ ಪ್ರತಿಭೆಯನ್ನು ನಿಜಕ್ಕೂ ಮೆಚ್ಚಬೇಕಾಗಿದೆ ಅವರು ಉತ್ತಮ ರೀತಿಯಲ್ಲಿ ಇಂದು ಪರಿಚಯವನ್ನು ಕೂಡ ಮಾಡಿದ್ದಾರೆ ಅವರ ಧೈರ್ಯವನ್ನು ನಿಜಕ್ಕೂ ಮೆಚ್ಚ ಬೇಕಾಗಿದೆ . . ನಮ್ಮ ಸಂಸ್ಕಾರವನ್ನು ಸಂಸ್ಕೃತಿಯನ್ನು ಈ ಮಕ್ಕಳಲ್ಲಿ ಬಾಲ್ಯದಲ್ಲಿ ತಿಳಿಸುವ ಈ ಒಂದು ಸಂಸ್ಥೆಯ ಕಾರ್ಯ ಅದ್ಭುತವಾಗಿದೆ. ಜನವರಿ 22 ನಂತರ ಹೊಸ ಯುಗ ಪ್ರಾರಂಭವಾಗಲಿದೆ . ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವಲ್ಲಿ ನಮ್ಮ ಮಹತ್ತರವಾದ ಜವಾಬ್ದಾರಿ ಇದೆ ಅದನ್ನು ಸಮರ್ಥ ರೀತಿಯಲ್ಲಿ ನಿರ್ವಹಿಸುವ ಪಾಲಕರು ಸಾಮಸ್ಥರಾಗಬೇಕು ಎಂದು ನುಡಿದರು.

ಮುಖ್ಯ ಅತಿಥಿಗಳಾಗಿ ಚರಿಷ್ಮಾ ಬಿಲ್ಡರ್ಸ್‌ನ ಆಡಳಿತ ನಿರ್ದೇಶಕರಾಗಿರುವ ಸುಧೀರ್ ಶೆಟ್ಟಿ ಸಾವಿರಾರು ಮಕ್ಕಳಿಗೆ ಬಾಲ್ಯದಲ್ಲಿ ಸಂಸ್ಕಾರವಂತ ಶಿಕ್ಷಣ ನೀಡುವುದು ಸುಲಭದ ಕೆಲಸವಲ್ಲ ಇಂದು ಈ ಸಂಸ್ಥೆಯ ಬಹಳ ಸೇವಾಕಾರ್ಯಗಳು ಗಣನೀಯವಾಗಿದೆ. ಚಿಣ್ಣರಲಿ ಉತ್ತಮ ಸಂಸ್ಕಾರವನ್ನು ಬೆಳೆಸುವ ಕಾರ್ಯಗಳು ಇನ್ನಷ್ಟು ನಡೆಯಲಿ ,ನನ್ನ ಸಹಕಾರ ಸದಾ ಇದೆ ಎಂದು ನುಡಿದರು..
ವಿ ಕೆ ಗ್ರೂಪ್ ಆಫ್ ಕಂಪೆನಿಯ ಆಡಳಿತ ನಿರ್ದೇಶಕ ಮದ್ಯ ಗುತ್ತು ಕರುಣಾಕರ್ ಶೆಟ್ಟಿ. ಮಾತನಾಡುತ್ತಾ
ಇಂದು ನಾವು ಎರಡೆರಡು ಸಂಭ್ರಮದಲ್ಲಿದ್ದೇವೆ. ಮಕ್ಕಳ ಉತ್ಸವ ಮತ್ತು ಪ್ರಕಾಶ್ ಭಂಡಾರಿಯವರ ಚಿಣ್ಣರ ಬಿಂಬಕ್ಕೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಂಬ್ರಮ. ಈಗಾಗಲೇ ಚಿಣ್ಣರ ಬಿಂಬದಲ್ಲಿ ೭೦೦೦ ಕ್ಕೂ ಮಿಕ್ಕಿ ಮಕ್ಕಳು ತರಬೇತಿ ಪಡೆಯುತ್ತಿದ್ದು ಮಕ್ಕಳು ಇದರ ಲಾಭವನ್ನು ಪಡೆಯಬೇಕು.
ಮುಂದಿನ ದಿನಗಳಲ್ಲಿ ಒಳ್ಳೆಯ ವಿದ್ಯಾರ್ಥಿಗಳಾಗಿ, ಸಭ್ಯ ಮಕ್ಕಳಾಗಿ, ತಂದೆ ತಾಯಿಯಂದಿರಿಗೆ, ಕಲಿತ ಶಾಲೆಗೆ ಹಾಗೂ ಚಿಣ್ಣರ ಬಿಂಬಕ್ಕೆ ಉತ್ತಮ ಹೆಸರನ್ನು ತರುವಂತಾಗಲಿ. ಈ ರೀತಿ ನಮ್ಮ ದೇಶಕ್ಕೂ ಕೀರ್ತಿಯನ್ನು ತರಲಿ. ನಾವೆಲ್ಲರೂ ಚಿನ್ನದ ಬಿಂಬಕ್ಕೆ ಸಾದ್ಯವಾದಷ್ಟು ಸಹಕರಿಸೋಣ ಎಂದರು.
ಹೇರಂಬ ಇಂಡಸ್ಟ್ರೀಸ್ ಇದರ ಆಡಳಿತ ನಿರ್ದೇಶಕ ಸದಾಶಿವ ಶೆಟ್ಟಿ, ಕನ್ಯಾನ ನನ್ನನ್ನು ವಿಶ್ವಾಸದಿಂದ ಚಿನ್ನದ ಬಿಂಬ ವಿಶ್ವಸ್ಥರಾಗಿ ಮಾಡಿದ್ದಾರೆ ,ಅದು ಬಹಳ ಸಂತೋಷ ನೀಡಿದೆ. ಬಹಳಷ್ಟು ಸಂಸ್ಥೆಗಳಲ್ಲಿ ನನ್ನನ್ನು ವಿಶ್ವಸ್ಥರನ್ನಾಗಿ, ಬೇರೆ ಬೇರೆ ಪದವಿಗಳನ್ನು ನೀಡಿದ್ದಾರೆ. ಆ ಸಂಸ್ಥೆಗಳಿಗಿಂತ ಇದು ಭಿನ್ನವಾಗಿದೆ, ಮಕ್ಕಳಿಗೆ ಸಂಸ್ಕಾರವನ್ನು ನೀಡುವ ಅಲ್ಲದೆ ಸಂಸ್ಕೃತಿಯನ್ನು ತಿಳಿಸುವ ಸಂಸ್ಥೆಯಿದಾಗಿದೆ.ಇದು ದೇಶದಲ್ಲಿ ಪ್ರಪ್ರಥಮವಾಗಿದೆ ಎನ್ನಬಹುದು. ಇದಕ್ಕೆ ನನ್ನಿಂದಾಗುವ ಎಲ್ಲಾ ಸೇವೆಗಳನ್ನು ಮಾಡುತ್ತೇನೆ ಎಂದು ನುಡಿದರು.

ತ್ರಿವೇಣಿ ಮ್ಯಾನೇಜ್‌ಮೆಂಟ್ ಕನ್ಸಲ್ವೆನ್ಸಿ ಸರ್ವೀಸಸ್ ಲಿ ಇದರ ನಿರ್ದೇಶಕರಾಗಿರುವ ಸಿ.ಎ ಎನ್.ಬಿ.ಶೆಟ್ಟಿ, ನಾನು ಈ ಸಂಸ್ಥೆಯ ಪ್ರಾರಂಭದಿಂದಲೂ ಸಂಪರ್ಕದಲ್ಲಿರಿಸಿಕೊಂಡವನು ,ಮಕ್ಕಳ ಸಂತೋಷ, ಮತ್ತವರ ಕಾರ್ಯ ಚಟುವಟಿಕೆಗಳ ಮಾತುಗಳನ್ನು ಕಂಡಾಗ ಬಹಳ ಸಂತೋಷವಾಗುತ್ತದೆ. ನಮ್ಮನ್ನು ಈ ಸಂಸ್ಥೆಯ ವಿಶ್ವಾಸರನ್ನಾಗಿ ಮಾಡಿದ್ದಾರೆ ಅದು ಕೂಡ ನನಗೆ ಬಹಳ ಆನಂದ ನೀಡಿದೆ. ಮುಂದಿನ ದಿನಗಳಲ್ಲಿ ಕೂಡ ಈ ಸಂಸ್ಥೆಗೆ ಬೇಕಾಗುವ ರೀತಿಯಲ್ಲಿ ಸಹಕಾರ ಮಾಡುತ್ತೇನೆ ಎಂದು ತಿಳಿಸಿದರು.
ಇಸ್ಸಾ ಫೈನಾನ್ಸಿ ಯಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕರಾಗಿರುವ ಡಾ.ಆರ್.ಕೆ.ಶೆಟ್ಟಿ
ಮಾತನಾಡುತ್ತಾ ,ನಮ್ಮ ರಾಜ್ಯದ ಅತ್ಯುನ್ನತ ಪ್ರಶಸ್ತಿಯಾದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಗಳಿಸಿದ ಚಿಣ್ಣರ ಬಿಂಬದ ಎಲ್ಲಾ ಮಕ್ಕಳಿಗೆ, ಪ್ರಕಾಶ್ ಭಂಡಾರಿ ಮತ್ತು ಅವರ ತಂಡಕ್ಕೆ, ಹಾಗೂ ಮಕ್ಕಳ ಪಾಲಕರಿಗೆ ಅಭಿನಂದನೆಗಳು. ಈ ಸಂಸ್ಥೆಯ ಟ್ರಷ್ಟಿಯಾಗಿ ನೇಮಿಸಿದಕ್ಕೆ ಚಿಣ್ಣರ ಬಿಂಬದ ಎಲ್ಲಾ ಕಾರ್ಯಕರ್ತರಿಗೆ ಅಬಾರಿಯಾಗಿದ್ದೇನೆ. ಇದರಲ್ಲಿನ ಎಲ್ಲಾ ಟ್ರಷ್ಟಿಗಳು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಮಟ್ಟದಲ್ಲಿದ್ದು ನಿಜಕ್ಕೂ ಚಿಣ್ಣರ ಬಿಂಬಕ್ಕೆ ಮುಂದಿನ ಎಲ್ಲಾ ಕಾರ್ಯಕ್ರಮಕ್ಕೆ ಶುಭ ಹಾರೈಕೆಗಳು.
ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕರಾಗಿರುವ ಚಂದ್ರಶೇಖರ ಪಾಲೆತ್ತಾಡಿ ತನ್ನ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾ 21 ವರ್ಷಗಳ ಸಂಭ್ರಮದ ನಡೆ ಅರ್ಥಪೂರ್ಣವಾಗಿದೆ ಒಂದು ರೀತಿಯ ಉತ್ಸಾಹವನ್ನು ಸೃಷ್ಟಿಸಿದೆ ,ಏಕೆಂದರೆ ಕರ್ನಾಟಕ ಸರಕಾರ ಈ ಸಂಸ್ಥೆ ಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿದೆ. ಕಲ ಜಗತ್ತು ಸಂಸ್ಥೆಯ 25ನೇ ವರ್ಷದ ಸಂಭ್ರಮಕ್ಕೆ ಚಿಣ್ಣರ ಬಿಂಬ ಪ್ರಾರಂಭಗೊಂಡಿದೆ. ಮುಂದಿನ ಜನಾಂಗಕ್ಕೆ ಏನು ಎಂಬ ಚಿಂತನೆಯಲ್ಲಿ ಈ ಸಂಸ್ಥೆ ಪ್ರಾರಂಭವಾಗಿದೆ ಇದು ಈಗ ಯುವಕನ ಸ್ಥಾನದಲ್ಲಿದೆ ಇದನ್ನು ಇನ್ನಷ್ಟು ಗಟ್ಟಿಗೊಳಿಸುವ ಕೆಲಸವನ್ನು ಪ್ರಕಾಶ್ ಬಂಡಾರಿ ಇವರು ಸಮರ್ಥ ರೀತಿಯಲ್ಲಿ ಮಾಡುತ್ತಿದ್ದಾರೆ ಆ ನಿಟ್ಟಿನಲ್ಲಿ ಅವರಿಗೆ ರಾಜ್ಯೋತ್ಸವ ಲಭಿಸಿದೆ. ಇಂದು ಐದು ಜನರನ್ನು ವಿಶ್ವಸ್ಥರನ್ನಾಗಿ ಸಂಸ್ಥೆ ಪಡೆದುಕೊಂಡಿದೆ , ಇದು ಮುಂದೆ ಸಂಸ್ಥೆ ಇನ್ನಷ್ಟು ಗಟ್ಟಿಗೊಳ್ಳಲು ಸಾಧ್ಯವಾಗಬಹುದು ಪ್ರಕಾಶ್ ಭಂಡಾರಿ ಅವರ ಯೋಚನೆಗಳು ಯೋಜನೆಗಳು ಪೂರ್ತಿಗೊಳ್ಳಲಿ ಎಂದು ತನ್ನ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ. ಹೇರಂಬ ಇಂಡಸ್ಟ್ರೀಸ್ ಇದರ ಆಡಳಿತ ನಿರ್ದೇಶಕ ಸದಾಶಿವ ಶೆಟ್ಟಿ, ಕನ್ಯಾನ, ತ್ರಿವೇಣಿ ಮ್ಯಾನೇಜ್‌ಮೆಂಟ್ ಕನ್ಸಲ್ವೆನ್ಸಿ ಸರ್ವೀಸಸ್ ಲಿ ಇದರ ನಿರ್ದೇಶಕರಾಗಿರುವ ಸಿ.ಎ ಎನ್.ಬಿ.ಶೆಟ್ಟಿ, ವಿ ಕೆ ಗ್ರೂಪ್ ಕಂಪನಿಯ ಆಡಳಿತ ನಿರ್ದೇಶಕ ಕೆ ಎಮ್ ಶೆಟ್ಟಿ .
ಇಸ್ಸಾ ಫೈನಾನ್ಸಿ ಯಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕರಾಗಿರುವ ಡಾ.ಆರ್.ಕೆ.ಶೆಟ್ಟಿ .
ಇವರು ಚಿಣ್ಣರಬಿಂಬದ ವಿಶ್ವಸ್ಥರಾಗಿ ಒಪ್ಪಿಕೊಂಡಿದ್ದು ಅವರನ್ನು ಚಿಣ್ಣರಬಿಂಬ ಸಂಸ್ಥೆಗೆ ಸ್ವಾಗತಿಸಿದ ಬಳಿಕ ಪದಗ್ರಹಣ ಸ್ವೀಕರಿಸಿದರು.
ಪ್ರಾಸ್ತವಿಕ ಪ್ರಸ್ತವಿಕ ಮಾತುಗಳನ್ನು ಡಾಕ್ಟರ್ ಸುರೇಂದ್ರ ಕುಮಾರ್ ಹೆಗ್ಡೆ ಮಾಡಿದರು.ಚಿಣ್ಣರಬಿಂಬದ ರೂವಾರಿ ಪ್ರಕಾಶ್ ಭಂಡಾರಿ ಚಿಣ್ಣರಬಿಂಬದ ಉದ್ದೇಶಗಳನ್ನು ತಿಳಿಸಿದರು
ವೇದಿಕೆಯಲ್ಲಿ ಸ್ಥಾಪಕ ಕಾರ್ಯಧ್ಯಕ್ಷೇ ಪೂಜಾ ಪ್ರಕಾಶ್ ಭಂಡಾರಿ, ಕಾರ್ಯಾಧ್ಯಕ್ಷೆ ನಯನಾ ಪ್ರಕಾಶ್ ಭಂಡಾರಿ, ಗೀತಾ ಹೇರಳ. ಚಿಣ್ಣರಬಿಂಬದ ವಿಶ್ವಸ್ಥರಾದ ಡಾ ಸುರೇಂದ್ರ ಕುಮಾರ್ ಹೆಗ್ಡೆ . ಭಾಸ್ಕರ್ ಶೆಟ್ಟಿ ತಾಳಿಪಾಡಿ ಗುತ್ತು .ರಮೇಶ್ ರೈ. ಚಿಣ್ಣರಬಿಂಬದ ಸಮಿತಿಯ ಸದಸ್ಯರು, ಮತ್ತಿತರರು ಉಪಸ್ಥರಿದ್ದರು
ಕಾರ್ಯಕ್ರಮವನ್ನು ಪ್ರಾರಂಭದಲ್ಲಿ ಡಾ. ಪೂರ್ಣಿಮಾ ಶೆಟ್ಟಿ, ನಿರೂಪಿಸಿದರು ಸಭಾ ಕಾರ್ಯಕ್ರಮವನ್ನು ಅಶೋಕ್ ಪಕ್ಕಳ. ಪ್ರತ್ಯೂಷ ಬಲ್ಲಾಳ್, ವಂಶಿಕ್ ಪೂಜಾರಿ ನಿರೂಪಿಸಿದರು ಅತಿಥಿಗಳನ್ನು
ಚಿಂತನ ಶೆಟ್ಟಿ .ಯಙ್ಙ ಶೆಟ್ಟಿ .ತನಿಷಾಶೆಟ್ಟಿಗಾರ್
ಆತ್ಮಿ ಶೆಟ್ಟಿ ಪರಿಚಯಿಸಿದರು.
ಮಧ್ಯಾಹ್ನ ದಿಂದ ಚಿಣ್ಣರಿಂದ ಸಮೂಹ ಭಜನೆ, ಪ್ರತಿಭಾ ಪ್ರದರ್ಶನ, ಪಾಲಕರ ಸಮೂಹಗಾಯನ ಹಾಗೂ ವೈವಿಧ್ಯಮಯ ಮನೋರಂಜನ ಕಾರ್ಯಕ್ರಮಗಳು ರಾಜ್ಯೋತ್ಸವದ ಸಂಭ್ರಮಾಚರಣೆ ನಡೆಯಿತು
_————–
ಕನ್ನಡಿಗರನ್ನು ಸೇರಿ ಸರಕಾರಕ್ಕೆ ಮನವಿ ಮಾಡಿ ಚಿಣ್ಣರ ಬಿಂಬಕ್ಕೆ ಸ್ಥಳ ಒದಗಿಸುವಂತೆ ಮಾಡಬೇಕಾಗಿದೆ.: ಪ್ರವೀಣ್ ಬೋಜ ಶೆಟ್ಟಿ,
ವೇದಿಕೆ ಗೌರವಾನ್ವಿತ ಗಣ್ಯರಾದ ಬಂಟರ ಸಂಘ, ಮುಂಬಯಿ ಇದರ ಅಧ್ಯಕ್ಷರಾಗಿರುವ ಪ್ರವೀಣ್ ಬೋಜ ಶೆಟ್ಟಿ, ಮಾತನಾಡುತ್ತಾ ಚಿಣ್ಣರಬಿಂಬದ ಏಳು ಸಾವಿರ ಮಕ್ಕಳು ಎಂದರೆ ಏಳು ಸಾವಿರ ಕೋಟಿಯಂತೆ ಪ್ರಕಾಶ್ ಭಂಡಾರಿಯವರ ಆಸ್ಥಿಯಾಗಿದ್ದಾರೆ. ಮಕ್ಕಳು ದೇವರ ಪ್ರತಿರೂಪವಾಗಿದ್ದು ಮಕ್ಕಳದ್ದು ಮುಗ್ದ ಮನಸ್ಸು. ಈ ಸಂಸ್ಥೆಯ ಮೂಲಕ ಪ್ರಕಾಶ್ ಭಂಡಾರಿಯವರು ಮಕ್ಕಳನ್ನು ದೇಶದ ಉತ್ತಮ ಪ್ರಜೆಯನ್ನಾಗಿ ಮಾಡುತ್ತಿದ್ದು ನಿಜಕ್ಕೂ ಮಕ್ಕಳಲ್ಲಿ ಉತ್ತಮ ಪರಿವರ್ತನೆಯನ್ನು ಮಾಡುತ್ತಿದ್ದಾರೆ. ಅವರೊಂದಿಗೆ ನಾವೆಲ್ಲರೂ ಸೇರಿ ಸರಕಾರಕ್ಕೆ ಮನವಿ ಮಾಡಿ ಚಿಣ್ಣರ ಬಿಂಬಕ್ಕೆ ಸ್ಥಳ ಒದಗಿಸುವಂತೆ ಮಾಡಬೇಕಾಗಿದೆ. ಇಂದು ಮಕ್ಕಳು ಬಹಳ ಸುಂದರವಾಗಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಈ ಸಂಸ್ಥೆ ತನ್ನ ಬೆಳ್ಳಿ ಹಬ್ಬ ಸಮಾರಂಭದಲ್ಲಿ ಹತ್ತು ಸಾವಿರ ಮಕ್ಕಳನ್ನು ಹೊಂದಲಿ ಮುಂದೆ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಹೊಂದಲಿ ಹಾಗೂ ಇಂತಹ ಸಂಘಟನೆ ದೇಶದ ಎಲ್ಲೂ ಇಲ್ಲದೆ ಇದ್ದು ಇದಕ್ಕೆ ಇನ್ನೂ ಹೆಚ್ಚಿನ ಪ್ರಶಸ್ತಿ ದೊರೆಯಲಿ ಎಂದು ಅಭಿನಂದಿಸಿ ಶುಭ ಕೋರಿದರು.
ನೆರೆದ ಜನರು ಹುಬ್ಬೇರಿಸುವಂತೆ ಮಾಡಿದೆ ಅದ್ಭುತ ಕಾರ್ಯಕ್ರಮ.
ತುಳುನಾಡಿನ ಭೂತಾರಾಧನೆಯನ್ನು ನೆನಪಿಸುವ. ವೇದಿಕೆಯಲ್ಲಿ ಚಿಣ್ಣರು ಸೊಗಸಾಗಿ ಭಜನೆಯನ್ನು ಹಾಡಿದರು. ಅಚ್ಚಕನ್ನಡದಲ್ಲಿ ಸ್ಪಷ್ಟ ಮಾತುಗಳ ಮೂಲಕ ಅತಿಥಿಗಳನ್ನು ಸ್ವಾಗತಿಸಿದರು, ಕಾರ್ಯಕ್ರಮವನ್ನು ನಿರೂಪಿಸಿದರು. ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡಿದರು .ಭಾವಗೀತೆ, ಜಾನಪದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ರಂಜಿಸಿದರು . ಸಿನೆಮಾ ಹಾಡು, ನೃತ್ಯದ ಅಬ್ಬರವಿರುವ ಪ್ರಸ್ತುತ ಕಾಲಮಾನದಲ್ಲಿ ಕೇವಲ ಜಾನಪದ ನೃತ್ಯಕ್ಕಷ್ಟೇ ಅವಕಾಶವಿದ್ದು ಚಿಣ್ಣರಲ್ಲಿ ನಮ್ಮ ನಾಡಿನ ಜಾನಪದ ವೈಭವವನ್ನು ತಿಳಿಸುವ ಪ್ರಯತ್ನ. . ಮಕ್ಕಳಲ್ಲಿ ಸುಪ್ತವಾಗಿ ಅಡಗಿದ್ದ ಅಭಿನಯ ಕೌಶಲ. ಈ ಎಲ್ಲಾ ಅಂಶಗಳು ಉತ್ತಮ ರೀತಿಯಲ್ಲಿ ನಡೆಯುವಲ್ಲಿ ಪಾಲಕರು, ತರಬೇತುದಾರರು ನಿರಂತರವಾಗಿ ಶ್ರಮಿಸಿದ್ದಾರೆ . ಇವೇಲ್ಲವನ್ನು ಕಣ್ತುಂಬಿ ಕಾಣುತ್ತಿದ್ದ ಜನಸಾಗರವನ್ನು ಹುಬ್ಬೇರಿಸುವಂತೆ ಮಾಡಿದೆ.