
ಸಮಾಜವನ್ನು ಬಲಿಷ್ಠ ಗೊಳಿಸಿದ ವ್ಯಕ್ತಿಯನ್ನು ನಾವು ಗೌರವಿಸುವುದು ಅಗತ್ಯವಿದೆ: ದಿನೇಶ್ ಅಮೀನ್ ಮಟ್ಟು
ಚಿತ್ರ ವರದಿ : ದಿನೇಶ್ ಕುಲಾಲ್
ಮುಂಬಯಿ ಜ 7. ನಾಡಿನ ಹೆಸರಾಂತ ಪತ್ರಕರ್ತ ,ರಾಜಕೀಯ ವಿಶ್ಲೇಷಕ ,ವಾಗ್ಮಿ, ಬಿಲ್ಲವ ಸಮಾಜದ ಹೆಮ್ಮೆಯ ರತ್ನ ,2023ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಮಾಧ್ಯಮ ವಿಭಾಗದಲ್ಲಿ ಪಡೆದ ದಿನೇಶ್ ಅಮೀನ್ ಮಟ್ಟು ಅವರಿಗೆ ಜ.6ರಂದು ಮುಂಬಯಿ ಬಿಲ್ಲವರ ಹಿತಚಿಂತಕರು ಮತ್ತು ಜಯ ಸಿ ಸುವರ್ಣ ಅಭಿಮಾನಿಗಳ ಆಶ್ರಯದಲ್ಲಿ ,ಗೋರೆಗಾಂವ್ ಪೂರ್ವದ ಜಯಲೀಲಾ ಸಭಾಗ್ರಹದಲ್ಲಿ ಗೌರವಾರ್ಪಣೆ
ಭಾರತ್ ಬ್ಯಾಂಕ್ ನ ಕಾರ್ಯಧ್ಯಕ್ಷ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲ,ಮುಲ್ಕಿ ಇದರ ಉಪಾಧ್ಯಕ್ಷ ಸೂರ್ಯಕಾಂತ ಜೆ ಸುವರ್ಣ ಅಧ್ಯಕ್ಷತೆಯಲ್ಲಿ. ಮುಂಬೈಯ ಹಿರಿಯ ಪತ್ರಕರ್ತ ಕರ್ನಾಟಕ ಮಲ್ಲದ ಸಂಪಾದಕ ಚಂದ್ರಶೇಖರ್ ಪಾಲಿತಾಡಿ.ಶ್ರೀ ಗುರುನಾರಾಯಣ ಅಧ್ಯಯನ ಪೀಠ ಮಂಗಳೂರು ಇದರ ನಿರ್ದೇಶಕ ಡಾ.ಗಣೇಶ್ ಸಂಕಮಾರ್.ಭಾರತ್ ಬ್ಯಾಂಕ್ ನ ಕಾರ್ಯಧ್ಯಕ್ಷ, ಎಂ ಡಿ ವಿದ್ಯಾನಂದ ಕರ್ಕೇರ ಹಾಗೂ ಬಿಲ್ಲವ ಸಮಾಜ ಬಂಧುಗಳ ಕ್ಷಮ ಕ್ಷಮದಲ್ಲಿ ಅರ್ಥಪೂರ್ಣವಾಗಿ ಸನ್ಮಾನ ನಡೆಯಿತು
ಸನ್ಮಾನವನ್ನು ಸ್ವೀಕರಿಸಿದ ದಿನೇಶ್ ಅಮೀನ್ ಮಟ್ಟು ಅಭಿಮಾನದ ಮಾತುಗಳನ್ನಾಡುತ್ತಾ ನಾನು ಎಂದಿಗೂ ಸನ್ಮಾನವನ್ನು ಬಯಸಿದವನಲ್ಲ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಂದರ್ಭದಲ್ಲಿ ನಾಡಿನ ಅನೇಕ ನಗರಗಳಲ್ಲಿ ನನ್ನನ್ನು ಸನ್ಮಾನಕ್ಕೆ ಆಹ್ವಾನಿಸಿದ್ದರು. ಆದರೆ ಯಾವುದೇ ಸನ್ಮಾನಗಳನ್ನು ನಾನು ಸ್ವೀಕರಿಸಿಕೊಂಡಿಲ್ಲ. ಇಂದು ಜಯ ಸಿ ಸುವರ್ಣರ ಹೆಸರಲ್ಲಿ ಅವರ ಅಭಿಮಾನಿಗಳು ನೀಡುತ್ತಿರುವ ಸನ್ಮಾನ ಅಂತ ಈ ಸನ್ಮಾನಕ್ಕೆ ನಾನು ಒಪ್ಪಲೇ ಬೇಕಾಗಿದೆ.
ಮುಂಬೈಯಲ್ಲಿ ಹುಟ್ಟಿ ಬೆಳೆದ ನಾನು ಭಾಷಣ ಮಾಡಲು ಕಲಿತದ್ದು ಇಲ್ಲಿಯ ಮಹಾನಗರ ಪಾಲಿಕೆಯ ಶಾಲೆಯಲ್ಲಿ ಕಲಿಯುತ್ತಿರುವಗ್ಗ. ನಾನು ಸತ್ಯ ಹಾಗೂ ನೇರನುಡಿಯ ಮಾತುಗಳನ್ನು ಮಾತನಾಡುತ್ತಾ ಬೆಳೆದವನು. ಸಮಾಜದಲ್ಲಿ ಸಜ್ಜನರ ಸಂಖ್ಯೆ ಬಹಳಷ್ಟು ಇದೆ. ದುರ್ಜನರು ಬಹಳ ಕಡಿಮೆ ಇದ್ದರೆ. ದುರ್ಜನರು ಮಾತನಾಡುತ್ತಲೇ ಇರುತ್ತಾರೆ ಆದರೆ ಅವರ ಮಾತುಗಳು ಸಮಾಜಕ್ಕೆ ಮಾರಕವಾಗುವಂತಿದೆ. ಆದ್ದರಿಂದ ಸಜ್ಜನರು ಈ ಸಂದರ್ಭದಲ್ಲಿ ಮಾತನಾಡುವುದು ಅಗತ್ಯವಿದೆ ಮಾರ್ಗದರ್ಶನ ನೀಡುವುದು ಅಗತ್ಯವಿದೆ.ಆದ್ದರಿಂದ ಸಮಸ್ಯೆಗಳನ್ನು ಸಮರ್ಥ ರೀತಿಯಲ್ಲಿ ನಿರ್ವಹಿಸಬಹುದು.
ಸಮಾಜದಲ್ಲಿ ಒಬ್ಬರು ಹೈಕಾನ್ ಎನ್ನುವ ಇರುತ್ತಾರೆ ಆತ ಆ ಎತ್ತರಕ್ಕೆ ಬೆಳೆಯಬೇಕಾಗಿದ್ದರೆ ಅದು ಅಷ್ಟು ಸುಲಭದ ಕೆಲಸವಲ್ಲ . ಅದು ಬಹಳಷ್ಟು ವರ್ಷಗಳ ಪ್ರಯತ್ನ ಸಾಧನೆಯ ಫಲದಿಂದ ಸಾಧ್ಯವಾಗಿದೆ .ಅಂತ ವ್ಯಕ್ತಿಯನ್ನು ನಾವು ಗೌರವಿಸುವುದು ಅಗತ್ಯವಿದೆ . ಅವರ ಪವಿತ್ರತೆಯನ್ನು ನಾವು ಉಳಿಸಬೇಕು . ಅಂತವರ ವಿರುದ್ಧ ನಾವು ತಪ್ಪು ಮಾತನಾಡಬಾರದು. ಇಂಥ ತಪ್ಪುಗಳನ್ನು ಯಾರು ಮಾಡಿದರೆ ಅದು ತಪ್ಪು. ಇಂದು ನಮ್ಮ ಸಮುದಾಯದಲ್ಲಿನ ಸಂಘಟನೆಗಳಲ್ಲಿ ಭಿನ್ನಾಭಿಪ್ರಾಯಗಳಿರ ಬಹುದು. ಅದನ್ನು ತೊರೆದು ಎಲ್ಲರೂ ಒಂದೇ ವೇದಿಕೆಯಲ್ಲಿ ಬಂದಲ್ಲಿ ಅದು ಜಯ ಸುವರ್ಣರಿಗೆ ನೀಡುವ ನಿಜವಾದ ಗೌರವ ಅಂತ ನಾನು ಭಾವಿಸುತ್ತಿದ್ದೇನೆ. ಅಲ್ಲದೆ ಇದುವೇ ನಮ್ಮನ್ನಗಲಿದ ಎಲ್ಲಾ ಹಿರಿಯರಿಗೆ ನೀಡುವ ನಿಜವಾದ ಗೌರವ ವಾಗಿರುತ್ತದೆ. ಈ ಕಾರ್ಯ ಸೂರ್ಯಕಾಂತ್ ಸುವರ್ಣರಂತಹ ಯುವ ನೇತಾರರಿಂದ ಹಾಗೂ ಅವರ ತಂಡದಿಂದ ಸಮಾಜದಲ್ಲಿ ಒಗ್ಗಟ್ಟು ಮೂಡಿಸುವ ಕಾರ್ಯ ಖಂಡಿತವಾಗಿಯೂ ಸಾಧ್ಯ. ಎಂಥ ಭಿನ್ನ ಭಯ ಅಭಿಪ್ರಾಯಗಳುಇದ್ದರೂ ಕೂಡ ಜಯ ಸುವರ್ಣರು ಅದನ್ನೆಲ್ಲ ಒಂದು ಮಾಡುವ ಸಾಮರ್ಥ್ಯ ಅವರಲ್ಲಿ ಇತ್ತು .ಈಗ ಅದೇ ಸಾಮರ್ಥ್ಯ ಅವರ ಮಗ ಸಮರ್ಥರಾಗಿದ್ದಾರೆ ಅವರೊಟ್ಟಿಗೆ ಯುವ ಸಮುದಾಯವಿದೆ. ನಾರಾಯಣ ಗುರುಗಳು ಸಣ್ಣ ಪ್ರಾಯದಲ್ಲಿ ಯುವಕರನ್ನು ಒಗ್ಗೂಡಿಸಿ ಚಳವಳಿ ಮಾಡಿದವರು. ಎಂದು ನಮಗೆಲ್ಲರಿಗೂ ತಿಳಿಯಬೇಕಾಗಿದೆ.
ಜಯ ಸುವರ್ಣರು ಇಚ್ಛಿಸಿದಲ್ಲಿ ರಾಜಕೀಯದಲ್ಲಿ ದೊಡ್ಡ ಸ್ಥಾನಮಾನದಲ್ಲಿ ಬೆಳೆಯಬಹುದಿತ್ತು ಅವರಿಗೆ ರಾಜಕೀಯ ಆಸಕ್ತಿ ಇರಲಿಲ್ಲ. ಬಿಲ್ಲವ ಸಮಾಜದಲ್ಲಿ ಡಾ. ರಾಜಕುಮಾರ್ ಮತ್ತು ಜಯ ಸುವರ್ಣರು ಅವಕಾಶ ಸಿಕ್ಕಿದರು ಕೂಡ ರಾಜಕೀಯ ದತ್ತ ಬಂದಿಲ್ಲ. ಜಯ ಸುವರ್ಣರ ಸಂಘಟನೆ ಯಲ್ಲಿ ಕಾಲಿಟ್ಟಿ ಇದೆ . ಸಮಾಜದಲ್ಲಿ ದಾನ ಧರ್ಮ ಮಾಡುವ ವರು ಬೇರೆ ಬೇರೆ ವಿಧದಲ್ಲಿದ್ದಾರೆ ಜಯ ಸುವರ್ಣರು ಬಿಲ್ಲವ ಸಮಾಜವನ್ನು ಸಂಘಟಿಸಲು ಎಷ್ಟು ಸಮಯವನ್ನು ನೀಡಿದ್ದಾರೆ ಎಂತ ತ್ಯಾಗವನ್ನು ಮಾಡಿದ್ದಾರೆ . ಅಂತ ಸಮಯವನ್ನು ಅವರು ಸ್ವಂತಕ್ಕಾಗಿ ಉದ್ಯಮಕ್ಕಾಗಿ ಮಾಡಿಕೊಂಡಿದ್ದರೆ ಇಂದು ಉದ್ಯಮಗಳಲ್ಲಿ ಉನ್ನತ ಶ್ರೇಣಿಯಲ್ಲಿ ಬೆಳೆಯಬಹುದಿತ್ತು. ಇಂದು ಭಾರತ್ ಬ್ಯಾಂಕ್ ಬಾಳ ಎತ್ತರದಲ್ಲಿ ಬೆಳೆದಿದೆ ಅದರಲ್ಲಿ ನಮ್ಮ ನಾಡಿನ. ಬಿಲ್ಲವ ಸಮಾಜದ ಬಂಧುಗಳಿಗೆ ಅವರ ಕುಟುಂಬಗಳಿಗೆ ಆಶ್ರಯವಾಗಿದೆ ಅದೆಲ್ಲವೂ ಜಯ ಸುವರ್ಣರು ನಾಯಕತ್ವದಿಂದ ಸಾಧ್ಯವಾಗಿದೆ. ಇಷ್ಟು ಸಂಖ್ಯೆಯಲ್ಲಿ ನೀವು ಸೇರಿಕೊಂಡಿದ್ದೆರಿ ಇದಕ್ಕೆ ಅವರ ಆದರ್ಶ ಕಾರಣ ಸಮಾಜವನ್ನು ಬದ್ಧತೆ ರೀತಿಯಲ್ಲಿ ಬೆಳೆಸಿದ್ದಾರೆ ಇದಕ್ಕೆ ಮೂಲ ಕಾರಣ ಜಯ ಸುವರ್ಣರು.ನಮ್ಮಲ್ಲಿ ದೊಡ್ಡ ಮಟ್ಟದ ಭಿನ್ನಾಭಿಪ್ರಾಯಗಳು ಇಲ್ಲ ಇದು ಪ್ರತಿಷ್ಠೆಯ ಭಿನ್ನಾಭಿಪ್ರಾಯ . ಇದನ್ನು ಸಮಾನ ಮನಸ್ಕರು ಸೇರಿ ಸರಿಪಡಿಸುವ ಕೆಲಸ ಮಾಡಬೇಕು.
ನಾನು ಐದು ವರ್ಷಗಳ ಕಾಲ ಕರ್ನಾಟಕದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರನಾಗಿ ಕಾರ್ಯನಿರ್ವಹಿಸಿದ್ದೇನೆ. ಆ ಸಂದರ್ಭದಲ್ಲಿ ಊರಿನವರಾಗಲಿ. ಮುಂಬೈಯವರಾಗಲಿ ಒಬ್ಬನೇ ಒಬ್ಬ ನನ್ನನ್ನು ಬಂದು ಗೌರವಿಸಿಲ್ಲ ಮಾತನಾಡಿಲ್ಲ. ಆದ್ದರಿಂದ ನಾನು ಸನ್ಮಾನುಕ್ಕು ಅವಮಾನಕ್ಕೂ ಎಂದು ಆಸೆ ಪಟ್ಟವನಲ್ಲ. ನನ್ನ ಮತ್ತು ಸಮಾಜದ ಕೆಲಸಕ್ಕಾಗಿ ಯಾರಿಗೂ ತಲೆಬಾಗಿ ಅಥವಾ ಒಲಾಯಿಸಿ ಕೆಲಸ ಮಾಡಿಲ್ಲ ನ್ಯಾಯ ಧರ್ಮ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ ಅದು ನನಗೆ ಆತ್ಮ ತೃಪ್ತಿ ತಂದಿದೆ. ನಾನು ಸತ್ಯದ ಬಗ್ಗೆ ಮಾತನಾಡುವ ಬರೆಯುವ ಅದರಲ್ಲಿ ನಡೆಯುವ. ನಮ್ಮ ಎಲ್ಲಾ ಸಮಸ್ಯೆಗಳಿಗೆ ನಾರಾಯಣ ಗುರುಗಳ ತತ್ವದಲ್ಲಿ ಸಂದೇಶವಿದೆ. 250ಕ್ಕೂ ಮಿಕ್ಕಿ ಬಿಲ್ಲವ ಸಂಘಟನೆಗಳಿದೆ. ನಾರಾಯಣ ಗುರುಗಳ ಮಂದಿರಗಳಿದೆ ಆದರೆ ನಮಗೆ ನಾರಾಯಣ ಗುರುಗಳ ತತ್ವ ಆದರ್ಶ ಸಂದೇಶಗಳನ್ನು ಬೇಡವಾಗಿದೆ. ಇದೆಲ್ಲವನ್ನು ನೋಡಬೇಕಿದ್ದರೆ ಕೇರಳ ರಾಜ್ಯಕ್ಕೆ ಹೋಗಬೇಕು. ಅಲ್ಲಿಯ ಬಿಲ್ಲವರು ಎಲ್ಲಾ ರೀತಿಯಲ್ಲಿ ಬಲಿಷ್ಠಗೊಂಡಿದ್ದಾರೆ. ಭೂ ಸುಧಾರಣೆಯಲ್ಲಿ ಭೂಮಿ ಕಳೆದುಕೊಂಡ ಬಂಟರು ಯಾವ ಸ್ಥಾನಮಾನದಲ್ಲಿದ್ದಾರೆ. ಭೂಮಿ ಪಡೆದವರು ಬಿಲ್ಲವರು ಎಲ್ಲಿದ್ದಾರೆ ಎನ್ನುವುದನ್ನು ಆತ್ಮ ವಿಮರ್ಶೆ ಮಾಡಬೇಕಾಗಿದೆ .ಜಿಲ್ಲೆಯಲ್ಲಿ ಬಿಲ್ಲವರದೇ ಎನ್ನುವ ಮೆಡಿಕಲ್ ಕಾಲೇಜ್ ಇಂಜಿನಿಯರಿಂಗ್ ಕಾಲೇಜ್ ಇಲ್ಲ ಎನ್ನುವುದು ತುಂಬಾ ಖೇತಕರ ಸಂಗಾತಿ. ನಿಮ್ಮೆಲ್ಲರ ಆಶೀರ್ವಾದದ ನೆಲೆಯಲ್ಲಿ ನಾನು ಮುಂದಿನ ದಿನದಲ್ಲೂ ಕೂಡ ಸಮಾಜದ ಒಳಿತಿಗೆ ಕೆಲಸ ಮಾಡುತ್ತೇನೆ ಎಂದು ನೋಡಿದರು..

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮುಂಬೈಯ ಹಿರಿಯ ಪತ್ರಕರ್ತ. ಕರ್ನಾಟಕ ಮಲ್ಲದ ಸಂಪಾದಕ ಚಂದ್ರಶೇಖರ್ ಪಾಲಿತಾಡಿ ಮಾತನಾಡುತ್ತಾ ದಿನೇಶ್ ಅಮೀನ್ ಮಟ್ಟುವಂತವರನ್ನು ಸನ್ಮಾನಿಸಿದ್ದು ಅಭಿಮಾನ ತಂದಿದೆ. ಅವರ ಮನಸ್ಸಿನೊಳಗೊಂದು ಚಿಂತನೆ ಇದೆ ಸಮುದಾಯದ ಆಲೋಚನೆಗಳಿದೆ. ದೇಶದಲ್ಲಿ ಸ್ವಾತಂತ್ರ ಸಿಗುವಾಗ ನಮ್ಮ ಊರಿನಲ್ಲೂ ಕೂಡ ಸ್ವಾತಂತ್ರ ಚಳುವಳಿ ನಡೆದಿದೆ ಮಧ್ಯವರ್ಜನೆ ನಿಷೇಧ ಸಂದರ್ಭದಲ್ಲಿ ಸೇಂದಿ ತೆಗೆಯಬಾರದು ಎನ್ನುವ ಕಾನೂನು ಬಂತು ಅದರೊಟ್ಟಿಗೆ ಬೆಲ್ಲ ಕೂಡ ತಯಾರಿಸುವುದು ಬಂದು ಮಾಡುವಂತಾಯ್ತು ಬಿಲ್ಲವರ ಮೂಲ ಕಸಬಿಗೆ ತುಂಬಾ ತೊಂದರೆಗಳಾಯಿತು . ಕೃಷಿ ಭೂಮಿ ನಮ್ಮ ನಾಡು ಅದನ್ನು ಉಳಿಸುವ ಬೆಳೆಸುವ ಕಾಯಕದಲ್ಲಿ ತೊಡಗದೆ ಕೃಷಿ ಭೂಮಿಯನ್ನು ಪಾಲು ಮಾಡಿ ಅದರಲ್ಲೇ ಕುಟುಂಬದ ಒಳ ಜಗಳಗಳು ಪ್ರಾರಂಭಗೊಂಡು. ಕೃಷಿ ಮಾಡೋದೇ ಕಡಿಮೆಯಾಯಿತು ಕೃಷಿಯಲ್ಲಿ ಸರಿಯಾದ ರೀತಿಯಲ್ಲಿ ಮಾಡಿದರೆ ನಮ್ಮ ಜೀವನ ನಡೆಸುವುದಕ್ಕೆ ಎಂದು ಕಷ್ಟವಾಗದು. ಆ ನಿಟ್ಟಿನಲ್ಲಿ ಕೂಡ ನಾವು ಚಿಂತನೆ ಮಾಡಬೇಕಾಗಿದೆ. ಸಂಪತ್ತಿ ಮುಖ್ಯವಲ್ಲ ಸಮಾಜದಲ್ಲಿ ಒಟ್ಟಾಗಿ ಬದುಕುವುದೇ ಬದುಕು . ಸಾಮರಸ್ಯದಲ್ಲಿ ಬದುಕುವುದೇ ಒಳ್ಳೆಯತನ . ದ್ವೇಷ ಬಿಟ್ಟು ಸ್ನೇಹಿತರಾಗುವ .ಸಂಘಟನೆ ಎಂದಾಗ ಅಲ್ಲಿ ಮಾತುಗಳು ಬೆಳೆಯುವುದು ಸಹಜ. ಸಂದರ್ಭ ನಮ್ಮನ್ನು ಮಾತನಾಡಿಸ ಬಹುದು .ಅದನ್ನು ದ್ವೇಷದೇಶವಾಗಿ ಪರಿವರ್ತಿಸದೆ ಸ್ವಹಾರ್ದತೆಯಿಂದ ಒಗ್ಗಟ್ಟಾಗೋಣ. ಸೂರ್ಯಕಾಂತ್ ಜಯ ಸುವರ್ಣರಂತ ಯುವ ನಾಯಕ ಭಾರತ್ ಬ್ಯಾಂಕಿಗೆ ನಾಯಕನಾಗಿ ಬಂದಿದ್ದಾರೆ. ಭಾರತ್ ಬ್ಯಾಂಕ್ ಮುಂಬೈಯ ತುಳು ಕನ್ನಡಿಗರ ಬ್ಯಾಂಕ್ ಅದನ್ನು ಬಲಿಷ್ಟಗೊಳಿಸುವ ಕೆಲಸ ನಡೆಯಲಿ ಎಂದು ನಡೆಯಲಿ.

ಅಭಿನಂದನೆಯ ಮಾತುಗಳನ್ನಾಡಿದ ಶ್ರೀ ಗುರುನಾರಾಯಣ ಅಧ್ಯಯನ ಪೀಠ ಮಂಗಳೂರು ಇದರ ನಿರ್ದೇಶಕ ಡಾ.ಗಣೇಶ್ ಸಂಕಮಾರ್ ಅವರು ಮುಂಬೈ ಬಿಲ್ಲವ ರನ್ನು ನೆನಪಿಸಿದಾಗ ಮೊದಲಿಗೆ ನೆನಪಾಗುವುದು ಜಯ ಸುವರ್ಣರು 4 ವರ್ಷಗಳ ಹಿಂದೆ ಜಯ ಸುವರ್ಣ ರಿಗೆ ಕರ್ನಾಟಕ ರಾಜ್ಯೋತ್ಸವ ಪಡೆದ ಸಂದರ್ಭದಲ್ಲಿ ಸಹಸ್ರ ಸಂಖ್ಯೆಯಲ್ಲಿ ಅಭಿಮಾನಿಗಳ ಅಭಿಮಾನದ ನಡುವೆ ತೆರೆದ ಮೈದಾನದಲ್ಲಿ ಸನ್ಮಾನ ನಡೆದಾಗ ನನಗೆ ಅಲ್ಲಿ ಕೂಡ ಅಭಿನಂದನಾ ಭಾಷಣ ಮಾಡುವುದಕ್ಕೆ ಅವಕಾಶ ಸಿಕ್ಕಿ ದೆ. ಇದೀಗ ಮತ್ತೊಮ್ಮೆ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸಿದ ನೇರ ದಿಟ್ಟ ಮಾತುಗಾರ ಬರಹಗಾರ ದಿನೇಶ್ ಅಮೀನ್ ಗೆ ಸನ್ಮಾನದ ಸಂದರ್ಭದಲ್ಲಿ ಅವಕಾಶ ಲಭಿಸಿದೆ. ನಿಷ್ಠಾವಂತ ಸಂಘಟಕ ಜಯ ಸುವರ್ಣ ಅವರ ಸುಪುತ್ರ ಸೂರ್ಯಕಾಂತ್ ಅವರ ಮುತಾಲಿಕೆಯಲ್ಲಿ ಈ ಕಾರ್ಯಕ್ರಮ ವಾಗಿ ಅರ್ಥಪೂರ್ಣವಾಗಿ ಆಯೋಜಿಸಿಕೊಂಡಿದ್ದಾರೆ. ಮುಂಬೈ ಮಣ್ಣಿನ ಮೇಲೆ ನಮ್ಮೂರಿನ ಜನರಿಗೆ ಬಹಳಷ್ಟು ಋಣವಿದೆ.ಊರಿನ ಅತಿ ಹೆಚ್ಚು ಕಾರ್ಯಕ್ರಮವಾಗಲಿ. ಧರ್ಮಕಾರ್ಯವಾಗಲಿ ಅಲ್ಲಿಗೆ ಮುಂಬೈ ಮಣ್ಣಿನ ಪರಿಮಳ ಬರಲೇಬೇಕು. ಯಾವುದೇ ಸಂದರ್ಭದಲ್ಲಿ ನೇರ ದಿಟ್ಟವಾಗಿ ಮಾತನಾಡುವ ಪತ್ರಕರ್ತನೊಬ್ಬ ಇದ್ದಾನೆಂದರೆ ಅದು ದಿನೇಶ್ ಅಮೀನ್ ಮಟ್ಟು. ಅವರು ವಡ್ಡಸೆ ರಘುರಾಮ್ ಶೆಟ್ಟಿ ಅವರ ಮುಂಗಾರು ಪತ್ರಿಕೆಯಲ್ಲಿ ಬರೆಯುತ್ತಿರುವಾಗಲೇ ನೋಡುತ್ತಿದ್ದವನು. ಎಲ್ಲ ಪತ್ರಕರ್ತರಿಗೂ ದಿನೇಶ್ ಮಟ್ಟುವಂತ ಆಗಲು ಸಾಧ್ಯವಿಲ್ಲ ಅವರ ಬರವಣಿಗೆಗಳು ಆಳವಾದ ಅಧ್ಯಯನಗಳು. ಇದ್ದದ್ದನ್ನು ಇದ್ದ ಹಾಗೆ ನೇರವಾಗಿ ಬರೆಯುವ ಪತ್ರಕರ್ತ ಅವರಾಗಿದ್ದಾರೆ. ಇಂಥ ಪತ್ರಕರ್ತರು ಬಿಲ್ಲವ ಸಮಾಜದಲ್ಲಿ ಇನ್ನಷ್ಟು ಬಂದಾಗ ಬಿಲ್ಲವ ಸಮಾಜದಲ್ಲಿ ಸ್ವಾಭಿಮಾನದಲ್ಲಿ ಬದುಕಲು ಸಾಧ್ಯವಾಗುತ್ತದೆ. ಮುಂಬೈಯ ಮಣ್ಣಿನಲ್ಲಿ ದಿನೇಶ್ ಅಮೀನ್ ಮಟ್ಟು ಅವರಿಗೆ ನೀಡಿದ ಸನ್ಮಾನ ಮುಂದೆ ಬರುವ ಬಿಲ್ಲವ ಸಮಾಜದ ಯುವ ಸಾಧಕರಿಗೆ ಪ್ರೋತ್ಸಾಹವಾಗಿದೆ. ಮುಲ್ಕಿ ಸೀಮೆಯಲ್ಲಿ ಜಯ ಸುವರ್ಣರು. ಪೈಯೋಟ್ಟು ಸಾಲಿಯಾನರು. ಚಂದ್ರಶೇಖರ್ ಸುವರ್ಣ ಹಾಗೂ ದಿನೇಶ್ ಅಮೀನ್ ಮಟ್ಟು ಹೀಗೆ ನಾಲ್ಕು ಜನರಿಗೆ ರಾಜ್ಯೋತ್ಸವ ಪಡೆದಿರುವುದೆಂದರೆ ಅದು ನಮ್ಮ ಮುಲ್ಕಿ ಸೀಮೆಗೆ ಗೌರವವಾಗಿದೆ. ಮುಂಬೈಯಲ್ಲಿ ಬಿಲ್ಲವ ಸಮಾಜ ಬಲಿಷ್ಠಗೊಳ್ಳಲು ಜಯ ಸುವರ್ಣರು ಮಾಡಿದ್ದ ತ್ಯಾಗ .ಸೇವಾಕಾರಿಗಳು ನಾವು ನೆನಪಿಸಬೇಕಾಗುತ್ತದೆ ಅವರು ಯಾವ ರೀತಿ ಕನಸುಗಳು ಕಟ್ಟಿದ್ದಾರೆ ಅದೆಲ್ಲವನ್ನು ನಾವು ಪೂರ್ತಿಗೊಳಿಸುವ. ಜಯ ಸುವರ್ಣರ ನಡೆಯಲ್ಲಿ ಸೂರ್ಯಕಾಂತ್ ಬೆಳೆಯುತ್ತಿದ್ದಾರೆ ಅವರ ಮಾತುಗಳಲ್ಲಿ ಸಮಾಜದ ಪರಿವರ್ತನೆಗಳು ಕೇಳಿಕೊಂಡೆ ಇಂಥ ಮಾತುಗಳು ಜಯ ಸುವರ್ಣರಲ್ಲಿ ಕೂಡ ನಾನು ಕೇಳಿಕೊಂಡಿದ್ದೇನೆ. ನಾವು ಹೇಗೆ ಬದುಕಬೇಕು ಮತ್ತೊಬ್ಬರ ನಡುವೆ ನಮ್ಮ ವ್ಯಕ್ತಿತ್ವವನ್ನು ಹೇಗೆ ಬೆಳೆಸಬೇಕು ನಾರಾಯಣ ಗುರುಗಳ ತತ್ವಗಳು. ಕೋಟಿ ಚೆನ್ನಯರ ಆದರ್ಶಗಳು. ಎಲ್ಲವ ಸಮಾಜ ಬಲಿಷ್ಠವಾಗಬೇಕೆನ್ನುವ ಜಯ ಸುವರ್ಣರ ಕನಸು ಆಗಿತ್ತು. ಜಯ ಸುವರ್ಣರ ಆದರ್ಶವನ್ನು ಮುಂದಿಟ್ಟು ಇಲ್ಲಿ ಸಮಾನಮನಸ್ಕಾರ ಒಟ್ಟು ಸೇರಿ ಆಯೋಜಿಸಿದ ಸನ್ಮಾನ ಮುಂಬೈ ಬಿಲ್ಲವರಿಗೆ ಅಭಿಮಾನ ತಂದಿದೆ ಎಂದರು .
ವೇದಿಕೆಯಲ್ಲಿಭಾರತ್ ಬ್ಯಾಂಕ್ ನ ಕಾರ್ಯಧ್ಯಕ್ಷ, ಎಂ ಡಿ ವಿದ್ಯಾನಂದ ಕರ್ಕೇರ ಉಪಸ್ಥರಿದ್ದರು. ಕಾರ್ಯಕ್ರಮವನ್ನು ಪತ್ರಕರ್ತ ಹರೀಶ್ ಹೆಜಮಾಡಿ . ನಿರೂಪಿಸಿದರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಶಿಧರ್ ಬಂಗೇರ ನಿರೂಪಿಸಿ ವಂದಿಸಿದರು

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾಧಾಕೃಷ್ಣ ನ್ರತ್ಯ ಅಕಾಡೆಮಿಯ ವಿದ್ಯಾರ್ಥಿಗಳಿಂದ ನ್ರತ್ಯ ಪ್ರದರ್ಶನ ಗೊಂಡಿತು.
ಕಾರ್ಯಕ್ರಮದ ಕೊನೆಯಲ್ಲಿ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು
ಸಭೆಯಲ್ಲಿ ಬಿಲ್ಲವರ ಅಸೋಸಿಯೇಷನ್ನ ಮಾಜಿ ಅಧ್ಯಕ್ಷ ನಿತ್ಯಾನಂದ ಡಿ ಕೋಟ್ಯಾನ್ .ಹಿರಿಯ ರಾಜಕೀಯ ದೂರಿನ ಲಕ್ಷ್ಮಣ್ ಪೂಜಾರಿ. ಸಾಯಿ ಕೇರ್ ಲಾಜಿಸ್ಟಿಕ ಸುರೇಂದ್ರ ಪೂಜಾರಿ. ಲಲಿತ್ ಹೋಟೆಲ್ ನ ಜಗನ್ನಾಥ್ ಕೋಟಿಯನ್ ವಡಲದ ಹರೀಶ್ ಪೂಜಾರಿ. ಕರ್ನಾಟಕ ಸಂಘದ ಅಧ್ಯಕ್ಷ ಡಾಕ್ಟರ್. ಭರತ್ ಕುಮಾರ್ ಪುಲಿಪು .ಕಾರ್ಯದರ್ಶಿ ಓಂ ದಾಸ್ ಕಣ್ಣಂಗರ್. ಭಾರತ್ ಬ್ಯಾಂಕ್ ನಿರ್ದೇಶಕರುಗಳಾದ ಗಂಗಾಧರ ಜೆ. ಪೂಜಾರಿ, ಭಾಸ್ಕರ್ ಎಂ. ಸಾಲ್ಮಾನ್, ಚಂದ್ರಶೇಖರ ಎಸ್. ಪೂಜಾರಿ, ನಿರಂಜನ್ ಎಲ್. ಪೂಜಾರಿ, ನರೇಶ್ ಕೆ. ಪೂಜಾರಿ, ಗಣೇಶ್ ಡಿ. ಪೂಜಾರಿ, ಸಂತೋಷ್ ಕೆ. ಪೂಜಾರಿ, ಹರೀಶ್ ವಿ. ಪೂಜಾರಿ, ನಾರಾಯಣ ಎಲ್. ಸುವರ್ಣ, ದಯಾನಂದ ಆರ್. ಪೂಜಾರಿ, ಮೋಹನದಾಸ್ ಜಿ. ಪೂಜಾರಿ, ಕೆ.ಎನ್. ಸುವರ್ಣ, ಸುರೇಶ್ ಬಿ. ಸುವರ್ಣ, ಭಾರತ್ ಬ್ಯಾಂಕ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಬಿ. ಸಾಲ್ಯಾನ್. ಸುಭಾಷ್ ಜಯ ಸುವರ್ಣ. ಸದಾಶಿವ ಕರ್ಕೇರ . ಅಶೋಕ್ ಸಸಿವಿತ್ಲು . ಉಪಸ್ಥಿತರಿದ್ದರು.
—–
ಯುವ ಪತ್ರಕರ್ತರಿಗೆ ದಿನೇಶ್ ಅಮೀನ್ ಮಟ್ಟು ಆದರ್ಶ: ಸೂರ್ಯಕಾಂತ ಜೆ ಸುವರ್ಣ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಭಾರತ್ ಬ್ಯಾಂಕ್ ನ ಕಾರ್ಯಧ್ಯಕ್ಷ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲ,ಮುಲ್ಕಿ ಇದರ ಉಪಾಧ್ಯಕ್ಷ ಸೂರ್ಯಕಾಂತ ಜೆ ಸುವರ್ಣ ಮಾತನಾಡುತ್ತ ಮಾತು ಯಾವುದೇ ಮಾಧ್ಯಮದವರು ವರದಿ ಮಾಡುವಾಗ ನೇರವಾಗಿ ಸತ್ಯವಾದ ಅಂಶವನ್ನೇ ವರದಿ ಮಾಡಬೇಕೆ ಹೊರತು ಅದರಲ್ಲಿ ಯಾವುದೇ ಇತರ ಅಂಶವನ್ನು ಸೇರಿಸಬಾರದು. ಇದನ್ನು ಹಿರಿಯ ಪತ್ರಕತ್ರರಾದ ದಿನೇಶ್ ಅಮೀನ್ ಮಟ್ಟು ಅವರಿಂದ ಕಲಿಯಬಹುದು. ಅವರಂಥವರ ಮಾರ್ಗದರ್ಶನವನ್ನು ಪಡೆದು ಯಾವ ರೀತಿ ಪತ್ರಿಕೆಯನ್ನು ಮುಂದಕ್ಕೆ ಕೊಂಡೊಯ್ಯಬಹುದು ಎಂದು ಯುವ ಪತ್ರಕರ್ತರು ಕಲಿಯಬಹುದು. ಜಯ ಸಿ ಸುವರ್ಣರು ತನ್ನ ಅಲೋಚನಾ ಶಕ್ತಿಯಿಂದ ಯಾವ ರೀತಿ ಸಮಾಜವನ್ನು ಉನ್ನತ ಮಟ್ಟಕ್ಕೇರಿಸಿದ್ದಾರೆ ಎಂಬುದನ್ನು ಎಲ್ಲರೂ ತಿಳಿಯಬೇಕಾಗಿದೆ. ಅದೇ ರೀತಿ ಸಮಾಜ ಬಾಂಧವರು ಎಲ್ಲರೂ ಒಂದಾಗಬೇಕಿದ್ದಲ್ಲಿ ಮೊದಲು ಎಲ್ಲರ ಮನಸ್ಸು ಒಂದಾಗಬೇಕು. ಪ್ರತಿಯೊಬ್ಬರ ಮನಸ್ಸು ಒಂದಾದಲ್ಲಿ ಖಂಡಿತವಾಗಿಯೂ ಸಮಾಜವನ್ನು ಒಗ್ಗೂಡಿಸಬಹುದು. ಇಂತಹ ಆಲೋಚನೆ ಎಲ್ಲರಲ್ಲಿ ಇದ್ದಲ್ಲಿ ಸಮಾಜದವರೆಲ್ಲರೂ ಒಂದಾಗಿ ಸಮಾಜವನ್ನು ಇನ್ನೂ ಉನ್ನತ ಮಟ್ಟಕ್ಕೇರಿಸಲು ಸಾಧ್ಯ ಅದೇ ರೀತಿ ನಾವೆಲ್ಲರೂ ಸೇರಿ ಒಂದೇ ಮನಸ್ಸಿನಿಂದ ಬ್ಯಾಂಕನ್ನು ಇನ್ನೂ ಎತ್ತರಕ್ಕೆ ಬೆಳೆಸೋಣ ಎಂದರು.